-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ಞಾನ ದೀಪಿಕೆಗಳು.
ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಜೀವಂಧರ ಚರಿತೆ ಮತ್ತು ಧರ್ಮಸ್ಥಳದ ಜೀವಸೆಲೆ ಹೇಮಾವತಿ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಜ್ಞಾನ ದೀಪಿಕೆಗಳು ಅನ್ನುವಂತಹ ಸರಣಿ ಕಾರ್ಯಕ್ರಮದ ಮೂಲಕ ಪರಿಚಯ ಮಾಡಿಕೊಡುತ್ತಿದೇವೆ. ಇಂದು ಪರಿಚಯ ಮಾಡಿಕೊಡುತ್ತಿರುವ ಎರಡು ಕೃತಿಗಳಲ್ಲಿ ಒಂದು ಜೀವಂಧರ ಚರಿತೆ ಎನ್ನುವಂತಹ ಭಾಸ್ಕರ ಕವಿ ರಚನೆ ಮಾಡಿರುವಂತಹ ಕೃತಿ. ಮತ್ತೊಂದು ರಾಜ್ಯಶ್ರೀ ಹಂಪನಾ ಅವರು ಪರಿಚಯ ಮಾಡಿಕೊಟ್ಟಿರುವಂತಹ ಧರ್ಮಸ್ಥಳದ ಜೀವಸೆಲೆ ಹೇಮಾವತಿ ಎನ್ನುವಂತಹ ಕೃತಿಯನ್ನು ನಾವು ಇಂದು ತಮಗೆ ಪರಿಚಯ ಮಾಡಿಕೊಡುತ್ತಿದ್ದೇನೆ.
ಭಾಸ್ಕರ ಕವಿ ರಚನೆ ಮಾಡಿರುವಂತಹ ಜೀವಂಧರ ಚರಿತೆ ಎನ್ನುವಂತಹ ಕೃತಿ ಪ್ರಕಟವಾಗಿರುವಂತಹ ಬಿ ಎಸ್ ಕುಲಕರ್ಣಿಯವರ ಜೈನ ಸಾಹಿತ್ಯ ಕನ್ನಡ ವಿಭಾಗ ಧಾರವಾಡದಲ್ಲಿ ಇದ್ದಂತವರು. ಇವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ 1970ರಲ್ಲಿ ಈ ಕೃತಿಯನ್ನು ಮುದ್ರಣ ಮಾಡುತ್ತಾರೆ. ಈ ಕೃತಿಗೆ ಆಗ ಇದ್ದಂತಹ ಬೆಲೆ 7 ರೂಪಾಯಿಗಳು. ಆರ್ ಸಿ ಹಿರೇಮಟ್ಟರ ಮಾರ್ಗ ದರ್ಶನದಲ್ಲಿ ಡಾ|| ಬಿ ಎಸ್ ಕುಲಕರ್ಣಿ ರವರು ಪರಿಚಯಿಸುತ್ತಾರೆ.
ಬಿ ಎಸ್ ಕುಲಕರ್ಣಿ ರವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಜನಪದಕ್ಕೆ ಸಂಬಂಧ ಪಟ್ಟಂತೆ ಬಹಳಷ್ಟು ಕೆಲಸವನ್ನು ಮಾಡಿದ್ದಾರೆ. ಅನೇಕ ಕೃತಿಗಳನ್ನು ಜನಪದಕ್ಕೆ ಸಂಬಂಧ ಪಟ್ಟಂತೆ ಬರೆದಿದ್ದಾರೆ ಮತ್ತು ಕನ್ನಡ ಸಾಹಿತ್ಯಕ್ಕೆ ಪಟ್ಟಂತೆ ಬರೆದಿದ್ದಾರೆ ಎನ್ನುವುದು ಬಹಳ ಮುಖ್ಯವಾದಂತಹ ಮಾತು. ಅಂತಹ ಬಿ ಎಸ್ ಕುಲಕರ್ಣಿ ರವರು ಸಂಗ್ರಹಿಸಿರುವಂತಹ ಭಾಸ್ಕರ ಕವಿ ರಚನೆಯ ಜೀವಂಧರ ಚರಿತೆ ಎನ್ನುವಂತಹ ಕೃತಿ.
ಭಾಸ್ಕರ ಕವಿ ಕನ್ನಡ ಸಾಹಿತ್ಯದ ಜೀವಂಧರ ಚರಿತೆ ಎನ್ನುವಂತಹ ಕೃತಿಯನ್ನು ಕಾವ್ಯ ಧರ್ಮ ಮತ್ತು ಧರ್ಮ ದೃಷ್ಠಿಯನ್ನು ಇಟ್ಟುಕೊಂಡು ಜೀವಂಧರ ಚರಿತೆ ಮಹಾವೀರ ಸ್ವಾಮಿಯ ಕೃತಿಯನ್ನು ಗೌತಮ ಗಣದರರಿಂದ ಜೀವಂಧರ ಚರಿತೆ ಲೋಕಕ್ಕೆ ಪ್ರಕಟವಾಗಿದೆ. ಕೇವಲ ಜೈನ ಮತದ ದೃಷ್ಠಿಯಿಂದ ಮಾತ್ರವಲ್ಲಾ ಕನ್ನಡ ಸಾಹಿತ್ಯದ ದಷ್ಠಿಯಿಂದಲು ಉತ್ತಮ ಗುಣಗಳನ್ನು ಒಳಗೊಂಡಿರುವ ಜೀವಂಧರ ಚರಿತೆಯನ್ನು ಕನ್ನಡ ಸಾಹಿತ್ಯ ಸಹ ಹೃದಯರು ಒಪ್ಪಿಕೊಂಡಿದ್ದಾರೆ. ಜೀವಂಧರ ಚರಿತೆ ಯಶೋಧರ ಚರಿತೆ ಇವೇಲ್ಲವು ಕೂಡ ಕರ್ಮದ ಕೈವಾಡ ಹೇಳುವಂತಹ ಕೃತಿಗಳು, ಭಾಮಿನಿ ಷಟ್ಪದಿಯಲ್ಲಿ ಈ ಕೃತಿ ಇದೆ.
ಡಾ|| ಬಿ ಎಸ್ ಕುಲಕರ್ಣಿ ರವರು ಈ ಸಂಪಾಧನೆ ಕಾರ್ಯವನ್ನು ನೇಮಿನಾಥ ಪುರಾಣ ನೇಮಿಚಂದ್ರ ಈ ಎರಡು ಕೃತಿಗಳನ್ನು ಪ್ರಕಟಿಸುತ್ತಾರೆ. ತಾಳೆಗರಿಗಳನ್ನು ನೋಡಿ ಪರಿಶೀಲಿಸಿ ಅವುಗಳನ್ನು ಕೃತಿ ಪ್ರಕಟಣೆಗೆ ಗ್ರಂಥ ಸಂಸ್ಕರಣೆ ಮಾಡಿರುವುದು ಸುಲಭದ ಮಾತಲ್ಲಾ. ಒಂದು ತಾಳೆ ಗ್ರಂಥವನ್ನು ಕ್ರಿ.ಶ 1908ರಲ್ಲಿ ರಾಮನುಜ ಐಯಂಗಾರ್ ರವರು ಸಂಶೋಧಿಸಿ ಪ್ರಕಟಿಸಿದ ಒಂದು ಪ್ರತಿಯನ್ನು ಈ ಕೃತಿಗೆ ಬಳಸಿಕೊಳ್ಳಲಾಗಿದೆ. ಈ ಕೃತಿಯನ್ನು ಕನ್ನಡದ ಜನತೆಗೆ ಮೊಟ್ಟಮೊದಲು ಕೊಟ್ಟಂತಹ ಶ್ರೇಯಸ್ಸು ಮತ್ತು ಭಾಮಿನಿ ಷಟ್ಪದಿ ಬಳಸಿಕೊಂಡು ಬರೆದಂತಹ ಮೊದಲನೇ ಶ್ರೇಯಸ್ಸು ಭಾಸ್ಕರ ಕವಿಗೆ ಸಲುತ್ತದೆ. ಈ ಮಹತ್ವದ ಕೃತಿ ಬಹಳಷ್ಟು ವಿಷಯಗಳನ್ನು ತಿಳಿಸುವಂತಹ ಕೆಲಸವನ್ನು ಮಾಡುತ್ತದೆ.
