ಜೈ ಜಿನೇಂದ್ರ ವೀಕ್ಷಕರೆ, ಉಡುಪಿ ಜಿಲ್ಲೆಯ ಎರ್ಮಾಳಿನಲ್ಲಿ ಮನೋಹರ ಶಿಲಾಮಯ ಬಸದಿಯ ದಾಮಸಂಪ್ರೋಕ್ಷಣ ಮಹೋತ್ಸವ ಮುದ್ದಾದ ಭಗವಾನ್ ಶ್ರೀ 1008 ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಜನವರಿ 24 ರಿಂದ 28ರ ವರೆಗೆ ಅಮೋಘವಾಗಿ ಜರುಗಿದೆ. ಮಹೋತ್ಸವದ ಅವಿಸ್ಮರಣೀಯ ಕ್ಷಣಗಳು ಒಂದೇಡೆ ಜೋಡಿಸಲಾಗಿದೆ ಇಡೀ ಪಂಚಕಲ್ಯಾಣದ ಚಿತ್ರಣ ನಿಮಗಿಲ್ಲಿ ದೊರೆಯಲಿದೆ.
ದಿನಾಂಕ 24-01-2022 ರಂದು ಇಂದ್ರ ಪ್ರತಿಷ್ಟೆಯೊಂದಿಗೆ ತೋರಣ ಮುಹೂರ್ತ, ವಾಸ್ತು ಪೂಜೆ, ನವಗ್ರಹ ಶಾಂತಿ, ಕ್ಷೇತ್ರಪಾಲ ಪ್ರತಿಷ್ಠೆ ಇನ್ನೂ ಮುಂತಾದ ಧಾರ್ಮಿಕ ವಿಧಿ ವಿಧಾನದೊಂದಿಗೆ ಪಂಚಕಲ್ಯಾಣ ಮಹೋತ್ಸವ, ಪರಮಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿಯಲ್ಲಿ ಆರಂಭವಾಯಿತು.
ದಿನಾಂಕ 25-01-2022ರಂದು ನಿತ್ಯಪೂಜಾ ವಿಧಿ ಸಹಿತ ದ್ವಜಾರೋಹಣ, ಶ್ರೀ ನಾಗ ಶಿಲಾ ಪ್ರತಿಷ್ಠೆ, ಯಾಗ ಮಂಡಲಾರಾಧನೆ, ಮಹಾಮಾತೆ ಶ್ರೀ ಜ್ವಾಲಮಾಲಿನಿ ಅಮ್ಮನವರ ಪ್ರತಿಷ್ಠೆ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಪ್ರತಿಷ್ಠೆ, ಗರ್ಭಾವಾತರ ಕಲ್ಯಾಣ, ಕಲಶಾಭಿಷೇಕ ಈ ರೀತಿಯಾಗಿ ಪೂಜಾ ವಿಧಾನಗಳೊಂದಿಗೆ ಮೂಡುಬಿದ್ರೆ ಶ್ರೀಗಳವರ ಪಾವನ ಉಪಸ್ಥಿತಿಯಲ್ಲಿ ಜರುಗಿತು. ಅಂದು ಸಂಜೆ ಧಾರ್ಮಿಕ ಸಭೇಯಲ್ಲಿ ಶ್ರೀಗಳವರ ಸಾನಿದ್ಯದಲ್ಲಿ ತಿಮ್ಮಣ್ಣರಸರಾದ ಡಾ|| ಪದ್ಮಪ್ರಸಾದ್ ಅಜಿಲರು ಶ್ರೀ ಕೆ ಸುರೇಶ್ ಭಲ್ಲಾಳ್, ಪ್ರೋ|| ಮಹಾವೀರ್, ಪ್ರಭಾಚಂದ್ರ ಶಾಸ್ತ್ರಿ, ರಾಜವೀರೇಂದ್ರ ಇವರುಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು.
ದಿನಾಂಕ 26-01-2022ರಂದು ಮೂಡುಬಿದ್ರೆ ಶ್ರೀಗಳವರ ಉಪಸ್ಥಿತಿಯಲ್ಲಿ ಚಂದ್ರನಾಥ ಜಿನ ಬಾಲಕನ ಜನ್ಮ ಕಲ್ಯಾಣ, ದಾಮಸಂಪ್ರೋಕ್ಷಣೆ, ಪಾಂಟುಕ ಶಿಲೋಪರಿ 108 ಕಳಸಗಳಿಂದ ಜನ್ಮಾಭಿಷೇಕ, ನಾಮಕರಣ, ಬಾಲಲೀಲೊತ್ಸವ, ದಿಕ್ಷಾವಿಧಿ, ಪರಿಮಿಕ್ಷಣ ಕಲ್ಯಾಣ ಹಾಗೂ ಸಂಜೆ ಯಕ್ಷಗಾನ ಶೈಲಿಯಲ್ಲಿ ಕಾವ್ಯವಾಚನ ಪ್ರವಚನ ವೈಭವ ಶ್ರೀ ಜ್ವಾಲಮಾಲಿನಿ ದೇವಿ ಮಹತ್ಮೆಯನ್ನು ಶ್ರೀಮತಿ ಭವ್ಯಶ್ರೀ ಬಂಡೆಕೊಲು ಇವರ ಹಾಡುಗಾರಿಕೆಯಲ್ಲಿ ಮುನಿರಾಜ್ ರಂಜಾಳರವರ ಪ್ರವಚನವನ್ನು ಏರ್ಪಡಿಸಲಾಗಿತ್ತು.
