ಜೈ ಜಿನೇಂದ್ರ ವೀಕ್ಷಕರೆ, ಇಷ್ಟೇಲ್ಲಾ ಅಮೋಘ ವೈಭವ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿ ಪಂಚಕಲ್ಯಾಣದಲ್ಲಿ ವೇಳೈಸಿತ್ತು. ದಿನಾಂಕ 03-02-2022ನೇ ಗುರುವಾರದಿಂದ ದಿನಾಂಕ 07-02-2022 ಸೋಮವಾರದವರೆಗೆ, ಪರಮ ಪೂಜ್ಯ ಮುನಿಶ್ರೀ 108 ಅಮೋಘ ಕೀರ್ತಿ ಮುನಿ ಮಹಾರಾಜರು, ಪರಮ ಪೂಜ್ಯ ಮುನಿಶ್ರೀ 108 ಅಮರ ಕೀರ್ತಿ ಮುನಿ ಮಹಾರಾಜರು ಇವರ ದಿವ್ಯ ಉಪಸ್ಥಿತಿಯೊಂದಿಗೆ ಸ್ವಸ್ತಿಶ್ರೀ ಪರಮ ಪೂಜ್ಯ ರಾಜಗುರು ಧ್ಯಾನ ಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಮತ್ತು ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸುದರ್ಶನ ಜೈನ್, ಕಾರ್ಯದರ್ಶಿಗಳಾದ ದೇವಕುಮಾರ್ ಹಾಗೂ ಸರ್ವ ಸದಸ್ಯರು ಜೀರ್ಣೋದ್ಧಾರ ಪಂಚಕಲ್ಯಾಣ ಮಹೋತ್ಸವ ಸಮಿತಿ ಪಂಜಿಕಲ್ಲು ಇವರ ಆಯೋಜನೆಯೊಂದಿಗೆ ಒಂದೊಂದು ದಿನದ ಪೂಜಾಕಾರ್ಯಕ್ರಮಗಳು ವಿಧಿಪೂರ್ವಕವಾಗಿ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ವೈಭವಯುತವಾಗಿ ಜರುಗಿದ್ದಲ್ಲದೆ ಬಸದಿಯ ಒಂದೊಂದು ಸ್ಥಳವು ಅತ್ಯಂತ ಕಲಾತ್ಮಕವಾಗಿ ಸುಂದರವಾಗಿರುವುದರೊಂದಿಗೆ ಮಹೋತ್ಸವಕ್ಕಾಗಿ ಮಾಡಿದ ಅಲಂಕಾರ ಅಲ್ಲಿನ ವಾತಾವರಣ ಮನಮೋಹಕತೆಯನ್ನು ಇಮ್ಮಡಿಗೊಳಿಸಿತು. ಬನ್ನಿ 5 ದಿನದ ಕಾರ್ಯಕ್ರಮ ಆಯ್ದಕ್ಷಣಗಳನ್ನ ಸಂಕ್ಷಿಪ್ತವಾಗಿ ಹೆಣೆಯಲಾಗಿದೆ ವೀಕ್ಷಿಸಿ.
ದಿನಾಂಕ 03-02-2022 ರಂದು ತೋರಣ ಮೂಹುರ್ತ, ಮುಖ ವಸ್ತ್ರ ಉದ್ಗಾಟನೆ, ನಾಂದಿ ಮಂಗಲ, ವಾಸ್ತು ಪೂಜ, ನವಗ್ರಹ ವಿಧಾನಗಳಳೊಂದಿಗೆ, ಮೃತಿಕ ಸಂಗ್ರಹಣ, ಕ್ಷೇತ್ರಪಾಲ ಪ್ರತಿಷ್ಠೆ ಹೀಗೆ ಮೊದಲನೇಯ ದಿನ ಪ್ರಾರಂಭಗೊಂಡು ಮಧ್ಯಾಹ್ನ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜಿನ ಭಜನಾ ತಂಡದವರಿಂದ ಜಿನ ಭಜನೆಗಳು ಹಾಗೂ ಅಂದಿನ ಸಭಾ ಕಾರ್ಯಕ್ರಮದಲ್ಲಿ ಯುಗಳ ಮುನಿಗಳ ಸಾನಿಧ್ಯದಲ್ಲಿ ಪರಮ ಪೂಜ್ಯ ನಿರ್ವಾಣ ಸಾಗರರ ದಿವ್ಯ ಉಪಸ್ಥತಿಯಲ್ಲಿ ಅಳದಂಗಡಿ ಶ್ರೀ ತಿಮ್ಮಣ್ಣರಸರಾದ ಡಾ|| ಪದ್ಮ ಪ್ರಸಾದ್ ಅಜಿಲರು ಇವರ ಅಧ್ಯಕ್ಷತೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜಯವರ್ಮ ಬಲ್ಲಾಳ್, ಶ್ರೀ ಪ್ರಸನ್ನ ಪಡಿವಾಳ್, ರಾಜ ವರ್ಮ ಬಲ್ಲಾಳ್, ಅಧ್ಯಕ್ಷರಾದ ಸುದರ್ಶನ್ ಜೈನ್, ಜಯರಾಜ್ ಕಂಬಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಅನನ್ಯ ಮತ್ತು ಸೌಜನ್ಯ ಇವರಿಂದ ಸಂಗೀತ ಕಾರ್ಯಕ್ರಮ ಏರ್ಪಟ್ಟಿತ್ತು.
