ಹೆಮ್ಮೆಯ ಶ್ರಾವಕ~ಶ್ರಾವಕಿ- 05 / ಶ್ರೀ ಬಿ. ಭುಜಬಲಿ / 2022

ಜ್ವಾಲಾ ಮಾಲಾ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ/ಶ್ರಾವಕಿಯರ ಜೀವನಗಾಥೆ ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೇ ನೋಡಿ ಅವರನ್ನು ಇನ್ನು ಹೆಚ್ಚಿನ ಸೇವೆಗಾಗಿ ಹುರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ ನಿಮ್ಮ ಜೀವನಗಾಥೆಯ ದೃಶ್ಯೀಕರಣಕ್ಕಾಗಿ ಸಂಪರ್ಕಿಸಿ

 ನಮ್ಮ ಬಾರಿಯ ಹೆಮ್ಮೆಯ ಶ್ರಾವಕ ಶ್ರೀ ಬಿ. ಭುಜಬಲಿ, ಧರ್ಮಸ್ಥಳ

ಇತಿಹಾಸ ಪ್ರಸಿದ್ದ ಬಂಗ್ವಾಡಿ ಅರಸು ಮನೆತನದಲ್ಲಿ  ದಿವಂಗತ ಪದ್ಮನಾಭ ಶೆಟ್ಟಿ ಮತ್ತು ಅನಂತಮತಿಯರ ಸುಪುತ್ರರಾಗಿ 1956 ನವೆಂಬರ್ 7 ರಂದು ಜನಿಸಿ ಹುಟ್ಟೂರಿನಲ್ಲಿ ಪ್ರಾರ್ಥಮಿಕ ಶಿಕ್ಷಣವನ್ನುಪೂರೈಸಿ ಪ್ರೌಢ ಶಿಕ್ಷಣಕ್ಕಾಗಿ  ಧರ್ಮಸ್ಥಳಕ್ಕೆ ಬಂದು ಪೂಜ್ಯ ಹೆಗ್ಗಡೆಯವರ ಆಶ್ರಯದಲ್ಲಿ ಶಿಕ್ಷಣದ ಜೊತೆಗೆ ವೃತ್ತಿ ಜೀವನ ಪ್ರಾರಂಭಿಸಿದರು. ಬಾಲ್ಯದಲ್ಲಿ ಮಾತೃಶ್ರೀ ರತ್ನಮ್ಮನವರ ಆಶ್ರಯ , ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಯವರು ಮಾತೃಶ್ರೀ  ಹೇಮಾವತಿ ಹೆಗ್ಗಡೆಯವರು ಮತ್ತು ಕುಟುಂಬಸ್ಥರ ಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ಹಾಗೂ ಮಾರ್ಗದರ್ಶನದೊಂದಿಗೆ  ಅವರು ರಾಷ್ಟ್ರ ಪ್ರಶಸ್ತಿಯ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಹೀಗೆ ಬುಜಬಲಿಯವರು ಶ್ರೀ ಕ್ಷೇತ್ರದ ಧರ್ಮಸ್ಥಳದ ಜಮಾ ಮುಸ್ತದಿಯಾಗಿ ನಿವೃತ್ತಗೊಂಡರು. ಧರ್ಮಸ್ಥಳದಲ್ಲಿ ಸುಮಾರು 48 ವರ್ಷಗಳ ಸಾರ್ಥಕ ಸೇವೆಯನ್ನು ವಿವಿಧ ಸ್ಥರಗಳಲ್ಲಿ ನಿರ್ವಹಿಸುತ್ತಾ ಬಂದಿದ್ದಾರೆ. ಶ್ರೀಯುತ ಬುಜಬಲಿಯವರನ್ನು ಹೆಮ್ಮೆಯ ಶ್ರಾವಕ ಎಂದು ನಮ್ಮ ಜ್ವಾಲಾಮಾಲಾ ನ್ಯೂಸ್ ಚಾನೆಲ್ ನ ಪರವಾಗಿ ಗೌರವಿಸಲಾಗುತ್ತಿದೆ.

ಕಲಿತ ಶಿಕ್ಷಣ ಕಡಿಮೆಯಾದರೂ ತಮ್ಮ ಹವ್ಯಾಸ ಕಲಾಭಿರುಚಿ ಸಾದಿಸುವ ಛಲವಿದ್ದರೆ ಎಲ್ಲಾ ಸಹಕಾರವಿದ್ದರೆ  ವಿಶೇಷ ಸಾಧನೆ ಮಾಡಿ ಸಮಾಜದಿಂದ ಗುರುತಿಸಿಕೊಳ್ಳುವ  ವ್ಯಕ್ತಿತ್ವ ರೂಪಿಸಿಕೊಳ್ಲಬಹುದೆಂದು  ಎಂಬುದಕ್ಕೆ ಧರ್ಮಸ್ಥಳದ ಶ್ರೀ ಬುಜಬಲಿಯವರು ಉತ್ತಮ ನಿದರ್ಶನವಾಗಿದ್ದಾರೆ. ಅವರನ್ನು ನಾವು ಸಂದರ್ಶಿಸಿದಾಗ ಅವರು ಹುಟ್ಟುಬೆಳೆದು ಬಂದಂತಹ ಊರು ಮತ್ತು ತಮ್ಮ ಶಿಕ್ಷಣದ ಬಗ್ಗೆ ಮಾಹಿತಿ ಹಾಗೂ ಅವರ ಹುಟ್ಟೂರಿನ ಸುತ್ತಮುತ್ತಲಿನ ಬಸದಿಗಳ ಬಗ್ಗೆ ಮಾಜಿತಿಯನ್ನು ನೀಡಿದರು. ತಮ್ಗೆ ಆಶ್ರಯವನ್ನು ಕೊಟ್ಟು ತಮ್ಮ ಜೀವನದಲ್ಲಿ ಮಾಡಿರುವ ಸೇವೆಗಳಿಗೆ ಶ್ರೀ ವೀರೇಂದ್ರ ಹೆಗ್ಗಡೆಯವರೇ ನಮಗೆ ದೇವರು ಇದ್ದ ಹಾಗೆ. ಎಂದು ತಿಳಿಸಿಕೊಟ್ಟರು.