ರಾಷ್ಟ್ರೀಯ ವಿಚಾರ ಸಂಕೀರ್ಣ- ತಲಕಾಡಿನ ಗಂಗರು ಮಟ್ಟು ಚಾವುಂಡರಾಯ / jwalamalanews / 2021

ರಾಷ್ತ್ರೀಯ ವಿಚಾರ ಸಂಕೀರ್ಣ- ತಲಕಾಡಿನ ಗಂಗರು ಮತ್ತು ಚಾವುಂಡರಾಯ ಬಾಹುಬಲಿ ಪ್ರಾಕೃತ ವಿದ್ಯಾಪೀಠ ಶ್ರವಣಬೆಳಗೊಳ ಹಾಗೂ ಮೈಸೂರು ವಿಶ್ವವಿದ್ಯಾಲಯದ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಎರಡು ದಿನದ ಕಾರ್ಯಕ್ರಮ ಸ್ಥಳ: ಸರಕಾರಿ ಪ್ರಥಮ ದರ್ಜೆ ಕಾಲೇಜು, ತಲಕಾಡು

 

ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿಯವರ ಅಪೇಕ್ಷೆಯಂತೆ ತಲಕಾಡಿನ ಗಂಗರು ಮತ್ತು ಚಾವುಂಡರಾಯ ರಾಷ್ಟ್ರೀಯ ವಿಚಾರ ಸಂಕೀರ್ಣ ತಲಕಾಡಿನ ಸರ್ಕಾರಿ  ಪ್ರಧಮ ದರ್ಜೆ  ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ  ಸಹಭಾಗಿತ್ವದೊಂದಿಗೆ ಎರಡು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆಯಿತು. ತಲಕಾಡಿನ ಇತಿಹಾಸದ ಬಗ್ಗೆ ಸುಂದರ ಬಿತ್ತಿ ಚಿತ್ರದ ಬಗ್ಗೆ ಸುಂದರ  ಪ್ರದರ್ಶನ  ಹಾಗೂ ಅರ್ಥಪೂರ್ಣ ಗೋಷ್ಠಿಗಳ ಸಹಿತ ಕಾರ್ಯಕ್ರಮವು ಬಹಳ ಸುಂದರವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ  ದಿನಾಂಕ 02/02/2022 ರಂದು ಮೈಸೂರು ವಿಶ್ವವಿದ್ಯಾನಿಲಯದ  ಮಾನ್ಯ  ಪ್ರೊಫೆಸರ್ ಹೇಮಂತ್ ಕುಮಾರ್ ರವರು  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರವಣಬೆಳಗೊಳದ ಶ್ರೀ ಮಠದ ಪರವಾಗಿ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಶ್ರೀ ಜೀವನ್ ಧರ್ ಕುಮಾರ್ ರವರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಕಾರ್ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಜಿ. ಹೇಮಂತ್ ಕುಮಾರ್ ರವರು  ಪ್ರಾಚ್ಯ ವಸ್ತು ಇಲಾಖೆ  ಹಾಗೂ ಪತ್ರಕರ್ತ ಇಲಾಖೆಯವರು ತಲಕಾಡಿನ ಭೂ ಉತ್ಕಲನ ಹಾಗೂ ಇದರ ಬಗ್ಗೆ ಅಪರೂಪದ ದಾಖಲೆಗಳ ಪ್ರದರ್ಶನ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ ಎಂದರು. ಅಲ್ಲದೇ ತಲಕಾಡು ಗಂಗಾ ಮನೆತನದ ರಾಜಧಾನಿಯಾಗಿ ಐತಿಹಾಸಿಕ ಹಿನ್ನೆಲೆ ಇರುವಂತಹ ಒಂದು ಪ್ರದೇಶ ಈ ಊರಲ್ಲಿ ಅನೇಕ ಸ್ಮಾರಕಗಳು ಮರಳಿನಲ್ಲಿ ಹೂತು ಹುದುಗಿ ಹೋಗಿದ್ದ ಚರಿತ್ರೆ ಸಂಗತಿಗಳನ್ನು ಪುರಾತತ್ವ ವಿಭಾಗದಿಂದ ಡಾ|| ಕೃಷ್ಣಮೂರ್ತಿ ಹಾಗೂ ಎನ್. ಎಸ್ ರಂಗರಾಜು ಇವರೆಲ್ಲ ಸೇರಿ ಉತ್ಲಲನ ಮಾಡಿ ಬೆಳಕಿಗೆ ತಂದಿದ್ದಾರೆ.  ಈ ಎರಡು ದಿನಗಳ ವಿಚಾರ ಸಂಕೀರ್ಣ ದಲ್ಲಿ ವಿದ್ವಾಂಸರು ತಮ್ಮ ವಿದ್ವತ್ ಪೂರ್ಣ ವಿಚಾರಗಳನ್ನು ಸಂಕೀರ್ಣದಲ್ಲಿ  ಮಾತನಾಡಲಿದ್ದಾರೆ ಎಂದರು. ಅಂತೆಯೇ ಶ್ರವಣಬೆಳಗೊಳದ ಬಾಹುಬಲಿ ಮಹಾಮೂರ್ತಿಯನ್ನು ಪ್ರತಿಷ್ಠಾಪಿಸಿದ ಚಾವುಂಡರಾಯ ಕೂಡ ಮೂಲತಃ ತಲಕಾಡಿನವರು ಎಂದು ಕೂಡ ನೆನಪಿಸಿಕೊಂಡರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊಫೆಸರ್ ವಿಜಯ್ ಕುಮಾರಿ ಎಸ್. ಕರಿಕಲ್ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಮುರಳೀಧರನ್ , ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪಯ್ಯ ಸೇರಿದಂತೆ , ಶ್ರೀ ಎನ್ ಪ್ರಸನ್ನ ಕುಮಾರ್  ರಾಷ್ಟ್ರೀಯ ಉಪಾಧ್ಯಕ್ಷರು ಭಾರತೀಯ ಜೈನ್ ಮಿಲನ್ ಮೈಸೂರು ಇವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ನಡೆದ ಕಾರ್ಯಕ್ರಮ ಮೊದಲನೆಯ ಗೋಷ್ಠಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ|| ಎಂ. ಜೆ ಮಂಜುನಾಥ್ ರವರು ಗಂಗರ ಕಾಲದ ಜೈನ ಶಾಸನಗಳ ಬಗ್ಗೆ ಪ್ರಬಂಧ ಮಂಡಿಸಿದರು. ಜೈನ ಶಾಸ್ತ್ರ ಪ್ರಾಕೃತ ಅಧ್ಯಯನ ವಿಭಾಗದ  ಡಾ\\ ಎಂ.ಎಸ್ ಪದ್ಮಾರವರು ಚಾವುಂಡರಾಯ ಪುರಾಣದ ಬಗ್ಗೆ ಮಾತನಾಡಿದರು  ಹಾಗೂ  ಪುರಾತತ್ವ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಮಂಜುಳಾರವರು ಗಂಗರ ಕಾಲದ ಜೈನ ಬಸದಿಗಳ ಬಗ್ಗೆ ಪ್ರಬಂಧ ಮಂಡಿಸಿದರು. ಈ ಭಾಗದ ನಿರೂಪಣೆಯನ್ನು ಡಾ|| ಶಶಿರೇಖರವರು ನಡೆಸಿಕೊಟ್ಟರು.

2ನೇ ಗೋಷ್ಠಿಯಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಯ ನಿವೃತ್ತ ಪ್ರಾದ್ಯಾಪಕರು ರಂಗ ರಾಜುರವರು ಗಂಗರ ಕಾಲದ ಜೈನ ನೆಲೆಗಳ ಬಗ್ಗೆ ತಿಳಿಸಿದರು. ಡಾ|| ಕೃಷ್ಣಮೂರ್ತಿಯವರು ತಲಕಾಡಿನಲ್ಲಿ ಪುರಾತತ್ವ ಉತ್ಕಲನದ ಬಗ್ಗೆ ಮಾತನಾಡಿದರು. ಜೈನ ಶಾಸ್ರ್ತ ಪ್ರಾಕೃತ  ಅಧ್ಯಯನ ವಿಭಾಗದ ಅಧ್ಯಕ್ಷರಾದ  ಡಾ|| ವಿಜಯ್ ಕುಮಾರಿಯವರು ಜೈನಧರ್ಮ ತತ್ವಗಳ ಪ್ರಸ್ಥುತತೆಯ ಬಗ್ಗೆ ಮಾತನಾಡಿದರು.  ಈ ಗೋಷ್ಠಿಯ ನಿರೂಪಣೆಯನ್ನು ಡಾ|| ಶಾಂತಿಸಾಗರ ಶಿರಹಟ್ಟಿಯವರು ನಡೆಸಿಕೊಟ್ಟರು. ತಲಕಾಡಿನ ಗಂಗರು ಮತ್ತು ಚಾವುಂಡರಾಯ ರಾಷ್ಟ್ರೀಯ ವಿಚಾರ ಸಂಕೀರ್ಣದ ಎರಡನೇ ದಿನವಾದ  ದಿನಾಂಕ 3/2/2022 ರಂದು ಬೆಳಗ್ಗೆ ಮೊದಲನೇ ಗೋಷ್ಠಿಯಲ್ಲಿ ಡಾ|| ಕರಿಯಪ್ಪನವರು ಕಳುಹಿಸಿದ  ಗಂಗರ ಕಾಲದ ಶಿಲ್ಪಗಳು ಎಂಬ ಪ್ರಬಂಧವನ್ನು ಡಾ|| ಶಾಂತಸಾಗರ ಶಿರಹಟ್ಟಿಯವರು ಮಂಡಿಸಿದರು. ಶ್ರವಣಬೆಳಗೊಳದ ಗೊಮ್ಮಟವಾಣಿ ಪತ್ರಿಕೆ ಸಂಪಾದಕರಾದ ಶ್ರೀ ಸಿ.ಎನ್ ಅಶೋಕ್ ಕುಮಾರ್ ರವರು ಕಳುಹಿಸಿದ್ದ ಶ್ರವಣಬೆಳಗೊಳದ  ಸ್ಮಾರಕಗಳು ಎಂಬ ಪ್ರಬಂಧವನ್ನು ಮೈಸೂರಿನ ಶ್ರೀಮತಿ ನಾಗರತ್ನ ಪ್ರಸನ್ನ ಕುಮಾರ್ ರವರು ವೇದಿಕೆಯಲ್ಲಿ ಮಂಡಿಸಿದರು. 3ನೇ ಪ್ರಬಂಧವನ್ನು ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾ ಪೀಠದ ಪ್ರವರ್ಚಕರು ಡಾ|| ಕುಸುಮರವರು ಗಂಗರ ಕಾಲದಲ್ಲಿ ಪ್ರಾಕೃತ ಸಾಹಿತ್ಯದ ಬಗ್ಗೆ ನಿರೂಪಣೆಯನ್ನುಡಾ|| ಅರುಣಾಕುಮಾರಿಯವರು ನಡೆಸಿಕೊಟ್ಟರು. 2ನೇ ಗೋಷ್ಠಿಯಲ್ಲಿ ಶ್ರೀ ಶುಭಚಂದ್ರರವರು ನಡೆಸಿಕೊಟ್ಟರು. ತಲಕಾಡಿಗೆ ಶ್ರೀ ಚಾವುಂಡರಾಯ ಮತ್ತು ಗಂಗರಾಜರ ಕೊಡುಗೆಗಳ ಬಗ್ಗೆ ಮಾತನಾಡಿದರು. ತಲಕಾಡನ ಗಂಗರ ಇತಿಹಾಸದ ಬಗ್ಗೆ ಡಾ|| ವೈ.ಹೆಚ್. ನಾಯಕವಾಡಿಯವರು ಪ್ರಬಂಧ ಮಂಡಿಸಿದರು. ಭಾರತೀಯ ಪುರಾತತ್ವ ಇಲಾಖೆಯ ಅಧ್ಯಕ್ಷರಾದ  ಡಾ|| ಅರುಣ್ ರಾಜರವರು ಅವರು ಮಂಡಿಸಿದರು.

