ಸಾಪ್ತಾಹಿಕ ಜೈನ್ ನ್ಯೂಸ್- 56 / 20-11-2021 / jwalamalanews / 2021

 

ಜೈ ಜಿನೇಂದ್ರ ವೀಕ್ಷಕರೇ,

ವಾರದ ಸುದ್ದಿಗಳಿಗೆ ನಿಮಗೆಲ್ಲಾ ಸ್ವಾಗತ ಹಾಗೂ ಕಾರ್ತಿಕ ಮಾಸದ ಹಾರ್ಧಿಕ ಶುಭಾಶಯಗಳು.

ಕಾರ್ತಿಕ ಮಾಸದ ಪ್ರಯುಕ್ತ ನಿಮಗೆಲ್ಲಾ ಇಲ್ಲಿದೆ ಒಂದು ಸದವಕಾಶ  ನಮ್ಮ ಊರಿನ ಬಸದಿಗಳಲ್ಲಿ ನಡೆಯುವ ದೀಪೋತ್ಸವವನ್ನು ಊತ್ತಮ ಗುಣಮಟ್ಟದಲ್ಲಿ ಚಿತ್ರೀಕರಿಸಿ ಕಳುಹಿಸದ್ದಲ್ಲಿ ನಮ್ಮ ವಾರದ ಜೈನ ಸುದ್ದಿಗಳು ಕಾರ್ಯಕ್ರಮದಲ್ಲಿ ಪ್ರಸಾರಮಾಡಲಾಗುವುದು.

ಇಂದಿನ ಮುಖ್ಯಾಂಶಗಳು:

ಬೆಳಗಾವಿ ಜಿಲ್ಲೆಯ ಜೈನ ಲೆಕ್ಕಪರಿಶೋಧಕರ ಸಮಾವೇಶ ಹಾಗೂ ಸತ್ಕಾರ ಸಮಾರಂಭ

ರಬಕವಿ – ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ನಡೆದ ಲಕ್ಷ್ಮೀ ಪೂಜೆ ಹಾಗೂ ಜೈನ ದುಗ್ದ ಪೂಜೆ.

ಸನ್ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರ ಆಹ್ವಾನ ಸ್ವೀಕರಿಸಿದ ಶ್ರೀ ಜ್ಞಾನಮತಿ ಮಾತಾಜಿಯವರು

ಜೈನ್ ಮಿಲನ್ ಸಾರಧ್ಯ ವಹಿಸಿದ ಚಿಣ್ಣರು :ಧಾರವಾಡ

ಕನ್ನಡ ಸಾಹಿತ್ಯ ಪರಂಪರೆಗೆ ಜೈನ ಸಾಹಿತಿಗಳ ಕೊಡುಗೆ ಅಪಾರ : ಎಸ್. ಕೆ ಆದಪ್ಪ

ಹೊಸಹಳ್ಳಿ ಕೆರೆಗೆ ಶ್ರವಣಬೆಳಗೊಳದ ಶ್ರೀಗಳಿಂದ ಬಾಗಿ

ನ ಸಮರ್ಪಣೆ,

ಬೆಳಗಾವಿ ಜಿಲ್ಲೆಯಲ್ಲಿ ಅಷ್ಟಹ್ನಿಕ ಪರ್ವದ ನಿಮಿತ್ತ ನೋಂಪಿ ಉದ್ಯಾಪನ ಕಾರ್ಯಕ್ರಮಗಳು

ಮೂಡುಬಿದಿರೆ ಜೈನ ಮಠಕ್ಕೆ ಭೇಟಿ ನೀಡಿದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದಂಗಳವರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಸೇವಾ ಸಿಂಧು ಡಿಜಿಟಲ್ ಸರ್ವಿಸ್ ಉದ್ಘಾಟನೆ.

ಸುದ್ದಿಗಳ ವಿವರ:

ಜೈನ ಯುವ ಸಂಘಟನೆಯ ವತಿಯಿಂದ ಜೈನ ಲೆಕ್ಕಪರಿಶೋಧಕರನ್ನೆಲ್ಲಾ ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಹಾಗಾದರೆ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ನೋಡೋಣ ಬನ್ನಿ. ದಿನಾಂಕ: 14/11/2021ರ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ಜಿಲ್ಲೆಯ ಜೈನ ಲೆಕ್ಕಪರಿಶೋಧಕರ ಸಮಾವೇಶ ಹಾಗೂ ಸತ್ಕಾರ ಕಾರ್ಯಕ್ರಮವನ್ನು ಆದಿನಾಥ ಭವನ ಆನಿಗೊಳ್ಳದಲ್ಲಿ ಹಮ್ಮಿ ಗೊಳ್ಳಲಾಗಿತ್ತು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 65 ಜನ ಲೆಕ್ಕ ಪರಿಶೋಧಕರಿದ್ದು ಈ ಸಮಾವೇಶದಲ್ಲಿ ಸುಮಾರು 30 ರಿಂದ 40 ಲೆಕ್ಕ ಪರಿಶೋಧಕರು  ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಜೈನ ಸಮಾಜದ ಏಳಿಗೆಗಾಗಿ ಜಿನ ಮಂದಿರಗಳು ಟ್ರಸ್ಟ್ನ ಆಗುಹೋಗುಗಳನ್ನು  ಹಾಗೂ ಇತ್ಯಾದಿ ವಿಷಯದ

ಬಗ್ಗೆ ಚರ್ಚೆ ಹಾಗೂ ಪರಿಶೀಲನೆ ಮಾಡಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸತೀಶ್ ಮೆಹ್ತಾ ರವರು ಮುಖ್ಯ ಅತಿಥಿಗಳಾಗಿ  ರಾಜು ದೊಡ್ಡಣ್ಣ ನವರು, ವಿಕ್ರಂ ಜೈನ್ ಹಾಗೂ ವಿವಿಧ ಜೈನ ಸಂಘಟನೆಯವರು ಉಪಸ್ಥಿತರಿದ್ಧರು.

ರಬಕವಿ ಬನಹಟ್ಟಿ ಹಳಿಯಂಗಳಿ  ಗ್ರಾಮ ಧರ್ಮಾಸಕ್ತರುಗಳ ಪಾವನ ಕ್ಷೇತ್ರ ಈ ಕ್ಷೇತ್ರದಲ್ಲಿ  ಲಕ್ಷ್ಮೀ ಪೂಜೆ ಜೈನ ದುಗ್ಧ ಪೂಜೆ ಎಂದು ಮಾಡಿದ್ದಾರೆ. ಅದು ಏನೆಂದು ತಿಳಿದುಕೊಳ್ಳೋಣ ಬನ್ನಿ . ಇದೇ ಮಂಗಳವಾರ  ಕಡೆ ಪಾದ್ಯದ ದಿನದಂದು ಲಕ್ಷ್ಮೀಪೂಜೆ ಮತ್ತು ಜೈನ ದುಗ್ಧ ಪೂಜೆಯನ್ನು ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಹಳಂಗಳಿ ಗ್ರಾಮದಲ್ಲಿ ಮಾಡಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳು ಮಹಾವೀರ ಸ್ವೀಟ್ ಫ್ಯಾಕ್ಟರಿ ಮಾಲೀಕರು ಆದ