ಮತ್ತೊಂದು ಮಹತ್ವದ ಕೃತಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ ಸಂದರ್ಭದಲ್ಲಿ ಧರ್ಮಸ್ಥಳದ ಜೀವಸೆಲೆ ಹೇಮಾವತಿ ಎಂದು ಹೇಳಿ ಹಂಪಾನ ರವರ ಪುತ್ರಿ ರಾಜಶ್ರೀ ಹಂಪಾನರವರು ಈ ಕೃತಿಯನ್ನು ತಂದಿದ್ದಾರೆ. ಕವಿಯಾಗಿಯೂ ಮತ್ತು ಸಾಹಿತಿಯಾಗಿಯೂ ಹೆಚ್ ಎನ್ ರಾಜಶ್ರೀ ನಾಡೋಜ ಡಾ|| ಕಮಲ ಹಂಪಾನ ರವರ ಮಗಳು. ತಂದೆ ತಾಯಿ ಇಂದ ಮಾರ್ಗ ದರ್ಶನ ಪಡೆದು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಇದು ಅವರ ಐದನೇ ಕೃತಿ.
ಅರ್ಥ ಮತ್ತು ಕಾಡುವ ನೆನಪುಗಳು ಅನ್ನುವಂತಹ ಕವನ ಸಂಕಲನವನ್ನು ತಂದಿದ್ದಾರೆ, ಸಮಾಜ ರತ್ನ ನವರತ್ನ ರಾಜು ಅನ್ನುವಂತಹ ಮತ್ತು ಸಂಸ್ಕೃತಿ ಚೈತನ್ಯ ಡಾ|| ಎಂ ಮೋಹನ್ ಆಳ್ವಾ ಅನ್ನುವಂತಹ ಜೀವನ ಚರಿತ್ರೆ ಕೃತಿಗಳನ್ನು ಪ್ರಕಟಮಾಡಿದ್ದಾರೆ. ಚಂದನ ಟಿ ವಿ ಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಮಹತ್ವದ ಕೃತಿ ನಮ್ಮೆಲ್ಲರಿಗೂ ಗೊತ್ತಿರುವಂತೆ ಶಿವಪಾರ್ವತಿಯಂತೆ ಇರುವಂತಹ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪತ್ನಿ ಹೇಮಾವತಿ ವಿ ಹೆಗ್ಗಡೆ ಕೇವಲ ಪತ್ನಿಯಾಗಿ ಮಾತ್ರವಲ್ಲ ವಿಶಿಷ್ಟ ವ್ಯಕ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವಂತವರು. ಅವರ ಬಾಲ್ಯದಿಂದ ಹಿಡಿದು ಅವರ ಕೆಲಸ ಕಾರ್ಯಗಳನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಜ್ಞಾನವಿಕಾಸದ ಬಗ್ಗೆ ಹೇಮಾವತಿ ಅಮ್ಮನವರು ಮಾಡಿರುವಂತಹ ಕೆಲಸಗಳನ್ನು ಹಾಗೂ ಬೆಳ್ತಂಗಡಿಯ ರೈತರಿಗೆ ಬೇಕಾಗಿರುವಂತಹ ಸಾಮಾಗ್ರಿ ಅವರು ನೀಡಿರುವುದ ಈ ಕೃತಿಯಲ್ಲಿ ವಿವರಿಸಲಾಗಿದೆ. ನಿರುಧ್ಯೋಗದ ಸಮಸ್ಯೆ, ದೇವದಾಸಿಯರ ಬಗ್ಗೆ ಹಾಗೂ ಅನೇಕ ಸಮಸ್ಯೆಯ ಬಗ್ಗೆ ಅವರು ಕೆಲಸಕಾರ್ಯಗಳನ್ನು ಮಾಡಿರುವುದರ ಬಗ್ಗೆಯೂ ಈ ಕೃತಿಯಲ್ಲಿ ತಿಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಅಮ್ಮನವರು ಪ್ರಕಟಮಾಡಿದ್ದರು. ಅವರು ತಾಯಿಯಾಗಿ, ಹೆಂಡತಿಯಾಗಿ ಭಾರತವನ್ನು ಕನ್ನಡನಾಡನ್ನ ಕಟ್ಟುವಲ್ಲಿ ಬೆಳಸುವಲ್ಲಿ ತಮ್ಮದೇ ಆದ ಸೇವೆಯನ್ನು ಕೊಡುವಂತಹ ಮತ್ತು ಜೈನ ಧರ್ಮದ ಬಗ್ಗೆ ಅಪಾರವಾದಂತಹ ತಿಳುವಳಿಕೆಯನ್ನು ಪಡೆದಿರುವಂತವರು. ಅವರು ಅದ್ಬುತವಾದಂತಹ ಮಾರ್ಗದರ್ಶಕರು ಕೂಡ ಹೌದು. ಧರ್ಮಸ್ಥಳದಲ್ಲಿ ನಡೆಯುವಂತಹ ಧಾರ್ಮಿಕ ಸಮಾಜಿಕ ಕೆಲಸಗಳಿಗೆ ಅವರು ಬೆನ್ನೆಲುಬಾಗಿ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಕಾವಂದರ ಯೋಚನೆಗಳು ಕಾರ್ಯರೂಪಕ್ಕೆ ಬರಲು ದೊಡ್ಡ ಶಕ್ತಿಯಾಗಿ ಬೆನ್ನೆಲುಬಾಗಿ ನಿಂತು ನಡೆಸಿಕೊಡುತ್ತಾರೆ.
ಹೇಮಾವತಿ ಅಮ್ಮನವರ ಸಮಗ್ರ ಪರಿಚಯವನ್ನು ಈ ಒಂದು ಕೃತಿ ತಿಳಿಸುತ್ತದೆ. ಮತ್ತು ಈ ಕೃತಿಯನ್ನು ಪ್ರಕಟಮಾಡಿರುವುದು 2018ರಲ್ಲಿ ಧರ್ಮಸ್ಥಳದವರೇ ಈ ಕೃತಿಯನ್ನು ಪ್ರಕಟಮಾಡಿದರು. ಮಂಜುಶ್ರೀ ಪ್ರಿಂಟರ್ಸ್ ಮುಜಿರೆ ಯಿಂದ ಬಂದಿಗೆ ಈ ಕೃತಿಯ ಬೆಲೆ 150ರೂಪಾಯಿ.
ಈ ಕೃತಿ ನಮ್ಮ ಮನೆಗಳಲ್ಲಿ ಮನಗಳಲ್ಲಿ ಇರಬೇಕಾದಂತಹ ಕೃತಿ, ಇವುಗಳನ್ನು ಓದುವುದರ ಮೂಲಕ ನಮ್ಮ ಪರಿಸರದಲ್ಲಿ ಕೆಲಸ ಮಾಡಬಹದು ಎಂಬ ಸ್ಪೂರ್ತಿಯ ಸೆಲೆ ಹೇಮಾವತಿ ಅಮ್ಮನವರು, ಅಂತಹ ಕೃತಿಯನ್ನು ರಾಜಶ್ರೀಯವರು ಪರಿಚಯ ಮಾಡಿಕೊಟ್ಟಿದ್ದಾರೆ.
ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ಪರಿಚಯಿಸಿದ್ದೇವೆ ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.
ನಮಸ್ಕಾರ
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














