-: ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ವಾರದ ಜೈನ ಸುದ್ದಿಗಳು ಹಲವೆಡೆಯ ಹಲವಾರು ಜೈನ ಸ್ವಾರಸ್ಯಕರ ಸುದ್ದಿಗಳಿಗಾಗಿ ವೀಕ್ಷಿಸಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಾಮಾಲಾ. ನ್ಯೂಸ್ ನಲ್ಲಿ ಪ್ರತಿ ಶನಿವಾರ 7.30ಕ್ಕೇ ಸರಿಯಾಗಿ
ಮುಖ್ಯಾಂಶಗಳು:
ಭಗವಾನ್ ಶ್ರೀ ಗೊಮ್ಮಟೇಶ್ವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಯೂಬ್ ಖಾನ್ ಗೆ ಪೆಬ್ರವರಿ 25 ರ ನಂತರವೂ ನ್ಯಾಯಾಂಗ ಬಂಧನ ಮುಂದೂಡಿಕೆ
ತುಮಕೂರು ಜೈನ ಭವನದಲ್ಲಿ ಪರಮಪೂಜ್ಯ ಬಾಲಾಚಾರ್ಯ 108 ಪಾವನಕೀರ್ತಿ ಮಹಾರಾಜರ 50ನೇ ಜನ್ಮ ಜಯಂತಿ
ಶ್ರೀ ಕ್ಷೇತ್ರ ಸ್ವಾದಿ ಜೈನಮಠದ ಸ್ವಸ್ತಿಶ್ರೀಗಳಿಂದ ಬಾಳಂಬೀಡ ಗ್ರಾನಸ್ಥರಿಗೆ ಆಹ್ವಾನ
ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ವತಿಯಿಂದ ನಡೆದ ಎರಡು ದಿನಗಳ ಕಾರ್ಯಾಗಾರ
ಯಶಸ್ವಿಯಾಗಿ ಪೂರ್ಣಗೊಂಡ ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ ಭಾಗ-5
ಸುದ್ದಿಗಳ ವಿವರ:
ಭಗವಾನ್ ಶ್ರೀ ಗೊಮ್ಮಟೇಶ್ವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಯೂಬ್ ಖಾನ್ ಗೆ ಪೆಬ್ರವರಿ 25 ರ ನಂತರವೂ ನ್ಯಾಯಾಂಗ ಬಂಧನ ಮುಂದೂಡಿಕೆಯಾಗಿದೆ. ಇತ್ತೀಚೆಗೆ ಜೈನ ಆರಾಧ್ಯ ಮೂರ್ತಿ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮೈಸೂರಿನ ನ್ಯಾಷನಲ್ ಕಾಂಗ್ರೆಸ್ ನ ಅಧ್ಯಕ್ಷನಾಗಿರುವ ಅಯೂಬ್ ಖಾನ್ ಮತ್ತು ಚಾನೆಲ್ ಮುಖ್ಯಸ್ಥ ಶ್ರೀನಿಧಿಯವರನ್ನು ಮೈಸೂರಿನ ಉದಯಗಿರಿ ಪೋಲೀಸ್ ರವರು ಅವರನ್ನು ಬಂದಿಸಿದ್ದು, ಅಯೂಬ್ ಖಾನ್ ರವರನ್ನು ಮೈಸೂರಿನ 2ನೇ ಜೆ ಎಂ ಎಫ್ ಸಿ ನ್ಯಾಯಾದೀಶೆ ಶೈಲಶ್ರೀ ಯವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸರ್ಕಾರಿ ಆಯೋಜಕ ಶ್ರೀ ನಾಗರಾಜ್ ಹಾಗೂ ಹಿರಿಯ ವಕೀಲ ರಾದ ಗಿರೀಶ್ ರವರು ವಾದ ಮಂಡಿಸಿದ್ದಾರೆ. ಬಳಿಕ ಫೆಬ್ರವರಿ 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ಇದೀಗ ಫೆಬ್ರವರಿ 25 ರ ನಂತರವೂ ನ್ಯಾಯಾಂಗ ಬಂಧನವನ್ನು ಮುಂದುವರೆಸಲಾಗಿದೆ.