ಶ್ರೀ ಮಾನ್ಯ ಪ್ರಕಾಶ್ ದೇಸಾಯಿಯವರು  ಭಾಗವಹಿಸಿ ಮಾತನಾಡಿ ಭಾರತ ಕೃಷಿ ಪ್ರಧಾನವಾದ  ದೇಶವಾಗಿರುವುದರಿಂದ ಕುಟುಂಬವನ್ನು ನಿರ್ವಹಣೆ ಮಾಡಿರುವುದರಿಂದ ಹೈನುಗಾರಿಕೆ ಸಹಕಾರಿಯಾಗಿದೆ. ರೈತರು ಉತ್ತಮ ಗುಣಮಟ್ಟದ ಹಾಲನ್ನು ಡೈರಿಗಳಿಗೆ ಪೂರೈಸುವುದರಿಂದ  ಆರ್ಥಿಕವಾಗಿ ಸಧೃಡರಾಗಬೇಕೆಂದು ತಿಳಿಸಿದರು. ಜೈನ ಡೈರಿಯವರು ರೈತರನ್ನು ಸನ್ಮಾನಿಸಿತ್ತಿರುವುದು ತುಂಬಾ ಹೆಮ್ಮೆಯ ವಿಷಯ.  ಇದರ ಜೊತೆಗೆ ಹಾಲಿನ ಕೆಟೆಲ್ ಗಳನ್ನು ಕೊಡುತ್ತಿರುವುದು ಸಹ ಒಂದು ಒಳ್ಳೆಯ ವಿಷಯ. ಈ ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಹಲವು ಗಣ್ಯರುಗಳಿಂದ ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನ ಮಾಡುವ ಕಾರ್ಯವು ನಡೆಯಿತು.

ನಮ್ಮ ಸಮುದಾಯದ  ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ  ಸುಸಂದರ್ಭವಾಗಿದೆ. ರಾಷ್ಟ್ರಪತಿಗಳಿಂದ ಜೈನ ಮಾತಾಜಿಯವರಿಗೆ ರಾಷ್ಟ್ರಪತಿಭವನಕ್ಕೆ ಆಹ್ವಾನ ಈ ಬಗ್ಗೆ ಇಲ್ಲಿದೆ ಸುದ್ದಿ. ರಾಷ್ಟ್ರಪತಿಯವರಾದ ಸನ್ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ  ಜೈನ ಮಾತೆಯವರಾದ ಶ್ರೀ ಜ್ಞಾನಮತಿ ಮಾತಾಜಿಯವರ ಶುಭಾಗಮನವನ್ನು 14/11/2021 ರಂದು ಬೆಳಗ್ಗೆ 9.30 ಕ್ಕೆ ರಾಷ್ಟ್ರಪತಿಭವನದಲ್ಲಿ ನಡೆಸಲಾಯಿತು. ಸಂಘದೊಂದಿಗೆ  ಆಗಮಿಸಿದ ಪೂಜ್ಯ ಮಾತಾಜಿಯವರನ್ನು ರಾಷ್ಟ್ರಪತಿಗಳ ಕಾರ್ಯದರ್ಶಿ ಯವರು ದಕ್ಷಿಣ ನ್ಯಾಯಾಲಯದ ಪ್ರವೇಶ ಧ್ವಾರದಲ್ಲಿ ಸ್ವಾಗತಿಸಿದರು. ಮಾತಾಜಿಯವರನ್ನು ತುಂಬು ಹೃದಯದಿಂದ ಸ್ವಾಗತಿಸಿ ಅವರಿಗೆ ಗೌರವ ಪೂರ್ವಕವಾಗಿ ಅವರನ್ನು ಸತ್ಕರಿಸಿದರು.

