ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹೈವೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಮುಸಕೊಂಡ್ಲಿಯಲ್ಲಿ ಆಚಾರ್ಯ ಪ್ರಜ್ಞಾಶ್ರವಣ ದೇವನಂದಿ ಮಹಾರಾಜರ ಪ್ರಿಯಶಿಷ್ಯರಾದ ಪರಮಪೂಜ್ಯ ಮುನಿಮಹಾರಾಜರ ಪರಮಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಮಪೂಜ್ಯ ಮುನಿಶ್ರೀ 108 ಅಮರಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಭಗವಾನ್ 1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ನೂತನ ಜಿನಬಿಂಬ ಪ್ರತಿಷ್ಠಾಪನೆ ಹಾಗೂ 24 ತೀರ್ಥಂಕರರ ದರ್ಶನ ಬಿಂಬ ಚತುರ್ಮುಖ ಜಿನಬಿಂಬ ಪಂಚಕಲ್ಯಾಣ ಪೂಜಾ ಕಾರ್ಯಕ್ರಮ ಜರುಗಲಿದ್ದು, ದಿನಾಂಕ 22-03-2022ರಂದು ಯುಗಳ ಮುನಿಮಹಾರಾಜರ ಪುರಪ್ರವೇಶ ಆಗಲಿದೆ. ಪುರಪ್ರವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಜೊತೆಗೆ ದಿನಾಂಕ 23/03/2022 ನೇ ಬುಧವಾರ ದಿಂದ 27/09/2022 ನೇ ಭಾನುವಾರದವರೆಗೆ ನಡೆಯಲಿರುವ ಪಂಚಕಲ್ಯಾಣ ಕಾರ್ಯಕ್ರಮಕ್ಕೆ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನರಸಿಂಹರಾಜಪುರ ಹಾಗೂ ಸಮಸ್ತ ಭಟ್ಟಾರಕರುಗಳ ಸಹಯೋಗದೊಂದಿಗೆ ಮತ್ತು ಪದ್ಮವಿಭೂಷಣ ಡಾ|| ಡಿ ವೀರೇಂದ್ರ ಹೆಗ್ಗಡೆ ಯವರು ಮತ್ತು ಶ್ರೀ ಡಿ.ಸುರೇಂದ್ರಕುಮಾರ್ ರವರ ಪಾವನ ಸಾನಿಧ್ಯದಲ್ಲಿ ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ಸಮಸ್ತ ಧರ್ಮಬಂಧುಗಳು ಆಗಮಿಸಿ ಪುಣ್ಯಭಾಗಿಗಳಾಗಬೇಕೆಂದು ಅಪೇಕ್ಷೆ. ಒಂದು ವಿಶೇಷ ಸೂಚನೆ ಪಂಚಕಲ್ಯಾಣ ಮುಗಿಸಿದ ಯುಗಳ ಮುನಿಮಹಾರಾಜರ ವಿಹಾರ ಶ್ರವಣಬೆಳಗೊಳ ಮೈಸೂರಿನಲ್ಲಿ ಮಹಾವೀರ ಜಯಂತಿ ಆಚರಣೆ ನಂತರ ಅವರು ಕನತಿಗಿರಿ ಮಹೋತ್ಸವಕ್ಕೆ ವಿಹಾರ ಕೈಗೊಳ್ಳಲಿದ್ದಾರೆ. ವಿಹಾರದಲ್ಲಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತಿದ್ದೇವೆ.














