ಜೈ ಜಿನೇಂದ್ರ ವೀಕ್ಷಕರೆ, ಹೊಯ್ಸಳರ ನಾಡು ಕಲೆಗಳ ಬೀಡು ಬೇಲೂರು ತಾಲ್ಲೂಕು ನಳಿಕೆ ಗ್ರಾಮ, ಮನೋಹರ ಪ್ರಕೃತಿಯ ನಿರ್ಮಿತ ವಾತಾವರಣ ಹೊಂದಿರುವ ಸುಂದರ ಗ್ರಾಮ. ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಜಗದ್ಗುರು ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳ ಹುಟ್ಟೂರು. ಈ ಗ್ರಾಮದಲ್ಲಿ ಸುಮಾರು 18 20 ಜೈನ ಶ್ರಾವಕ ಕುಟುಂಬಗಳು ನೆಲಸಿದ್ದು, ಕೃಷಿಯಿಂದಲೇ ಜೀವನ ನಡೆಸುತ್ತಿದ್ದಾರೆ. ಬಹುವರ್ಷಗಳ ಬಯಕೆಯಂತೆ ಶ್ರವಣ ಬೆಳಗೊಳ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಆಶೀರ್ವಾದ ಹಾಗೂ ನಳಿಕೆಯವರೆ ಆದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವ. ಇಲ್ಲಿ ಬಸದಿಯೊಂದನ್ನು ನವೀಕರಣ ಮಾಡಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ನೂತನ ಬಸದಿಯ ಲೋಕಾರ್ಪಣೆ ನಿಮಿತ್ತ ದಾಮಸಂಪ್ರೋಕ್ಷಣೆ ಪೂರ್ವಕ ಭಗವಾನ್ ಆದಿನಾಥ ತೀರ್ಥಂಕರ ಸ್ವಾಮಿಗೆ ಮಹಾಭಿಷೇಕ ಪೂಜೆಯನ್ನು ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರ ಹಾಗೂ ಪರಮ ಪೂಜ್ಯ 108 ವೀರಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ಹಾಗೂ ಪೂಜ್ಯ ಸ್ವಾಮೀಜಿಗಳ ಸೋಂಧಮಠದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ಬಿಂಬ ಪ್ರತಿಷ್ಠಾಪನೆ ಶೀಖರಾರೋಹಣ ಕಾರ್ಯಕ್ರಮಗಳು ವಿಧಿಪೂರ್ವಕವಾಗಿ ವಿಜೃಂಭಣೆಯಿಂದ ನಡೆಯಿತು.
ಮುನಿದ್ವಯರ ಸಾನಿಧ್ಯದಲ್ಲಿ ಹೊಂಬುಜ ಶ್ರೀಗಳು ಹಾಗೂ ಸೊಂಧ ಶ್ರೀಗಳ ಉಪಸ್ಥತಿಯಲ್ಲಿ ಸಭಾಕಾರ್ಯಕ್ರಮ ನಡೆದುದಲ್ಲದೆ, ಹಾಸನ ನಗರದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಮಹೋತ್ಸವ ಶ್ರೀ ಮುಖ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಹಾಸನ ಜೈನ ಸಮಾಜದ ಅಧ್ಯಕ್ಷರಾದ ಅಜಿತ್ ಕುಮಾರ್ ರವರು, ಹಾಸನ ಮಹಾವೀರ ಭವನ ಟ್ರಸ್ಟಿ ಧನಪಾಲ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಶೋಭ ಲೋಕೇಶ್, ಕಡದರಳ್ಳಿ ಜೈನ ಸಮಾಜದ ಅಧ್ಯಕ್ಷರಾದ ದಿವಾಕರರು, ಹಡಗೂರು ಜೈನ ಸಮಾಜದ ಅಧ್ಯಕ್ಷರಾದ ನಾಗೇಂದ್ರ, ಹೊಂಗೆರೆ ಜೈನ ಸಮಾಜದ ಅಧ್ಯಕ್ಷರಾದ ಶ್ರೀ ದೇವೇಂದ್ರ ರವರು, ಶ್ರವಣ ಬೆಳಗೊಳ ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾದ ಆಶೋಕ್ ಕುಮಾರ್ ಜೈನ್, ನಳಿಕೆ ಗ್ರಾಮ ಜೈನ ಬಸದಿಯ ಸೇವಾ ಸಮಿತಿ ಧರಣೇಂದ್ರ ಹಾಗೂ ಇನ್ನೂ ಮುಂತಾದ ಗಣ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಹೊಂಬುಜ ಶ್ರೀಗಳು ನಾವು ಬೇಲೂರು ತಾಲ್ಲೂಕಿನ ನಳಿಕೆ ಗ್ರಾಮದಲ್ಲಿ ಪೂರ್ವಾಶ್ರಮದ ಬಾಲ್ಯದಲ್ಲಿನ ಕಷ್ಟ ನಮ್ಮ ಮುಂದಿನ ಪೀಳಿಗೆಗೆ ಬರಬಾರದು ಎಂಬ ಉದ್ದೇಶದಿಂದ ನಳಿಕೆ ಗ್ರಾಮದಲ್ಲಿ ಒಂದ ರಿಂದ ಹತ್ತನೇ ತರಗತಿಯವರೆಗೆ ಶಾಲೆ ಆರಂಭಿಸ ಬೇಕು ಎಂಬ ಸಂಕಲ್ಪವನ್ನು ಮಾಡಿದ್ದಾರೆ. ದಾನಿಗಳು ಅಗತ್ಯ ಭೂಮಿಯನ್ನು ನೀಡ ಬೇಕು ಎಂದು ತಮ್ಮ ಮನದ ಮಾತುಗಳನ್ನ ತಿಳಿಸಿದ್ದಾರೆ.
ಪ್ರಮೋದ್ ಕುಮಾರ್ ರವರ ಸ್ವಾಗತ ವೀರೇಂದ್ರ ಬೇಗೂರುರವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿತ್ತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














