ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಪದ್ಮನಂದಿ-ಪಂಚವಿಂಶತಿ ಮತ್ತು ಪುರುಷಾರ್ಥಸಿದ್ಧ್ಯುಪಾಯ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಎರಡು ಕೃತಿಗಳನ್ನು ಜ್ಞಾನ ದೀಪಿಕೆಗಳು ಅನ್ನುವಂತಹ ಸರಣಿ ಕಾರ್ಯಕ್ರಮದ ಮೂಲಕ ಪರಿಚಯ ಮಾಡಿಕೊಡುತ್ತಿದೇವೆ. ಇಂದು ಪರಿಚಯ ಮಾಡಿಕೊಡುತ್ತಿರುವ ಎರಡು ಕೃತಿಗಳಲ್ಲಿ ಪದ್ಮನಂದಿ-ಪಂಚವಿಂಶತಿ ಅನ್ನುವಂತಹ ಒಂದು ಕೃತಿ, ಪದ್ಮನಂದಿ ಆಚಾರ್ಯದೇವರು ವಿರಚಿತ ಮಾಡಿರುವಂತಹ ಪದ್ಮನಂದಿ ಪಂಚವಿಂಶತಿ ಅನ್ನುವಂತಹ ಕೃತಿ. ಇನ್ನೊಂದು ಪುರುಷಾರ್ಥಸಿದ್ಧ್ಯುಪಾಯ ಅನ್ನುವಂತಹ ಕೃತಿ. ಈ ಎರಡು ಮಹತ್ವದ ಕೃತಿಗಳನ್ನು ಪರಿಚಯ ಮಾಡಿಕೊಡುತ್ತ ಇದ್ದೀವಿ.
ಈ ಎರಡು ಕೃತಿಗಳಲು ಇರುವಂತಹ ಸಾಮ್ಯ ಏನು ಎಂದರೆ, ಈ ಎರಡು ಕೃತಿಗಳನ್ನು ಪ್ರಕಾಶನ ಮಾಡಿರುವಂತಹ ದೊಡ ಸಂಸ್ಥೆ ಬಳೆಪೇಟೆಯಲ್ಲಿ ಇರುವಂತಹ ರಂಗಸ್ವಾಮಿ ಗುಡಿ ಬೀದಿಯಲ್ಲಿರುವಂತಹ ಬೆಂಗಳೂರಿನ ದಿಗಂಬರ ಜೈನ ಟ್ರಸ್ಟ್ ಅಧ್ಯಾತ್ಮ ಪ್ರಕಾಶ ಸಂಸ್ಥೆ. ಇದು 2000 ರಲ್ಲಿ ಪ್ರಕಟವಾದಂತಹ ಹಾಗೂ 25 ರೂಪಾಯಿಗಳಿಗೆ ದೊರೆಯುತ್ತಿದಂತಹ ಕೃತಿ. 26 ಸ್ವತಂತ್ರ ಪ್ರಕರಣಗಳ ಸಂಗ್ರಹವಾಗಿದ್ದು ಇದು ಪದ್ಮನಂದಿ-ಪಂಚವಿಂಶತಿ ಎಂದು ಕರೆಯಲು ನಿಷ್ಚಿತವಾಗಿ ನಿರ್ಣಯಮಾಡುವುದಕ್ಕೆ ಕಷ್ಟ ಎಂದು ಈ ಕೃತಿಯನ್ನು ಬರೆಯುವಂತಹ ಲೇಖಕರು ಹೇಳಿದ್ದಾರೆ. ಈ ಕೃತಿಯನ್ನು ಪದ್ಮನಂದಿ ಆಚಾರ್ಯರಿಂದ ರಚಿಸಲ್ಪಟಿದೇಯೊ ಅಥವಾ ಬೇರೆ ಆಚಾರ್ಯರಿಂದ ರಚಿಸಲ್ಪಟಿದೇಯೊ ಎಂಬ ಸಂದೇಹದಿಂದ, ಆ ಸಂದೇಹದ ಪರಿಯಾರ್ತವಾಗಿ ಮೂಲ ಗ್ರಂಥವನ್ನು 1 ರಿಂದ 21 ಮತ್ತು 25ನೇ ಪ್ರಕರಣಗಳಲ್ಲಿ ಗ್ರಂಥಕರ್ತರು ನೋಡಿದಾಗ ಐದು ಬೇರೆ ಬೇರೆ ರೀತಿ ಉಲ್ಲೇಖ ಮಾಡಿರುವಂತಹದನ್ನ ಹೆಸರಿಸುತ್ತ 21 ಪ್ರಕರಣಗಳನ್ನು ಒಬ್ಬರೆ ರಚಿಸಿದ್ದರು ಉಳಿದ 4 ಪ್ರಕರಣಗಳ ಗ್ರಂಥಕರ್ತರು ಯಾರು ಎಂಬುವುದು ತಿಳಿದಿರುವುದಿಲ್ಲಾ ಎಂದು ಹೇಳಿರುತ್ತಾರೆ. ಈ ಕೃತಿಯಲ್ಲಿ 198 ಶ್ಲೋಕಗಳು ಇವೆ. ಆ ಶ್ಲೋಕಗಳ ಮೂಲಕ ವಿವಿಧ ವಿಚಾರಗಳನ್ನು ತಿಳಿಸುವುದಂತಹದನ್ನ ಈ ಒಂದು ಕೃತಿ ಮಾಡುತ್ತಿದೆ ಅನ್ನುವಂತಹದು, ಈ ಕೃತಿಯನ್ನು ಅನುವಾದ ಮಾಡಿರುವಂತವರು ಶ್ರೀ ಎಂ ಬಿ ಪಾಟೀಲರು ನಮಗೆ ಸಮರ್ಪಿಸಿದ್ದಾರೆ. ಇದೊಂದು ಅಮೂಲ್ಯವಾದಂತಹ ಕೃತಿ. ಈ ಕೃತಿಯನ್ನು ಓದುವುದರ ಮೂಲಕ ನಮ್ಮ ಅರಿವನ್ನು ವಿಸ್ಥರಿಸಿಕೊಳ್ಳ ಬೇಕು ಎಂಬುವುದು ಬಹಳ ಮುಖ್ಯ.
ಇದೆ ಸಂಸ್ಥೆ ಪ್ರಕಟ ಮಾಡಿರುವಂತಹ ಕೃತಿ ಪುರುಷಾರ್ಥಸಿದ್ಧ್ಯುಪಾಯ ಎನ್ನುವಂತಹ ಕೃತಿ. ಈ ಕೃತಿಯನ್ನು 1996ರಲ್ಲಿ ಈ ಕೃತಿ ಬರುತ್ತದೆ. ಈ ಕೃತಿಯ ಮೂಲ ಬೆಲೆ 45 ರೂಪಾಯಿ. ಈ ಕೃತಿಯನ್ನು ಕೂಡ ರಂಗಸ್ವಾಮಿ ಗುಡಿ ಬೀದಿಯ ದಿಗಂಬರ ಜೈನ ಟ್ರಸ್ಟ್ ಅಧ್ಯಾತ್ಮ ಪ್ರಕಾಶ ಸಂಸ್ಥೆ ಮಾಡಿರುವಂತಹದ್ದು. ಈ ಕೃತಿಯನ್ನು ಟೋಡರ್ ಮಲ್ಲರು ಬರೆದಿರುವಂತಹ ಈ ಒಂದು ಕೃತಿಯನ್ನು ಹಿಂದಿ ಯಿಂದ ಕನ್ನಡಕ್ಕೆ ಅನುವಾದ ಮಾಡಿರುವಂತಹ ಕೃತಿ ಇದು.