ದಿನಾಂಕ 04-02-2022 ರಂದು ಯಕ್ಷ ಪ್ರತಿಷ್ಠೆ, ನಾಗ ಪ್ರತಿಷ್ಠೆ, ದ್ವಜಾರೋಹಣ, ಶ್ರೀ ಪದ್ಮಾವತಿ ಪ್ರತಿಷ್ಠೆ, ಮಂಟಪ ವೇದಿ ಪ್ರತಿಷ್ಠೆ, ಬೃಹತ್ ಯಾಗ ಮಂಡಲರಾಧನೆ, ಗರ್ಭಾವತಾರ ಕಲ್ಯಾಣ ಇನ್ನೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರ್ವಿಜ್ಞವಾಗಿ ನಡೆದವು. ಅಂದು ಮಧ್ಯಾಹ್ನ ಮುನಿರಾಜ್ ರಂಜಾಳ ಹಾಗೂ ಪಟ್ಲಾ ಸತೀಶ್ ಶೆಟ್ಟಿ ಮತ್ತು ಶ್ರೀಮತಿ ಅಮೃತ ಅಡಿಗ ಇವರಿಂದ ಜಿನ ಕಥಾ ಪ್ರಸಂಗದಲ್ಲಿ ಶ್ರೀ ದೇವಿ ಪದ್ಮಾವತಿ ಚರಿತ್ರೆ ವಾಚನಗೊಂಡಿತು. ಮಧ್ಯಾಹ್ನ ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಯುಗಳ ಮುನಿ ಮಹಾರಾಜರ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರು, ಶ್ರೀ ಡಿ ಸುರೇಂದ್ರ ಕುಮಾರ್ ರವರು, ವಿ ಪ್ರಸನ್ನ ಕುಮಾರ್ ರವರು, ಶ್ರೀ ರವಿಂದ್ರ ಪಾಟೀಲ್ ನಾಸಿಕ್ ದಂಪತಿಗಳು, ರತ್ನವರ್ಮ ಇಂದ್ರರು ವೇದಿಕೆಯಲ್ಲಿ ಇದಂತಹ ಬೃಹತ್ ಸಭಾ ಕಾರ್ಯಕ್ರಮ ನೆರವೇರಿತು. ಇಲ್ಲಿ ಧರ್ಮ ಸಿರಿ ಪುಸ್ತಕ ಬಿಡುಗಡೆಗೊಳುತ್ತದೆ. ಸಭಾ ಕಾರ್ಯಕ್ರಮದಲ್ಲಿ ಯುಗಳ ಮುನಿ ಮಹಾರಾಜರ ಶುಲಕ ಶ್ರೀ ನಿರ್ವಾಣ ಸಾಗರರ ಸಾನಿಧ್ಯದಲ್ಲಿ ರಾಜೇಂದ್ರ ಶೆಟ್ಟಿ ಅರಳ, ತುಮಕೂರಿನ ರಾಜೇಂದ್ರ ಜೈನ್, ಮುನಿರಾಜ್ ರಂಜಾಳ ಹಾಗೂ ಇನ್ನೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದರು. ಕಾರ್ಯಕ್ರಮದಲ್ಲಿ ಸಮಾಜದ ಹಿತಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರಿಗೆ ಸನ್ಮಾನಿಸಲಾಯಿತು.
