ಬಂಕುರಾ/ ಜ್ವಾಲಾಮಾಲಾಸುದ್ದಿ / 2022

ಜೈ ಜಿನೇಂದ್ರ ವೀಕ್ಷಕರೆ, ಐತಿಹಾಸಿಕ ಅತಿಶಯ ಕ್ಷೇತ್ರ ಭಂಕೂರ, ಜಿನ ಮಂದಿರ ಪೂರ್ತಿಯಾಗಿ ಜೀರ್ಣೋದ್ಧಾರವಾಗಿ ಪಂಚಕಲ್ಯಾಣ ವೇದಿ ಪ್ರತಿಷ್ಠೆ ಸಲುವಾಗಿ ಸಜ್ಜಾಗಿ ನಿಂತಿದೆ. ಈ ಮಂದಿರ ಇವತ್ತು ಈ ಹಂತಕ್ಕೆ ತಲುಪಬೇಕಾದರೆ ಪರಮ ಪೂಜ್ಯ ಜೀರ್ಣೋದ್ಧಾರ ಶೀರೋಮಣಿ 108 ಆಚಾರ್ಯ ಶ್ರೀ ಶುತಸಾಗರ ಮುನಿ ಮಹಾರಾಜರ ಪಾವನ ಸಾನಿದ್ಯ ಶುಭ ಆಶೀರ್ವಾದದೊಂದಿಗೆ  ಈ  ಮಂದಿರ ಕಟ್ಟಲು ಅವಿರತ ಶ್ರಮ ತನುಮನ ಧನದಿಂದ ಹಗಲುರಾತ್ರಿ ಏನ್ನದೆ ದುಡಿದ ಸನ್ಮಾನ್ಯ ಶ್ರೀ ಪ್ರಕಾಶ್ ಜೈನ್ ಅವರ ಮಂದಿರ ಕಟ್ಟಿ ತೀರಬೇಕೆಂಬ ಛಲ ದೃಢನಿರ್ಧಾರ ಮತ್ತು ಡಿ  ಆರ್ ಶ ಅವರ ಸತತ ಪ್ರಯತ್ನ ಇವತ್ತಿನ ದಿನ ಈ ಜಿನ ದೇವಾಲಯ ಪಂಚಕಲ್ಯಾಣಕ್ಕೆ ಸಜ್ಜಾಗಿ ನಿಂತಿದೆ.

ಇನ್ನೂ ಮಂದಿರದ ಇತಿಹಾಸಕ್ಕೆ ಬಂದರೆ ಭರತ ಖಂಡದ ಸಾವಿರಾರು ವರ್ಷ ಪ್ರಾಚೀನ ಇತಿಹಾಸ ಪುಟಗಳನ್ನು ತಿರುವಿದಾಗ ಭೌವ್ಯತೆಯ ಪರಂಪರೆ ಇತಿಹಾಸ ಪ್ರಸಿದ್ದವಾದ ಕ್ರಿ.ಶ 9ನೇ ಶತಮಾನದ ಪುರಾತನ ಈಗಿನ ಕರ್ನಾಟಕ ಹಿಂದುಳಿದ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ವಿರಳವಾಗಿ ಹಳ್ಳಿಹಳ್ಳಿಗಳಲ್ಲಿ ಪಸರಿಸಿದ ಶಿತಲಾವಸ್ಥೆಯಲ್ಲಿ ಇರುವ ಜಿನ ಮಂದಿರಗಳಲ್ಲಿ ಒಂದಾದ ಪುರಾತನ ಅತಿಶಯ ಕ್ಷೇತ್ರ ಭಂಕೂರ. ಇವತ್ತಿನ ಭಂಕೂರ ಅವತ್ತಿನ  ಭೂಮುಕೂರು, ಭದ್ರಚಾರ್ಯರು ಉತ್ತರ ಪುರಾಣದ ಶ್ರೀಕಾರವನ್ನು ಭಂಕಾಪುರಕ್ಕಿಂತ ಮೊದಲು ಭಂಕೂರಿನಲ್ಲಿ ಹಾಕಿರಬಹುದು ಎಂದು ಭಂಕೂರಿನ ಜನ ಬಸದಿ ಗುಡಿ ಎಂದು ಕರೆಯುವ ಪ್ರಾಚೀನ ಬಸದಿಯ ಮೊದಲಿನ ತ್ರಿಕುಟ ಬಸದಿಯ ಅಕ್ಕಪಕ್ಕ ಎರಡು ಬಸದಿಗಳನ್ನು ನಿರ್ಮಿಸಿ ಪಂಚಕೂಟ ಜಿನಾಲಯವನ್ನಾಗಿಸಿದ್ದಾರೆ. ಮೂರು ಗರ್ಭ ಗೃಹಗಳನ್ನು ಮೂರು ತೆರೆದ ಅಂತರಾಳಗಳಿಗೆ ಒಂದೇ ನವರಂಗವಿದೆ, ಈ ಮಂದಿರದ ಪ್ರವೇಶದ್ವಾರದ ಅಕ್ಕಪಕ್ಕ ನಾಲ್ಕುಅಡಿ ತ್ರಿಭಂಗಿಯ ದ್ವಾರಪಾಲಕರು ತುಂಬ ಆಕರ್ಷಕವಾಗಿದೆ.

