ವಾರದ ಜೈನ ಸುದ್ದಿಗಳು ಹಲವೆಡೆಯ ಹಲವಾರು ಜೈನ ಸ್ವಾರಸ್ಯಕರ ಸುದ್ದಿಗಳಿಗಾಗಿ ವೀಕ್ಷಿಸಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಾಮಾಲಾ. ನ್ಯೂಸ್ ನಲ್ಲಿ ಪ್ರತಿ ಶನಿವಾರ 7.30ಕ್ಕೇ ಸರಿಯಾಗಿ
ಯುಗಾದಿ ಹಬ್ಬದ ಶುಭಾಷಯಗಳೊಂದಿಗೆ ವೀಕ್ಷಿಸಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಾಮಾಲಾ ನ್ಯೂಸ್ ನಲ್ಲಿ
ಮೊದಲಿಗೆ ಮುಖ್ಯಾಂಶಗಳು:
ಶ್ರೀಮತಿ ನಯನಾ ವಿಮಲ್ ತಾಳಿಕೋಟೆ ಆದರು ಸಮ್ಯಗ್ ಜ್ಯಾನಿ
ಸಾಗರದಲ್ಲಿ ನಡೆದ ಪಂಚಕಲ್ಯಾಣದ ಪೂರ್ವಭಾವಿ ಸಭೆ
ಸೋಂದಾ ಶ್ರೀ ಸಿದ್ಧಚಕ್ರ ಆರಾಧನಾ ಮಹೋತ್ಸವದಂದು ಆಚಾರ್ಯ ಶ್ರೀ ಅಕಲಂಕ ದೇವ ಪ್ರಶಸ್ತಿ ಪ್ರಧಾನ
ಕಡಲ ನಗರಿಯ ಜಿನ ಚೈತ್ಯಾಲಯ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನಕ್ಕೆ ಶಿಲಾನ್ಯಾಸ
ಜೈನಕಾಶಿ ಮೂಡುಬಿದರೆ ಬಡಗ ಬಸದಿಯ ರಥೋತ್ಸವ
ಉಡುಪಿ ಶ್ರೀ ಆದಿನಾಥ ಸ್ವಾಮಿ ಬಸದಿ ನೂತನ ಮನಸ್ಥಂಭದ ಪೂಜಾ ಕಾರ್ಯಕ್ರಮ
ಜಿನಭಜನಾ ಸ್ಪರ್ಧೆ ಸೀಸನ್-5 ಅಂತಿಮ ಸುತ್ತಿನ ಆಹ್ವಾನ ಪತ್ರಿಕೆ ಬಿಡುಗಡೆ ಹಾಗೂ ಸಮಾಲೋಚನಾ ಸಭೆ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹೂವಿನಹಡಗಲಿ
ವಿಜೃಂಭಣೆಯಿಂದ ನಡೆದ ರಥೋತ್ಸವ ಪಂಚಕಲ್ಯಾಣ ಆರಾಧನೆಗಳು
16ನೇ ಪ್ರಾಕೃತ ಘಟಿಕೋತ್ಸವ
ವಿವರಗಳು:
ಮುನಿಶ್ರೀ ಪುಣ್ಯ ಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಮಾರ್ಚ್ 26 ರಿಂದ 27 ರವರೆಗೆ ನಡೆಯಲಿರುವ ಧರ್ಮ ನಗರಿ ಹಾಸನದ ದೊಡ್ಡ ಬಸದಿಯ ಪಂಚಕಲ್ಯಾಣದ ಮಹೋತ್ಸವದ ಪೂರ್ವಭಾಗಿಯಾಗಿ ಪೂಜ್ಯ ಮುನಿಶ್ರೀಗಳ ಸಾನಿಧ್ಯದಲ್ಲಿ ಫೆಬ್ರವರಿ 27ರಂದು ಜೈನ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಕೌನ್ ಬನೇಗಾ ಕರೋಡ್ಪತಿ ಮಾದರಿಯಲ್ಲಿ ಕೌನ್ ಬನೇಗಾ ಸಂಯೇಜ್ಞಾನಿ ಕಾರ್ಯಕ್ರಮವು ನಡೆಯಿತು. ಶ್ರೀ ಪ್ರಮೋದ್ ಜೈನ್ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಸುಮಾರು 15 ಜನ ಭಾಗಿಯಾಗಿದ್ದರು. ಪ್ರತಿಸ್ಪರ್ಧಿ 15 ಪ್ರಶ್ನೆಗಳನ್ನು ಉತ್ತರಿಸಬೇಕಿತ್ತು. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರಗಳಿದ್ದವು. ನೆರೆದವರನ್ನು ರಂಜಿಸುತ್ತಾ ಕುತೂಹಲಕಜಾರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುಬ್ಬಳ್ಳಿಯ ಶ್ರೀಮತಿ ನಯನಾ ವಿಮಲ್ ತಾಳಿಕೋಟೆ ಎಲ್ಲಾ 15 ಪ್ರಶ್ನೆಗಳಿಗೆ ಸರಿ ಉತ್ತರವನ್ನು ನೀಡುವ ಮೂಲಕ ಸ್ಪರ್ದೆಯ ಏಕೈಕ ಸಂಯೇಜ್ನಾನಿ ಪ್ರಶ್ನೆಗಳು ಗೊಂದಲ ಮೂಡಿಸಿದಾಗ ಮೂರು ಲೈಫ್ ಲೈನ್ ಗಳಿದ್ದವು 50:50 , ಆಡಿಯನ್ಸ ಫೋನ್, ಫೋನ್ ಫ್ರೆಂಡ್. ಕೇಳಿದ ಪ್ರಶ್ನೆಗಳಿಗೆ ಫಟಾಫಟ್ ಉತ್ತರಗಳನ್ನು ನೀಡುತ್ತಿದ್ದ ನಯನಾರವರಿಗೂ ಒಂದು ಹಂತದಲ್ಲಿ ಗೊಂದಲ ಉಂಟಾದಾಗ ಮೂರು ಆಪ್ಶನ್ ಗಳಲ್ಲಿ ಫೋನ್ ಫ್ರೆಂಡ್. ಬಳಸಿ ತಮ್ಮ ಶಿಷ್ಯಗುರು ಮುನಿರಾಜರನ್ನು ಸಂಪರ್ಕಿಸಿ ಉತ್ತರ ಪಡೆದುಕೊಂಡರು ಹೀಗೆಯೇ ರಸಪ್ರಶ್ನೆ ಕಾರ್ಯಕ್ರಮ ಕ್ಷಣಕ್ಷಣದಲ್ಲೂ ರೋಚಕವಾಗಿ ಜನ ಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಗೌರವಕ್ಕೆ ಪಾತ್ರರಾಗಿ ಹುಬ್ಬಳ್ಳಿಯ ಜೈನ ಸಮಾಜದ ಹೆಸರು ಎತ್ತಿ ಹಿಡಿದ ಶ್ರೀಮತಿ ನಯನಾ ವಿಮಲ್ ತಾಳಕೋಟೆ ಯವರಿಗೆ ಜ್ವಾಲಾಮಾಲಾ ಅಭಿನಂದಿಸುತ್ತದೆ.
ಸಾಗರ ಪಟ್ಟಣದ ಮಧ್ಯಭಾಗದಲ್ಲಿ ಜೀರ್ಣೋದ್ದಾರಗೊಂಡಿರುವ ಶ್ರೀ 1008 ಭಗವಾನ್ ಆದಿನಾಥ ಸ್ವಾಮಿ ಜಿನಮಂದಿರದಲ್ಲಿ ಮೇ ತಿಂಗಳಲ್ಲಿ ನಡೆಯುವ ಪಂಚಕಲ್ಯಾಣದ ಪೂರ್ವಭಾವಿ ಸಭೆ ಮತ್ತು ಸವಾಲ್ ಕಾರ್ಯಕ್ರಮ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ರವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಾಗರ ತಾಲ್ಲೂಕಿನ ಎಲ್ಲಾ ಶ್ರಾವಕ ಶ್ರಾವಕಿಯರು ಶಿವಮೊಗ್ಗ ಜೈನ ಬಾಂಧವರು ಹಾಜರಿದ್ದರು. ಭಾಗವಹಿಸಿದ ಸರ್ವರಿಗೂ ಸಾಗರ ಬಸದಿಯ ಸಮಿತಿವತಿಯಿಂದ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಮೇ ತಿಂಗಳಲ್ಲಿ ಪರಮಪೂಜ್ಯ ಪುಣ್ಯಸಾಗರ ಮಹಾರಾಜರ ಪುಣ್ಯ ಸಾನಿಧ್ಯದಲ್ಲಿ ಹೊಂಬುಜ ಶ್ರೀ ಗುರುಗಳ ನೇತೃತ್ವದಲ್ಲಿ ನಡೆವ ಪಂಚಕಲ್ಯಾಣ ಮಹೋತ್ಸವಕ್ಕೆ ಸರ್ವರೂ ಬಂದು ಸಹಕರಿಸಬೇಕೆಂದು ವಿನಂತಿಸಲಾಯಿತು.
