ಇಂದಿನ ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಈ ಸಂಚಿಕೆಯ ವಿಷಯ ಸೊಲ್ಲಾಪುರ ಜೈನ ವೈಭವ 2 ನೇ ಭಾಗ.
ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸೋಣ . ಪ್ರಾರ್ಥನೆಯನ್ನು ಮಾಡುವವರು ಶ್ರೀಯುತ ಮಿತ್ರಸೇನ್ ಜೈನ್ ರವರು. ಎಲ್ಲ ಜೈನ ಸಮುದಾಯ ಹಾಗೂ ಸಂಘಗಳು ಹಾಗೂ ಭಟ್ಟಾರಕರುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಹಾಗೆಯೆ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವಂತಹ ಅತಿಥಿ ಗಣ್ಯರಗಳಿಗೆ ಸ್ವಾಗತವನ್ನು ಕೋರುತ್ತಾ ಈ ಸಂಚಿಕೆಯಲ್ಲಿ ಕಳೆದ ಸಂಚಿಕೆಯಲ್ಲಿ ಮಾತನಾಡಿದ ಸೊಲ್ಲಾಪುರದ ಜೈನ ವೈಭವ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ನಡೆಸುತ್ತಿದ್ದೇವೆ. ಹಾಗಾಗಿ ಈ ಸಂಚಿಕೆಯ ಮುಖ್ಯ ಅತಿಥಿಯಾಗಿ ಆಗಮಿಸಿರುವಂತಹ ಶ್ರೀಮತಿ ಸುಜಾತ ಶಾಸ್ತ್ರಿ ಅವರನ್ನು ಗೌರವಪೂರ್ವಕವಾಗಿ ಈ ಸಂಚಿಕೆಯಲ್ಲಿ ಬರಮಾಡಿಕೊಳ್ಳುತ್ತಿದ್ದೇವೆ. ಹಾಗೂ ಕಾರ್ಯಕ್ರಮದ ಆಯೋಜಕರಾದ ಜ್ವಾಲಾಮಾಲಾ ನ್ಯೂಸ್ ಚಾನೆಲ್ ನ ವ್ಯವಸ್ಥಾಪಕರವರಿಗೂ ಸಹ ಸ್ವಾಗತವನ್ನು ಕೋರುತ್ತಿದ್ದೇವೆ. ಹಾಗೂ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪ್ರಶ್ನಾರ್ಥಿಗಳಿಗೆ ಹಾಗೂ ವೀಕ್ಷಕರಿಗೂ ಸಹ ಸ್ವಾಗತವನ್ನು ಕೋರುತ್ತೇವೆ. ಕಳೆದ ಸಂಚಿಕೆಯಲ್ಲಿ ಪ್ರಶ್ನಾರ್ಥಿಗಳಿಗೆ ಸಾಕಷ್ಟು ಸಮಯವಾಕಾಶ ಸಿಗಲಿಲ್ಲ ಆದ್ದರಿಂದ ಈ ಕಾರ್ಯಕ್ರಮವನ್ನು ಮುಂದುವರೆದ ಭಾಗವಾಗಿ ನಡೆಸುತ್ತಿದ್ದೇವೆ.
ಇಲ್ಲಿ ಭಾಗವಹಿಸಿದ ಅತಿಥಿ ಗಣ್ಯರು ಪ್ರಶ್ನಾರ್ಥಿಗಳ ಪ್ರಶ್ನೆಗಳಿಗೆ ಕೂಲಂಕುಷವಾಗಿ ವಿವರಿಸಿ ನಮ್ಮ ಜೈನ ಸಂಪ್ರದಾಯ ಹಾಗೂ ಜೈನ ಗ್ರಂಥಗಳ ಬಗ್ಗೆ ವಿವರಿಸಿ ಹೇಳಿದರು. ಇವರಿಗೆ ನಮ್ಮ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ಜೈ ಜಿನೇಂದ್ರ.














