ಸಾಪ್ತಾಹಿಕ ಜೈನ್ ನ್ಯೂಸ್- 60 / 08-01-2022 / jwalamalanews / 2021

ಜೈ ಜಿನೇಂದ್ರ ವೀಕ್ಷಕರೆ, ವಾರದ ಜೈನಸುದ್ದಿಗಳಿಗೆ ನಿಮ್ಮಗೆಲ್ಲಾ ಸ್ವಾಗತ.

ಮುಖ್ಯಾಂಶಗಳು

ಶ್ರೀ ಹೊಂಬುಜ ಜೈನ ಮಠದ ಶ್ರೀಗಳಿಂದ ಸನ್ಮತಿ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ.

ಕೆ ಜೆ ಎ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ರಾಜೇಂದ್ರ ಕುಮಾರ್.

ಶ್ರದ್ದ-ಭಕ್ತಿ-ಸಂತಸಗಳ ತ್ರಿವೇಣಿ ಸಂಗಮದಲ್ಲಿ ನಡೆಯಿತು ಭಕ್ತಾಮರ ಲೇಖನ ಸ್ಪರ್ಧೆ.

ಶ್ರವಣಬೆಳಗೊಳದಲ್ಲಿ ವಿಕ ಸೂಪರ್ ಸ್ಟಾರ್ ರೈತ ಸಮಾರಂಭ: ಜಗದ್ಗುರು ಶ್ರೀಗಳ ಉಪಸ್ಥಿತಿ.

ಸಮಾಜದ ಪ್ರಗತಿಗೆ ಸಹಕರಿಸಿ ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಲಹೆ.

ಜಿನ ಭಜನಾ ಸ್ಪರ್ಧೆ ಆವೃತ್ತಿ 5ರ ವಿಭಾಗಮಟ್ಟದ ಸ್ಪರ್ಧೆಗಳು.

ರಾಜ್ಯದಲ್ಲಿ ನಡೆಯುತ್ತಿರುವ ವಾರ್ಷಿಕ ಪೂಜಾ ಮಹೋತ್ಸವಗಳು.

ಸುದ್ದಿಗಳ ವಿವರ.

ಶ್ರೀ ಹೊಂಬುಜ ಪದ್ಮಾವತಿ ಎಜ್ಯುಕೇಶನಲ್ ಟ್ರಸ್ಟ್ ಹಾಗೂ ಹೊಂಬುಜದ ಜೈನ ಮಠದ ಸಂಯುಕ್ತ ಆಶ್ರಯದಲ್ಲಿ ನೂತನ ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನಡೆಸಲಾಗಿತು.

ಶ್ರೀ ಹೊಂಬುಜ ಪದ್ಮಾವತಿ ಎಜ್ಯುಕೇಶನಲ್ ಟ್ರಸ್ಟ್, ಶ್ರೀ ಹೊಂಬುಜದ ಜೈನ ಮಠ ಹುಂಚ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಇರುವ ಸನ್ಮತಿ ವಿದ್ಯಾರ್ಥಿನಿಲಯದ ಹೊಸ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಮೃತ ಹಸ್ತದಿಂದ ದಿನಾಂಕ 27 ಡಿಸೆಂಬರ್ 2021ರ ಸೋಮವಾರದಂದು 9 ಗಂಟೆಗೆ  ಇದ್ದ ಮುಹೂರ್ತದಲ್ಲಿ ಸಕಲ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಿದರು. ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಅಲ್ಲಿನ ಸಮಸ್ತ ದಿಗಂಬರ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಶ್ರೀ ಹೊಂಬುಜ ಪದ್ಮಾವತಿ ಎಜ್ಯುಕೇಶನಲ್ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರದಲ್ಲಿ ಶ್ರೀಗಳು ಎಲ್ಲಾ ಶ್ರಾವಕ ಶ್ರಾವಕಿಯರಿಗೆ ಆಶೀರ್ವಚನ ನೀಡಿ ಅಭಿನಂದಿಸಿದರು.

ವೀಕ್ಷಕರೆ ನಿಮಗಿಲ್ಲಿದೆ ವಿಶೇಷ ಸುದ್ದಿ.

ನಮ್ಮ ಕರ್ನಾಟಕದ ಜೈನ್ ಅಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಶ್ರೀಯುತ ರಾಜೇಂದ್ರ ಕುಮಾರ್ ರವರು ಆಯ್ಕೆಯಾಗಿದ್ದಾರೆ.

ಕರ್ನಾಟಕದ ಸಮಸ್ತ ಜೈನ ಸಮುದಾಯದ ಸಂಸ್ಥೆಯಾದ ಕರ್ನಾಟಕ ಜೈನ್ ಅಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಶ್ರೀಯುತ ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆಯ ಪ್ರಮಾಣ ವಚನವನ್ನು ಕರ್ನಾಟಕ ಜೈನ್ ಅಸೋಸಿಯೇಶನ್ ನ ಪದಾಧಿಕಾರಿಗಳು ಸದಸ್ಯರ ಸಮುಖದಲ್ಲಿ ಶ್ರೀಯುತ  ಶ್ರೀಯುತ ರಾಜೇಂದ್ರ ಕುಮಾರ್ ರವರು ಸ್ವೀಕರಿಸಿದರು.

ಹುಬ್ಬಳ್ಳಿಯಲ್ಲಿ ಪರಮ ಪೂಜ್ಯ ಆಚಾರ್ಯ ಶ್ರೀ ಪ್ರಮಾಣ ಸಾಗರ ಮುನಿ ಮಹಾರಾಜರ ಪರಿಕಲ್ಪನೆಯಂತೆ ಸಮಾಜದ ಶ್ರಾವಕ ಶ್ರಾವಕಿಯರಿಗೆ ಭಕ್ತಾಂಬರದ ಲೇಖನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪರಮ ಪೂಜ್ಯ ಆಚಾರ್ಯ ಶ್ರೀ ಪ್ರಮಾಣ ಸಾಗರ ಮುನಿ ಮಹಾರಾಜರ ಪರಿಕಲ್ಪನೆಯಂತೆ ಆಯೋಜಿತ ಅಂತರಾಷ್ಟ್ರೀಯ ಭಕ್ತಾಂಬರ ಹಸ್ತ ಲಿಪಿಯ ಅಭಿಯಾನದ ಭಾಗವಾಗಿ ಕರ್ನಾಟಕದ ಹೆಸರು ಅದರಲ್ಲಿ ಸೇರ್ಪಡೆಯಾಗಲಿ ಎಂಬ ಭಾವದಿಂದ ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಸಮಾಜದ ಶ್ರಾವಕ ಶ್ರಾವಕಿಯರಿಗೆ ಭಕ್ತಾಂಬರ ಲೇಖನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಅನೇಕ ಶ್ರಾವಕ ಶ್ರಾವಕಿಯರು ನಿಗದಿತ ವಸ್ತ್ರ ಪಟಗಳಲ್ಲಿ ಭಕ್ತಿಯಿಂದ ಭಕ್ತಾಂಬರ ಬರೆದು ತಲುಪಿಸಿದ್ದಾರೆ. ಈ ಮದ್ಯೆ ಹಿರಿಯ ಶ್ರಾವಕಿ ಸರೋಜ ಹೊತಪೇಟೆಯವರ ಅಪೇಕ್ಷೆಯಂತೆ ಭಕ್ತಾಂಬರ ಬರೆಯುವ ಸ್ಪರ್ಧೆಯನ್ನು ಭಕ್ತಾಂಬರದ ನಾಯಕ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಯೋಜಿಸಲಾಯಿತು. ಡಿಸೆಂಬರ್ 26 ರಂದು ನಡೆದ ಸ್ಪರ್ಧೆಯಲ್ಲಿ 15 ಜನರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಶ್ರದ್ದೆ ಭಕ್ತಿ ಸಂತಸಗಳೊಂದಿಗೆ ಭಕ್ತಾಂಬರ ಬರೆದರು. ಬೇಗ ಬರೆಯುವ ಮೂವರಿಗೆ ಬಹುಮಾನ ಗೋಷಿಸಲಾಯಿತು. ಅದರಂತೆ ಎಲ್ಲರಿಗಿಂತ ಮೊದಲು ಬರೆದ ನಯನ ತಾಳಿಕೋಟೆಯವರು ಮೊದಲ ಬಹುಮಾನಕ್ಕೆ ಪಾತ್ರರಾದರು. ಶ್ರಧ ಸುಮಂತ ವರ್ಧಮಾನ್ ದ್ವಿತೀಯ, ದಿವ್ಯ ಅಭಿನಂದನ್ ಮುತ್ತಗಿ ತೃತೀಯ ಬಹುಮಾನ ಪಡೆದರು. ನಯನ ತಾಳಿಕೋಟೆಯವರು ಬಹುಮಾನ ಮೊತ್ತವನ್ನು ಪ್ರತಿಮೆ ನಿರ್ಮಾಣಕ್ಕೆ ಹಸ್ತಾಂತರಿಸಿದರು. ಆಚಾರ್ಯ ಶ್ರೀಗಳ ಆಶೀರ್ವಾದ ಮತ್ತು ಅನುಮತಿಯೊಂದಿಗೆ ಶಾಮತಿನಾಥ ಹೊತಪೇಟೆಯವರು ಅಜಿತ್ ಕಾಲಘಟ್ಟಗಿಯವರ ಸಹಯೋಗದೊಂದಿಗೆ ಅಯೋಜಿಸಿದ ಕಾರ್ಯಕ್ರಮದಲ್ಲಿ ವಿಮಲ್ ತಾಳಿಕೋಟೆಯವರು ನಗದು ಬಹುಮಾನಗಳ ಕೊಡುಗೆ ನೀಡಿದರು. ಸರೋಜ್ ಹೊತಪೇಟೆಯವರು ಪುಸ್ತಕ ಕ್ಯಾಲೆಂಡರ್ ಹಾಗೂ ಉಪಹಾರ ಸೇವೆಯನ್ನು ನೀಡಿದರು. ಧರಣೇಂದ್ರ ಹಿಜಾರಿಯವರು ದರ್ಶನದಬ್ಬಗಳ ಕೊಡುಗಡ ನೀಡಿದರು. ಭರತ್ ಮುತ್ತಗಿಯವರು ಡ್ರೈ ಫ್ರೂಟ್ಸ್ ಗಳನ್ನು ಸ್ಪರ್ಧಾರ್ತಿಗಳಿಗೆ ವಿತರಿಸಿದರು. ನಗರದ ವಿವಿದ ಬಡಾವಣೆಗಳಿಂದ ಸ್ಪರ್ಧಾರ್ತಿಗಳು ಭಾಗವಹಿಸಿದ್ದರು.