ದಿನಾಂಕ 27-01-2022ರಂದು ಹೊಂಬುಜ ಶ್ರೀ ಜೈನಮಠದ ಜಗದ್ಗುರು ಪರಮ ಪೂಜ್ಯ ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಅಂದಿನ ಉಪಸ್ಥಿತಿಯೊಂದಿಗೆ ಮೂಡುಬಿದ್ರೆ ಶ್ರೀಗಳವರ ಪ್ರತಿದಿನದ ದಿವ್ಯ ಉಪಸ್ಥಿತಿಯೊಂದಿಗೆ ಪೂಜಾರಾಧನೆಗಳು ಸಾಂಗವಾಗಿ ನೆರವೇರುತ್ತಿದ್ದುದ್ದಲ್ಲದೆ, ಅಂದು ನಿತ್ಯವಿಧಿ ಸಹಿತ ಆಹಾರ ಧಾನ ವಿಧಿ ಕೇವಲ ಜ್ಞಾನ ಕಲ್ಯಾಣ, ಶಿಕರಾರೋಹಣ, ಸಂವತ್ಸರಣ ಪೂಜೆ, ಶ್ರೀ ಸಿದ್ದಚಕ್ರ ಆರಾಧನೆ, ನಿರ್ವಾಣ ಕಲ್ಯಾಣ ಕಾರ್ಯಕ್ರಮಗಳು ನಡೆದವು. ಅಂದಿನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಜೈನ ಮಠದ ಪೀಠಾಧಿಪತಿಗಳ ಪಾವನ ಉಪಸ್ಥಿತಿಯಲ್ಲಿ, ಮಾನ್ಯ ಶಾಸಕರಾದ ಶ್ರೀ ಲಾಲಾಜೀ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದರಲ್ಲದೆ ಗೌರವ ಉಪಸ್ಥಿತಿಯಲ್ಲಿ ಎರ್ಮಾಳು ವೀಡು ಡಾ|| ನ. ವಜ್ರಕುಮಾರ್ ರವರು, ಹಿರಿಯ ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್ ರವರು ಜೀರ್ಣೋದ್ಧಾರ ಸಮಿತಿಯ ಆಶೋಕ್ ಕುಮಾರ್, ಸುರೇಶ್ ಕುಮಾರ್ ಹಾಗೂ ಸುದೀರ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿನ ಗಾನವಿಶಾರಧೆ ಶ್ರೀಮತಿ ಜಯಶ್ರೀ ವರನಾಡು ರವರ ಸುಮಧುರ ಗಾನದೊಂದಿಗೆ ನಡೆಯಿತು.
ದಿನಾಂಕ 28-01-2022ರಂದು ಸರ್ವರಕ್ಷ ಯಂತ್ರಾರಾಧನೆ, ಅಗ್ರೋಧಕ ಮೆರವಣಿಗೆ, 1008 ಕಳಶಾಭಿಷೇಕ ಹಳದಂಗಡಿ ಮಿತ್ರಸೇನ್ ರವರಿಂದ ಧಾರ್ಮಿಕ ಪ್ರವಚನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಹೀಗೆ ಪ್ರತಿದಿನವು ಪೂಜಾ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ವಿಧಿ ಪೂರ್ವಕವಾಗಿ ನಡೆದು ಪಂಚಕಲ್ಯಾಣ ವೈಭವ ಹಬ್ಬದ ವಾತಾವರಣ ಸೃಷ್ಠಿಮಾಡಿತ್ತು ಅಂದಿನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೀಮೆಯ ಗುರುಗಳಾದ ಮೂಡುಬಿದ್ರೆ ಶ್ರೀಗಳವರ ಹಾಗೂ ನರಸಿಂಹಾರಾಜ ಪುರದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದುಗಣ್ಣ ಸಾವಂತರು ಮುಲ್ಕಿ ಅರಮನಿ ಇವರ ಅಧ್ಯಕ್ಷತೆಯಲ್ಲಿ, ವಜ್ರನಾಭ ಕರಣಂತೆಯ ಬಲ್ಲಾಳರು ಶ್ರೀ ವಜ್ರನಾಭ ಶೇಟ್ಟಿ ಅರ್ಕುಲಬಿಡು, ಡಾ|| ಜಯಕುಮಾರ್ ಉಜಿರೆ ಕಾಲೇಜಿನ ಉಪನ್ಯಾಸಕರು ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಪಿ ರತ್ನಾಕರ ರಾಜ ಅರಸ್ ಕಿಣ್ಣೆಕ್ಕ ಬಲ್ಲಾಳ್ ಪಡುಬಿದ್ರೆ ಬಿಡು ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಮಹೋತ್ಸವದ ಸಂಕ್ಷೀಪ್ತ ಸುಂದರ ಸಂಕಲನವನ್ನು ಇಲ್ಲಿ ಒದಗಿಸಲಾಗಿದ್ದು ಸಂಪೂರ್ಣ ಸುಂದರ ಕ್ಷಣಗಳಿಗಾಗಿ ನೇರಪ್ರಸಾರಗೊಂಡ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ಭೇಟಿನೀಡಿ ಎರ್ಮಾಳು ಪಂಚಕಲ್ಯಾಣ ಪ್ಲೇಲಿಸ್ಟ್ ನಲ್ಲಿ ವೀಕ್ಷಿಸಬಹುದು. ಹೀಗೆ ನಮ್ಮ ಪ್ರತಿಕಾರ್ಯ ಕ್ರಮವನ್ನು ವೀಕ್ಷಿಸುತ್ತಿರಿ ಪ್ರೋತ್ಸಾಹಿಸುತ್ತಿರಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














