ಜ್ಞಾನದೀಪಿಕೆಗಳು- 27 / 11-02-2022 / jwalamalanews / 2022

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಶ್ರೀ ಅನಂತ ಚತುರ್ದಶಿ ವ್ರತಾದಿ ಜನೇಂದ್ರ ಪೂಜಾ ಸಂಗ್ರಹ ಮತ್ತು ನೇಮಿನಾಥ ಪುರಾಣಂ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಜ್ಞಾನ ದೀಪಿಕೆಗಳು ಅನ್ನುವಂತಹ ಸರಣಿ ಕಾರ್ಯಕ್ರಮದ ಮೂಲಕ ಪರಿಚಯ ಮಾಡಿಕೊಡುತ್ತಿದೇವೆ. ಇಂದು ಪರಿಚಯ ಮಾಡಿಕೊಡುತ್ತಿರುವ ಎರಡು ಕೃತಿಗಳಲ್ಲಿ ಒಂದು ನೇಮಿನಾಥ ಪುರಾಣಂ, ನೇಮಿಚಂದ್ರರವರು ಬರೆದಂತಹ ಈ ಕೃತಿಯನ್ನು ಸಂಪಾದನೆ ಮಾಡಿದಂತವರು ಸಂಶೋಧಕರು ಲೇಖಕರು ಪ್ರಖ್ಯಾತ ಪಂಡಿತರು ಆದಂತಹ ಬಿ ಎಸ್ ಸಣ್ಣಯ್ಯ ನವರು. ಇತ್ತೀಚಗಷ್ಟೆ ನಮ್ಮನ್ನು ಹಗಲಿದಂತಹ ಹಿರಿಯ ಚೇತನ. ಮತ್ತೊಬ್ಬ ಪ್ರಕಾಂಡ ಪಂಡಿತ ಆನಂದ ಕುಮಾರ್ ರವರದ್ದು ಅನಂತ ಚತುರ್ದಶಿ ವ್ರತಾದಿ ಜನೇಂದ್ರ ಪೂಜಾ ಸಂಗ್ರಹ ಅನ್ನುವಂತಹ ಕೃತಿಯನ್ನು ಪರಿಚಯಮಾಡಿಕೊಡುತ್ತೇವೆ. ಆನಂದ ಕುಮಾರ್ ರವರು ವೃತ್ತಿಯಲ್ಲಿ ಇಂಜಿನಿಯರ್ ಆದರು ಕೂಡ ಪ್ರವೃತ್ತಿಯಲ್ಲಿ ಕನ್ನಡದ ಬಗ್ಗೆ ಅತ್ಯಂತ ಪ್ರೀತಿಯನ್ನು ಇಟ್ಟುಕೊಂಡು ಜೈನಾಲಜಿ ಓದಿ ಗೊಲ್ಡ್ ಮೆಡಲ್ ತೆಗೆದುಕೊಂಡಿರುವಂತಹ ಒಬ್ಬ ಅತ್ಯಂತ ನಿಷ್ಠೆಯ ಜೈನ ಪ್ರತಿಭಾವಂತರು ಬರೆದಿರುವ ಕೃತಿಯನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.

