ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು ಪಂಚಕಲ್ಯಾಣ ಮಹೋತ್ಸವ
ನೇರ ಪ್ರಸಾರ ಕಾರ್ಯಕ್ರಮ ನಿಮ್ಮ ಜ್ವಾಲಮಾಲಾ.ನ್ಯೂಸ್ ನಲ್ಲಿ… ವೀಕ್ಷಿಸಿ ಧನ್ಯರಾಗಿ
ಕರ್ನಾಟಕ ರಾಜ್ಯದ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಡುಬಿದ್ರೆಯಿಂದ ಉತ್ತರಕ್ಕೆ ಸ್ವಲ್ಪ ಮುಂದೆ ಇರುವ ಎರ್ಮಾಡು ಗ್ರಾಮದಲ್ಲಿ ಸುಮಾರು 900 ವರ್ಷಗಳ ಹಿಂದೆ ಸ್ಥಾಪಿತಗೊಂಡಿದ್ದ ಭಗವಾನ್ ಚಂದ್ರನಾಥ್ ಸ್ವಾಮಿ ಬಸದಿಯು ಕಾಲಂತರದಲ್ಲಿ ಸಂಪೂರ್ಣ ಶಿಥಿಲಗೊಂಡಿತ್ತು. ಸಮಾಜ ಭಾಂದವರ ಮತ್ತು ದಾನಿಗಳ ಸಹಾಯ ಹಸ್ತದಿಂದ ಸಂಪೂರ್ಣ ಶಿಲಾಮಯವಾಗಿ ಬಸದಿಯನ್ನು ಪುನರ್ ನಿರ್ಮಸಲಾಗಿದ್ದು ಇದೀಗ ಜಿನ ಚೈತ್ಯಾಲಯವು ಸರ್ವ ಸುಂದರವಾಗಿ ಶೋಭಿಸುತ್ತಿದೆ. ಈ ಪ್ರಯುಕ್ತ ಭಗವಾನ್ 1008 ಚಂದ್ರನಾಥ ತೀರ್ಥಂಕರರ ನೂತನ ಜಿನಬಿಂಬದ ಪಂಚಕಲ್ಯಾಣ ಮಹೋತ್ಸವ ಹಾಗೂ ಬಸದಿಯ ದಾವ ಸಂಪ್ರೋಕ್ಷಣ ಮಹೋತ್ಸವವು ಜೈನ ಆಗಮೋಕ್ತ ವಿಧಿವಿಧಾನಗಳೊಂದಿಗೆ ಜರುಗಲಿರುವುದು. ದಿನಾಂಕ 24/01/2022 ನೆ ಸೋಮವಾರದಿಂದ 28/01/2022 ಶುಕ್ರವಾರದ ವರೆಗೆ ಮೂಡುಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಭಟ್ಟಾರಕಚಾರ್ಯ ಪಟ್ಟಾಚರ್ಯವರ್ಯ ಗಳವರ ಮಾರ್ಗದರ್ಶನ ಪಾವನ ಸಾನಿಧ್ಯ ದೊಂದಿಗೆ ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳವರ ಸಹಯೋಗದೊಂದಿಗೆ ಹಾಗೂ ದಿವ್ಯ ಉಪಸ್ತಿತಿಯೊಂದಿಗೆ ಭಗವಾನ್ 1008 ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಹಾಗೂ ಬಸದಿಯ ದಾನಸಂಪ್ರೋಕ್ಷಣ ಕಾರ್ಯಕ್ರಮವು ಕೋವಿಡ್ ನಿಯಮಗಳನ್ನು ಅನುಸರಿಸಿ ಸುರಕ್ಷಿತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲಿದೆ. ಹಾಗೆಯೇ ಕಾರ್ಯಕ್ರಮದ ನೇರಪ್ರಸಾರವೂ ಕೂಡ ನಿಮ್ಮ ನೆಚ್ಚಿನ ಜ್ವಾಲಾಮಾಲಾ ನ್ಯೂಸ್ ನಲ್ಲಿ ಸಹ ಪ್ರಸಾರವಾಗಲಿದೆ. ಆದ್ದರಿಂದ ತಾವು ಎಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲೆಂದು ನಾವು ಆಶಿಸುತ್ತೇವೆ.