ತುಮಕೂರು ಜೈನ ಭವನದಲ್ಲಿ ಪರಮಪೂಜ್ಯ ಬಾಲಾಚಾರ್ಯ 108 ಪಾವನಕೀರ್ತಿ ಮಹಾರಾಜರ 50ನೇ ಜನ್ಮ ಜಯಂತಿಯನ್ನು ದಿನಾಂಕ 17/02/2022 ರಂದು ಗುರುವಾರ ಮಧ್ಯಾಹ್ನ 1 ಘಂಟೆಯಿಂದ ಸಭಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಿಮೋಟ್ ಮೂಲಕ 50 ದೀಪಗಳನ್ನು ಬೆಳಗಿಸಲಾಯಿತು. ಪೂಜ್ಯರ ಸನ್ನಿಧಿಯಲ್ಲಿ ಸಂಜೆ 6 ಘಂಟೆಗೆ ದೇವ, ಶಾಸ್ತ್ರ, ಆರತಿ , ಗುರುಭಕ್ತಿ, ಭಜನೆ ಕಾರ್ಯಕ್ರಮ ನಡೆಯಿತು. ಹೊರನಾಡಿನ ಶ್ರೀಮತಿ ಜಯಶ್ರೀ ಯವರ ಸುಶ್ರಾವ್ಯ ಜಿನಭಕ್ತಿ ಜೊತೆ ಧೀರಜ್ ಧನುಷ್ ರವರ ಸುಶ್ರಾವ್ಯ ಸಂಗೀತದೊಂದಿಗೆ ಸಭಿಕರು ಮಕ್ಕಳೊಂದಿಗೆ ಭಾಗವಹಿಸಿ ಪುಣ್ಯ ಭಾಗಿಗಳಾದರು.
ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಶ್ರೀ ಹೊಂಬುಜ ಜೈನ ಮಠದ ಆದೀನ ಕ್ಷೇತ್ರವಾದ ವರಂಗ ಜೈನ ಮಠದ ಭಗವಾನ್ ಶ್ರೀ 1008 ನ್ಯೇಮಿನಾಥ ಸ್ವಾಮೀಜಿಯ ಬಸದಿಯ ವಾರ್ಷಿಕ ಯಾತ್ರ ಮಹೋತ್ಸವವು ದಿನಾಂಕ 19/2/2022 ರಿಂದ 21/2/2022 ರವರೆಗೆ ನಿತ್ಯ ವಿಧಿ ನವಗ್ರಹ ಶಾಂತಿ ಯಂತ್ರಾರಾಧನೆ ಹಾಗೂ ಸಕಲ ಪೂಜಾ ವಿಧಿವಿಧಾನದೊಂದಿಗೆ ರಥೋತ್ಸವವು ಹೊಂಬುಜದ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಂತೆ ಬಹಳ ವಿಜೃಂಭಣೆಯಿಂದ ನಡೆಯಿತು.
ದಿನಾಂಕ 13/02/2022ರಂದು ಪರಮಪೂಜ್ಯ ಶ್ರೀ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ 9 ನೇ ಪಟ್ಟಾಭಿಷೇಕದ ವರ್ದಂತ್ಯುಸ್ತವದ ಶುಭದಿನದಂದು ಸಮಸ್ತ ಭಕ್ತಾದಿಗಳು ಶುಭ ಕೋರಿದರು. ಅದೇ ದಿನದಂದು ಸ್ವಸ್ಥಿ ಶ್ರೀ ಗಳು ಮೆರವಣಿಗೆ ಯೊಂದಿಗೆ ಅಕಲಂಕರ ಪಾದುಕೆಗಳಿಗೆ ಅಭಿಷೇಕ ಪೂಜೆಗಳನ್ನು ಸಲ್ಲಿಸಿ ಗಜಕೇಸರಿ ಪೀಠಕ್ಕೆ ಪೂಜೆ ಅಭಿಷೇಕವನ್ನು ಮಾಡಿ ಪೀಠಾರೋಹಣವನ್ನು ಮಾಡಿ ಶುಭನುಡಿಗಳನ್ನು ಹೇಳಿ ಆಶೀರ್ವದಿಸಿದರು. ತದನಂತರದಲ್ಲಿ ದಿನಾಂಕ 10/03/2022 ರಿಂದ 18/03/2022 ರವರೆಗೆ ನಡೆಯಲಿರುವ ಬೃಹತ್ ಸಿದ್ದ ಚಕ್ರ ಮಹಾಮಂಡಲದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಹೊಂಬುಜ ಜೈನ ಮಠದಲ್ಲಿ ಪಮಪೂಜ್ಯ ಜಗದ್ಗುರು ಸ್ವಸ್ಥಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾಚರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಆಶ್ರಯದಲ್ಲಿ ಕರ್ನಾಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲಾವಾರು ಗೆಜಿಟಿಯರ್ ಕುರಿತು 2ನೆಯ ಕ್ಷೇತ್ರ ಕಾರ್ಯಾವಲಂಬಿತ ರಾಜ್ಯ ಮಟ್ಟದ ಕಾರ್ಯಾಗಾರವು ದಿನಾಂಕ 27-28/03/2021ರಂದು ಯಶಸ್ವಿಯಾಗಿ ಹೊಂಬುಜದಲ್ಲಿ ನಡೆಯಿತು. ಜೈನ ಗೆಜಿಟಿಯರ್ ಹೊರತರುವ ಯೋಜನೆಗೆ ಶ್ರೀ ಮಠ ಸಹಕರಿಸಲಿದೆ. ಮತ್ತು ಮುಂದಿನ ತಲಮಾರಿಗೆ ಜೈನ ಧರ್ಮದ ಇತಿಹಾಸ ಮತ್ತು ಪರಂಪರೆ , ಸಂಸ್ಕೃತಿಯ ಶಿಲ್ಪಕಲೆ ಶಾಸನ ಜೈನಾವಶೇಷ ಇತ್ಯಾದಿಗಳನ್ನು ಸಮಗ್ರವಾಗಿ ಒಂದೆಡೆ ದಾಖಲಿಸುವ ಜಿಲ್ಲಾವಾರು ಜೈನ ಗೆಜಿಟಿಯರ್ ಹೊರತರುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾದ ಅಕಾಡೆಮಿಕ್ ಯೋಜನೆಯಾಗಿದೆಯೆಂದು ಶ್ರೀಗಳು ಅಭಿಪ್ರಾಯ ಪಟ್ಟು ಆಶೀರ್ವದಿಸಿದರು. ಕಾರ್ಯಾಗಾರದಲ್ಲಿ ಎರಡು ದಿನಗಳ ಕಾಲ ಜೈನ ಶಾಶನ ಬಸದಿ ವಾಸ್ತುಶಿಲ್ಪ ಕುರಿತು ಕ್ಷೇತ್ರ ಕಾರ್ಯಾವಲಂಭಿತ ಅಧ್ಯಯನ ಅತ್ಯಂತ ಅರ್ಥಪೂರ್ಣ ಮತ್ತು ಮೌಲಿಕವಾಗಿತ್ತು. ತಜ್ಞರು ವಿದ್ವಾಂಸರು, ಸಂಶೋಧಕರು ವದ್ವತ್ ಪೂರ್ಣ ಉಪನ್ಯಾಸ ಪ್ರಾತ್ಯೇಕ್ಷತೆ ಚರ್ಚೆ ಸಂವಾದದ ,ಮೂಲಕ ಚಿಂತನೆ ಹುಟುಕಾಟಕ್ಕೆ ಹೊಸ ಆಯಾಮ ನೀಡಿದರೆಂದು ಜಿಲ್ಲಾವಾರು ಸಂಪಾದಕರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಕಟಣೆಗಳು:
ಶ್ವೇತಾ ನಿಹಾಲ್ ಜೈನ್ ರವರು ಈಗಾಗಲೇ ಸಾಮಾಜಿಕ , ಆಧ್ಯಾತ್ಮ ಕೃತಿಗಳ ಜೊತೆಗೆ ಹಲವಾರು ಲೇಖನಗಳು ಹಾಗೂ ಪತ್ರಿಕೆಗಳಲ್ಲಿ ಅಂಕಗಳನ್ನು ಬರೆದು ಮನೆ ಮಾತಾಗಿದ್ದಾರೆ. ಇವರ ಈ ಸಾಹಿತ್ಯ ಕೃತಿಗಳ ಕೆಲಸಗಳಿಗೆ ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಈ ಎಲ್ಲಾ ಸಾಹಿತ್ಯ ಸೇವೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಬೆಂಗಳೂರು ಸಮೃದ್ದಿ ಫೌಂಡೇಶನ್ ಕೊಮ್ಮಘಟ್ಟ ಇವರ ಒಂದು ಸಂಯುಕ್ತ ಸಹಕಾರದೊಂದಿಗೆ ಶ್ವೇತಾ ನಿಹಾಲ್ ಜೈನ್ ರವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚನ್ನಗೌಡ ಕುಟುಂಬದವರಾದ ಕುಮಾರಿ ವಿಜಯ ವೈ. ರವರ ಕುಟುಂಬಕ್ಕೆ ಹೆಲ್ತ್ ಫೈನಾನ್ಸಿಯಲ್ ಬನ್ನಿ ನೆರವಾಗೋಣ ಎಂಬ ವಾಟ್ಸಾಪ್ ಶೀರ್ಷಿಕೆಯಡಿ ಹಣವನ್ನು ಸಂಗ್ರಹಿಸುವ ಅಭಿಯಾನವನ್ನು ಸಂಗ್ರಹಿಸಲಾಗಿತ್ತು . ಈ ಕಾರ್ಯದಲ್ಲಿ ಇದುವರೆಗೆ 11 ಲಕ್ಷದ 68 ಸಾವಿರದ 916 ರೂ.