ಪಂಚಕಲ್ಯಾಣ ಮಹೋತ್ಸವ ಆಮಂತ್ರಣ / ಬಂಟ್ವಾಳ Tq. ಪಂಜಿಕಲ್ಲು / ಜ್ವಾಲಾಮಾಲಾ ನ್ಯೂಸ್ / 2021

ಬಂಟ್ವಾಳ ತಾಲ್ಲೂಕು ಪಂಜಿಕಲ್ಲು ಭಗವಾನ್ 1008 ಶ್ರೀ ಆದಿನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಮಹೋತ್ಸವ.

 ಜೈ ಜಿನೇಂದ್ರ ವೀಕ್ಷಕರೆ, ನಿಮಗೆಲ್ಲಾ ಧಾರ್ಮಿಕ ಕ್ಷೇತ್ರವಾದ ಬಂಟ್ವಾಳ ತಾಲ್ಲೂಕು ಪಂಜಿಕಲ್ಲು ಅಲ್ಲಿ ನಡೆಯುತ್ತಿರುವಂತಹ ಪಂಚಕಲ್ಯಾಣ ಮಹೋತ್ಸವಕ್ಕೆ ಪ್ರೀತಿಯಿಂದ ಆಹ್ವಾನ ಕೊಡುವುದಕ್ಕೆ ನಿಮ್ಮ ಮುಂದೆ ಇದ್ದೇನೆ. ನಿಮಗೆ ಇಗಾಗಲೇ ತಿಳಿದಿರುವಂತೆ 1008 ಭಗವಾನ್ ಶ್ರೀ ಆದಿನಾಥಸ್ವಾಮಿ ಬಸದಿ ಪಂಚಕಲ್ಲು ಇದರ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿರುವ ಬಸದಿ ಧಾಮ ಸಂಪ್ರೋಕ್ಷಣೆಯೊಂದಿಗೆ ನೂತನ ಏಕ ಶಿಲಾ ಮಾನಸ್ಥಂಭೊಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಇದೆ ದಿನಾಂಕ 03-02-2022 ಗುರುವಾರ ದಿಂದ 07-02-2022ರ ವರೆಗೆ ಪರಮ ಪೂಜ್ಯ ಮುನಿ ಶ್ರೀ 108 ಅಮೋಘಕೀರ್ತಿ ಮಹಾರಾಜರು ಮತ್ತು ಪರಮ ಪೂಜ್ಯ ಮುನಿ ಶ್ರೀ 108 ಅಮರ ಕೀರ್ತಿ ಮಹಾರಾಜರ ದಿವ್ಯ ಉಪಸ್ಥಿತಿಯೊಂದಿಗೆ ಕಾರ್ಕಳ ಜೈನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶದಲ್ಲಿ ಹಾಗೂ ಸಮಸ್ತ ಭಟ್ಟಾರಕರುಗಳ ಆಶೀರ್ವಾದ ದೊಂದಿಗೆ ಜೈನ ಆಗಮೊತ್ತ ವಿಧಿವಿಧಾನಗಳಿಂದ ನೆರವೇರಲಿದೆ.

ಭಟ್ಟಾರಕರುಗಳು ಪಂಚಕಲ್ಯಾಣ ಪ್ರತಿಷ್ಠಾಮಹೋತ್ಸವವನ್ನು ಕುರಿತು ಮಾತನಾಡಿದರು.

ಈ ಮಹೋತ್ಸವದಲ್ಲಿ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡ ಬೇಕಾಗಿ ಸರ್ವಸದಸ್ಯರು ಜೀರ್ಣೋತ್ತರ ಮತ್ತು ಪಂಚಕಲ್ಯಾಣ ಮಹೋತ್ಸವ ಸಮಿತಿ ಪಂಜಿಕಲ್ಲು.

ಪಂಜಿಕಲ್ಲಿನ ಸಮಸ್ತ ಶ್ರಾವಕ ಶ್ರಾವಕಿಯರ ವಿನಂತಿ. ಅದರ ಜೊತೆಗೆ ನಾನು ನಿಮ್ಮೆಲ್ಲರ ಪ್ರೀತಿಯ ನವಿತಾ ಜೈನ್ ಕೂಡ ಸ್ವಾಗತಿಸುತ್ತಾ ಇದ್ದೇನೆ.

ಇನ್ನೊಂದು ಸಂತಸದ ಸುದ್ದಿ ಅಂದರೆ ಮಹೋತ್ಸವಕ್ಕೆ ಬರಲಾಗದಿದ್ದರು ಕೂಡ ನೇರ ಪ್ರಸಾರದಲ್ಲಿ ನೋಡಿ ಪುಣ್ಯ ಭಾಗಿಗಳಾಗುವಂತಹ ಅವಕಾಶವನ್ನು ಕಲ್ಪಿಸಲಾಗಿದ್ದು 5 ದಿನದ ಮಹೋತ್ಸವ ರಾಜ್ಯದ ಪ್ರತಿಷ್ಠಿತ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.

ವಂದನೆಗಳೊಂದಿಗೆ, ಜೈ ಜಿನೇಂದ್ರ.

ಜ್ವಾಲಮಾಲ ಡಾಟ್ ನ್ಯೂಸ್