ಕ್ಷೇತ್ರ ಪರಿಚಯ- 34/ ಅಕ್ಕಿ ರಾಮಾಪುರ, ಕುರುಡಿ/ ಕೊರಟಗೆರೆ ತ.ಕ. / ತುಮಕೂರು ಜಿಲ್ಲೆ.

ಇಂದು ಅಕ್ಕಿ ರಾಮಪುರ ಹಾಗೂ ಕುರುಡಿ ಕ್ಷೇತ್ರ ಪರಿಚಯ ಪ್ರಸ್ತುತಪಡಿಸಲಾಗಿದೆ ನೀವು ನೋಡಿ ನಿಮ್ಮವರಿಗೂ ನೋಡಲು ತಿಳಿಸಿ  800 ಶತಮಾನದ  ಹಿಂದಿನ ಅಕ್ಕಿ ರಾಮಪುರದ ಬಸದಿ  ಇಲ್ಲಿನ ಮೂಲ ತೀರ್ಥಂಕರರು  ಶ್ರೀ ಅನಂತನಾಥ ಭಗವಂತರು  ಶ್ರೀ ಕ್ಷೇತ್ರ ಹೊಂಬುಜದ ಭಟ್ಟಾರಕರಾದ ದೇವೇಂದ್ರ ಕೀರ್ತಿ ನೇತೃತ್ವದಲ್ಲಿ ಜೀರ್ಣೋದ್ದಾರ  ಕಾರ್ಯಗಳು ಜರುಗಿದ್ದು ಇಂತಹ ಪ್ರಾಚೀನ ಕ್ಷೇತ್ರಗಳ ಅಭಿವೃದ್ದಿ ಕಾರ್ಯ ಇನ್ನೂ ನಡೆಯಬೇಕಿದೆ.

ಇಲ್ಲಿನ ವಿಶೇಷತೆ ಎಂದರೆ ಶ್ರೀ ಕ್ಷೇತ್ರ ಕಂಬದಹಳ್ಳಿಯ ಮಾದರಿಯಲ್ಲೇ  ಕಂಬದ ಮೇಲೆ ಬ್ರಹ್ಮದೇವರು ವಿರಾಜಮಾನರಾಗಿದ್ದು ಪೂಜಾರಾಧನೆಗಳು ನಡೆಯುತ್ತಾ ಬಂದಿವೆ. ಬಸದಿಯ ಇತಿಹಾಸ ಹೇಳುವ ಒಂದು ಶಿಲಾಲೇಖನವನ್ನು ಇಲ್ಲಿ ಕಾಣಬಹುದು. ಕುರುಡಿ ಪ್ರಾಚೀನ  ತ್ರಿಕೂಟ ಜಿನಮಂದಿರ  1480 ಕ್ಕೂ ಹಿಂದೆ ನಿರ್ಮಾಣಗೊಂಡಂತಹ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದೆಂದು  ಅಲ್ಲಿನಕಂಬದ ಶಾಸನದಲ್ಲಿ  ಹಳೆಗನ್ನಡದಲ್ಲಿ ಉಲ್ಲೇಖಿತವಾಗಿದೆ.  1913 ರಲ್ಲಿ ಗೋಪುರ ಸ್ಥಾಪನೆ ಮಾಡಲಾಗಿದ್ದು ಮೈಸೂರಿನ ವರ್ಧಮಾನಯ್ಯ ಕುಟುಂಬದವರು ಇದಕ್ಕೆ ಸಹಕಾರ ನೀಡಿದ್ದಾರೆ. 2007 ರಲ್ಲಿ ಮಾನಸ್ಥಂಭ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ದಾರ  ಕಾರ್ಯ ನಡೆದಿದೆ ಎಂದು ಅಲ್ಲಿ ಪುರೋಹಿತರಾದ ಎಸ್. ಎನ್ ಜಿನಚಂದ್ರಪ್ಪನವರು ತಿಳಿಸಿದ್ದಾರೆ.

ಉತ್ತರಾಭಿಮುಖವಾಗಿ  ಇರುವ ಮೂಲ ದೇವರಾದ ಶ್ರೀ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬವು ನೋಡಲು ತುಂಬಾ ಸೊಗಸಾಗಿದೆ. ಪೂರ್ವಾಭಿಮುಖವಾಗಿ  ಶ್ರೀ ಶೀಥಲನಾಥ ಮತ್ತು ಸುಕಾಶ್ವನಾಥರು ಬ್ರಹ್ಮೇಶ್ಯ ಮೂರ್ತಿ ಹಾಗೂ ಪಶ್ಚಿಮಾಭಿಮುಖವಾಗಿ  ಅನಂತನಾಥ ಸ್ವಾಮಿ ಮತ್ತು ಪಾರ್ಶ್ವನಾಥ ಸ್ವಾಮಿ ಇಲ್ಲಿ ವಿರಾಜಮಾನರಾಗಿದ್ದು ಶ್ರೀ ಕುದುರೆ ಬ್ರಹ್ಮದೇವರು ಪದ್ಮಾವತಿ ಅಮ್ಮನವರು ಜ್ವಾಲಾಮಾಲಿನಿ ದೇವಿ, ಸರಸ್ವತಿ ಮಾತೆ ಹಾಗು ಸಹಸ್ರಕೂಟ ಕಂಚಿನ ಹಾಗೂ ಪಂಚಲೋಹದ ಮೂರ್ತಿಗಳು ಶುಭ್ರತೆಯಿಂದ ಮಿಂಚುತ್ತಿದ್ದವು.

ಬಸದಿಯ ವಿಶಾಲವಾದ ಪ್ರಾಂಗಣದ ಜೊತೆಗೆ ಪ್ರತ್ಯೇಕ  ಯಾತ್ರಿ ನಿವಾಸ ಹಾಗೂ ಭೋಜನ ಶಾಲೆಯ ವ್ಯವಸ್ಥೆ ಚಿಕ್ಕದಾಗಿ ಮಾಡಲಾಗಿದೆ. ಮತ್ತೆ ಭೇಟಿಯಾಗೋಣ ಜೈ ಜಿನೇಂದ್ರ