ತ್ರಿಶಾಖೆಗಳ ದ್ವಾರಬಂದದ ಗರ್ಭಗೃಹಗಳ ಲಾಟಬಿಂಬ ಕುಳಿತ ಜಿನರದ್ದಾಗಿದೆ, ಮಧ್ಯದ ಗರ್ಭಗೃಹದಲ್ಲಿ ಕಪ್ಪು ಕಲ್ಲಿನ  6ಅಡಿ ಎತ್ತರದ ಕಾಯಸ್ವರ್ಗ ಭಂಗಿಯಲ್ಲಿ ನಿಂತ ಮುಕ್ಕೊಡೆ, ಬಾಮಂಡಲ, ಭುಜದ ಅಕ್ಕ ಪಕ್ಕ ಛಾಮರಗಳನ್ನು ಹೊಂದಿರುವ ಮೂಲ ನಾಯಕ 16ನೇಯ ತೀರ್ಥಂಕ ಶ್ರೀ 1008 ಭಗವಾನ್ ಶಾಂತಿನಾಥರ ಪ್ರತಿಮೆ ನೋಡುಗರ ಮನಸ್ಸನ್ನು ಸೆಳೆಯುತ್ತದೆ. ಇನ್ನೊಂದು ಗರ್ಭಗುಡಿಯಲ್ಲಿ 1008 ಭಗವಾನ್ ಪಾರ್ಶ್ವನಾಥರ ಮತ್ತು ಭಗವಂತನ ಪಾದುಕೆಗಳ ಹತ್ತಿರ  ಎಡ ಮತ್ತು ಬಲ ಭಾಗಕ್ಕೆ ಧರಣೇಂದ್ರ ಯಕ್ಷದೇವ ಮತ್ತು ಪದ್ಮಾವತಿ ಮಾತೆ ಯಕ್ಷಿಣಿಯ ಸುಂದರ ಪ್ರತಿಮೆಗಳು ಇದ್ದು. 3ನೇಯ ಗರ್ಭ ಗೃಹದಲ್ಲಿ ಶ್ರೀ 1008 ಭಗವಾನ್ ಆದಿನಾಥ ಭಗವಂತರ ಪ್ರತಿಮೆ, ಚೌಹಿಸ ತೀರ್ಥಂಕರ ಭಗವಾನರ ಪ್ರತಿಮೆ ಇದ್ದು ಮಂಟಪದಲ್ಲಿ ಪದ್ಮಾವತಿ ಅಮ್ಮನವರ ಪ್ರತಿಮೆ, ಬ್ರಹ್ಮದೇವರ ಪ್ರತಿಮೆ ಇದೆ.

ಈ ಅತಿಶಯ ದೇವಸ್ಥಾನ ಪೂರ್ತಿಯಾಗಿ ಭೂಮಿಯಿಂದ ಕೆಳಮಟ್ಟದಲ್ಲಿ ಇದ್ದು ಮಳೆ ಬಂದರೆ ದೇವಸ್ಥಾನದ ಒಳಗೆ ನೀರು ಹೊಗುವ ಪರಿಸ್ಥಿತಿಯಲ್ಲಿ ಇತ್ತು, ಇನ್ನೂ ಕೆಲವು ದಿವಸ ಬಿಟ್ಟರೆ ಪೂರ್ತಿಯಾಗಿ ಬಸದಿಯು ಬೀಳುವ ಹಂತದಲ್ಲಿ ಇತ್ತು. ಇಂತಹ ಸಮಯದಲ್ಲಿ ಬಸದಿಯ ಜೀರ್ಣೋದ್ಧಾರಕ್ಕೆ ದಿಟ್ಟ ಹೆಜ್ಜೆಯನ್ನು ಇಟ್ಟು ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಬೇಕೆಂದು ನಿಶ್ಚಯಿಸಿದಾಗ ಅನೇಕ ಗಣ್ಯರುಗಳ ಸಹಕಾರ ದೃಢ ಸಂಕಲ್ಪದೊಂದಿಗೆ ಅವಿರತ ಶ್ರಮದೊಂದಿಗೆ ಇವತ್ತಿನ ದಿನ ಐತಿಹಾಸಿಕ ಜಿನ ಚೈತ್ಯಾಲಯ ಪುನರ್ ನಿರ್ಮಾಣವಾಗಿದೆ. ಪರಮ ಪೂಜ್ಯ ಸ್ವಸ್ತಿಶ್ರೀ ಕನಕ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರ ದಿವ್ಯ ಮಾರ್ಗದರ್ಶನ ಹಾಗೂ ದಿವ್ಯ ಸಾನಿಧ್ಯದೊಂದಿಗೆ ಕೆಲವೇ ಕೆಲವು ದಿನಗಳಲ್ಲಿ ಪಂಚಕಲ್ಯಾಣ ವೇದಿ ಪ್ರತಿಷ್ಠಾಪನ ಕಾರ್ಯ ಮಾಡಲು ಇಲ್ಲಿ ನಿಶ್ಚಯಿಸಲಾಗಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್