ಬೃಹತ್ ಶ್ರೀ ಸಿದ್ಧಚಕ್ರ ಆರಾಧನಾ ಮಹೋತ್ಸವ, ಮಹಾ ರಥೋತ್ಸವ / ಸೋಂದಾ / jwalamalanews / 2022

ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಸುಧಾಪುರದಲ್ಲಿ ವೈಭವೋಪೇತವಾಗಿ ನಡೆದ ಬೃಹತ್ ಶ್ರೀ ಸಿದ್ಧಚಕ್ರ ಆರಾಧನಾ ಮಹೋತ್ಸವ, ರಥೋತ್ಸವ ಚತುರ್ವಿಂಶತಿ ತೀರ್ಥಂಕರರ ಅಭಿಷೇಕ, ತೆಪ್ಪೋತ್ಸವ ದೃಶ್ಯಾವಳಿಗಳ ಸಹಿತ ಸಂಕ್ಷಿಪ್ತ ಸುದ್ದಿ ನೋಡಿ ಪುಣ್ಯಾರ್ಜನೆ ಪಡೆಯಿರಿ

ಸಮೃದ್ದ ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ  ಉತ್ತರ ಕನ್ನಡ ಜಿಲ್ಲೆಯ  ಶಿರಸಿ ತಾಲ್ಲೂಕಿನಿಂದ 20 ಕಿಲೋಮೀಟರ್  ದೂರದಲ್ಲಿರುವ  ಪ್ರಾಚೀನ ಪುಣ್ಯ ಕ್ಷೇತ್ರ ಸುಧಾಪುರ , ಸ್ವಾದಿ ಎಂದೆಲ್ಲ ಕರೆಯುವ  ಕ್ಷೇತ್ರ . ಇಲ್ಲಿನ ಪ್ರತಿವರ್ಷದಂತೆ ದಿನಾಂಕ 10/03/2022 ರಿಂದ ದಿನಾಂಕ 17 ರವರೆಗೆ ಶ್ರೀ ಸಿದ್ದಚಕ್ರ ಮಹಾವಂಡಲ ಆರಾಧನೆ  ಹಾಗೂ ದಿನಾಂಕ 18/03/2022 ನೇ ಶುಕ್ರವಾರದಂದು ಚರ್ತುವಂಶಿ ತೀರ್ಥಂಕರರಿಗೆ ಏಕಕಾಲಕ್ಕೆ ಪಂಚಮೃತ ಸಹಿತ  ಕಲ್ಪಧುಮ ಪೂಜೆ ಹವನ ಕುಂಡದಲ್ಲಿ ಪೂರ್ಣಾಹುತಿ , ಶ್ರೀ  ಜಿನಭಗವಂತನ ಮಹಾರಥೋತ್ಸವ  ಹಾಗೂ ಸಂಜೆ ಮುತ್ತಿನ ಕೆರೆಯಲ್ಲಿ ತೆಪ್ಪೋತ್ಸವ ವೈಭವವಾಗಿ ನಡೆದು ಇದರ ಸುಂದರ ಕ್ಷಣಗಳನ್ನು ಇಲ್ಲಿ ಜೋಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಭಟ್ಟಾಕಲಂಕ ಭಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳಿಂದಲೇ  ನಡೆದ ಉತ್ಸವದ

 ಧಾರ್ಮಿಕ ಹಿನ್ನೆಲೆಯ ಬಗ್ಗೆ ತಿಳಿಸಿ ಹೇಳಿದರು. ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದಲ್ಲಿ ಪ್ರತಿ ವರ್ಷದಂತೆ  ಈ ವರ್ಷವೂ ಕೂಡ ಸಿದ್ದ ಚಕ್ರ ಮಹಾಮಂಡಲ ಆರಾಧನಾ ಮಹಾ ಮಹೋತ್ಸವ  ಹಾಗೆಯೇ ರಥೋತ್ಸವದ ಕಾರ್ಯಕ್ರಮಗಳು ಇದೇ ಹತ್ತನೇ ತಾರೀಖಿನಿಂದ  18 ನೇ ತಾರೀಖಿನವರೆಗೂ ಅತಿ ವಿಶೇಷವಾಗಿ ವಿಧಿವತ್ತಾಗಿ  ವೈಭವಯುತವಾಗಿ ಭಕ್ತಿ ಭಾವದಿಂದ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಶ್ರಾವಕ ಶ್ರಾವಕಿಯರು ನೆರವೇರಿಸಿ ಕೊಟ್ಟಿದ್ದಾರೆ. ಈ ಮದನಸುಂದರಿಯ ರಥೋತ್ಸವ ಕಾರ್ಯಕ್ರಮವನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿರುವಂತಹ ಕಾರ್ಯಕ್ರಮವನ್ನು ಈ ಬಾರಿಯೂ ಸಹ ನೆರವೇರಿಸಿದ್ದಾರೆ.  ಈ ಕಾರ್ಯವನ್ನು ನೆರವೇರಿಸಿದ ಸಂಪೂರ್ಣ ಪಲ ಶ್ರಾವಕಶ್ರಾವಕಿಯರಿಗೆ ಸಿಗಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದರು.