/ ಜ್ವಾಲಾಮಾಲಾನ್ಯೂಸ್ / 2021

ಬೀದರ್ ಜಿಲ್ಲೆಯಲ್ಲಿರುವ ಊರಸುತ್ತಲು ಜೋಡು ಕಂದಕವನ್ನು ಹೊಂದಿರುವಂತಹ ದೊಡ್ಡಗ್ರಾಮ ಕಮಠಾಣ, ಈ ಗ್ರಾಮದಲ್ಲಿ ಇರುವ ಜಿನ ಮಂದಿರದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಆಕರ್ಷಣೀಯ ಕಪ್ಪು ಶಿಲೆಯ ಮೂರ್ತಿ. ಈ ಮೂರ್ತಿ  ಮೊದಲು ನೆಲ ಮಾಳಿಗೆಯಲ್ಲಿ ಇದ್ದು ಹೀಗಾ ವೇದಿಕೆ ಮೇಲೆ ಪ್ರತಿಷ್ಠಾಪಿಸಲಾಗಿದೆ ಬನ್ನಿ ದರ್ಶನ ಪಡೆಯೋಣ.

ಜೈನ ಧರ್ಮವು ಅತ್ಯಂತ ಪ್ರಾಚೀನವಾಗಿದ್ದು ಕ್ರಿ.ಪು 4ನೇಯ ಶತಮಾನದಲ್ಲಿ ದೈವಭಕ್ತನಾದ ಮೌರ್ಯಚಕ್ರವರ್ತಿ ಚಂದ್ರಗುಪ್ತನಿಗೆ ಕರ್ನಾಟಕದ ಶ್ರವಣ ಬೆಳಗೊಳ ಆಂತರಿಕ ಶುದ್ಧಿಗಾಗಿ ಆಸರೆ ನೀಡಿತ್ತು. ಉತ್ತರ ಭಾರತದಲ್ಲಿ ಜೈನ ಧರ್ಮವು ಹುಟ್ಟಿದರು ಹೆಚ್ಚು ಪ್ರಸಾರಗೊಂಡಿದ್ದು ಕರ್ನಾಟಕದಲ್ಲಿ ಎಂಬುದಕ್ಕೆ ಕನ್ನಡನಾಡಿನ ಚರಿತ್ರೆಯೆ  ಸಾಕ್ಷಿಯಾಗಿದೆ. ವಿವಿಧ ಧರ್ಮಗಳ ಬೀಡು ದೇವಾಲಯ ಮಸೀದಿ ಗುರುದ್ವಾರಗಳನ್ನು ಹೊಂದಿದ ಬೀದರ್ ಜಿಲ್ಲೆಯು ಕರ್ನಾಟಕದ ಕಿರೀಟ ಪ್ರಯಾವಾಗಿದೆ.

ಬೀದರ್ ನಿಂದ  ಸುಮಾರು 10 ಕಿ ಮೀ  ಅಂತರದಲ್ಲಿ ಊರಸುತ್ತಲು ಜೋಡು ಕಂದಕವನ್ನು ಹೊಂದಿದ ದೊಡ್ಡ ಗ್ರಾಮ ಕಮಠಾಣ. ಈ ಗ್ರಾಮದಲ್ಲಿ ವಿಠಲ ಮಂದಿರ ಪುರಾತನ ಮಠ ಶ್ರೀ ಭಗವಾನ್ ಪಾರ್ಶ್ವನಾಥರ ದೇವಾಲಯವಿದೆ. ಧಾರ್ಮಿಕ ಉತ್ಸವಗಳಿಗೆ ಆಶ್ರಯ ಕೂಡ  ನೀಡಿದೆ. ಇಲ್ಲಿ ಅತ್ಯಂತ ಬೌವ್ಯವಾದ ಮಾನಸ್ಥಂಭ ಕೂಡ ನಿರ್ಮಾಣವಾಗಿದೆ.