ಧಾರವಾಡದಲ್ಲಿ ಚಿನ್ನದಿಂದ ಜೈನ್ ಮಿಲನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ತುಂಬಾ ವಿಭಿನ್ನವಾಗಿದ್ದು ಜೈನ್ ಮಿಲನ್ ಧಾರವಾಡ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಂಡಿದ್ದು ಮತ್ತು ಮಕ್ಕಳಿಂದ ನಡೆದ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು . ಒಂದು ದಿನದ ಮಟ್ಟಿಗೆ ಜೈನ್ ಮಿಲನ್ ಗೆ ಜೈನಾಧ್ಯಕ್ಷರಾಗಿ ಕುಮಾರಿ ಸೃಷ್ಠಿ ಪಾಟೀಲ್ ಅಚ್ಚುಕಟ್ಟಾಗಿ ಅಧ್ಯಕ್ಷರ  ಭಾಷಣ ಮಾಡಿದರು. ಕಾರ್ಯದರ್ಶಿಯಾಗಿ ಕುಮಾರಿ ನಿಧಿ ಶೆಟ್ಟಿ ಅತ್ಯಂತ ಸೊಗಸಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಖಜಾಂಚಿಯಾಗಿ ಕುಮಾರಿ ಖುಷಿ ಉಪಾಧ್ಯ ವಿನಯವಾಗಿ ವಂದನಾರ್ಪಣೆ ಹೇಳಿದರು. ಮುಖ್ಯ ಅತಿಥಿಗಳಾದ ಕುಮಾರ ಆಯುಷ್ ಕುಮಾರ್ ಹಾಗೂ ಕುಮಾರ ಸಿದ್ದಾಂತ ಹಡಗಲಿ ಸುಂದರ ಪ್ರಾರ್ಥನೆ ಮಾಡಿದ ಕುಮಾರಿ ಸಾನ್ವಿ  ಡೌರ್ಲಿ ಧಾರ್ಮಿಕ ಪ್ರಸ್ಥಾವನೆ ಮಾಡಿದ ಕುಮಾರ ಋತ್ವಿಕ್ ಕುಂದಗೋಳ  ಹಾಗೂ ಇನ್ನು ಹಲವಾರು ಮಕ್ಕಳುಗಳು ಸೇರಿ ಮಾಡಿದ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂದಿತು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಎಸ್. ಕೆ ಆದಪ್ಪನವರು ಕನ್ನಡಕ್ಕೆ ಜೈನ ಸಾಹಿತಿಗಳ ಕೊಡುಗೆಯೆಂದು ಸ್ಮರಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ಎಸ್. ಕೆ ಆದಪ್ಪನವರು ಮಾತನಾಡಿ ಹಂಚಿಹೋಗಿದ್ದ ಕರ್ನಾಟಕ ಪ್ರದೇಶವನ್ನು ಒಗ್ಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಿದ ವಿಷಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ತಿಳಿಸಬೇಕು ಶ್ರೀ ಮಹಾವೀರ ಕನ್ನಡ ಸಾಹಿತ್ಯ ಪರಂಪರೆಗೆ  ಜೈನ ಸಾಹಿತಿಗಳ ಕೊಡುಗೆ ಅಪಾರ ಎಂದು ಅಭಿಪ್ರಾಯ ಪಟ್ಟರು. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ಮರೆಯುವಂತಾಗಿದೆ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ಶ್ರವಣಬೆಳಗೊಳದ ಸಮೀಪದ ಹೊಸಹಳ್ಳಿ ಕೆರೆಗೆ ಸ್ವಸ್ತೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳು ಶುಭ ಆಶೀರ್ವಾದದೊಂದಿಗೆ  ಅಲ್ಲಿನ ಮಾನ್ಯ ಶಾಸಕರಾದ ಶ್ರೀಯುತ ಬಾಲಕೃಷ್ಣರವರು ಬಾಗಿನ ಸಮರ್ಪಿಸಿದರು. ಪುರೋಹಿತರುಗಳ ನೇತೃತ್ವದಲ್ಲಿ ಸಕಲ ಪೂಜಾ ವಿಧಿವಿದಾನಗಳೊಂದಿಗೆ ಯಾವುದೇ ಅಡ್ಡಿಯಿಲ್ಲದೇ ನಡೆಯಿತು. ಗ್ರಾಮದ ಶ್ರಾವಕ ಶ್ರಾವಕಿಯರು ಮೆರವಣಿಗೆಯಲ್ಲಿ ಕಳಸಗಳನ್ನು ಹೊತ್ತು ವಾದ್ಯ ತಂಡದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮುಗುಳಕೋಡದಲ್ಲಿ  ಶ್ರೀ 1008 ಭಗವಾನ್ ಆದಿನಾಥ ತೀರ್ಥಂಕರರ ಜಿನಮಂದಿರದಲ್ಲಿ ನಡೆದ ಅಷ್ಟಾನಿಕ ಮಹಾಪರ್ವದ ಪ್ರಯುಕ್ತ ಶೋಡಷಕಾರಣ ಹಾಗೂ ದಶ ಲಕ್ಷಣ  ನೋಂಪಿಯ ಹಾಗೂ ಉದ್ಯಾಪನ ಕಾರ್ಯಕ್ರಮಗಳ ದೃಶ್ಯಾವಳಿಗಳು.