ಪ್ರಸ್ತುತ ಈ ಕೃತಿಯ ಹೆಸರು ಪುರುಷಾರ್ಥಸಿದ್ಧ್ಯುಪಾಯ ಅಥವಾ ಜಿನ ಪ್ರವಚನ ರಹಸ್ಯ ಕೋಶ ಎಂದು ಕೂಡ ಕರೆಯುತ್ತಾರೆ. ಪುರುಷಾರ್ಥಸಿದ್ಧ್ಯುಪಾಯ ಎಂದರೆ ಆತ್ಮನ ಪ್ರಯೋಜನ ಸಿದ್ದಿಯ ಉಪಾಯವಿದೆ ಮತ್ತು ಜಿನ ಪ್ರವಚನ ರಹಸ್ಯ ಕೋಶ ಎಂದರೆ ಜೈನ ಸಿದ್ಧಾಂತಗಳ ಬಹಳ ಮುಖ್ಯದ ರಹಸ್ಯ ಭಂಡಾರವೆಂದು ಅರ್ಥ. ಶ್ರೀ ಎಂ ಬಿ ಪಾಟೀಲರು ಕನ್ನಡ ಅನುವಾದ ಮಾಡುವಾಗ ಬರೆಯುತ್ತಾರೆ. ಅಹಿಂಸ ಪರಮೋಧರ್ಮ ಎಂದು ಸಾರುವ ಜೈನ ಧರ್ಮ ಅಹಿಂಸ ಪ್ರಧಾನವಾಗಿದೆ ಎಂದು ಹಾಗೂ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಎಂ ಬಿ ಪಾಟೀಲರು ಹೇಳಿದ್ದಾರೆ.
ಈ ಎರಡು ಕೃತಿಗಳಲು ಸಾಮ್ಯ ಏಕೆ ಇದೆ ಎಂದರೆ ಎರಡು ಕೃತಿಗಳನ್ನ ಕನ್ನಡಕ್ಕೆ ಅನುವಾದ ಮಾಡಿರುವಂತವರು ಬೆಳಗಾವಿ ಭಾಗದ ಸೇಡು ಬಾಳದ ಎಂ ಬಿ ಪಾಟೀಲರು. ಈ ಕೃತಿಯನ್ನು ಪ್ರಕಾಶನ ಮಾಡಿರುವಂತವರು ರಂಗಸ್ವಾಮಿ ಗುಡಿ ಬೀದಿಯ ದಿಗಂಬರ ಜೈನ ಟ್ರಸ್ಟ್ ಅಧ್ಯಾತ್ಮ ಪ್ರಕಾಶ ಸಂಸ್ಥೆ. ಇವರು ಹಿಂದಿ ಮತ್ತು ಮರಾಠಿಯನ್ನು ಚೆನ್ನಾಗಿ ಬಲ್ಲವರಾಗಿರುವುದರಿಂದ ಈ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ.
ಹಾಗಾಗಿ ಈ ಎರಡು ಮಹತ್ವದ ಕೃತಿಗಳ ಒಳ ಅರ್ಥಗಳು ಏನು, ವಿಷಯದ ಸ್ವರೂಪವೇನು ಭಾಷಾಸ್ವರೂಪ ಏನು ಜೈನ ಧರ್ಮದ ಯಾವ ತತ್ವಗಳನ್ನ ಈ ಕೃತಿಗಳು ನಮ್ಮ ಮುಂದೆ ಇಡುತ್ತಾ ಇವೆ ಎಂಬುವಂತಹದನ್ನ ತಿಳಿದು ಕೊಳುವುದರ ಮೂಲಕ ನಮ್ಮ ಜ್ಞಾನ ಚಿಂತನೆಯನ್ನು ಹೆಚ್ಚಿಸಿಕೊಳುವಂತಹದ್ದು ಈ ಕೃತಿಗಳಿಂದ ಆಗುತ್ತದೆ. ಹಾಗೇ ಮೂಲವನ್ನು ಅರ್ಥಮಾಡಿಕೊಳ್ಳುವುದರ ಮೂಲಕ ನನ್ನ ಜೈನ ಧರ್ಮದ ಈ ಕೃತಿಗಳು ಬಹಳಷ್ಟು ನಮಗೆ ಸಹಕಾರ ನೀಡುತ್ತವೆ ಎಂದು ಹೇಳುತ್ತ ಮತ್ತೆ ಈ ಎರಡು ಕೃತಿಗಳು ಸಿಕ್ಕಲ್ಲಿ ಎಂದು ಹೇಳುತ್ತ ನಮ್ಮ ಮಾತು ಮುಗಿಸುತ್ತೇನೆ ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.
ನಮಸ್ಕಾರ
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್
.