ದಿನಾಂಕ 05-02-2022 ರಂದು ಜನ್ಮ ಕಲ್ಯಾಣ, ಲಘು ಜನ್ಮಾಭಿಷೇಕ, ಹೋಮ ಹವನಾದಿಗಳು, ಅನಂತನಾಥ ಸನ್ನಿಧಿಯಲ್ಲಿ ಜಿನ ಗುಣ ಸಂಪತಿ ಆರಾಧನೆ, ಪಾಂಡುಕ ಶಿಲೋಪರಿ ಜನ್ಮಾಭಿಷೇಕ, ನಾಮಕರಣ, ಬಾಲ ಲಿಲೋತ್ಸವ, ಹೀಗೆ ಹಲವಾರು ಧಾರ್ಮಿಕ ವಿಧಿ ವಿಧಾನಗಳು, ಹೊಂಬುಜ ಮಠಾಧೀಶರಾಧ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ನಡೆಯಿತು. ಭಂಟವಾಳ ಜೈನ್ ಮಿಲನ್ ಪ್ರಾಯೋಜಿತ ಚಿಣ್ಣರ ಮಿಲನ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಅಮೋಘವಾಗಿ ಮೂಡಿಬಂತು. ಅಂದು ಮಧ್ಯಾಹ್ನ ಸಭಾ ಕಾರ್ಯಕ್ರಮದಲ್ಲಿ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಜಗದ್ಗುರು ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಹಾಗೂ ಶುಲಕ ಮಹಾರಾಜರ ಪಾವನ ಸಾನಿಧ್ಯದಲ್ಲಿ ಅಧ್ಯಕ್ಷರಾದ ಸುದರ್ಶನ್ ಜೈನ್ ಕಾರ್ಯದರ್ಶಿಗಳಾದ ದೇವಕುಮಾರ್ ರವರು ವೇದಿಕಯಲ್ಲಿ ಉಪಸ್ಥಿತರು ಇದ್ದರು. ಸಂಜೆಯ ಸಭಾ ಕಾರ್ಯಕ್ರಮ ಯುಗಳ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ನಡೆದು ಪುಷ್ಪರಾಜ್ ಜೈನ್ ಸುದರ್ಶನ್ ಜೈನ್ ಎಂ ಕೆ ವಿಜಯ್ ಕುಮಾರ್ ರವರು ಎಂ ಎನ್ ರಾಜೇಂದ್ರ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನಾಂಕ 06-02-2022 ಭಾನುವಾರದಂದು ಮಾನಸ್ಥಂಭ ಶುದ್ದಿ, ಸಮೂಹಿಕ ವ್ರತೋಪದೇಶ, ರಾಜ್ಯಭಾರ, ರಾಜವೈಭವ, ವೈರಾಗ್ಯ ಭಾವನ ಪೂರ್ವಕ ಕಲ್ಯಾಣ , ದಿಕ್ಷಾವಿಧಿ ಕಾರ್ಯಕ್ರಮಗಳು ಜರುಗಿದ್ದಲ್ಲದೆ ನಿರೀಕ್ಷ ರವರ ಗಾಯನದೊಂದಿಗೆ ಸಂಪನ್ನಗೊಂಡಿತು. ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಯುಗಳ ಮುನಿ ಮಹಾರಾಜರ ಸಾನಿಧ್ಯದಲ್ಲಿ ಪರಮ ಪೂಜ್ಯ ರಾಜಗುರು ಲಲಿತ ಕೀರ್ತಿ ಭಟ್ಟಾರಕ ಮಹಾರಾಜರ ಪಾವನ ಉಪಸ್ಥಿತಿಯಲ್ಲಿ ಪರಮ ಪೂಜ್ಯ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಎ ಎನ್ ಅಜಿತ್ ಕುಮಾರ್, ಹೆಚ್ ಜೆ ನಾಗರಾಜ್, ಸುಬೋದ್ ಕುಮಾರ್, ಪಿ ಪಿ ಹೆಗ್ಗಡೆ ಹಾಗೂ ಪುಷ್ಪರಾಜ್ ಜೈನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿ ಪಿ ಹೆಗ್ಗಡೆ ಯವರಿಂದ ಅಂದು ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೂಡ ನೀಡಲಾಯಿತು. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರು ಹಾಗೂ ನರಸಿಂಹರಾಜ ಪುರದ ಮಠಾದೀಶರುಗಳಾದ ಪರಮ ಪೂಜ್ಯ ಲಕ್ಷ್ಮಿಸೇನ ಭಟ್ಟಾರಕರು ಇವರ ಪಾವನ ಉಪಸ್ಥಿತಿಯಲ್ಲಿ ಹಾಗೂ ಡಾ|| ಸುದೀಪ್, ಧನಪಾಲ್ ರವರು, ಪದ್ಮಿನಿ ಪದ್ಮರಾಜ್, ಸುದರ್ಶನ್ ಜೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಜೇಯ ಬಾಹುಬಲಿ ಹಾಗೂ ಸಂವತ್ಸರಣ ವೈಭವ ನೃತ್ಯ ರೂಪಕ ನಡೆಯಿತು.
