ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಕ್ಷೇತ್ರ ಪರಿಚಯ.
ಧರ್ಮಾತ್ಮರುಗಳು ತಮ್ಮ ಗ್ರಾಮದ ಬಸದಿಯ ಅಭಿವೃದ್ದಿಯಂತಹ ಸತ್ಕಾರ್ಯದಲ್ಲಿ ಪಣತೊಟ್ಟು ನಿಂತು ಧರ್ಮಶಕ್ತಿ ಮೆರೆದ ಬಂಟ್ವಾಳ ತಾಲ್ಲೂಕಿನ ಸಾಮಂತ ಬಯಲು ಎಂಬ ಗ್ರಾಮದಲ್ಲಿನ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಈ ಗ್ರಾಮದಲ್ಲಿರುವ ಬಸದಿಗೆ ಸೇರಿರುವುದು ಕೇವಲ 10 ಕುಟುಂಬಗಳಷ್ಟೇ. ಆದರೆ ಅವರು ಕೈಗೊಂಡ ಕಾರ್ಯ ಮಾತ್ರ ನೆನಪಿಸಿಕೊಳ್ಳುವಂತಾಗಿದೆ. ಬಸದಿಗಳು ಸಮವಸರಣದ ಪ್ರತೀಕ ನಮ್ಮ ಆತ್ಮ ಕಲ್ಯಾಣದ ಧರ್ಮ ಕಾರ್ಯಗಳಿಗೆ ಏಕೈಕ ತಾಣವೆಂದರೆ ಬಸದಿ. ಇದರ ಮಹತ್ವವನ್ನು ಅರಿತು ನಮ್ಮ ಹಿರಿಯರು ಪ್ರತಿಯೊಂದು ಊರಿನಲ್ಲೂ ಒಂದಾದರೂ ಬಸದಿಯನ್ನು ನಿರ್ಮಿಸಿ ಪೂನ್ಯಕಾರ್ಯವನ್ನು ಮಾಡಿದ್ದಾರೆ. ಅವರು ನಮಗಾಗಿ ನಿರ್ಮಿಸಿ ಕೊಟ್ಟಿರುವ ಬಸದಿಗಳನ್ನು ನಾವು ಕಾಲಕಾಲಕ್ಕೆ ಜೀರ್ಣೋದ್ಧಾರ ಕೈಗೊಂಡು ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ಚೆನ್ನಾಗಿ ಇಲ್ಲಿನ ಮನೆತನದವರು ಉದಾರ ಮನಸ್ಸಿನ ದಾನಿಗಳಾದಂತಹ ಪುಣ್ಯಾತ್ಮರುಗಳ ಸಹಕಾರದೊಂದಿಗೆ ಶಿಥಿಲಾವಸ್ಥೆಗೆ ತಲುಪಿದ ಬಸದಿಯನ್ನು ಜೀರ್ಣೋದ್ದಾರಗೊಳಿಸಿದ್ದಾರೆ. ಅದುವೇ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಪಾಣಂತಬೈಲು .
ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ತೀರ್ಥಂಕರರು ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರು ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಡುತ್ತಿರುವ ಪಾಣಂತಬೈಲು ಬಸದಿಯನ್ನು 1884ರಲ್ಲಿ ನಿರ್ಮಾಣಗೊಳಿಸಿದರೆಂದು ತಿಳಿಯಲಾಗಿದೆ. ಸುಮಾರು 10 ಮನೆಯ ಜೈನ ಮನೆಗಳಿಗೆ ಸಂಬಂದಿಸಿದ ಈ ಪಾಣಂತಬೈಲು ಬಸದಿಯು ಕಳೆದ ಒಂದು ಶತಮಾನದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿಸುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಎಲ್ಲವೂ ನಿಂತು ಹೋಗಿದ್ದವು. ಜೊತೆಗೆ ತುಂಬಾ ಹಳೆಯದಾಗಿದ್ದ ಬಸದಿಯನ್ನು ಹೊಸದಾಗಿ ಜೀರ್ಣೋದ್ದಾರ ಮಾಡಲಾಗಿ ಅದಕ್ಕೆಂದೆ ನೋಂದಾಯಿಸಲಾಗಿದ್ದ ಆಡಳಿತ ಮಂಡಳಿಯೊಂದಿಗೆ ಸಮಾಜದ ಗಣ್ಯರನ್ನೊಳಗೊಂಡ ಜೀರ್ಣೋದ್ದಾರ ಸಮಿತಿಯನ್ನು ರಚನೆ ಮಾಡಿ ಜೀರ್ಣೋದ್ದಾರದ ಪವಿತ್ರ ಕಾರ್ಯವನ್ನು ನೆರವೇರಿಸಲಾಗಿದೆ. ಪರಮಪೂಜ್ಯ 108 ಅಮೋಘಕೀರ್ತಿ ಮಹಾಸ್ವಾಮೀಜಿಗಳು ಮತ್ತು 108 ಅಮರಕೀರ್ತಿ ಮುನಿಮಹಾರಾಜರ ಅನುಗ್ರಹ ಆಶೀರ್ವಾದ ಹಾಗೂ ಪಾವನ ಸಾನಿಧ್ಯದಲ್ಲಿ ಕಾರ್ಕಳ ಜೈನ ಮಠದ ಸಿಂಹಾಸನದೀಶರಾದ ಸ್ವಸ್ತಿ ಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮಿಜಿಗಳವರು ಇವರ ದಿವ್ಯ ಉಪಸ್ಥಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಪದಾದಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರು ಹಾಗೂ ಶ್ರೀಮತಿ ಪದ್ಮಾವತಿ ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಸಹಕಾರದೊಂದಿಗೆ ಜಿನ ಚೈತ್ಯಾಲಯವನ್ನು ಸುಂದರವಾಗಿ ನಿರ್ಮಾಣಗೊಳಿಸಿ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಹಾಗೂ ನೂತನ ಬಿಂಬ ಪ್ರತಿಷ್ಠಾಪನಾ ಜಿನಾ ಚೈತ್ಯಾಲಯದ ಪಂಚ ಕಲ್ಯಾಣದ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.














