ಜ್ಞಾನದೀಪಿಕೆಗಳು- 21 / 03-12-2021 / jwalamalanews / 2021

ಆತ್ಮೀಯರೆಲ್ಲರಿಗೂ ನಮಸ್ಕಾರ ಸರಣಿಕಾರ್ಯಕ್ರಮ ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಬರುತ್ತಾಇರುವಂತಹ ಕಾರ್ಯಕ್ರಮ ಜ್ಞಾನ ದೀಪಿಕೆಗಳು ಮತ್ತೊಂದು ಸಂಚಿಕೆಗೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ದಿನ ಜ್ಞಾನದೀಪಿಕೆಗಳ ಅಡಿಯಲ್ಲಿ ಅಚ್ಚಣ್ಣ ಕವಿ ರಚಿತ ವರ್ಧಮಾನ ಪುರಾಣ ಎನ್ನುವಂತಹ ಕೃತಿಯನ್ನು ಪರಿಚಯಮಾಡುತ್ತಾ ಇದೀನಿ ಜೊತೆಗೆ ಹೊಯ್ಸಳರ ಕಾಲದ ಜೈನಶಾಸನಗಳು ಸಾಂಸ್ಕೃತಿಕ ಅಧ್ಯಯನ ಎನ್ನುವಂತದ್ದು ಮಂಜುಳ ಟಿ ಎಲಿಗಾರ್ ರವರು ಬರೆದಿರುವಂತಹರವರು ಬರೆದಿರುವಂತಹ ಕೃತಿಯನ್ನು ನಾನು ಪರಿಚಯಮಾಡುತ್ತಿದ್ದೇನೆ.ಪ್ರಾಚೀನಕೃತಿಯಾಗಿ ನಾವು ನೋಡಿದಾಗ ಅಚ್ಚಣ್ಣ ಕವಿ ರಚಿತ ವರ್ಧಮಾನ ಪುರಾಣ  ಇದನ್ನು ಮುಖ್ಯವಾಗಿ ಸಂಪಾದಕರು ಪ್ರೋಫೆಸರ್ ತ.ಸು ಶಾಮರಾಯರು ನಂತರ ಅದಕ್ಕೆ ಸಹಾಯರಾದವರು ಪಂಡಿತ್ ನಾಗರಾಜಯ್ಯರವರು ಇದು ಅತ್ಯಂತ ರಚಿತ ವರ್ಧಮಾನ ಪುರಾಣ ಎನ್ನುವುದು ವರ್ಧಮಾನ ಪುರಾಣ ಅರ್ಧನೇಮಿ ಪುರಾಣ ಎನ್ನುವಂತದ್ದು ನಂತರ ನಾವು ಅನೇಕ ಕೃತಿಗಳನ್ನು ಗಮನಿಸಿದ್ದೇವೆ.ಈ ಅಚ್ಚಣ್ಣ ಕವಿ ಬರೆದಿರುವಂತಹ ಒಂದು ಸಂಶೋಧನಾತ್ಮಕ ರೀತಿಯ ಪಾಠಂತರ ಮತ್ತು ಕನ್ನಡ ಅನುವಾದ ಕೊಟ್ಟಿರುವಂತಹ ಈ ಕೃತಿ 1944 ಪ್ರಕಟವಾಯಿತು ಈ ಕೃತಿ ಪ್ರಕಟವಾಗಿರುವಂತದ್ದು ಸದ್ಗುರು ಪ್ರಿಂಟರ್ಸ್ ಮೈಸೂರು ಇದನ್ನು ಪಬ್ಲೀಷ್ ಮಾಡಿದ್ದು ಭಾರತೀಯ ಜ್ಞಾನಪೀಠ ಸಾಹಿತ್ಯಮಾಲಿಕೆ ಎನ್ನುವಂತಹದರ ಕೈಕೆಳಗೆ ಇದು ಪ್ರಕಟವಾಗುತ್ತದೆ.