 

ದಿನಾಂಕ 02/3/2022ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಏರ್ಪಡಿಸಿದ್ದು ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಸೋಮಶೇಖರ್ ರವರು ಮುಖ್ಯ ಅತಿಥಿಗಳಾಗಿದ್ದರು. ನಾಡೋಜ ಹಂಪನಾರವರು ಸಮಾರೋಪ ನುಡಿಗಳನ್ನು ಆಡಿದರು. ಕನ್ನಡ ಆಭಿವೃದ್ದಿ ಪ್ರಾದಿಕಾರದ ಅಧ್ಯಕ್ಷರಾದ ಹಾಗೂ ಚಿತ್ರರಂಗದ ಖ್ಯಾತ ನಿರ್ದೇಶಕ  ಮತ್ತು ಕಲಾವಿದರಾದ ಶ್ರೀ ನಾಗಭರಣರವರು ವಿಶೇಷ ಅತಿಥಿಗಳಾಗಿದ್ದರು. ಹಾಗೂ ಸನ್ಮಾನ್ಯ ಶಾಸಕರಾದ  ಶ್ರೀ ಅಶ್ವಿನ್ ಕುಮಾರ್ ಅಧ್ಯಕ್ಷತೆ  ವಹಿಸಿದ್ದ  ಈ ಕಾರ್ಯಕ್ರಮದಲ್ಲಿ  ಮೈಸೂರು ವಿಶ್ವವಿದ್ಯಾನಿಲಯದ  ಕುಲಸಚಿವರಾದ  ಶ್ರೀ ಶಿವಪ್ಪನವರು ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ  ನಿರ್ದೇಶಕರಾದ ಡಾ|| ಗವಿಸಿದ್ದಯ್ಯರವರು ಹಾಗೂ ಶ್ರವಣಬೆಳಗೊಳದ ಶ್ರೀ ಮಠದ ಪರವಾಗಿ ಬಾಹುಬಲಿ ಪ್ರಾಕೃತಿಕ ವಿದ್ಯಾ ಪೀಠದ ಡಾ|| ಮುರುಳಿರವರು ಉಪಸ್ಥಿತರಿದ್ದರು. ತಲಕಾಡಿನ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆಂಪಯ್ಯನವರು ಭಾಗವಹಿಸಿದ್ದರು.ಕಾಲೇಜು ಶಿಕ್ಷಣ ಇಲಾಖೆಯ  ಶ್ರೀ ಸುಚೇಂದ್ರ ಕುಮಾರ್ ರವರು, ಡಾ|| ಹೇಮ ಚಂದ್ರ ರವರು ತಲಕಾಡಿನಲ್ಲಿ ಎರಡು ದಿನ ನಡೆದ  ರಾಷ್ಟ್ರೀಯ ವಿಚಾರ ಸಂಕೀರ್ಣದ ಆಯೋಜಕರಾದ ಮೈಸೂರು ವಿಧ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಅಧ್ಯಕ್ಷರಾದ  ಪ್ರೊಫೆಸರ್ ವಿಜಯ್ ಕುಮಾರಿ ಕರಿಕಲ್ ರವರು ಹಾಗೂ ಇನ್ನೂ ಹಲವಾರು ಗಣ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಸುಂದರವಾಗಿ ಮೂಡಿಬಂದಿತು.   ಹಂ.ಪಾ ನಾಗರಾಜಯ್ಯರವರು (ನಾಡೋಜ)ರವರು ಗಂಗರ ಕಾಲದ ಶಾಸನಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು. ನಂತರ ಟಿ.ಎಸ್ ನಾಗಾಭರಣರವರು ಮಾತನಾಡಿ ತಲಕಾಡು, ಗಂಗರ ಕಾಲದ ಇತಿಹಾಸವನ್ನು ನಾವು ಮೊದಲು ಅರಿತು ನಂತರದ ದಿನಗಳಲ್ಲಿ ಅದನ್ನು ನಾವು ಅರಿತು ಮುಂದುವರೆಸಿಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು. ಇದಾದ ನಂತರ ಸಚಿವರಾದ ಸೋಮಶೇಖರ್ ರವರು ಮಾತನಾಡಿ ಇಲ್ಲಿರುವ ಕುಂದುಕೊರತೆಗಳನ್ನು ನಿವಾರಣೆ ಮಾಡುವಲ್ಲಿ ಮತ್ತು ಸರಿಯಾದ ಸೌಕರ್ಯಗಳನ್ನು ನಾವು ಪ್ರಾಮಾಣಿಕವಾಗಿ ಒದಗಿಸಿಕೊಡಲು ಪ್ರಯತ್ನವನ್ನು ಮಾಡುತ್ತೇವೆಂಬ ಭರವಸೆಯನ್ನು ನೀಡಿದರು. ಇನ್ನೂ ಹಲವಾರು ಗಣ್ಯರುಗಳು ತಲಕಾಡಿನ ಇತಿಹಾಸದ ಬಗ್ಗೆ ಮಾತನಾಡಿದರು.