ನಿಡಗಲ್ ಬಸದಿ ವಾರ್ಷಿಕ ಪೂಜಾ ಮಹೋತ್ಸವ / ಅಮಂತ್ರನಾ / ಜ್ವಾಲಾಮಲನ್ಯೂಸ್ / 2021

ವೀಕ್ಷಕರೆಲ್ಲರಿಗೂ ಸಹ ನೂತನ ವರ್ಷದ ಹಾರ್ದಿಕ ಶುಭಾಶಯಗಳು:

ಇಂದಿನ ವಿಶೇಷತೆ ಏನೆಂದರೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಿಡಗಲ್ಲು ಕ್ಷೇತ್ರ ಪ್ರಕೃತಿ ದತ್ತ ಸುಂದರ ಕ್ಷೇತ್ರದ ವೀಕ್ಷಣೆಯನ್ನು ನೀವು ನೋಡಿದ್ದೀರಾ ಇಂದು ವಾರ್ಷಿಕ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ  ಒಮ್ಮೆ  ನೋಡೋಣ ಬನ್ನಿ.

ದಿನಾಂಕ 9/1/2022 ರಂದು ನಡೆಯಲಿರುವ ವಾರ್ಷಿಕಪೂಜೆಯಲ್ಲಿ  ಶ್ರೀ ದಿಗಂಬರ ಜೈನ ಸಂಸ್ಥಾನ ಮಠ ನರಸಿಂಹರಾಜಪುರ ಇಲ್ಲಿನ ಶ್ರೀಗಳಾದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕರು ಪಾವನ ಸಾನಿಧ್ಯ ವಹಿಸಲಿದ್ದಾರೆ. ಭಗವಾನ್ 1008 ಕಷ್ಟಹರ ಪಾರ್ಶ್ವನಾಥ ಸ್ವಾಮಿ ಭಗವಂತನಿಗೆ 108 ಕಳಸಗಳ  ಮಹಾಭಿಷೇಕ ಹಾಗೂ ಕ್ಷೇತ್ರಪಾಲ ಬ್ರಹ್ಮದೇವನಿಗೆ  ಪೂಜೆ ಮಾತೆ ಪದ್ಮಾವತಿ ದೇವಿಗೆ ಶೋಡಷೋಪಚಾರ  ಪೂಜೆಯನ್ನು ನೆರವೇರಿಸಲಾಗುತ್ತದೆ.

ಭಗವಾನ್ 1008 ಕಷ್ಟಹರ ಪಾರ್ಶ್ವನಾಥ ಸ್ವಾಮಿ ಜೀರ್ಣೋದ್ಧಾರ ಕಮಿಟಿಯಿಂದ ಹಾರ್ದಿಕ ಸ್ವಾಗತವನ್ನು ಬಯಸಲಾಗುತ್ತಿದೆ. ಒಮ್ಮೆ ಭಾಗವಹಿಸಿ ಪುಣ್ಯ ಭಾಗಿಗಳಾಗೋಣ ಬನ್ನಿ.