ಸಾಹಿತಿಗಳೊಂಡಿಗೆ ಸಂವಾದ- 06 / ಡಾ. ಎಸ್. ವಿ. ಸುಜಾತ / ಬೆಂಗಳೂರು / 28-01-2022 /ಜ್ವಾಲಾಮಾಲಾನ್ಯೂಸ್

ಸಾಹಿತಿಗಳೊಂದಿಗೆ ಸಂವಾದ

ಇಂದಿನ ಸಾಹಿತಿಗಳು : ಡಾ|| ಎಸ್. ವಿ ಸುಜಾತ . ಸೃಜನ ಶೀಲ ಸಾಹಿತ್ಯ , ಅನುವಾದ ಗ್ರಂಥ ಸಂಪಾದನೆ  ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ  ಕೊಡುಗೆ ನೀಡಿರುವ ಸಾಹಿತಿ ಡಾ|| ಎಸ್. ವಿ ಸುಜಾತರವರು  ಜನವರಿ 13 1950ರಲ್ಲಿ ಜನಿಸಿದರು.  ಎಮ್. ಎ ಪದವೀದರರಾದ  ಇವರು ಹಿಂದಿ ರಾಜ್ಯ  ಭಾಷಾ  ವಿದ್ವಾನ್ ಹಾಗೂ ಪ್ರಾಕೃತದಲ್ಲಿ ಡಿಪ್ಲೋಮಾ ಪಡೆದಿರುತ್ತಾರೆ. ತಮ್ಮ ಕನ್ನಡ ನಾಗಕುಮಾರ  ಕಥಾಕಾವ್ಯಗಳು ಒಂದು  ತೌಲಿನಿಕ ಅಧ್ಯಯನವಾಗಿದ್ದು ಈ ಪ್ರೌಢ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್. ಡಿ ಪದವಿ ಪಡೆದಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಹಿಂದಿ ಅನುವಾದಕರಾಗಿ 13 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತಮ್ಮ ಸಾಹಿತ್ಯಿಕ ಆಸಕ್ತಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ತಂದೆ ಎಸ್. ಪಿ ವಸಂತರಾಜಯ್ಯ ರವರಿಂದ ಸಾಹಿತ್ಯದ ಒಲವು ರೂಢಿಸಿಕೊಂಡ ಡಾ|| ಎಸ್. ವಿ ಸುಜಾತ ಅವರು  ಎರಡು ಸೃಜ ನ ಶೀಲ ನಾಲ್ಕು ಅದ್ಯಯನ ಕೃತಿಗಳು 14 ಅನುವಾದ ಕೃತಿಗಳನ್ನು ರಚಿಸಿದ್ದಾರೆ.  14 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಅನೇಕ ಲೇಖನಗಳು, ಸಂಶೋಧನ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಸ್ವರ್ಣ ಸಂಚಿಕೆಗಳಲ್ಲಿ  ಪ್ರಕಟಗೊಂಡಿವೆ. ಕನ್ನಡ ಜೈನ ಪುರಾಣಗಳ  ಒಳನೋಟ ರತ್ನಾಕರ ವರ್ಣಿ  ಹಾಗೂ ಪೂಜ್ಯ ಪಾದಚಾರ್ಯರು  ಇವರ ಸಂಶೋಧನ ಕೃತಿಗಳು . ಕಂಪ್ಯೂಟರ್ ಪದ ವಿವರಣಾ ಕೋಶ , ಶ್ರಾವಕ ದೀಪಿಕ, ತೀರ್ಥ ವಂದನೆ, ಜೈನ ಆಚಾರ್ಯರು , ಅನುಪ್ರೇಕ್ಷೆ, ಚ್ಚೌವೀಸ ತೀರ್ಥಂಕರರ ಕೃತಿ, ನಿತ್ಯ ಪೂಜಾ  ಸಂಗ್ರಹ,  ಮಲ್ಲಿನಾಥ  ಚರಿತೆ, ನಾರಿರತ್ನ ಪುರಸ್ಕೃತರು, ಅಮ್ಮ ನನ್ನ ಎದೆಯಾಳದಲ್ಲಿ ಈ ಪುಸ್ತಕಗಳು ಇವರ ಸಂಪಾದಿತ ಕೃತಿಗಳು  ಹಾಗೂ ಪುಟ್ಟಿ ಗೊಂಬೆ ಎಂಬ ಮಕ್ಕಳ ಕವನಸಂಕಲನವನ್ನು  ರಚಿಸಿದ್ದಾರೆ. ಗಣಿನಿ ಆರ್ಯಿಕಾ ಜ್ಞಾನಮತಿ ಮಾತಾಜಿ , ಅನಂತನಾಥ ಪುರಾಣ , ಭಾರತದ ಸಂವಿದಾನ ವಿಷಯಕ  ಜೈನ ಅವಧಾರಣೆಗಳು , ಅಮೇರಿಕಾದಲ್ಲಿ ಜೈನಧರ್ಮ, ಲಘು ಸಾಮಾಯಿಕ ಪಾಠ, ಸಾಮಾಜಿಕ ಸಮಾನತೆಯ ಸತ್ಯ ,ಪ್ರಾಕೃತ ಸಾಹಿತ್ಯದ ರೂಪುರೇಷೆ, ಆದಿಪುರಾಣ ಸಂಗ್ರಹ , ಮೂರು ತೀರ್ಥಂಕರರ ಪುರಾಣಗಳು ಅವರ ಅನುವಾದಿತ ಕೃತಿಗಳು. ಚಿನ್ಮಯ ಸಿರಿ , ಮಾಧವಿ, ಸುಮಾವಸಂತ  ಇವರ ಸಂಪಾದಿತ ಸ್ಮರಣಸಂಚಿಕೆಗಳು. ಹಾಗೂ ಅವರವಂಟಿಗೆ ಜೈನ ಶ್ರಾವಿಕಾ ಸಂದೇಶ, ಧವಳ, ಸೌಮನಸ  ಈ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ಸ್, ಹಾಗೂ ಇನ್ನಿತರೇ ಸಂಸ್ಥೆಗಳಿಗೆ  ಪದಕೋಶ ಹಾಗೂ ಇನ್ನಿತರೆ ಅನುವಾದ ಮಾಡಿರುವ ಹೆಗ್ಗಳಿಕೆ ಇವರದು. ಧವಳ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ , ದಾನರಭೀ ಟ್ರಸ್ಟ್ ನ ಅಧ್ಯಕ್ಷರಾಗಿ ಜೈನ ಅಧ್ಯಯನ ಸಂಸ್ಥೆ ಬೆಂಗಳೂರು ಶಾಖೆಯ ಅಧ್ಯಕ್ಷರಾಗಿ ಕಾರ್ಯ ನಿರ್ಹಿಸುತ್ತಿದ್ದಾರೆ. ಸುಮೇರು ಜೈನ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾಗಿ ಪ್ರಸ್ತುತ ಟ್ರಸ್ಟೀ ಹಾಗೂ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾ  ಸಂಸ್ಥೆಯ ಬೆನ್ನೆಲುಬಾಗಿದ್ದಾರೆ .ಡಾ|| ಎಸ್. ವಿ ಸುಜಾತರವರು ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ  ಮತ್ತು  ಸಂಶೋಧನ ಸಂಸ್ಥೆಯ ಬೋಧಕರಾಗಿ  ಪಠ್ಯ ತಯಾರಿಕೆ ಪ್ರಶ್ನೆ ಪತ್ರಿಕೆ ತಯಾರಿಕೆ ಮತ್ತು ಮೌಲ್ಯ ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾವ ಜಾವ  ರತ್ನ ಪರಿಕ್ಷಾರ್ಥಿಗಳಿಗೆ  ಮುಕ್ತ ವಿಶ್ವವಿದ್ಯಾನಿಲಯದ  ಕನ್ನಡ  ಎಂ. ಎ ಪರಿಕ್ಷಾರ್ಥಿಗಳಿಗೆ ಭೋದನೆ ಮಾಡಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ ವಿವಿಧ ವಾಹಿನಿಗಳ ವಿವಿಧ ಕಾರ್ಯಕ್ರಮಗಳಲ್ಲಿ  ಭಾಗವಹಿಸಿರುವುದಲ್ಲದೇ  ಹಲವು ವಿಚಾರ ಸಂಕೀರ್ಣ ಸಾಂಸ್ಕೃತಿಕ ಸಾಂಕೇತಿಕ ಧಾರ್ಮಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹಿರಿಮೆ ಇವರದು ಡಾ|| ಎಸ್. ಪಿ ಸುಜಾತರವರು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಪದ್ಮಶ್ರೀ ಮಹಿಳಾ ಜೈನ ಸಮಾಜ ಮೈಸೂರು  ಇವರಿಂದ ಭಾಷಾ ಅನುವಾದ ಚತುರ  ಈ ಪ್ರಶಸ್ತಿಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ಡಾ|| ಎಸ್. ಪಿ ಸುಜಾತರವರು  ಕನ್ನಡ, ಹಿಂದಿ, ಪ್ರಾಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವ ನಿರಂತರ ಉತ್ಸಾಹದ  ಅಧ್ಯಯನ  ಶೀಲ ಮನಸ್ಥಿತಿಯುಳ್ಳ ತಾವು ಧಾರ್ಮಿಕವಾಗಿ , ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಯುವಪೀಳಿಗೆಯ ಲೇಖಕರಿಗೆ  ಮಾರ್ಗದರ್ಶಕರಾಗಿದ್ದೀರಿ,  ತಮಗೆ ಜ್ಞಾನ ದೀಪಿಕೆಯು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತದೆ. ಜೈ ಜಿನೇಂದ್ರ.