ಜ್ಞಾನದೀಪಿಕೆಗಳು- 23 / 18-12-2021 / jwalamalanews / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಉಪಸಗ್ಗ ಮತ್ತು ಜೈನಪರಿಭಾಷಾ ರತ್ನಕೋಶ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಡಾಟ್ ನ್ಯೂಸ್ ವತಿಯಿಂದ ಜ್ಞಾನ ದೀಪಿಕೆಗಳು ಎನ್ನುವ ಸರಣಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದೆವೆ. ಈ ದಿನ ಮತ್ತೇರಡು ಪುಸ್ತಕಗಳನ್ನು ಪರಿಚಯ ಮಾಡಿಕೊಡುತ್ತಿದೇವೆ. ಇಂದಿನ ಮಹತ್ವದ ಕೃತಿಗಳು ಯಾವುದು ಎಂದು ಹೇಳಿದರೆ ಒಂದು ಜೈನಪರಿಭಾಷಾ ರತ್ನಕೋಶ ಎನ್ನುವಂತಹ ಪುಸ್ತಕ. ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವಂತಹ ಜೈನಪರಿಭಾಷಾ ರತ್ನಕೋಶ ಎನ್ನುವಂತಹ ಕೃತಿ, ಈ  ಕೃತಿಯ ಸಂಪಾದಕರು ತ ಸು ಶಾಮರಾಯರು ಮತ್ತು ಪಂಡಿತ ನಾಗರಾಜಯ್ಯನವರು. ಮತ್ತೊಂದು ಕೃತಿ ಉಪಸಗ್ಗ ಎನ್ನುವಂತಹ ಕೃತಿ, ಈ ಕೃತಿಯನ್ನು ಬರೆದಿರುವಂತವರು ರವಿಕುಮಾರ್ ಕೆ ನವಿಲುಗುಂದ ಎನ್ನುವವರು ಬರೆದಿರುವಂತಹ ಕೃತಿ. ಈ ಎರಡು ಕೃತಿಗಳನ್ನು ನಾವು ಪರಿಚಯಿಸುತ್ತಿದೇನೆ.

ಜೈನಪರಿಭಾಷಾ ರತ್ನಕೋಶ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಒಂದು ಮಹತ್ವದ ಕೃತಿಯಾಗಿ  ಪ್ರಕಟಿಸಿತು, ಈ ಕೃತಿಯನ್ನು ಪ್ರಕಟ ಮಾಡಿದಂತಹ ಕಾಲ 1981, ಆ ಸಂದರ್ಭದಲ್ಲಿ ಈ ಕೃತಿಯ ಬೆಲೆ 13.50 ರೂಪಾಯಿಗಳು. ಜೈನಪರಿಭಾಷಾ ಶಬ್ಧಗಳನ್ನು ಕುರಿತು ವಿವರಣೆ ನೀಡುವ ಜೈನೇಂದ್ರ ಸಿದ್ಧಾಂತ ಕೋಶ, ಬೃಹತ್ ಜೈನ ಶಬ್ಧರ್ಣವ ಮುಂತಾದ ಸಂಸ್ಕೃತ ಮತ್ತು ಹಿಂದಿ ಕೋಶಗಳು ಈ ಕೃತಿಯಲ್ಲಿ ಇವೆ. ತ ಸು ಶಾಮರಾಯರು ಮತ್ತು ಪಂಡಿತ ನಾಗರಾಜಯ್ಯ, ಈ  ಇಬ್ಬರು ಮಹಾನಿಯರ ಪ್ರಯತ್ನದಿಂದ ಈ ಒಂದು ಕೃತಿ ಕನ್ನಡದ ಬೃಹತ್ ಕೋಶದಲ್ಲಿ ಕೆಲವು ಜೈನಪರಿಭಾಷಾ ಶಬ್ಧಗಳ ಸೇರ್ಪಡೆಯಾಗಿರುವುದನ್ನ ಗಮನಿಸಿ ಅವುಗಳನ್ನು ಒಂದು ಶಬ್ಧ ಕೋಶವಾಗಿ ತರಲಾಗಿದೆ. ಈ ಕೃತಿಯಲ್ಲಿ ಪ ನಾಗರಾಜಯ್ಯನವರು ಮುನ್ನುಡಿಯಲ್ಲಿ ಬರೆದಿದ್ದಾರೆ.

