ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿ ತಾಲ್ಲೂಕಿನ ಅಲದಂಗಡಿ ಪುರಾತನ ಶ್ರೀ ಆದಿನಾತ ಸ್ವಾಮಿ ಜೀನ ಮಂದಿರ ವಿಶೇಷತೆ ಎನೆಂದರೆ ಈ ಊರಿನ ಯುವಕರಿಂದ ಈ ಬಸದಿ ಜಿರ್ಣೊಧ್ದಾರಗೊಂಡಿದೆ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿ ತಾಲ್ಲೂಕಿನ ಅಳದಂಗಡಿ ಎಂಬ ಪುಟ್ಟ ಊರು ಈ ಊರು ಐತಿಹಾಸಿಕ ಮಹತ್ವದ್ದಾಗಿದ್ದು ಬೇಲೂರಿನ ಅದೀನ ಅರಸರ ಆಳ್ವಿಕೆಗೆ ಒಳಪಟ್ಟಂತಹ ಇತ್ತ ಕರಾವಳಿಯು ಅಲ್ಲದ ಮಲೆನಾಡು ಅಲ್ಲದ ಅಳದಂಗಡಿ ಅರಸರ ವೈಭೋಗದ ಸಂಖ್ಯೆತ ಇಲ್ಲಿರುವ 3 ಜೀನಮಂದಿರಗಳಲ್ಲಿ ಭಗವಾನ ಶ್ರೀ ಆದಿನಾಥನ ಸ್ವಾಮಿ ಮಂದಿರಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಈ ಬಸಿದಿಯು ಶೀಥಿಲಾವಸ್ಥೆ ತಲುಪಿದಾಗ ಇದರ ಜಿರ್ಣೊಧ್ದಾರದ ಕನಸನ್ನು ಕಂಡವರು ಇಲ್ಲಿನ ಯುವಕರ ಸಂಮೂಹ, ಯುವಕರ ಈ ಆದರ್ಶವಾದ ಸಾಹಸಕ್ಕೆ ಬೆಂಗಾವಲಾಗಿ ನಿಂತಿದ್ದು ಹಿರಿಯರು. ಹಣಕಾಸಿನ ತೂಂದರೆಯ ನಡುವೆಯು ಸುತ್ತಲಿನ ಧರ್ಮಾನುರಾಗಿಳ ಸಹಕಾರದಿಂದ ಬಸದಿಯನ್ನು ನಿರ್ಮಿಸಿ ಈ ಹಂತಕ್ಕೆ ತಂದಿದ್ದಾರೆ. ಇನ್ನೂ ಪಂಚಕಲ್ಯಾಣ ನೆಡೆಯಬೇಕಿದೆ, ಶ್ರೀ ಆದಿನಾಥನ ಸ್ವಾಮಿ ಮಂದಿರಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ, ಇದಕ್ಕೆ ಹೂಸ ಬಸದಿ ಎಂದು ಹೇಳುವರು,ಕಾರಣ ಒಂದು ವಿಶೇಷವಾದ ಬ್ರಹ್ಮದೇವರ ಸಾನಿಧ್ಯವಿದೆ,ಅಲ್ಲಿ ಭಗಾವಾನ್ ಶ್ರೀ ಆಧಿನಾಥ ಸ್ವಾಮಿಯನ್ನು ಇಲ್ಲಿನ ಹಿರಿಯರು ಮೂರ್ತಿಯನ್ನು ಸ್ಥಾಪಿಸಿರುತ್ತಾರೆ. ಪುನಃ ಈ ಮೂರ್ತಿಯನ್ನು ಬ್ರಹ್ಮದೇವರ ಬೆಟ್ಟದಲ್ಲಿ ಸ್ಥಾಪಿಸಲು ಹೂರಟಾಗ ಮೂರ್ತಿಯು ಇಲ್ಲಿಂದ ಕದಲದೆ ಇಲ್ಲಿಯೆ ನೆಲೆಯೂರಿರುತ್ತದೆ.ಹಾಗಾಗಿ ಈ ಸ್ಥಳಕ್ಕೆ ಹೂಸ ಬಸದಿ ಎಂದು ಕರೆಯಲ್ಪಡುತ್ತದೆ.ಪರಮ ಪೂಜ್ಯರಾದ 108 ವೀರಸಾಗರ ಮಹಾರಾಜರು, ಹಾಗೂ ಪರಮ ಪೂಜ್ಯರಾದ 108 ಪ್ರಸನ್ನ ಮಹಾರಾಜರು, ಯುಗಳ ಮುನಿಗಳ ಮಹಾರಾಜರಾದ ಅಮರ ಕೀರ್ತಿ ಹಾಗು ಅಮೊರ್ಘ ಕೀರ್ತಿ ಮಹಾರಾಜರ ಆರ್ಶೀವಾದದಿಂದ ಸರ್ವಾಂಗ ಸುಂದರವಾಗಿ ಕಾಣುತ್ತಿದೆ.
ಕ್ಷೇತ್ರ ಪರಿಚಯ- 41 / ಹೊಸ ಬಸ್ದಿ / ಅಳದಂಗಡಿ / ದಕ್ಷಿಣ ಕನ್ನಡ.














