-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ವೀಕ್ಷಕ ಬಂದುಗಳೇ, ಶಿಲ್ಪ ಕಲೆಗಳ ಬೀಡು ಹಾಸನ ಜಿಲ್ಲೆಗೆ ಈ ಬಾರಿಯ ಮೈಸೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ 5 ಕಾರ್ಯ ಕ್ರಮಕ್ಕೆ ನಿಮ್ಮನ್ನು ಕರೆದೊಯ್ಯಲಿದ್ದೇವೆ. ದಿನಾಂಕ 25-02-2022 ರಂದು ತ್ರಿಲೋಕ ಜೈನ್ ಮಿಲನ್ ಹಾಸನ ಶ್ರೀ ಕಾಳಲಾದೇವಿ ಮಹಿಳಾ ಸಮಾಜ ಹಾಸನ ಇವರ ಆಥಿತ್ಯದಲ್ಲಿ ಮಹಾವೀರ ಭವನ ರವೀಂದ್ರನಗರ ಹಾಸನ ಇಲ್ಲಿ ಕಾರ್ಯಕ್ರಮ ಅಯೋಜನೆಗೊಂಡಿದ್ದು ಹಾಸನ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಪ್ರೀತಂ ಜೆ. ಗೌಡ ಇವರ ಉದ್ಘಾಟನೆಯೊಂದಿಗೆ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಡಿ ಸುರೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಅಯೋಜನೆಗೊಂಡಿದ್ದು ಉದ್ಘಾಟನ ಸಮಾರಂಭದ ಗೌರವ ಉಪಸ್ಥತಿಯಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ವಲಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ರವರು, ವಲಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಎಂ ಇವರುಗಳು ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಸಮಾರಂಭ ಅಧ್ಯಕ್ಷತೆಯನ್ನು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ವಹಿಸಲಿದ್ದು, ಬಹುಮಾನ ವಿತರಣೆಯನ್ನು ಪುಷ್ಪರಾಜ್ ಜೈನ್ ರವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ಎಸ್ ಎನ್ ಅಶೋಕ್ ಕುಮಾರ್ ರವರು ಭಾಗವಹಿಸಲಿದ್ದಾರೆ. ಮೈಸೂರು ವಿಭಾಗದ ಉಪಾಧ್ಯಕ್ಷರಾದ ಶೀಲಾ ಅನಂತರಾಜ್ ರವರು ಹಾಗೂ ಮೈಸೂರು ವಿಭಾಗದ ಕಾರ್ಯದರ್ಶಿಗಳಾದ ಕೆ ಯುವರಾಜ್ ಭಂಡಾರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ತಮಗೆಲ್ಲಾ ಆತ್ಮಿಯ ಸ್ವಾಗತವನ್ನು ಬಯಸುವವರು.
ಹಾಗೂ ಅಂದಿನ ಕಾರ್ಯಕ್ರಮವೂ ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರವಾಗಲಿದೆ. ಬಂಧುಗಳೇ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಸವಿನಯ ಮನವಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














