ಶ್ರೀ ಎಸ್. ಜಿತೇಂದ್ರ ಕುಮಾರ್

ಶ್ರೀ ಎಸ್. ಜಿತೇಂದ್ರ ಕುಮಾರ್ ಅಭಿನಂದನ ಸಮಿತಿ ಬೆಂಗಳೂರು, ಶ್ರೀ ದಿಗಂಬರ ಸಮಾಜ ಹಾಗೂ ಪದ್ಮ ಶ್ರೀ ಜೈನ ಮಹಿಳಾ ಸಮಾಜ ಮೈಸೂರು ಹಾಗೂ ಸಕಲ ಜೈನ ಸಮಾಜ ಮೈಸೂರುವತಿಯಿಂದ ಶ್ರೀ ಎಸ್. ಜಿತೇಂದ್ರ ಕುಮಾರ್ ರವರಿಗೆ ಅಭಿನಂದನ ಸಮಾರಂಭ ನಡೆಯುತ್ತಿರುವಂತಹ ಈ ಸುಸಂದರ್ಭದಲ್ಲಿ ಜಿತೇಂದ್ರ ಕುಮಾರ್ ಅವರ  ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೊಣ.

ಆಸ್ಥಾನ ಮಹಾ ವಿದ್ವಾನ್ ಪಂಡಿತ ರತ್ನ ಶ್ರೀ ಎ. ಶಾಂತಿ ರಾಜಾ ಶಾಸ್ತ್ರಿ ಹಾಗೂ ಶ್ರೀಮತಿ ಎಸ್. ಸುಭದ್ರ ದೇವಿ ದಂಪತಿಗಳಿಗೆ  ನಾಲ್ಕನೆ ಮಗನಾಗಿ ಮೈಸೂರು ನಗರದಲ್ಲಿ 1936ರ ಏಪ್ರಿಲ್ 26ರಂದು ಜನಿಸಿದ ಇವರು 1961 ರಲ್ಲಿ ಪದ್ಮರೊಡನೆ ವಿವಾಹ ಜೀವನಕ್ಕೆ ಕಾಲಿಟ್ಟರು. ಶ್ರೀಮತಿ ಜಯಲಕ್ಷ್ಮಿ, ಸಂತಲಕ್ಷ್ಮಿ, ಎಸ್. ನಾಗಕುಮಾರ್, ಪ್ರಸನ್ನ ಕುಮಾರ್, ಎಸ್. ಚಂದ್ರಕಲಾದೇವಿ, ಗುಣವರ್ಮ, ಪ್ರೇಮಲತಾದೇವಿ ಇವರು ಸಹೋದರ ಸಹೋದರಿಯರು.

ಇದು ಅವರು ಬೆಳೆದ ಮೈಸೂರಿನ ಮನೆ ಜಿತೇಂದ್ರ ಕುಮಾರ್ ರವರು ಇಂಜಿನಿಯರ್ ಶಿಕ್ಷಣ ಪೂರೈಸಿದನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿ 33 ವರ್ಷ ಸೇವೆ ಸಲ್ಲಿಸಿ ಅಂತಿಮವಾಗಿ ಚೀಫ್ ಡ್ರಿಲ್ಲಿಂಗ್ ಇಂಜಿನಿಯರ್ ಸೇವೆ ಸಲ್ಲಿಸಿ 1991ರಲ್ಲಿ ಸ್ವಯಂನಿವೃತ್ತಿ ಹೊಂದಿದರು. ನಿವೃತಿಯ ನಂತರ ಸಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಂಡಿತ ರತ್ನ ಎ. ಶಾಂತಿ ರಾಜಾ ಶಾಸ್ತ್ರಿ ಟ್ರಸ್ಟ್ ಸ್ಥಾಪಿಸಲು ಕಾರಣ ಕರ್ತರಾಗಿ ಅದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾಪುರಸ್ಕಾರ ನೀಡುವ ಮೂಲಕ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಶಾಂತಿ ರಾಜಾ ಶಾಸ್ತ್ರಿಗಳ ಕನ್ನಡದ ಮಹಾಮೇರುಕೃತಿ ಮಹಾಪುರಾಣ ಸೇರಿದಂತೆ   ಜೈನ ಧಾರ್ಮಿಕ ಗ್ರಂಥಗಳ ಪ್ರಕಾಶನ ಮಾಡುತ್ತಾ ಬಂದಿದ್ದಾರೆ.