ಬಿ ಎಸ್ ಸಣ್ಣಯ್ಯ ನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋದಕರಾಗಿರುವಂತವರು ಮೊದಲು ಹೇಳಿರುವಂತಹ ಕೃತಿಗಳಲ್ಲಿ ಬಿ ಎಸ್ ಸಣ್ಣಯ್ಯ ನವರನ್ನು ಪರಿಚಯ ಮಾಡಿಕೊಟ್ಟಿದ್ಧೇವೆ. ಬಹಳ ಸಂಶೋಧನ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವಂತಹ ಮಹಾನ್ ಚೇತನ ಬಿ ಎಸ್ ಸಣ್ಣಯ್ಯ ನವರು. ಈ ಒಂದು  ಕೃತಿಯನ್ನ ಸಂಶೋಧನೆ ಮಾಡದಂತಹದ್ದು ನೇವಿಚಂದ್ರ ವಿರಚಿತ ನೇಮಿನಾಥ ಪುರಾಣಂ. ಈ ಕೃತಿ 1961ರಲ್ಲಿ ಮುದ್ರಣವಾಯಿತು, ಆಗ ಈ ಕೃತಿಯ ಬೆಲೆ ಸಾದ ಪ್ರತಿಗೆ 5ರೂಪಾಯಿ ಕ್ಯಾಲಿಕೊ ಪ್ರತಿಗೆ 6.50 ರೂಪಾಯಿ ಇತ್ತು. ಈ ಕೃತಿಯನ್ನು ಮುದ್ರಣ ಮಾಡಿದಂತವರು ಚೇತನ ಮುದ್ರಣಾಲಯದವರು ಮೈಸೂರು. ಅರ್ಧನೇಮಿಪುರಾಣ ಎಂದು ಸುಪ್ರಸಿದ್ದವಾಗಿರುವ ಈ ಕೃತಿಯನ್ನು ರಚಿಸಿದವರು ಕ್ರಿ.ಶ 1190ರಲ್ಲಿ ಇದ್ದಂತಹ ನೇಮಿಚಂದ್ರ ಹೊಯ್ಸಳ ವೀರ ಭಲ್ಲಾಳನ ಆಸ್ಥಾನದಲ್ಲಿ ಪದ್ಮನಾಭನು ಇವನಿಗೆ ಆಶ್ರಯ ದಾತನಾಗಿದ್ದ, ಇವರಿಗೆ ಆಂಗಿಕ ನೇಮಿ ಎಂದು ಹೆಸರು ಇತ್ತು ಅಲ್ಲದೆ ಕಲಾಕಾಂತ, ಕವಿರಾಜ ಮಲ್ಲ, ಕವಿಧವಳ, ಸಾಹಿತ್ಯ ವಿದ್ಯಾದರ ಈ ರೀತಿ ಬಹಳಷ್ಟು ಹೆಸರುಗಳು ಇದ್ದವು. ಇವರು ಎರಡು ಕೃತಿಗಳನ್ನು ಬರೆಯುತ್ತಾರೆ ಒಂದು ಪಂಪನನ್ನು ಅನುಸರಿಸಿ ಬರೆದಿರುವಂತಹ ಧಾರ್ಮಿಕ ಕೃತಿ ಅರ್ಧನೇಮಿ ಪುರಾಣ ಅಥವಾ ನೇಮಿನಾಥ ಪುರಾಣ, ಇನ್ನೊಂದು ಲೀಲಾವತಿ ಪ್ರಬಂಧ ಎನ್ನುವಂತಹ ಲೌಖಿಕ ಕೃತಿಯನ್ನು ಬರೆದಿದ್ದಾರೆ. ಲೀಲಾವತಿ ಪ್ರಬಂಧ ಶೃಂಗಾರ ಭರಿತ ಕಾವ್ಯವನ್ನು ಹೊಂದಿದೆ. ನಂಜುಂಡ ಕವಿಯು ಒಂದು ಪದ್ಯದಲ್ಲಿ ಇವರನ್ನು ಹೊಗಳಿದ್ದಾರೆ. ಜೈನೆತ್ತರರು ಈ ಕಥೆಯನ್ನು ಶ್ರದ್ಧಾ ಭಕ್ತಿಯಿಂದ ಅಭ್ಯಾಸ ಮಾಡುತ್ತಾರೆ. ಎಂದು ಬಿ ಎಸ್ ಸಣ್ಣಯ್ಯ ನವರು ಮುನ್ನುಡಿಯಲ್ಲಿ ಹೇಳಿದ್ದಾರೆ. ಈ ಕೃತಿಯನ್ನು ನಾಲ್ಕು ಪ್ರತಿಗಳಿಂದು ತಂದು ಅವುಗಳನ್ನು ಓದಿ ಅರ್ಥಮಾಡಿಕೊಂಡು ತಾಳೆಗರಿಯಲ್ಲಿ ಇರುವಂತಹ ಕೃತಿಯನ್ನು ಪುಸ್ತಕ ರೂಪಕ್ಕೆ ತರುವಂತಹ ಕಠಿಣ ಕೆಲಸವನ್ನು ಬಿ ಎಸ್ ಸಣ್ಣಯ್ಯ ನವರು ಮಾಡಿದ್ದಾರೆ.  ಇಂತಹ ಮಹತ್ವದ ಕೃತಿ ನಮಲ್ಲಿ ಇರಬೇಕಾದಂತಹ ಕೃತಿ.

ಮತ್ತೊಂದು ಮಹತ್ವದ ಕೃತಿ ಅನಂತ ಚತುರ್ದಶಿ ವ್ರತಾದಿ ಜನೇಂದ್ರ ಪೂಜಾ ಸಂಗ್ರಹ ಎನ್ನುವಂತಹ ಕೃತಿ. ಇದು ಮೂಲ ಕವಿವರ ಪಂಡಿತ ರಾಜಾಮಲ್ ಪವೈ ಆರ್ ರವರ ಕೃತಿ ಹಿಂದಿ ಇಂದ ಕನ್ನಡಕ್ಕೆ ಆನಂದ ಕುಮಾರ್ ರವರು ಅನುವಾದಿಸಿದ್ದಾರೆ. ಅನಂತ ಚತುರ್ದಶಿ ಪೂಜೆಯನ್ನು ಮಾಡುವಂತಹ ಜನೇಂದ್ರ ಪೂಜೆಯನ್ನು ಬಿಡಿ ಭಾಗದಲ್ಲಿ ಇದಂತಹ ಕೃತಿಯನ್ನು ಪೂರ್ಣ ಪಠ್ಯವಾಗಿ ತಂದಂತಹ ಕೆಲಸವನ್ನು ಮಾಡುತ್ತಾರೆ.