ಕೊನೆಯ ದಿನವಾದ 07-02-2022 ರಂದು ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪ್ರತಿಷ್ಠೆ, ಕೇವಲ ಜ್ಞಾನ ಕಲ್ಯಾಣ, ಚತುರ್ಮುಖ ಬಿಂಬ ಪ್ರತಿಷ್ಠೆ, ಶಿಕರಾರೋಹಣ, ನಿರ್ವಾಣ ಕಲ್ಯಾಣ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಧ್ಯಾಹ್ನ ಸಂವತ್ಸರಣ ಪೂಜಾವಿಧಿ ಯುಗಳ ಮುನಿ ಮಹಾರಾಜರ ಹಾಗೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳು, ಸೊಂಧಾ ಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀಮತಿ ಜಯಶ್ರೀ ಹೊರನಾಡು ಅವರ ಸಂಗೀತದೊಂದಿಗೆ ಸಂಪನ್ನಗೊಂಡಿತು. ಮಧ್ಯಾಹ್ನ ಯುಗಳ ಮುನಿಗಳು, ಶುಲಕ ಮಹಾರಾಜರು, ಕಾರ್ಕಳ ಶ್ರೀಗಳು, ಮೂಡುಬಿದ್ರೆ ಶ್ರೀಗಳು ಹಾಗೂ ಸೊಂಧಾ ಮಠಾದೀಶರಾದ ಸ್ವಸ್ತಿಶ್ರೀ ಭಟ್ಟಾಲಕಂಕ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ಸಂವತ್ಸರಣ ಪೂಜೆ ನಡೆಯಿತ್ತು. ಸಂಜೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರು ವಹಿಸಿದ್ದರಲ್ಲದೆ ಕೆ ಪಿ ಸಿ ಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರು, ಮಿಥುನ್ ರೈ ರವರು, ದೇವಕುಮಾರ್, ಶ್ರೀ ಬಿ ರಮಾನಾಥ್ ರೈ, ಆಭಯ್ ಚಂದ್ರ ಜೈನ್, ಮಂಜುನಾಥ್ ಭಂಡಾರಿ ಇವರಂತಹ ಗಣ್ಯರು ಉಪಸ್ಥಿತರಿದ್ದ ಬೃಹತ್ ಕಾರ್ಯಕ್ರಮ ಜರುಗಿತು. ಶ್ರೀ ಯುತ ನಿರಂಜನ್ ಕುಮಾರ್ ರವರು ಹಾಗೂ ಶ್ರೀಮತಿ ಪದ್ಮಲತಾ ನಿರಂಜನ್ ರವರು, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀಮತಿ ಶ್ರದ್ಧಾ ಅಮಿತ್ ರವರು ಸಹಿತ ಹೆಗ್ಗಡೆ ಪರಿವಾರದವರು ಅಂದು ಬಸದಿಗೆ ಬೇಟಿ ನೀಡುವುದರ ಮೂಲಕ ಮಹೋತ್ಸವ ಕಳೆಗಟ್ಟಿತು. ನಡೆದ ಸಂಪೂರ್ಣ ಮಹೋತ್ಸವದಲ್ಲಿ ಸ್ವಗ್ರಾಮದವರೆ ಆದ ಕುಮಾರಿ ನಮಿತಾ ಜೈನ್ ರವರ ನಿರೂಪಣೆ ವಿಶೇಷ ಕಳೆತಂದಿತ್ತಲ್ಲದೆ ಆಡಳಿತ ಮಂಡಳಿಯವರ ನೇತೃತ್ವ ಕಾರ್ಯಕ್ರಮ ಸುವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮೂಡಿಬಂದಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














