ಹಾಸನ ನಗರದ ಭಗವಾನ್ ಶ್ರೀ ಪಾಶ್ವನಾಥ ತೀರ್ಥಂಕರರು,ದೊಡ್ಡ ಬಸದಿ ಪಂಚಕಲ್ಯಾಣ ಮಹೋತ್ಸವ ಬೃಹತ್ ಮಟ್ಟದಲ್ಲಿ ಆಯೋಜನೆಗೊಂಡಿದೆ ಬಂಧುಗಳು ಆಗಮಿಸಿ ಪುಣ್ಯ ಲಾಭ ಪಡೆಯಿರಿ
ಬಹಳ ಸಮಯದಿಂದ ನಿರೀಕ್ಷೆಯಲ್ಲಿದ್ದ ಹಾಸನ ದೊಡ್ಡ ಬಸದಿಯೆಂದೇ ಪ್ರಖ್ಯಾತವಾದ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರ ಇಲ್ಲಿನ ನೂತನ ಶಿಲಾಮಯ ಮಾನಸ್ಥಂಭೋಪರಿ ಚತುರ್ಮುಖ ಭಗವಾನ್ 1008 ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವದ ಆತ್ಮೀಯ ಆಹ್ವಾನ . ದಿನಾಂಕ 23-3-2022ನೇ ಬುಧವಾರದಿಂದ ದಿನಾಂಕ 27-03-2022 ನೇ ಬಾನುವಾರದವರೆಗೆ ವಾತ್ಸಲ್ಯ ಮೂರ್ತಿ ಪರಮಪೂಜ್ಯ 108 ಪುಣ್ಯಸಾಗರ ಮುನಿಮಹಾರಾಜರ ನೇತೃತ್ವ ಹಾಗೂ ದಿವ್ಯ ಸಾನಿಧ್ಯದೊಂದಿಗೆ ಜಿನಧರ್ಮ ಪ್ರಭಾವಕ ಯುವಸಂತ ಪರಮಪೂಜ್ಯ ಮುನಿಶ್ರೀ 108 ವೀರಸಾಗರ ಮುನಿಮಹಾರಾಜರು ಇವರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರವಣಬೆಳಗೊಳದ ಸ್ವಸ್ತಿಶ್ರೀ ಪಟ್ಟಾಚರ್ಯವರ್ಯ ಮುನಿರಾಜರಾದ ಶ್ರೀ ಶ್ರೀ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಸಮಸ್ತ ಭಟ್ಟಾರಕರುಗಳ ಆಶೀರ್ವಾದ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಶ್ರೀ ಎಂ. ಅಜಿತ್ ಕುಮಾರ್ ರವರ ಮುಂದಾಳತ್ವದಲ್ಲಿ ಶ್ರೀ ಹಾಸನ ಜೈನ ಸಂಘ ಹಾಗೂ ಪಂಚ ಕಲ್ಯಾಣ ಮಹೋತ್ಸವ ಸಮಿತಿ ಮತ್ತು ಸಮಸ್ತ ಜೈನ ಸಮಾಜ ಹಾಸನ ಇವರೆಲ್ಲರ ಆಯೋಜನೆಯಲ್ಲಿ ಪಂಚ ಕಲ್ಯಾಣ ಮಹೋತ್ಸವವು ಸಂಪನ್ನಗೊಳ್ಳಲಿದೆ. ನಡೆಯಲಿರುವ ಮಹೋತ್ಸವಕ್ಕೆ ಪದ್ಮವಿಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರು , ಮಾನ್ಯ ಮಾಜಿ ಹೆಚ್. ಡಿ ದೇವೇಗೌಡರವರು ಆಗಮಿಸಲಿದ್ದು ಹಾಗೆಯೇ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಹಾಗೆಯೇ ಬಂಧುಗಳೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಪುಣ್ಯಭಾಗಿಗಳಾಗಿ ಎಂದು ಶ್ರೀ ಹಾಸನ ಜೈನ ಸಂಘ, ಪಂಚಕಲ್ಯಾಣ ಸಮಿತಿ ಮತ್ತು ಸಮಸ್ತ ಜೈನ ಸಮಾಜ ಹಾಸನ ಇವರುಗಳಿಂದ ನಿಮ್ಮೆಲ್ಲರಿಗೂ ತುಂಬು ಹೃದಯದ ಆಹ್ವಾನವನ್ನು ಕೋರಿದ್ದಾರೆ. ಅಲ್ಲದೇ ಪಂಚಕಲ್ಯಾಣ ಮಹೋತ್ಸವವು ನಿಮ್ಮ ಮೆಚ್ಚಿನ ಜ್ವಾಲಾಮಾಲ . ನ್ಯೂಸ್ ನೇರಪ್ರಸಾರಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಸಿಸಿ ಪುಣ್ಯಭಾಗಿಗಳಾಗಿ.














