ಅಭಿನಂದನಾ

ಪಂಡಿತ ರತ್ನ ಶ್ರೀ  ಎ. ಶಾಂತಿರಾಜು ಶಾಸ್ತ್ರಿ ಯವರ ಪುತ್ರ ರಾದ ಸಮಾಜ ರತ್ನ, ಸಮಾಜ ಭೂಷಣ, ಶ್ರಾವಕ ರತ್ನ  ಶ್ರವಣಬೆಳಗೊಳದ  ಮಹಾ ಮಸ್ತಕಾಭಿಷೇಕದ ರಾಷ್ರೀಯ ಅಧ್ಯಕ್ಷ ರಾದ ಶ್ರೀ ಎಸ್. ಜಿತೇಂದ್ರಕುಮಾರ್ ರವರ ಅಭಿನಂದನಾ ಸಮಾರಂಭ ದಿನಾಂಕ 10/12/2016 ರಂದು ಅವರು ಹುಟ್ಟು ಬೆಳೆದ ಸಾಂಸೃತಿಕ ನಗರಿ ಮೈಸೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಿತು.

 

ಕಾರ್ಯಕ್ರಮವನ್ನು ಶ್ರೀ ಜಿತೇಂದ್ರ ಕುಮಾರ್ ಅಭಿನಂದನಾ ಸಮಿತಿ ಬೆಂಗಳೂರು, ಮೈಸೂರಿನ ಶ್ರೀ ದಿಗಂಬರ ಸಮಾಜ, ಪದ್ಮಶ್ರೀ ಜೈನ ಮಹಿಳಾ ಸಮಾಜ ಹಾಗೂ ಸಕಲ ಜೈನ ಸಮಾಜ ಮೈಸೂರು ವತಿಯಿಂದ ಏರ್ಪಡಿಸಲಾಗಿದ್ದು ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಯಿತು.

ಮೆರವಣಿಗೆಯ ಮೂಲಕ ಗಣ್ಯರನ್ನು ಜೈನ್ ಬೋರ್ಡಿಂಗ್ ನಿಂದ ದೊಡ್ಡ ಗಡಿಯಾರದ ಮುಂದೆ ಸಾಗಿ  ಪುರಭವನಕ್ಕೆ ಸ್ವಾಗತಿಸಲಾಯಿತು.

 

 ಸ್ವಸ್ಥಿ ಶ್ರೀ ಲಲಿತ ಕೀರ್ತಿ ಭಟ್ಟಾರಕ  ಮಹಾಸ್ವಾಮೀಜಿಯವರು ಕಾರ್ಕಳ. ಸ್ವಸ್ಥಿ ಶ್ರೀ ಭುವನ ಕೀರ್ತಿ ಭಟ್ಟಾರಕ  ಮಹಾ ಸ್ವಾಮೀಜಿಯವರು ಕನಕಗಿರಿ, ಸ್ವಸ್ತಿ ಶ್ರೀ ದವಳ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಅರಹಿಂತಗಿರಿ, ಸ್ವಸ್ತಿ ಶ್ರೀ  ಬಾನುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಕಂಬದಹಳ್ಳಿ. ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಮಹಾ ಸ್ವಾಮೀಜಿಯವರು ವರೂರು, ಸ್ವಸ್ತಿ ಶ್ರೀ  ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಹೊಂಬುಜ, ಸ್ವಸ್ತಿ ಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಮಹಾ ಸ್ವಾಮೀಜಿಯವರು ಎನ್. ಆರ್. ಪುರ ವಿಚಾರ ಪಲ್ಲಟ ಕ್ಷಿಲ್ಲಕ ಶ್ರೀ ವೃಷಭಸೇನಂ ಮಹಾ ಸ್ವಾಮೀಜಿಯವರು  ಲಕ್ಕವಳ್ಳಿ ಇವರ ಪಾವನ ಸಾನಿಧ್ಯ ದಲ್ಲಿ  ಹಾಗೂ ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳಾದ  ರಾಜಶ್ರೀ ಡಾ || ಶ್ರೀ ವೀರೆಂದ್ರ ಹೆಗ್ಗಡೆ ಯವರ ದಿವ್ಯ ಉಪಸ್ತಿತಿಯಲ್ಲಿ ನಡೆಯಿತು.

 

ಅಶೋಕ್ ಕುಮಾರ್ ಹಾಗೂ ಇಂದ್ರ ಜೈ ಕುಮಾರ್ ರವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಶಯ್ ಜೈನ್ ರವರು ಪ್ರಾರ್ಥನೆ ಹಾಡಿದರು.  ನಂತರ ಮಹಾಸ್ವಾಮಿಗಳವರು ಹಾಗೂ ಗಣ್ಯರು ದೀಪವನ್ನು ಪ್ರಜ್ವಲಿಸಿ ಸಮಾರಂಭದ ಉದ್ಘಾಟನೆ ಮಾಡಿದರು.