ಎ ಆನಂದ ಕುಮಾರ್ ರವರು ಬಿ ಇ ಮಾಡಿ ಮತ್ತು ಎಂ ಎ ಜೈನಾಲಜಿ ಮಾಡಿದಂತಹ ಪ್ರತಿಭಾವಂತವರು ಹಾಗೂ ರಿಟೈರ್ಡ್ ಇಂಜಿನಿಯರ್ ಚೀಫ್ ಹಾಗಿ ನಿವೃತ್ತಿ ಹೊಂದಿದಂತವರು. ಈ ಪುಸ್ತಕ 2008ರಲ್ಲಿ ಪ್ರಕಟವಾದಂತಹ ಕೃತಿ ಹಾಗ ಈ ಕೃತಿಯ ಬೆಲೆ 85 ರೂಪಾಯಿ ಮೂಲ ಬೆಲೆ ಇದ್ದರೂ ಕೂಡ ಮಾರುವ ಬೆಲೆ 50 ರೂಪಾಯಿ. ಈ ಕೃತಿಯ ಮುನ್ನುಡಿಯಲ್ಲಿ ಯಾಕೆ ಈ ಕೃತಿಯನ್ನು ಬರೆದಿದ್ದು ಎಂದು ಎ ಆನಂದ ಕುಮಾರ್ ರವರೇ ಹೇಳಿಕೊಳ್ಳುತ್ತಾರೆ. ಮದ್ಯಪ್ರದೇಶದ ಭೂಪಾಲ್ ನ ವಯೋವೃದ್ದ ಪಂಡಿತ ಕವಿವರ ರಾಜಾಮಲ್ ಪವೈಯ ಅವರು ದಿಗಂಬರ ಜೈನರಾಗಿದ್ದು ಹಿಂದಿ ಭಾಷೆಯಲ್ಲಿ ಒಬ್ಬ ಪ್ರಸಿದ್ದ ಕವಿಯಾಗಿದ್ದರು. ಅವರು 150ಕ್ಕು ಹೆಚ್ಚು ಜೈನ ಪೂಜಾ ವಿಧಾನಗಳ ಆರಾಧನೆಗಳ ಸಹಿತ 500 ಪುಸ್ತಕಗಳನ್ನು ರಚಿಸಿದ್ದಾರೆ. ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಅವರು ರಚಿಸಿದ ಶ್ರೀ ಸಮಯ ಸಾರ ವಿಧಾನ ಆರಾಧನೆ 1996ರಲ್ಲಿ ಭಂಡಾರ ಬಸದಿಯಲ್ಲಿ ನಡೆದಾಗ ಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿ ಆಶೀರ್ವಾದದಿಂದ ಪಾತ್ರರಾಗಿ ಬಿರುದಾಂಕಿತರಾಗಿದ್ದಾರೆ ನಾನು ಕವಿಯಲ್ಲದಿದ್ದರು ಅವರು ರಚಿಸಿದ ಹಿಂದಿ ಕೃತಿಗಳ ಲಾಭವು ಕನ್ನಡಿಗರಿಗೂ ಸ್ವಲ್ಪವಾದರು ಆಗಲಿ ಎಂದು ಕನ್ನಡದಲ್ಲಿ ಅವರ ಕೆಲವು ಕೃತಿಗಳನ್ನ ಸಂಗ್ರಹಿಸಿ ಶ್ರೀ ಜನೇಂದ್ರ ಪೂಜಾ ಸಂಗ್ರಹ ಹಾಗೂ ಮುಂತಾದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವುದಾಗಿ ಎ ಆನಂದ ಕುಮಾರ್ ರವರು ತಿಳಿಸಿದ್ದಾರೆ.

 ನಾವು ಪೂಜೆಯನ್ನು ಮಾಡುವಾಗ ಯಾವ ರೀತಿ ಮಾಡ ಬೇಕು ಎಂದು ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕು ಮತ್ತು ವಿಸರ್ಜನೆ ಮಾಡಬೇಕಾದಂತಹ ರೀತಿಯನ್ನು ಅತ್ಯಂತ ವಿಸ್ತೃತವಾಗಿ ಈ ಗ್ರಂಥ ತಿಳಿಸಿ ಕೊಡುತ್ತದೆ, ಇದು ಒಂದು ಮಹತ್ವದ ಕೃತಿ.

ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ಪರಿಚಯಿಸಿದ್ದೇವೆ ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.

ನಮಸ್ಕಾರ

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್