ಜೈನಪರಿಭಾಷಾ ಕೋಶ ಕೃತಿಯಲ್ಲಿ ಆಗ್ನಿ ಶೌಚ, ಆಘಾತಿಕರ್ಮ, ಆತ್ಮ ವಿನಯ, ಉತ್ತರ ಪ್ರಕೃತಿ, ಸಪ್ತದ್ವೀಪಗಳು, ಜಂಬು ವೃಕ್ಷ, ದಾನ ಮತ್ತು ದಾನ ಫಲ, ಜೈನರ ಕಲ್ಪನೆಯಲ್ಲಿ ಪರಮಾತ್ಮ ಎಂದರೆನ್ನು ಇನ್ನೂ ಮುಂತಾದವುಗಳ ಬಗ್ಗೆ ತಿಳಿದು ಕೊಳ್ಳುವುದಕ್ಕೆ ಈ ಕೃತಿಯಲ್ಲಿ ತ ಸು ಶಾಮರಾಯರು ಮತ್ತು ಪಂಡಿತ ನಾಗರಾಜಯ್ಯ ನವರು ಈ ಕೃತಿಯಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.

ಇನ್ನೊಂದು ಕೃತಿ ಉಪಸಗ್ಗ ಎನ್ನುವ ಕೃತಿ, ರವಿಕುಮಾರ್ ಕೆ ನವಿಲುಗುಂದ ಎನ್ನುವವರು ಸಂಶೋಧನ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ಆ ಪ್ರಕಟಿತ ಜೈನ ಶಾಸನಗಳನ್ನ ಪ್ರಕಟಿಸಿದ್ದಾರೆ. ಈ ಕೃತಿ 2016ರಲ್ಲಿ ಪ್ರಕಟವಾಗಿದೆ, ಈ ಕೃತಿಯ ಬೆಲೆ 150/- ರೂಪಾಯಿಗಳು. ಭಗವಾನ್ ಶ್ರೀ 1008 ನೇಮಿನಾಥ ದಿಗಂಬರ ಜಿನ ಮಂದಿರ ಕಮಿಟಿ  ಹಾವೇರಿಯವರು ಈ ಕೃತಿಯನ್ನು ಪ್ರಕಟಮಾಡಿದರು. ಈ ಕೃತಿಗೆ ಹಂ.ಪಾ.ನ ಅವರು ಮುನ್ನುಡಿಯನ್ನು ಬರೆದಿದ್ದಾರೆ. 41 ಶಾಸನಗಳು ಇರುವಂತಹ ಈ ಪುಸ್ತಕ ರವಿಕುಮಾರ್ ಕೆ ನವಿಲುಗುಂದ ಅವರು ಇಟ್ಟಿರುವ ಉಪಸಗ್ಗ ಎಂಬ ಹೆಸರು ತುಂಬ ಅಪರೂಪವಾದದ್ದು, ಇದು ಜೈನ ಧರ್ಮದ ಹಿನ್ನೆಲೆ ಇರುವಂತಹ ಪಾರಿಭಾಷಿಕ ಶಬ್ಧ ಎಂದು ಹಂ.ಪಾ.ನ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಕ್ರಿ ಶ 993ರಲ್ಲಿ ಬರೆಯಲಾದ ಕೋಗಳಿಯ ಶಾಸನದಲ್ಲಿ ಉಪಸಗ್ಗ ಎಂಬ ಪ್ರಯೋಗವಾಗಿದೆ ಎನ್ನುವಂತಹದನ್ನ ಇಲ್ಲಿ ಹೇಳಲಾಗಿದೆ. ಇಂತಹ ಅದ್ಬುತವಾದ ಕೃತಿಯಲ್ಲಿ ರವಿಕುಮಾರ್ ಕೆ ನವಿಲುಗುಂದ ರವರು ಹಾವೇರಿಯಲ್ಲಿ ದೊರೆತಿರುವಂತಹ 41 ಶಾಸನಗಳನ್ನು ಒಟ್ಟುಗೂಡಿಸಿ ಬರೆದಿದ್ದಾರೆ. ಅ ಪ್ರಕಟಿತವಾದಂತಹ ಶಾಸನಗಳು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಹೊರ ಬಂದಿವೆ. ರವಿಕುಮಾರ್ ಕೆ ನವಿಲುಗುಂದ ರವರು ನಾಲ್ಕೈದು ವರ್ಷಗಳಿಂದ ಸಂಶೋಧನ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ರಾಜ ರಾಣಿಯರು, ಅನೇಕ ವ್ಯಕ್ತಿಗಳು, ಮನೆತನಗಳು, ವಿದ್ಯಾದರರು, ಕವಿಗಳು, ಶಾಸಕರು ವರ್ಣಿಸಿರುವಂತಹ ಶಾಸನಗಳು ಇವೆ.