ರಟ್ಟ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಪಾರ್ಶ್ವನಾಥರ ಕಪ್ಪು ಶಿಲೆಯ ತಪ್ಪೊ ನಿರತ ಸುಂದರವಾದ 4.5 ಅಡಿಗಳಷ್ಟು ಎತ್ತರವಾಗಿರುವ ಮೂರ್ತಿ ಇಲ್ಲಿದೆ. ಇದು 11ನೇಯ ಶತಮಾನದ ಇತಿಹಾಸವುಳ್ಳದ್ದಾಗಿದೆ ಈ ಜಿನಾಲಯಕ್ಕೆ ಒಂದುವರೆ ಎಕ್ಕರೆಗಳಷ್ಟು ವಿಶಾಲವಾದ ಭೂಮಿ ಇದ್ದು ಪೂರ್ವ ಮತ್ತು ದಕ್ಷಿಣ ಮಹಾದ್ವಾರಗಳು ಇವೆ. ಈ ಗ್ರಾಮದಲ್ಲಿ ಪದ್ಮಣ್ಣ ಬೆಳಕೀರೆ ಎಂಬುವವರ ಪುತ್ರರ ಒಂದೇ ಕುಟುಂಬವಾದರು ಜಿನಾಲಯದರ ರಕ್ಷಣೆ ಮಾಡುತ್ತ ಬಂದಿದ್ದಾರೆ. 1987ರ ಮಾಗ ಶುದ್ದಿ ಪಂಚಮಿಯವರೆಗೆ ಜಿನಾಲಯದ ನೆಲ ಮಾಳಿಗೆಯಲ್ಲಿದ್ದ ಮೂರ್ತಿಯನ್ನು ಆಚಾರ್ಯಶ್ರೀ ಶೃತಸಾಗರ ಮಹಾರಾಜರು ಎತ್ತರದ ವೇದಿಕೆಯ ಮೇಲೆ ಪ್ರತಿಷ್ಠಾಪನೆ ಮಾಡಿಸಿದರು. ವರ್ಷದ ಎಲ್ಲಾ ದಿನಗಳಲ್ಲಿಯೂ ಭಗವಾನರಿಗೆ ಶಾಶ್ವತ ದೃವನಿಧಿಯಿಂದ ಪಂಚಾಮೃತ ಅಭಿಷೇಕ ಹಾಗೂ  ಪೂಜೆ ನಡೆಯುವ ವ್ಯವಸ್ಥೆ ಮಾಡಿದ್ದಾರೆ. ಪ್ರತಿವರ್ಷ ಮಾಗ ಶುದ್ದಿ ಪಂಚಮಿ ಇಂದ ಸಪ್ತಮಿಯ ವರೆಗೆ ರಥಯಾತ್ರ ಮಹೋತ್ಸವ ಜರುಗುತ್ತದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮಹಾರಾಷ್ಟ್ರ ರಾಜ್ಯಗಳಿಂದ ಅನೇಕ ಜನ ಭಕ್ತರು ಹಾಗೂ  ಗುಲ್ಬರ್ಗ ಜಿಲ್ಲೆಯಿಂದ ಭಕ್ತರು ಯಾತ್ರ ಮಹೋತ್ಸವದಲ್ಲಿ ಪಾಲ್ಗೊಳಲ್ಲೂ ಆಗಮಿಸುತ್ತಾರೆ. ಎಲ್ಲಾ ರೀತಿಯ ವ್ಯವಸ್ಥೆಯಿಂದ ಕೂಡಿದ ಆಧುನಿಕ ಪಾಕಶಾಲೆ ಊಟದ ಮನೆ ಶೌಚಾಲಯ ಸ್ನಾನಗೃಹ 12ವಸತಿ ಗೃಹಗಳನ್ನು ಈ ಪರಿಸರ ಹೊಂದಿದೆ. ಹಿಂದೆ ಇಲ್ಲಿ ಗುರುಕುಲವಿತ್ತು ಎಂದು ಇಲ್ಲಿ ಶಿಕ್ಷಣ ಪಡೆದ ಸ್ಥಳಿಯರು ಹೇಳುತ್ತಾರೆ. ಅದನ್ನು ಹೀಗಾ ಪುನರ್ ನಿರ್ಮಾಣ  ಯೋಜನೆ ಮಾಡಲಾಗಿದೆ, ಅದಕ್ಕಾಗಿ ಶುತಜ್ಞಾನ ವಿದ್ಯಾರ್ಥಿನಿಲಯ ಎಂದು ಹೆಸರಿನ ಯೋಜನೆ ಸಿದ್ದವಾಗಿದ್ದು ನೀಲಿ ನಕ್ಷೆ ಮುಂತಾದ ಖರ್ಚಿನ ಪತ್ರ ಹಾಗೂ ಮಾದರಿ ಚಿತ್ರ ತಯಾರಿಸಿದ್ದು ದಾನಿಗಳಿಗಾಗಿ ಆಡಳಿತ ಮಂಡಳಿ ಎದುರು ನೋಡುತ್ತಿದೆ.

ಅತಿಶಯ ಕ್ಷೇತ್ರವನ್ನು ಕುರಿತು ಸ್ಥಳಿಯರು ಜ್ವಾಲಮಾಲ ನ್ಯೂಸ್ ಜೊತೆ ಮಾತನಾಡಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್