/ ಜ್ವಾಲಾಮಾಲಾನ್ಯೂಸ್ / 2021

ವಿಶ್ವಶಾಂತಿ, ಆತ್ಮಶಾಂತಿ, ಪುಣ್ಯ ಸಂಪಾಧನೆಗಾಗಿ ಉತ್ತರ ಕರ್ನಾಟಕದ ಮುಕುಟ ಮಣಿ ಶ್ರೀ ಕ್ಷೇತ್ರ ಶಾಂತಿ ಗಿರಿ ಪ್ರಣಿತ ಪರಮ ಪೂಜ್ಯ ಭಾರತ ಗೌರವ ಆಚಾರ್ಯರತ್ನ ಶ್ರೀ 108 ದೇಶಭೂಷಣ ಮುನಿ ಮಹಾರಾಜರ ಪಾವನ ಜನ್ಮ ತಪೋ, ಕರ್ಮ ನಿರ್ವಾಣ ಭೂಮಿಯಾದ ಶ್ರೀ ದೇಶಭೂಷಣ ಆಶ್ರಮ ಕ್ಷೇತ್ರ ಕೋಥಳಿ-ಕುಪ್ಪಾನವಾಡಿಯಲ್ಲಿ ಶ್ರೀ ಮದ್ದೇವಾಧಿದೇವ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರ ಜನಮಂದಿರ ಜಿನಬಿಂಬ ಹಾಗೂ ತ್ರಿಕೂಟ ಮಂದಿರ ಪ್ರತಿಷ್ಠಾಪನೆಯ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ.

ಬಂಧುಗಳೆ ತಮಗೆಲ್ಲಾ ಈ ವಿಷಯ ತಿಳಿಸಲು ಬಹಳ ಹರ್ಷವಾಗುತ್ತಿದೆ. ಉತ್ತರ ಕರ್ನಾಟಕದ ಮುಕುಟ ಮಣಿ ಶ್ರೀ ಕ್ಷೇತ್ರ ದೇಶಭೂಷಣ ಆಶ್ರಮ ಶಾಂತಿ ಗಿರಿ ಟ್ರಸ್ಟ್ ಕೋಥಳಿ-ಕುಪ್ಪಾನವಾಡಿ ಈ ಶುಭ ಕ್ಷೇತ್ರವು ಪರಮ ಪೂಜ್ಯ ಭಾರತ ಗೌರವ ಆಚಾರ್ಯರತ್ನ ಶ್ರೀ ದೇಶಭೂಷಣ ಮುನಿ ಮಹಾರಾಜರಿಂದ ನಿರ್ಮಾಣಗೊಂಡಿದ್ದು, ಈ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಶ್ರೀ ಕ್ಷೇತ್ರದ ಹಿತ ಚಿಂತಕರಾದ ಪರಮ ಪೂಜ್ಯ ಶಾಂತಮೂರ್ತಿ ಆಚಾರ್ಯ ವರದತ್ತಸಾಗರ ಮಹಾರಾಜರ ಏಕಮೇವ ಶಿಷ್ಯರಾದ ಮುನಿಶ್ರೀ ಮಹಿಮಾಸಾಗರ ಮಹಾರಾಜರ ಹಾಗೂ ಗಣನಿ ಆರ್ಯಿಕಾ ಸರಸ್ವತಿ ಮಾತಾಜಿ, ಆರ್ಯಿಕಾ ಅನಂತಮತೀ ಮಾತಾಜಿ.

ಸಂಘಸ್ತ ತ್ಯಾಗಿಯ ವೃಂದವು ಕೂಡಿ ಮಂದಿರ ಪರಿಸರ ನಿಮಗೆಲ್ಲ ಚಿರಪರಿಚಿತ ಗೊಂಡಂತೆ 170 ವಿದ್ಯಾರ್ಥಿಗಳನ್ನು ಧಾರ್ಮಿಕ ಶಿಕ್ಷಣ ಸಹಿತ ಶಿಕ್ಷಣ ನೀಡುತ್ತಿರುವ, ಈಗಾಗಲೇ ಇರುವ ವಿದ್ಯಾರ್ಥಿ ನಿಲಯದೊಂದಿಗೆ ಹೊಸ ವಿದ್ಯಾರ್ಥಿನಿಲಯ ಪ್ರವಚನ ಮಂಟಪ ಹಾಗೂ ಮೂಲ ಮಂದಿರದ ಬಲಗಡೆ ಎಡಗಡೆ ಎರಡು ಮಂದಿರಗಳನ್ನು ಶಿಖರ ಸಹಿತ ಕಟ್ಟಿಸಿ ಶ್ರೀ ಕ್ಷೇತ್ರಕ್ಕೆ ಹೊಸ ತಿರುಳನ್ನು ನೀಡಿದ್ದಾರೆ. ಈ ಕಾರಣಕ್ಕಾಗಿ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವನ್ನು  ದಿನಾಂಕ 9-12-2021 ರಿಂದ ಸೋಮವಾರ ದಿನಾಂಕ 13-12-2021 ರ ವರೆಗೆ ನಡೆಸುವುದಾಗಿ ನಿಶ್ಚಯಿಸಲಾಗಿದೆ.

ಈ ಶುಭ ಸಂದರ್ಭದಲ್ಲಿ ಪರಮ ಪೂಜ್ಯ ಆಚಾರ್ಯ ಮುನಿ, ಗಣನಿ ಆರ್ಯಿಕಾ, ಶುಲಕ ಹೀಗೆ ಒಟ್ಟು 50 ಪಿಂಚಿದಾರಿಗಳ ಪಾವನ ಸಾನಿದ್ಯ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಪರಮ ಪೂಜ್ಯ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸಂಸ್ಥಾನ ಮಠ ನಾಂದಣಿ ಇವರ ಪಾವನ ನೇತೃತ್ವದಲ್ಲಿ ಹಾಗೂ ಎಲ್ಲಾ ಸಮಸ್ತ ಭಟ್ಟಾರಕರುಗಳ ದಿವ್ಯ ಉಪಸ್ಥಿತಿಯಲ್ಲಿ ಈ ಪಂಚ ಕಲ್ಯಾಣ ಪ್ರತಿಷ್ಟ ಮಹೋತ್ಸವವು ಜೈನ ಆಶ್ಯ ಪರಂಪರಾನುಸಾರವಾಗಿ ನಡೆಸಲಾಗುತ್ತದೆ. ಸಮಸ್ತ ಶ್ರಾವಕ ಶ್ರಾವಕಿಯರು ಆಗಮಿಸಿ ಪುಣ್ಯಸಂಪಾದಿಸಿ ಕೊಳ್ಳಬೇಕೆಂದು ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ, ಆಚಾರ್ಯರತ್ನ ಶ್ರೀ ದೇಶಭೂಷಣ ಆಶ್ರಮ ಹಾಗೂ ಶಾಂತಿಗಿರಿ ಟ್ರಸ್ಟ್ ಮತ್ತು ಸಮಸ್ತ ದಿಗಂಬರ ಜೈನ ಸಮಾಜ, ಕೋಥಳಿ ಕುಪ್ಪಾನವಾಡಿ, ಇವರು ಆಗ್ರಹಿಸಿದ್ದಾರೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್