ರವಿಕುಮಾರ್ ಕೆ ನವಿಲುಗುಂದ ರವರು ಎಂ ಎ ಸ್ನಾತ್ತಕೋತರ ಪದವಿಯನ್ನು ಮಾಡಿ, ನಂತರದಲ್ಲಿ ಹರಿಕೃಷ್ಣ ಭಟ್ ಬರಣ್ಯ ರವರ ಮಾತುಗಳನ್ನು ಪಾಲಿಸಿ, ಮತ್ತು ತಮ್ಮ ವಿರಾಮದ ಸಮಯಗಳನ್ನ ಗ್ರಂಥಾಲಯದಲ್ಲಿ ಕಳೆಯುತ್ತಿದೆ ಅನಂತರದಲ್ಲಿ ಹಂ ಪಾ ನ ರವರ ಕೃತಿಗಳು ದೊರೆತವು. ನಾನು ಎಂ ಎ ಸ್ನಾತ್ತಕೋತರ ಪದವಿಯನ್ನು ಪಡೆದ ಮೇಲೆ ಪಿ ಹೆಚ್ ಡಿ ಮಾಡಬೇಕು ಅನಿಸಿತು ಹಾಗಾಗಿ ಶಾಸನಗಳ ಬಗ್ಗೆ ಅಧ್ಯಾಯನ ಮಾಡಲು ನಾಡೋಜ ಹಂಪನ ರವರ ಪ್ರೋತ್ಸಹದ ಮೇರೆ ಶಾಸನ ಕ್ಷೇತ್ರದಲ್ಲಿ ಬಹಳ ಸಂತೋಷದಿಂದ ಕೆಲಸ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಹಾವೇರಿಯಲ್ಲಿ ದೊರೆತಂತಹ ಸಣ್ಣ ಸಣ್ಣ ದಾಖಲೆಗಳನ್ನು ಸಂಗ್ರಹಿಸಿ ಪೋಟೋಗ್ರಾಫಿ ಜೊತೆಗೆ ಈ ಕೃತಿಯಲ್ಲಿ ಬರೆದಿದ್ದಾರೆ.

ಯಾರಿಗೆ ಯಾವ ಊರಿನಲ್ಲಿ ಶಾಸನಗಳು ದೊರೆತರೆ ಗೋಕುಲೆ ಸಂಸ್ಥೆಗೆ ತಿಳಿಸಿದರೆ ಅವರು ಆ ಸ್ತಳಕ್ಕೆ ಹೋಗಿ ದಾಖಲು ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಾರೆ.

ಕಲ್ಲಿನಲ್ಲಿ ಇರುವಂತಹ ಶಾಸನಗಳಿರಬಹುದು, ತಾಮ್ರಪಟದಲ್ಲಿ ಇರುವಂತಹ ಶಾಸನಗಳಿರಬಹುದು, ಅಂತಹ ಶಾಸನಗಳನ್ನ ಉಳಿಸಿಕೊಳ್ಳುವಂತಹ ಕೆಲಸಗಳನ್ನ ಜೈನರು ಮಾಡಬೇಕು.

ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ನಿಮ್ಮ ಮುಂದೆ ಇಟ್ಟಿದೇವೆ, ಮುಂದಿನ ವಾರ ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.

ನಮಸ್ಕಾರ

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್