ಗಳ ಹಣವನ್ನು ಸಂಗ್ರಹವಾಗಿದೆಯೆಂದು ಕುಟುಂಬದ ಸದಸ್ಯರಾದ ನವೀನ್ ದಾರೆ ಗದ್ದೆ ಯವರು ತಿಳಿಸಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಸೋಂದಾ ಮಠದಿಂದ 50 ಸಾವಿರ ರೂಪಾಯಿ , ಹೊಂಬುಜ ಮಠದಿಂದ 50 ಸಾವಿರ , ಸುರೇಂದ್ರ ಕುಮಾರ್ ಧರ್ಮಸ್ಥಳ ಇವರಿಂದ 25000 ರೂ.ಗಳು ಸಿಗಂಧೂರು ದೇವಸ್ಥಾನದಿಂದ 25ಸಾವಿರ ಹಾಗೂ ಅಮೇರಿಕಜೈನ್ ಮಿಲನ್ ರಿಂದ 1ಲಕ್ಷರೂಪಾಯಿ ನವೀನ್ ಸಾಗರ್ ರವರಿಂದ 50ಸಾವಿರ ಮತ್ತು ಜಾತಿ ಧರ್ಮದ ಬೇದ ಮರೆತು ಚಿಕಿತ್ಸೆಗೆಂದು ನೆರವಾದ ಎಲ್ಲಾ ದಾನಿಗಳಿಗೂ ಕುಮಾರಿ ವಿಜಯ ವೈ ಅವರ ಪರವಾಗಿ ಹಾಗೂ ನಮ್ಮ ಚಾನೆಲ್ ನ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಜಿನಭಜನಾ ಸ್ಪರ್ಧೆಯು ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ನೆನ್ನೆಯಷ್ಟೆ ಹಾಸನದಲ್ಲಿ ನಡೆದ ಜಿನಭಜನಾ ಸ್ಪರ್ಧೆ ಆವರ್ತನ 5ರೊಂದಿಗೆ ಎಲ್ಲಾ ವಿಭಾಗದ ಮಟ್ಟದ ಸ್ಪರ್ಧೆಗಳು ಯಶಸ್ವಿಯಾಗಿ ಪೂರ್ಣಗೊಂಡಿತು. ವಿಭಾಗ ಮಟ್ಟದಲ್ಲಿ ಆಯ್ಕೆಯಾದ ಎಲ್ಲಾ ತಂಡಗಳಿಗೂ ಶುಭಹಾರೈಕೆಗಳು. ಜಿನಭಜನಾ ಸ್ಪರ್ಧೆ ಆವರ್ತನ 5 ರ ಕೊನೆಯ ಎರಡು ಸುತ್ತುಗಳು ನಮ್ಮ ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ ಮುಂಬರುವ ಎಪ್ರಿಲ್ 8 ಹಾಗೂ 9ನೇ ತಾರೀಖಿನಂದು ನಡೆಯಲಿದ್ದು ಎಲ್ಲಾ ಕಲಾಭಿಮಾನಿಗಳನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಾರತೀಯ ಜೈನ್ ಮಿಲನ್ ವಲಯ 8ರ ಎಲ್ಲಾ ಪದಾದಿಕಾರಿಗಳು ವಿನಂತಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ಮೈಸೂರಿನಲ್ಲಿ ದಿನಾಂಕ 21/02/2022ರಂದು ಪೂರ್ವಭಾವಿ ಸಭೆ ಯನ್ನು ಶ್ರೀಮತಿ ಅನಿತಾ ಸುರೇಂದ್ರಕುಮಾರ್ ಹಾಗೂ ಶ್ರೀಯುತ ಡಿ. ಸುರೇಂದ್ರಕುಮಾರ್ ರವರ ಉಪಸ್ಥಿತಿಯಲ್ಲಿ ಮೈಸೂರು ವಿಭಾಗದ ನಿರ್ದೇಶಕರು ಪದಾದಿಕಾರಿಗಳೊಂದಿಗೆ ನಡೆದು ಸಿದ್ದತೆಗಲ ಬಗ್ಗೆ ಚರ್ಚಿಸಲಾಯಿತು.
ಇಲ್ಲಿಯವರೆಗೂ ವಾರದ ಜೈನ ಸುದ್ದಿಗಳನ್ನು ವೀಕ್ಸಿಸಿದ ತಮ್ಮೆಲ್ಲರಿಗೂ ನಮ್ಮ ಜ್ವಾಲಾಮಾಲಾ. ನ್ಯೂಸ್ ಚಾನೆಲ್ ನ ಪರವಾಗಿ ಧನ್ಯವಾದಗಳು. ಜೈ ಜಿನೇಂದ್ರ.