ಬಹಳ ಮುಖ್ಯ ಈ ಕೃತಿಯನ್ನ ಭಾರತೀಯ ಜ್ಞಾನ ಪೀಠ ಮೂರ್ತಿದೇವಿ ಜೈನ ಗ್ರಂಥ ಮಾಲದಿಂದ ಬಂದಂತಹ ಈ ಕೃತಿ ಈಗಾಗಲೇ ಪ್ರಾಕೃತ ಸಂಸ್ಕೃತ ಮುಂತಾದ  ಹಿಂದಿ ಕನ್ನಡ ತಮಿಳು ಮೊದಲಾದ ಗ್ರಂಥಗಳನ್ನು ಪ್ರಕಟಮಾಡಿದ್ದಂತಹ ಒಂದು ಸಂಸ್ಥೆ ಆನೆ ಉಪಾಧ್ಯಾರು ಮತ್ತು  ಪಂಡಿತ್ ಕೈಲಾಶ್ ಚಂದ್ರಶಾಸ್ರ್ತಿಗಳು ಮುಂದುವರೆಸಿದರು ಆ ಕಾಲಕ್ಕೆ ಎಂದು ಹೇಳಬಹುದು ಈ ಕೃತಿ ಅಲ್ಲಿ ದೊರೆತಯಿತ್ತು.ಈಗ ಸಿಗುವಂತದ್ದು ಇಲ್ಲ ಎಂದು ಹೇಳಬಹುದು.ತ.ಸು ಶಾಮರಾಯರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ.ಕನ್ನಡ ನಾಡಿನ ನುಡಿ ಬಗ್ಗೆ ಪ್ರಾಚೀನ ಕಾವ್ಯಗಳನ್ನ ಸಂಪಾದನೆ ಮಾಡಿರುವಂತಹ ಮಹಾನ್ ಲೇಖಕರು ಅಂದರೆ ಅದು ತ.ಸು ಶ್ಯಾಮರಾಯರು ಮತ್ತು ಹಾಗೆಯೆ ಪಂಡಿತ್ ಪ ನಾಗರಾಜಯ್ಯ ರವರು ಕೂಡ ಮುಂದುವರಿಕೆಯ ಭಾಗವಾಗಿ ನಾವು ನೋಡಿರುವಂತದ್ದು ಇಲ್ಲಿ ನಾವು ಈ ಗ್ರಂಥದಲ್ಲಿ ಅಚ್ಚಣ್ಣ ಕವಿ ವಿರಚಿತ ವರ್ಧಮಾನಪುರಾಣವನ್ನು ಗಮನಿಸಿದಾಗ ಬಹಳ ಮುಖ್ಯವಾಗಿ ಅಚ್ಚಣ್ಣ ಕವಿ ಇದ್ದ ಕಾಲಘಟ್ಟದಲ್ಲಿ ವರ್ಧಮಾನಪುರಾಣವನ್ನು ಬರೆಯುವಂತಹ ಒಂದು ಕೃತಿ ಬಹಳ ಮಹತ್ವದ್ದು ಆಚಿರಾಜ ಎಂದು ಮತ್ತೊಂದು ಹೆಸರಿತ್ತು. ಚಿಕ್ಕದಾದರು ತಿಳಿಯಾದ 94 ಶೈಲಿಯಲ್ಲಿ ಕಂದಪದ್ಯಪಂಚಪರಮೇಷ್ಟ ಸ್ತುತಿಯನ್ನು ಒಳಗೊಂಡ ಶ್ರೀ ಪಾದ ಶ್ರೀತಿ ಎನ್ನುವ ಕಾವ್ಯ ರಚನೆ ಇಲ್ಲೆ ಬಹುಶಂ ಆಗಿರುವಂತದ್ದು ಎರಡನೆಯದಾದ ವರ್ಧಮಾನ ಪುರಾಣವನ್ನು ಠಕ್ಕನನು ಚಾವಣನು ತನ್ನ ತಂದೆಯಾದ ಕೇಶವರಾಜನು ಪ್ರಾರಂಭಿಸಿದ್ದು ತನ್ನ ಪ್ರಭುವಾದ ರೇವಣ ಚಮೂಪನ ಕೋರಿಕೆಯಂತೆ ಅಚ್ಚಣ್ಣ ಪೂರ್ತಿ ಮಾಡುತ್ತಾನೆ ಎನ್ನುವಂತದ್ದು ಅಚ್ಚಣ್ಣನ ಜೈನ ಧರ್ಮ ಮೇಲಿನ ಶ್ರದ್ದೆ ಆಳವಾದದ್ದು  ಆತನ ತಂದೆಯಾದ  ಕೇಶವ ಮತ್ತು ಕೇಶಿರಾಜ ತಾಯಿ ಮಲ್ಲಾಂಬಿಕೆ ಶ್ರೀ ನಂದಿಯೊಗೇಶ್ವರ ಗುರು ಅವರ ಸ್ಥಳ ಧಾರವಾಢ ಜಿಲ್ಲೆಯ ಪುರಿಕಾನಗರ ಅಥವಾ ಪುರಿಗರೆ ಅಥವಾ ಈಗಿನ ಲಕ್ಷ್ಮೇಶ್ವರ ಅವನಿಗೆ ವಾಣಿವಲ್ಲಭ ಎಂಬ ಪ್ರಶಸ್ತಿಇದೆ ಆಶ್ರಯದಾತನಾದ ರೇಚಣ್ಣಪತಿಯು ಮೊದಲು ಕಲಚೂರಿ ಅಹಮಲ್ಲನ ಅಂದರೆ 11ನೇ ಶತಮಾನದಲ್ಲಿ ಮಂತ್ರಿಯೂ ನಂತರ ಹೊಯ್ಸಳ ಬಲ್ಲಾಳರ ಮಂತ್ರಿಯೂ ಆಗಿರುತ್ತಾನೆ.ರಾಚಣ್ಣ ಇವನನ್ನು ಚೆನ್ನಾಗಿ ಸ್ತುತಿಸಿದ್ದಾನೆ.ಅಂದರೆ ಆ ಕಾಲದಲ್ಲಿ ಸಹಸ್ರ ಜೈನ ಕುಟುಂಬಗಳಿಂದ ಅರಸೀಕೆರೆಯಲ್ಲಿ ಇವನು ಜೈನ ದೇವಾಲಯವನ್ನು ಕಟ್ಟಿಸುತ್ತಾನೆ ಶ್ರವಣಬೆಳಗೊಳ ಸಮೀಪದಲ್ಲಿ ಜಿನನಾಥಪುರದಲ್ಲಿ ಶಾಂತಿನಾಥನ ಪ್ರತಿಷ್ಟಾಪನೆ ಮಾಡಿಸುತ್ತಾನೆ.ವಿದ್ವಾಂಸರಿಗೆ ಆಶ್ರಯದಾತನಾಗಿರುತ್ತಾನೆ ಅಚ್ಚಣ್ಣನ ಕಾಲವನ್ನು 1190 ಎನ್ನಬಹುದು ಅಚ್ಚಣ್ಣ ಪೂರೈಸಿದ ಈ ವರ್ಧಮಾನ ಪುರಾಣವು 16 ಆಶ್ವಾಸಗಳಲ್ಲಿ ಮಹಾವೇದಗಳಲ್ಲಿ ಜೀವನದ ವೃತ್ತಾಂತವನ್ನು ವರ್ಣಿಸುತ್ತದೆ.ತನ್ನ ಕಾವ್ಯವು ರಸ ಅಲಂಕಾರಗಳನ್ನು ಒಳಗೊಂಡಿದೆ.ಅರ್ಥಭರಿತವಾದ ಶೈಲಿಯಲ್ಲಿ ಲಲಿತ ಸಂಧರ್ಭದಿಂದ ತುಂಬಿದೆ ಎಂದು ರಸಿಕ ಸುಧೆ ಎಂದು ಹೇಳಿದ್ದಾನೆ ಮತ್ತೆ ಸಂಸ್ಕೃತ ಮತ್ತು ಕನ್ನಡದ ಛಂಧಸ್ಸುಗಳನ್ನುಇದರಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ್ದಾನೆ.ಇಷ್ಟಾದರು.ತಮ್ಮ ಕಾವ್ಯರಚನೆ ಸಾಮರ್ಥ್ಯದ  ವಿಷಯದಲ್ಲಿ ನಮ್ರನಾಗಿನಾಗಿರುತ್ತಾನೆ.ಅವನ ಶೈಲಿ ಸಂಸ್ಕೃತ ಕವಿಗಳ ಶೈಲಿ ಅನುಸರಿಸಿದರು ಶುದ್ಧ ಕನ್ನಡದ ಶಬ್ದವನ್ನು ವಿವೇಕದ ಜಾನ್ಮುಡಿಯನ್ನು ಒಳಗೊಂಡಿದೆ ಎನ್ನುವಂತದ್ದನ್ನು ಮುನ್ನುಡಿಯಲ್ಲಿ ಆನೆ ಉಪಾಧ್ಯಾಯರು ಗುರುತಿಸುತ್ತಾರೆ ಅನ್ನುವಂತದ್ದು ಬಹಳಮುಖ್ಯ ಇಂತಹ ಒಂದು ವರ್ಧಮಾನ ಪುರಾಣವನ್ನು ಕೊಟ್ಟಂತಹ ಅಚ್ಚಣ್ಣ ಕವಿ 11ನೇ ಶತಮಾನದಲ್ಲಿ ಬರೆದಂತಹ ಈ ಕೃತಿ ಎಂದು ಬಹಳ ಮುಖ್ಯವಾಗಿ ಗಮನಿಸುವಂತಹ ಕೆಲವು ವಿಚಾರಗಳನ್ನು ವರ್ಧಮಾನರ ಮತ್ತು ಮಹಾವೀರರ  ಅವರ ಕಥೆ ಇದ್ದರು ಕೂಡ ಇದರಲ್ಲಿ ಸುಮಾರು 16 ಸಿಂಹ ಸಂಯುಕ್ತಮಹತ್ಮ ನಂದನಕುಮಾರ ಪೊತ್ಯಯ ಪರಮರ ಪರಮೇಷ್ಕರಮಣ ತೀರ್ಥಂಕರರ ಕೇವಲ ಜ್ಞಾನ ಉತ್ಪತ್ತಿ ಇತರ ಬಹಳಷ್ಟು ವೀರಸ್ವಾಮಿ ನಿರ್ವಹಣ ಶಬ್ದಕೋಶ  ಇರುವಂತಹ  ಒಂದು ಮಹತ್ವದ ಕೃತಿ ಅಚ್ಚಣ್ಣನ ವರ್ಧಮಾನ ಪುರಾಣ ಮತ್ತೊಂದು ಕೃತಿ ನಾನು ಆಗಲೇ ಹೇಳಿದಹಾಗೆ ಜೈನ ಶಾಸನಗಳನ್ನು ಸಾಂಸ್ಕತಿಕ ಅಧ್ಯಯನ ಹೊಯ್ಸಳರ ಕಾಲದಲ್ಲಿ ಇಧು ಇತ್ತೀಚೀನ ಕೃತಿಗಳಲ್ಲಿ ಇದು 2019 ರಲ್ಲಿ ಪ್ರಕಟಗೊಡಿದೆ .ಇದನ್ನು ಪ್ರಕಟಿಸಿದವರು ಕರ್ನಾಟಕ ಪುರಾತತ್ವ ಜೈನ ಮಂಢಳಿ ಮತ್ತು ಸಾಹಿತ್ಯ ಪರಿಷತ‍್ ಇವರು ಪ್ರಕಟಮಾಡಿದ್ದಾರೆ.ಇದರ ಬೆಲೆ 300ರೂಪಾಯಿ  ಹಾಗಾಗಿ ಕರ್ನಾಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಬೆಂಗಳೂರು ಎನ್ನುವಂತಹ ಈ ಒಂದು ಸಂಸ್ಥೆ ಮಂಜುಳ ಪಿ ಎಲಿಗಾರ್ ರವರ ಒಂದು ಎಮ್ ‍‍ಫೀಲ್ ಪ್ರಕಟಣೆ ಕೃತಿಯನ್ನು ಪ್ರಕಟಮಾಡುವಂತಹ ರೀತಿಯಲ್ಲಿ ಮಾಡಿ ಅದನ್ನು ಪ್ರಕಟಮಾಡುವುದರ ಮೂಲಕ ಒಂದು ಭರವಸೆಯ ಸಂಶೊಧಕಿಯನ್ನ ಅವಳ ಕೃತಿಯನ್ನ ಈ ಜಗತ್ತಿಗೆ ಪರಿಚಯಿಸುವಂತಹ ಕೆಲಸ ಮಾಡಿದೆ ಎನ್ನುವುದು ಬಹಳ ಮುಖ್ಯ ಇವರು ಪ್ರಸ್ತುತ ಶ್ರೀಮತಿ ಮಂಜುಳ ಎಲಿಗರ್ ರವರು ಸಹಾಯಕ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಪ್ರಾದೇಶಿಕ ಇಲಾಖೆ ಧಾರವಾಡದಲ್ಲಿ ಕೆಲಸ ನಿರ್ವಹಿಸಿದರು ಹೊಯ್ಸಳರ ರಾಜಕೀಯ ಹಿನ್ನಲೆ ಶಾಸನಗಳ ಬಸದಿಗಳು ಶಿಲ್ಪಗಳು ಜೈನಶಾಸನಗಳ ಸಾಸ್ಕೃತಿಕ ಅಧ್ಯಯನವನ್ನು ಈ ಕೃತಿಯಲ್ಲಿ ಅವರು ಮಾಡಿದ್ದಾರೆ. ಅನ್ನುವಂತದ್ದು 4ಭಾಗಗಳನ್ನು ಮಾಡಿಕೊಂಡು ಬೇರೆ ಬೇರೆ ವಿಚಾರಗಳನ್ನು ಇವರು ಚರ್ಚೆ ಮಾಡಿದ್ದಾರೆ ಹೊಯ್ಸಳರ ಕಾಲಾವಧಿ ಜೈನ ಶಾಸನಗಳ ಸಂಗ್ರಹ ಅಧ್ಯಯನ ವಿಶ್ಲೇಷಣೆಗೆ ತೊಡಗಿದಂತಹ ಸಂಧರ್ಭದಲ್ಲಿ ಅಧ್ಯಯನಕ್ಕೆ ತಕ್ಕಂತೆ ಮಾಹಿತಿನೀಡುವುದರ ಜೊತೆಗೆ ಸಂಶೊಧನೆಯಲ್ಲಿ ಎದುರಾಗುತ್ತಿದ್ದ ಎಡರು ತೊಡರು ಗಳನ್ನು ನಿವಾರಣೆಮಾಡಿದ್ದು ಅವರ ವಿದ್ಯಾಗುರುಗಳಾದ  ಮಾರ್ಗದರ್ಶಿಗಳಾದ ಡಾಕ್ಟರ್ ಲೊಕೇಶ್ ಎನ್ನುವಂತದನ್ನು ಅವರು  ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ ಎನ್ನುವಂತದು ಬಹಳಮುಖ್ಯ ಅನೇಕ ಗ್ರಂಥಗಳನ್ನು ನೋಡಿದ್ದಾರೆ ಲೇಖನಗಳನ್ನ ಶಾಸನಗಳನ್ನ ಗಮನಿಸಿದ್ದಾರೆ ಮೊದಲಭಾಗದಲ್ಲಿ ಅಧ್ಯಯನ ಒಂದರಲ್ಲಿ ಅಧ್ಯಯನದ ವ್ಯಾಪ್ತಿ ವಿಧಾನ ಸ್ವರೂಪ ಹಾಗೆಯೇ ಅವರು ವಿವರಿಸುತ್ತಾರೆ.ಹಾಗೆಯೇ ಹೊಯ್ಸಳ ರಾಜಕೀಯ ಹಿನ್ನಲೆಯ ಬಗ್ಗೆ ಮಾತನಾಡುತ್ತಾರೆ 3ನೇಅಧ್ಯಾಯದಲ್ಲಿ ಶಾಸನಗಳ ಉಕ್ತವಾದ ಬಸದಿಗಳ ಬಗ್ಗೆ  ಜೈನ ಶಿಲ್ಪ ಜೈನವಿಗ್ರಹಗಳ ಬಗ್ಗೆ ಮಾತನಾಡುತ್ತಾರೆ 4ನೇ ಅಧ್ಯಾಯದಲ್ಲಿ ಶಾಸನಗಳ ಸಾಂಸ್ಕೃತಿಕ ಆಯಾಮಗಳ ಬಗ್ಗೆ ಮಾತನಾಡುತ್ತಾರೆ.ಇಲ್ಲಿ ನಾವು ಬಹಳ ಮುಖ್ಯವಾಗಿ ಗಮನಿಸುವಂತದ್ದು ಜೈನ ಸಮಾಜದ ಕಲ್ಪನೆಗಳು ಪಾಪ ಪುಣ್ಯದ ಕಲ್ಪನೆಗಳು ಸಲ್ಲಿಕನ ವೃತ ಮತ್ತು ಬಸದಿಗಲ್ಲುಗಳು ವೀರಗಲ್ಲುಗಳು ಆಕಾಲದ ಆರ್ಥಿಕ ವ್ಯವಸ್ಥೆ ಶಾಸನ ಸಾಹಿತ್ಯ ಕವಿಗಳು ಶಾಸನ ರುವಾರಿಗಳು ಸ್ಥಳನಾಮಗಳು ಇವುಗಳನೆಲ್ಲ ವಿವರವಾಗಿ ಅಧ್ಯಯನ ಮಾಡಿರುವಂತದ್ದು ಒಂದು ಪಿ ಎಚ್ ಡಿ ಥಿಸೀಸ್ ಪ್ರಕಟಮಾಡಿ ಆ ಮೂಲಕ ಜೈನ ಶಾಸನಗಳು ಏನಿದ್ದವು ಅನ್ನುವುದನ್ನು ಅರಿತುಕೊಳ್ಳುವುದಕ್ಕೆ ತಿಳಿದುಕೊಳ್ಳುದಕ್ಕೆ ಆ ಬಸದಿಯಲ್ಲಿ  ಅರಸೀಕೆರೆಯ ಸಹಸ್ರಕೂಟ ಇರಬಹುದು ಆಕಾಲದಲ್ಲಿ  ವಿವಾದಕ್ಕೆ ಇರುವಂತಹ ಪದ್ದತಿಗಳಿರಬಹುದು ತೆರಿಗೆಗಳು ಹೇಗಿತ್ತು ಎನ್ನುವುದರಬಗ್ಗೆ ಇಂತಹ ಬಹಳಷ್ಟೂ ಮೇಡಂ ಮಾಡಿದ್ದಾರೆ. ಎನ್ನುವಂತದ್ದು ಮಂಜುಳ ಎಲಿಗಾರ್ ಬಿಎ  ಬಿಎಡ್  ಪದವಿ ತರುವಾಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಶಾಸನಶಾಸ್ರ್ತ ವಿಭಾಗದಲ್ಲಿ ಎಮ‍್ ಎ  ಎಮ‍್ ಫೀಲ್  ಪಧವಿಗಳ ಜೊತೆಗೆ  ಎಫಿಗ್ರಫಿ ಅಂಬೇಡ್ಕರ್ ಜೆರ್ನಲಿಸಮ್ ಸ್ನಾತಕೋತ್ತರ ಡಿಪ್ಲೋಮ ಪಧವಿ ಪಡೆದಿದ್ದಾರೆ.ಉನ್ನತ ಶಿಕ್ಷಣಕ್ಕೆ ಉತ್ತಮ ಭೂಮಿಕೆಯನ್ನು ಸಿದ್ದಪಡಿಸಿಕೊಂಡರು 2011ರಲ್ಲಿ ಅವರು ಹೊಯ್ಸಳರ ಕಾಲದ ಜೈನಶಾಸನಗಳು ಸಾಂಸ್ಕೃತಿಕ  ಅಧ್ಯಯನ ಎನ್ನುವಂತದ್ದನ್ನು ಡಾಕ್ಟರ್ ಲೋಕೇಶ್ ರವರ ಮಾರ್ಗದರ್ಶನದಲ್ಲಿ ವಸ್ತುನಿಷ್ಟವಾಗಿ ಅವರು ಪ್ರಬಂಧವನ್ನು ಮಂಡಿಸಿದರು.ಅನ್ನುವಂತದ್ದು ಆ ಒಂದು ನಿಟ್ಟಿನಲ್ಲಿ ಈಕೃತಿ ಬಹಳ ಮಹತ್ವದ ಕೃತಿ ಅನ್ನುವಂತದ್ದನ್ನು ಗಮನಿಸುವಂತದ್ದು ಈ ಒಂದು ಕೃತಿಯು ಕೂಡ ನಮ್ಮ ಜೊತೆಯಲ್ಲಿ ಇರಬೇಕಾಗುವಂತದ್ದು ಮತ್ತು ಈ ಕೃತಿಯನ್ನು ಓದಲೇ ಬೇಕಾಗಿರುವಂತದ್ದು ಹೇಳಲು ಇಷ್ಟಪಡುತ್ತೇನೆ.ಹೀಗೆ ಈ ಕೃತಿಗಳು ಕೂಡ ಮಹತ್ವದ ಕೃತಿಗಳನ್ನು ಓದುವುದರ ಮೂಲಕ ಅರಿವನ್ನು ಹೆಚ್ಚಿಸಿಕೊಳ್ಳುವ ಮೂಲಕ ಜ್ಞಾನ ಹೆಚ್ಚಿಸಿ ಕೊಳ್ಳೋಣ ಹೇಳುತ್ತಾ ತಾವೆಲ್ಲರೂ ಮತ್ತೋಂದು ಮುಂದಿನ ಸಂಚಿಕೆ ಜ್ಞಾನದೀಪಿಕೆಗಳು ಕಾಯುತ್ತ ಇರಿ ಮತ್ತೋಮ್ಮೆ ಮತ್ತೆ ಭೇಟಿಯಾಗುತ್ತೀನಿ ಎಂದು ಹೇಳುತ್ತಾ ನಮಸ್ಕಾರ.

.