ದಿನಾಂಕ 13/03/2022 ಭಾನುವಾರದಂದು ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದಲ್ಲಿ ಶ್ರೀ ಸಿದ್ದ ಚಕ್ರ ಮಹಾಮಂಡಲ ಆರಾಧನಾ ಸುಸಂದರ್ಭದಲ್ಲಿ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾಚಾರ್ಯವರ್ಯ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮತ್ತು ಪೂಜ್ಯ ಭಾನುಕೀರ್ತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಪ್ರಾತಃಸ್ಮರಣೀಯ ಆಚಾರ್ಯ ಶ್ರೀ ಕುಂದ ಕುಂದ ನಿಯಮಾಸಾರ ಗ್ರಂಥದ ಮೇಲೆ ಆಚಾರ್ಯ ಶ್ರೀ ವಿಶುದ್ದ ಸಾಗರರಿಂದ ರಚಿತ ನಿಯಮದೇಶನ ಭಾಗ-2 ನಿಯಮದೇಶನ ಭಾಗ-3 ಕೃತಿಗಳನ್ನು ಶ್ರವಣಬೆಳಗೊಳ ನಿವಾಸಿ ಹುಬ್ಬಳ್ಳಿಯ ಪ್ರೋಫೆಸರ್ ಜೀನೇಂದ್ರ ಕುಮಾರ ಹೊಸಪೇಟಿ ಕನ್ನಡಕ್ಕೆ ಅನುವಾದಿಸಿದ್ದು ಕರ್ನಾಟಕ ವಿಭಾಗ ನಮೋಸ್ತು ಶಾಸನ ವಿಭಾಗ ಸಮಿತಿಯು ಪ್ರಕಟಿಸುರುವ ಈ ಕೃತಿ್ಗಳನ್ನು ಆಚಾರ್ಯ ಶ್ರೀ ಅಕಲಂಕ ದೇವ ಪ್ರಶಸ್ತಿ ಪ್ರಧಾನ ಹಾಗೂ ನಿಯಮ ದೇಶನ ಪುಸ್ತಕ ಭಾಗ-2 ಹಾಗೂ ವಿದ್ಯಾರ್ಥಿ ವೇತನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಕ್ಡೇತ್ರಕ್ಕೆ ಹಾಗೂ ಜೈನ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಇಬ್ಬರು ಸಾಧಕರಿಗೆ ಪ್ರತಿವರ್ಷ ನೀಡುವ ಆಚಾರ್ಯ ಶ್ರೀ ಅಕಲಂಕ ದೇವ ಪ್ರಶಸ್ತಿಯನ್ನು ಡಾ|| ಜಿನದತ್ತ ದೇಸಾಯಿ ಹಾಗೂ ವಿದೂ಼ಇ ಶ್ರೀಮತಿ ತೇಜಸ್ವಿನಿ ಡಿ. ಮೈಸೂರು ಇವರಿಗೆ ಗೌರವ ಪೂರ್ವಕವಾಗಿ ನೀಡಿ ಶ್ರೀಗಳು ಶುಭ ಹಾರೈಸಿದರು. ಪ್ರಶಸ್ತಿಯು ರೂಪಾಯಿ 1 ಲಕ್ಷ ರೂ. ನಗದು ಹಾಗೂ ಗೌರವ ಪೂರ್ವ ಸನ್ಮಾನವನ್ನು ಒಳಗೊಂಡಿದೆ.
