ಕ್ಷೇತ್ರ ಪರಿಚಯ- 38 / ಭಗವಾನ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿ / ಬಾಬಾನಗರ

ಜೈ ಜಿನೇಂದ್ರ ವೀಕ್ಷಕರೆ, ವಿಜಯಪುರ ಜಿಲ್ಲೆಯ ವಿಜಯಪುರದಿಂದ 32 ಕಿ.ಮೀ ದೂರದಲ್ಲಿ ಹೆದ್ದಾರಿಯಲ್ಲಿ ಸಾಗುವಾಗ ಸಿಗುವಂತಹ ಒಂದು ಚಾರಿತ್ರಿಕ ಕ್ಷೇತ್ರ ಬಾಬಾನಗರ. ಹಾಗೆ ಈ ಕ್ಷೇತ್ರ ದರ್ಶನಕ್ಕೆ ಸಾಗುವಾಗ ರಸ್ತೆ ಬದಿಯಲ್ಲಿನ ಜಮೀನುಗಳು ಕಣ್ಣು ಹಾಯಿಸಿದಷ್ಟು ದೂರಕ್ಕೆ ದ್ರಾಕ್ಷಿ ತೋಟಗಳಿಂದ ಕಂಗೋಳಿಸುತ್ತವೆ. ಈ ಭಾಗದ ಮುಖ್ಯ ಕೃಷಿ  ದ್ರಾಕ್ಷಿ ಬೆಳೆ, ಇಲ್ಲಿನ ಒಂದು ಪುರಾತನ ಜಿನ ಮಂದಿರ ಅದಿಲಾ ಶಾನ ಕಾಲದ್ದಾಗಿರುವುದರಿಂದ ವಿಭಿನ್ನ ಶೈಲಿಯ ಕಲ್ಲಿನ ಕಟ್ಟಡ. ಹತ್ತಿರದ ಜಮೀನಿನಲ್ಲಿ ಈ ಬಸದಿಯ ಜೀರ್ಣೋದ್ಧಾರಕಾಗಿ ಬಳಸಿದ್ದ ಬಂಡೆಯ ಸ್ಥಳವನ್ನು ನೀವು ನೋಡುತ್ತಿದ್ದಿರಿ. ಇಂತಹ ವಿಶಾಲವಾದ ಜಿನಾಲಯದಲ್ಲಿ ಗರ್ಭಗೃಹ ಸಭಾಮಂಟಪ ಮತ್ತು ಪ್ರಕಾರದಿಂದ ಕೂಡಿರುತ್ತದೆ. ಗರ್ಭ ಗೃಹದಲ್ಲಿ ಎತ್ತರವಾದ ಪೀಠದ ಮೇಲೆ ಕಾಯಸರ್ಗ ಭಂಗಿಯಲ್ಲಿರುವ 1008 ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಸುಂದರ ಮೂರ್ತಿಯು ಪ್ರಧಾನವಾಗಿ ಗಮನಸೆಳೆಯುತ್ತದೆ. ಸ್ವಾಮಿಯ ಪಾದದ ಬಳಿ ಧರಣೇಂದ್ರ ಯೆಕ್ಷ, ಮತ್ತು ಪದ್ಮಾವತಿ ಯಕ್ಷೆ ಕುಳಿತಿದ್ದು ತಲೆಯ ಹಿಂಭಾಗದಲ್ಲಿ ಐದು ಹೆಡೆಗಳನ್ನು ಹರಡಿ ನಿಂತ ನಾಗ ಹಾಗೂ ಇದರ ಮೇಲ್ಭಾಗದಲ್ಲಿ ಮುಕುಡೆಗಳನ್ನು ಗಮನಿಸ ಬಹುದು ಹಿಡಿ ಮೂರ್ತಿಯು ಹಸಿರು ಮಿಶ್ರಿತ ಕಪ್ಪು ಕಲ್ಲಿನಲ್ಲಿ ಕಂಡರಿಸಲಾಗಿದು ಮನಮೋಹಕವಾಗಿ ತೋರುತ್ತದೆ. ಈ ಜಿನ ಮೂರ್ತಿಯನ್ನು ದರ್ಶಿಸಲು ಪಕ್ಕದ ಬೆಳಗಾವಿ ಜಿಲ್ಲೆಯಲ್ಲದೆ ನೆರೆಯ ಮಹಾರಾಷ್ಟ್ರದ ಭಕ್ತರು ಆಗಮಿಸುವುದು ಈ ಕ್ಷೇತ್ರದ ಅಪಾರ ಮಹಿಮೆಗೆ ಸಾಕ್ಷಿ ಸಂಪ್ರದಾಯದಂತೆ ಈ ಮಂದಿರದಲ್ಲಿ ಜಿನರ ಕಂಚಿನ ಚಿಕ್ಕ ಚಿಕ್ಕ ಮೂರ್ತಿಗಳು ಧರಣೇಂದ್ರ ಯಕ್ಷ ಹಾಗೂ ಮಾತೆ ಪದ್ಮಾವತಿ ತಾಯಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಮಂದಿರದ ಜಿನ ಮೂರ್ತಿಯು ಪ್ರಚೀನವಾಗಿದ್ದು ಇದರ ಹಿನ್ನೆಲೆಯು ಸಹ ರೋಮಾಂಚನಕಾರಿ ಇಲ್ಲಿನ ಸ್ಥಳಿಯರು ಹೇಳುವ ಪ್ರಕಾರ ಮೂಲತಃ ಮೂರ್ತಿಯು ಅದಿಲಾ ಶಾಹಿಗಳ ಕಾಲದಲ್ಲಿ ವಿಜಯಪುರ ನಗರದಿಂದ ತಂದು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಅದೊಂದು ದಿನ ಬಾಬಾನಗರ ಗ್ರಾಮದ ಜಿನ ಭಕ್ತರಾದ ಪಂಡಿತರಿಗೆ ಶಾಹಿ ದರ್ಬಾರಿನ ಕುದುರೆ ಲಾಯದಲ್ಲಿ ಜಿನ ಮೂರ್ತಿ ಇರುವ ಬಗ್ಗೆ ತಿಳಿದು ಸುಲ್ತಾನನ ರೋಗಸ್ಥ ಮಡದಿಯನ್ನು ಉಪಚರಿಸಿ ಗುಣಮುಖಳನ್ನಾಗಿಸಿ ಸುಲ್ತಾನನಿಂದ ಮೂರ್ತಿಯನ್ನು ಬಹುಮಾನವಾಗಿ ಪಡೆದು ಬಾಬಾನಗರದಲ್ಲಿ ಪ್ರತಿಷ್ಟಾಪಿಸಲಾಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಕ್ಷೇತ್ರವು ಅತಿಶಯ ಕ್ಷೇತ್ರವಾಗಿ ಹೊರ ಹೊಮ್ಮಿದೆ.

ಇಂತಹ ಅತಿಶಯ ಕ್ಷೇತ್ರವನ್ನು ಒಮ್ಮೆಯಾದರು ಬೇಟಿಮಾಡಿ ಪೂಣ್ಯ ಲಾಭ ಪಡೆಯ ಬೇಕಾಗಿ ಬಸದಿಯ ಕಮಿಟಿಯವರು ಆಗ್ರಹಿಸಿದ್ದಾರೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್