ಜೈನಕಾಶಿ ಶ್ರೀ ದಿಗಂಬರ  ಜೈನ ಮಠಕ್ಕೆ ಶ್ರೀ  ಶ್ರೀ ವಿದ್ಯಾಸಾಗರ ತೀರ್ಥಶ್ರೀ ಪಾದರು ಕೃಷ್ಣಾಸುರ ಮಠ ಉಡುಪಿ ಇವರು ಪರ್ಯಾಯ ಪೂರ್ವಭಾವಿ ಪವಿತ್ರ ಕ್ಷೇತ್ರಗಳ ಪರಿಚಯ ಮಾಡುತ್ತಾ ಅತಿಶಯ ಕ್ಷೇತ್ರ ಮೂಡುಬಿದ್ರೆ ಶ್ರೀ ಜೈನ ಮಠಕ್ಕೆ 19/11/2021 ರ ಸಂಜೆ ಆಗಮಿಸಿದರು.  ಈ ಸಂದರ್ಭ ಪೂರ್ಣ ಕುಂಭ ಸ್ವಾಗತದ ಮೂಲಕ ಶ್ರೀಮಠದ ಶಿಷ್ಯವೃಂದದವರು ಉಡುಪಿ ಕೃಷ್ಣಾಪುರದ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಯಿತು. ಜಗದ್ಗುರು ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಕೂಷ್ಮಾಂಡಿನಿ ದೇವಿ ಪದ್ಮಾವತಿ ಅಮ್ಮನವರ ದರ್ಶನ ಮಾಡಿಸಿದರು. ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಜಗದ್ಗುರು ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿನಯಾಂಜಲಿ ಸಭೆ ಏರ್ಪಡಿಸಲಾಗಿತ್ತು. ಉಭಯ ಶ್ರೀಗಳವರು ಪರಸ್ಪರ ಗೌರವ ಸಮರ್ಪಣೆಮಾಡಿಕೊಳ್ಳಲಾಯಿತು. ಹಾಗೂ ಇನ್ನೂ ಅನೇಕ ಗಣ್ಯರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೇವಾ ಸಿಂಧು ಡಿಜಿಟಲ್ ಸರ್ವೀಸ್ ಉದ್ಘಾಟನೆ ಮಾಡಲಾಯಿತು ಹಾಗೂ ಅಂಗವಿಕಲರಿಗೆ ವೀಲ್ ಚೇರ್ ಅನಾರೋಗ್ಯ ಪೀಡಿತರಿಗೆ ಆರೋಗ್ಯ ರಕ್ಷ ವಿಮಾ ಮೊತ್ತವನ್ನು ಚೆಕ್ ಮೂಲಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ  ಟಿ. ಚಿದಾನಂದ್ ಹಾಗೂ ಜನಜಾಗೃತಿ ಸಮಿತಿಯ ಸದಸ್ಯರಾದ ಕೋಡಿಹಳ್ಳಿ ಕೊಟ್ರೇಶ್ ಸಂತೋಷ್ ಜೈನ್ ವರಿಗಾರರಾದ ನಿಂಗಪ್ಪ ತಾಲ್ಲೂಕು ಯೋಜನಾಧಿಕಾರಿಗಳಾದ ತಿಲಕ್ ರಾಜ್ ಹಾಗೂ ಧರ್ಮಸ್ಥಳದ ಸ್ವಸಹಾಯ ಸಂಸ್ಥೆಯ ಪದಾದಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇಲ್ಲಿಯವರೆಗೂ ವಾರದ ಸುದ್ದಿಗಳನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಹೀಗೆ ಕಾರ್ಯಕ್ರಮವನ್ನು ವೀಕ್ಷಿಸುತ್ತಿರಿ.  ಜೈ ಜಿನೇಂದ್ರ.