ಕಡಲ ನಗರಿ ಮಂಗಳೂರು ನಗರದ ಕೋಡ್ಯಾಲು ಬಯಲಿನ ಜೈಲ್ ರೋಡ್ ನ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಹೌಸ್ ಆವರಣದಲ್ಲಿ ಕಾರ್ಕಳದ ಜೀರ್ಣೋದ್ದಾರಕ ಸಂಘದ ವತಿಯಿಂದ ನಿರ್ಮಾಣವಾಗಲಿರುವ ಜಿನಚೈತ್ಯಾಲಯ ಮತ್ತು ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಭಾನುವಾರ ನಡೆಯಿತು. ಪರಮಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಆಶೀರ್ವಚನ ನೀಡಿ ಸಮಾಜದ ಅಭಿವೃದ್ದಿಗೆ ಸಂಬಂದಿಸಿದ ಕೆಲಸಗಳನ್ನು ಶ್ಲಾಘಿಸಿದರು. ಸಮಾಜಬಾಂಧವರೆಲ್ಲರೂ ಒಗ್ಗಟ್ಟಾಗುವುದು ಅತಿ ಅಗತ್ಯ ಇದದಿಂದ ಕಾರ್ಯ ಸಿದ್ದಿಯಾಗುತ್ತದೆ ಎಂದರು. ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿ ಜೈನ ಸಮಾಜದ ಅಭಿವೃದ್ದಿಗಾಗಿ ಕೈಗೆತ್ತಿಕೊಂಡಿರುವ ಈ ಯೋಜನೆಯ ಸಾಕ್ಷಾತ್ಕಾರಕ್ಕೆ ಸಮಾಜದ ಎಲ್ಲರೂ ನೆರವಾಗಬೇಕು ಸರಕಾರಕ್ಕೆ ಕೂಡ ಇದಕ್ಕೆ ಅನುದಾನವನ್ನು ಒದಗಿಸಿಕೊಡಬೇಕೆಂದು ಹೇಳಿದರು. ಧರ್ಮಸ್ಥಳದ ಶ್ರೀ ಹರ್ಶೇಂದ್ರ ಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಿ ಈ ಯೋಜನೆಗೆ ಜಾಗವನ್ನು ದಾನವಾಗಿ ನೀಡಿದ ದಿವಂಗತ ಮಾಲ್ಪಬಿಟ್ಟು ನ್ಯೇಮಿರಾಜ್ ಪಡಿವಾಳ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಸಹಕಾರ ರತ್ನ ಡಾ|| ಎಮ್.ಎನ್ ರಾಜೇಂದ್ರಕುಮಾರ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣ ಸಮಿತಿಯ ಪುಷ್ಪರಾಜ್ ಜೈನ್ ಮಂಗಳೂರು ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕೆ ವಿಜಯ್ ಕುಮಾರ್ ಅಂಡಾರು ಮಹಾಬಳ್ಳಾಳ್ ಹಾಗೂ ಇನ್ನೂ ಅನೇಕ ಗಣ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಇರವತ್ತೂರು ಗ್ರಾಮದ ಶ್ರೀ ಆದಿನಾಥ ಸ್ವಾಮಿ ಬಸದಿಯ ನೂತನ ಮಾನಸ್ಥಂಭದ ಪೂಜೆ ಪುನಸ್ತಾರಗಳು ಹಾಗೂ ಮಾನಸ್ಥಂಭವನ್ನು ನಿಲ್ಲಿಸುವ ಸಕಲ ವಿಧಿವಿಧಾನಗಳು ನಡೆಯಿತು.ನೂತನ ಮಾನಸ್ಥಂಭದ ಪೂಜಾ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ಶ್ರಾವಕ ಶ್ರಾವಕಿಯರು ಬಂದು ಭಕ್ತಿಯಿಂದ ಭಾಗವಹಿಸಿದರು.
ಭಾರತೀಯ ಜೈನ್ ಮಿಲನ್ ವಲಯ 8 ರ ವತಿಯಿಂದ ಮೈಸೂರು ಸಾಂಸ್ಕೃತಿಕ ಕಲಾ ವೈಭವದೊಂದಿಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿರುವ ಜಿನಭಜನಾ ಸ್ಪರ್ಧೆ ಫಿನಾಲೆ ಕಾರ್ಯಕ್ರಮದ ಪತ್ರಿಕೆ ಉದ್ಘಾಟನೆ ಹಾಗೂ ಮೈಸೂರಿನ ಸರ್ವ ಜೈನ ಸಮಾಜವನ್ನು ಅಹ್ವಾನಿಸುವ ಸಲುವಾಗಿ ನಡೆದ ಸಭೆಯನ್ನು ಖ್ಯಾತ ನೃತ್ಯ ಕಲಾವಿದರಾದ ವಿದ್ವಾನ್ ಶ್ರೀ ಶ್ರೀಧರ್ ಜೈನರವರ ನೃತ್ಯ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ಈ ಕಾರ್ಯಕ್ರಮ ಸಾಂಸ್ಕೃತಿಕ ಕಲಾ ಮಂದಿರದಲ್ಲಿ ಕಲಾತ್ಮಕವಾಗಿ ಶ್ರೀಧರ್ ಜೈನ್ ರವರು ನೆರವೇರಿಸಿದರು. ಸಭೆಯಲ್ಲಿ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಶ್ರೀಮತಿ ಅನಿತಾ ಸುರೇಂದ್ರಕುಮಾರ್ ರವರು ಶ್ರೀ ಅಜಿತ್ ರವರು ಮತ್ತು ಹಲವಾರು ಗಣ್ಯರು ಪಾಲ್ಗೊಂಡಿದ್ದರು.
. ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹೂವಿನಹಡಗಲಿ ಇವರಿಂದ 8/3/2022 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹೂವಿನಹಡಗಲಿಯ ಶ್ರೀ ಪಾರ್ಶ್ವನಾಥ ಜೈನ ಬಸದಿಯ ಸಭಾ ಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಧರ್ಮಣ್ಣ ನವರು ಮತ್ತು ಮುಖ್ಯ ಅತಿಥಿಗಳಾಗಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯ ASDPO ಆದ ಶ್ರೀಮತಿ ಅನುಷಾ ಮತ್ತು ಕೃಷಿ ಇಲಾಖೆ ಹೂವಿನಹಡಗಲಿ ಇಲಾಖೆಯಿಂದ ಶ್ರೀಮತಿ ಸವಿತಾ ರಾಕೇಶ್ ರವರು ಹಾಗೂ ಜೈನ ಮಹಿಳಾ ಸಮಾಜದ ಒಕ್ಕೂಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ಮಾರ್ಚ್ ತಿಂಗಳ ಅಂತ್ಯದವರೆಗೂ ರಾಜ್ಯದೆಲ್ಲೆಡೆ ಜೀರ್ಣೋದ್ದಾರ ಗೊಂಡ ಬಸದಿಗಳ ಪಂಚಕಲ್ಯಾಣ ಮಹೋತ್ಸವ , ಮಹಾ ರಥೋತ್ಸವ ಆರಾಧನೆಗಳು ವಿಜೃಂಭಣೆಯಿಂದ ಭಕ್ತಿ ಭಾವದಿಂದ ರಾಜ್ಯದ ಎಲ್ಲಾ ಶ್ರಾವಕ ಶ್ರಾವಕಿಯರು ನಡೆಸಿಕೊಟ್ಟರು .
ಶ್ರೀ ಕ್ಷೇತ್ರ ಹೊಂಬುಜ ಮಾತೆಯ ಪದ್ಮಾವತಿ ಮಗಾ ರಥೋತ್ಸವ ಶ್ರೀ ಕ್ಷೇತ್ರ ಸುಧಾಪುರದಲ್ಲಿ ನಡೆದ ಬೃಹತ್ ಸಿದ್ದಚಕ್ರ ಆರಾದನೆ ಮತ್ತು ರಥೋತ್ಸವ ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿ ನಡೆದ ಚತುರ್ಮುಖ ಬಸದಿಯ ಚಂದ್ರಗಿರಿ ರಥೋತ್ಸವ , ಹಾಸನ ನಗರದ ಶ್ರೀ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ದೊಡ್ಡ ಬಸದಿಯ ಪಂಚಕಲ್ಯಾಣ ಮಹೋತ್ಸವ , ತುಮಕೂರು ಜಿಲ್ಲೆಯ ಮುಸಗಂಡಿಯಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವ , ಅತಿಶಯ ಕ್ಷೇತ್ರ ಶ್ರೀ ನಿಟ್ಟೂರಿನಲ್ಲಿ ನಡೆದ ಜ್ವಾಲಾಮಾಲಿನಿ ಅಮ್ಮನವರ ರಥೋತ್ಸವ ಹೀಗೆ ರಾಜ್ಯದೆಲ್ಲೆಡೆ ಬಸದಿಗಳಲ್ಲಿ ಸಕಲ ಪೂಜಾ ವಿಧಿವಿಧಾನವನ್ನು ಮುನಿಮಹಾರಾಜರು ಹಾಗೂ ಭಟ್ಟಾರಕರುಗಳ ಪಾವನ ಸಾನಿಧ್ಯದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಇಲ್ಲಿಯವರೆಗೂ ವಾರದ ಸುದ್ದಿಯನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು
.














