ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಶ್ರಾವಕಾಚಾರ ಮತ್ತು ಅನಂತನಾಥ ಪುರಾಣಂ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಮತ್ತೊಂದು ಸರಣಿ ಕಾರ್ಯಕ್ರಮಕ್ಕೆ ಆತ್ಮಿಯವಾದಂತಹ ಸ್ವಾಗತ. ಜೈನ ಧರ್ಮದಲ್ಲಿ ಜ್ಞಾನ ದೀಪಿಕೆಗಳು ಎನ್ನುವ ಈ ಕಾರ್ಯಕ್ರಮದಲ್ಲಿ ಇಬ್ಬರು ಕೃತಿಕಾರರನ್ನು ಮತ್ತು ಎರಡು ಗ್ರಂಥಗಳನ್ನ ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಸಾರಮಾಡುತ್ತ ಬಂದಿದ್ದೇವೆ. ಈ ದಿನ ನಾವು ತಿಳಿಸಿಕೊಡುತ್ತಾ ಇರುವಂತಹ ಕೃತಿ ಪ ನಾಗರಾಜಯ್ಯ ನವರು ಸಂಪಾದನೆ ಮಾಡಿರುವಂತಹ ಜನ್ನ ಮಹಾತ್ವದ ಕೃತಿ ಅನಂತನಾಥ ಪುರಾಣಂ ಎನ್ನುವಂತಹ ಕಾವ್ಯ ಸಂಗ್ರಹ. ಜನ್ನ 11 ಮತ್ತು 12 ನೇ ಶತಮಾನದಲ್ಲಿ ಇದ್ದಂತಹ ಮಹಾನ್ ಕವಿ, ಇವರು ಶಾಸನಗಳು, ಕಾವ್ಯಗಳು ಮತ್ತು ಕೃತಿಗಳನ್ನು ಬರೆದಿದ್ದಾರೆ. 11 ಮತ್ತು 12 ನೇ ಶತಮಾನದಲ್ಲಿ ಇದ್ದಂತಹ ಜನ್ನ, ಪಂಪ, ಪೊನ್ನ ಮತ್ತು ರನ್ನ ರನ್ನು ಅನುಸರಿಸಿ ಎರಡು ಧಾರ್ಮಿಕ ಕೃತಿಗಳನ್ನು ಬರೆಯುತ್ತಾರೆ. ಇವರ ಎರಡು ಕೃತಿಗಳು ಅನಂತನಾಥ ಪುರಾಣಂ ಮತ್ತು ಯಶೋದರ ಚರಿತೆ.
ಪ ನಾಗರಾಜಯ್ಯ ನವರ ಬಗ್ಗೆ ಹೇಳುವುದಾದರೆ, ಇವರು ಜೈನ ಸಾಹಿತ್ಯದ ಅನೇಕ ಮಹತ್ವದ ಕೃತಿಗಳನ್ನ, ಕಾವ್ಯಗಳನ್ನ ಸಂಗ್ರಹ ಮಾಡಿರುವಂತಹ ಮಹಾನ್ ಲೇಖಕರಾಗಿದ್ದವರು. ಪಂಡಿತ್ ನಾಗರಾಜಯ್ಯ ಎಂದು ಪರಿಚಯವಾಗಿದಂತವರು, ಪ್ರಾಚೀನ ಮತ್ತು ಹಳೆಗನ್ನಡದ ಕಾವ್ಯಗಳನ್ನ ಸಂಪಾದಿಸಿ ಸಂಗ್ರಹಿಸಿ ಅದನ್ನು ಬೆಳೆಸಿದಂತವರು ಉಳಿಸಿದಂತವರು ಎಂದರೆ ತಪ್ಪಾಗುವುದಿಲ್ಲಾ. ಅವರಿಗೆ ಯಾವುದೇ ರೀತಿಯ ಕೃತಿಗಳನ್ನು ಕೊಟ್ಟರು ಕೂಡ ಆ ಕಾವ್ಯವನ್ನು ಸಂಗ್ರಹ ಮಾಡಿ, ಟಿಪ್ಪಣಿಗಳನ್ನು ಮಾಡಿ ಪ್ರಾಮಾಣಿಕವಾದಂತಹ ಶಬ್ಧಾರ್ಥವನ್ನು ಕೊಟ್ಟು ಅದ್ಬುತವಾಗಿ ಕೆಲಸಮಾಡುತ್ತಿದ್ದರು.
ಅನಂತನಾಥ ಪುರಾಣಂ ಬಹಳ ಮುಖ್ಯವಾಗಿ ಇಂದಿಗೂ ವಿಮರ್ಷಕರ ಗಮನ ಸೆಳೆಯುವುದು ಒಂದು ಜನನ ಕಥಾಸಾರ ಅನಂತನಾಥನ ಕಥೆ, ಇನ್ನೊಂದು ಚಂಡಶಾಸನಕ್ಕೆ ಸಂಬಂಧ ಪಟ್ಟಂತಹ ಕೃತಿಯ ಶೈಲಿಯಿಂದ. ಜನ್ನನ ಶೈಲಿಯನ್ನು ಬಹಳಷ್ಟು ಜನ ಪ್ರಶಂಸಿಸಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಇಂತಹ ಮಹತ್ವದ ಕೃತಿಯಲ್ಲಿ ಜನ್ನ, ಯಶೋದರ ಚರಿತೆಯಲ್ಲಿ ಅಮೃತಮತಿ ಪಾತ್ರವನ್ನು ತಂದಿದ್ದಾರೆ, ಈ ಕೃತಿಯಲ್ಲಿ ಚಂಡಶಾಸನವನ್ನು ತಂದಿದ್ದಾರೆ. ಹಾಗಾಗಿ ಈ ಅನಂತನಾಥ ಪುರಾಣಂ ಎನ್ನುವ ಕೃತಿ ಮಹತ್ವದ ಕೃತಿ.
ಇನ್ನೊಂದು ಡಾ|| ಬಿ ಕೆ ಖಡಬಡಿಯವರು ಬರೆದಿರುವಂತಹ ಶ್ರಾವಕಾಚಾರ(ಜೈನ ಗೃಹಸ್ಥ ಗೃಹಿಣಿಯರ ನೀತಿ ಸಂಹಿತೆ) ಎನ್ನುವಂತಹ ಕೃತಿ. ಡಾ|| ಬಿ ಕೆ ಖಡಬಡಿಯವರು ಜೈನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಿವೃತ್ತ ಸಂಯೋಜಕರಾಗಿದವರು. ಹೀರೆಮಟ್ಟರ ಅತ್ಯಂತಹ ವಿಶ್ವಾಸದ ವಿದ್ಯಾರ್ಥಿಯಾಗಿದ್ದರು. ಅವರು ಪಿ ಹೆಚ್ ಡಿ ಯ ಸಂದರ್ಭದಲ್ಲಿ ವಡ್ಡಾರಾಧನೆಯನ್ನು ಕುರಿತು ಅತ್ಯಂತಹ ಸೂಕ್ಷ್ಮವಾಗಿ ವಿದ್ವತ್ ಕೃತಿಯನ್ನು ಬರೆದರು. ಆ ಕೃತಿ ಬಹಳಷ್ಟು ಜನರ ಗಮನ ಸೆಳೆಯಿತು. ಅವರು ಬರೆದಿರುವಂತಹ ಕೃತಿಗಳು ಗೊಮ್ಮಟೆಶ ಸ್ತುತಿ, ಜೈನ ಹನಿಗಳು, ಜಿನ ಪದಸಾರ, ಆತ್ಮದರ್ಶನ, ವಡ್ಡಾರಾಧನೆಯ ಕಥೆಗಳು ಮತ್ತು ಶ್ರಾವಕಾಚಾರ. 1989 ಸೆಪ್ಟೆಂಬರ್ ನಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಶ್ರಾವಕಾಚಾರ ಕೃತಿಯನ್ನು ಬರೆಯಲು ಆರಂಭಿಸಿದರು. ಈ ಕೃತಿಯನ್ನು ಪ್ರಕಾಶನ ಮಾಡಿದಂತವರು ಅ ನಾ ಚಂದ್ರಕೀರ್ತಿಯವರು ಮೈಸೂರು. ಈ ಕೃತಿ ಮುದ್ರಣವಾಗಿದ್ದು 1997 ರಲ್ಲಿ, ಅವಾಗ ಈ ಕೃತಿಯ ಬೆಲೆ 50 ರೂಪಾಯಿ.
ಶ್ರಾವಕಾಚಾರ ಮತ್ತು ಪ ನಾಗರಾಜಯ್ಯ ನವರು ತಂದಿರುವಂತಹ ಅನಂತನಾಥ ಪುರಾಣಂ, ಈ ಎರಡು ಕೃತಿಗಳು ಮಹತ್ವದ ಕೃತಿಗಳು.
ಶ್ರಾವಕಾಚಾರ ಕೃತಿಯಲ್ಲಿ ಶ್ರಾವಕಾಚಾರಕ್ಕೆ ಸಂಬಂಧ ಪಟ್ಟಂತೆ ಶ್ರಾವಕರು ಬಹಳ ಪ್ರಮುಖ ಎನ್ನುವುದು. ಮುನಿ ಧರ್ಮಕ್ಕೆ ಹೋಗುವದಕ್ಕಿಂತ ಮುಂಚೆ ಶ್ರಾವಕ ನಡೆದುಕೊಳ್ಳಬೇಕಾಗಿರುವಂತಹ ವ್ರತಗಳು ಮೂಲ ಗುಣಗಳು ಯಾವುವು ಎಂಬುವುದರ ಬಗ್ಗೆ ವಿಸ್ತಾರವಾಗಿ ಈ ಕೃತಿಯಲ್ಲಿ ಬರೆಯಲಾಗಿದೆ, ಮತ್ತು ಶ್ರಾವಕಾಚಾರದ ಉಗಮವಾಗಿರುವುದರ ಬಗ್ಗೆ ಈ ಕೃತಿಯಲ್ಲಿ ಹೇಳಲಾಗಿದೆ.
ಶ್ರಾವಕಾಚಾರದ ಮೂಲ ಗುಣಗಳು ವ್ರತಗಳು ಯಾವುವು ಮತ್ತು ಶ್ರಾವಕಾಚಾರದ ಮಹತ್ವದ ಬಗ್ಗೆ ಬಹಳ ವಿಸ್ತಾರವಾಗಿ ಈ ಕೃತಿಯಲ್ಲಿ ಬರೆಯಲಾಗಿದೆ. ಈ ರೀತಿ ಸಂಶೋಧನಾತ್ಮಕ ಕೃತಿಯನ್ನು ಡಾ|| ಬಿ ಕೆ ಖಡಬಡಿಯವರು ಬರೆದಿದ್ದಾರೆ.
ಡಾ|| ಬಿ ಕೆ ಖಡಬಡಿಯವರು ಒಬ್ಬ ಮಹತ್ವದ ಲೇಖಕರು ಕನ್ನಡ ಮತ್ತು ಇಂಗ್ಲೀಷ್ ಕೃತಿಗಳನ್ನು ಬರೆದಿದ್ದಾರೆ. ಅಂತವರಲ್ಲಿ ಡಾ|| ಬಿ ಕೆ ಖಡಬಡಿಯವರು ಕೂಡ ಒಬ್ಬರು.
ಈ ಸಂದರ್ಭದಲ್ಲಿ ಅ ನ ಚಂದ್ರ ಕೀರ್ತಿಯವರನ್ನು ನೆನಪಿಸಿಕೊಳ್ಳ ಬೇಕು. ಎಂತಹದೆ ಮಹತ್ವದ ಕೃತಿಗಳನ್ನು ತಂದು ಪ್ರಕಾಶನ ಮಾಡುತ್ತಿದ್ದರು. ಜೈನ ಧರ್ಮದ ಬಗ್ಗೆ ಜನಕ್ಕೆ ಜೈನರಿಗೆ ತಲುಪಿಸುವಂತಹ ಕೆಲಸವನ್ನು ಅವರ ಕೊನೆಯ ಉಸಿರು ಇರುವವರೆಗೂ ಮಾಡಿದರು.
ಹಾಗಾಗಿ ಈ ಎರಡು ಮಹತ್ವದ ಕೃತಿಗಳನ್ನು ನಿಮ್ಮ ಮುಂದೆ ಇಟ್ಟಿದೇವೆ, ಮುಂದಿನ ವಾರ ಮತ್ತೆ ಇಬ್ಬರು ಕೃತಿಕಾರರ ಪರಿಚಯ ಮತ್ತು ಮತ್ತೇರಡು ಕೃತಿಗಳ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇನೆ.
ನಮಸ್ಕಾರ
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














