ಕ್ಷೇತ್ರ ಪರಿಚಯ- 29 / ಶ್ರೀ ಶಾಂತಿನಾಥ ಬಸದಿ / ಹೊಳಲ್ಕೆರೆ / ಚಿತ್ರದುರ್ಗ ಜಿಲ್ಲೆ.

ಜೈ ಜಿನೇಂದ್ರ ವೀಕ್ಷಕರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರವು ಇತಿಹಾಸ ಪ್ರಸಿದ್ದವಾದ ಕ್ಷೇತ್ರವಾಗಿದ್ದು ಇಲ್ಲಿ ಶ್ರೀ ಶಾಂತಿನಾಥ ತೀರ್ಥಂಕರರ ಪುರಾತನ  ಬಸದಿ ಇದಾಗಿದೆ. ಇದು ಪ್ರಾಚೀನ ಬಸದಿಗಳಲ್ಲಿ ಸುತ್ತಮುತ್ತಲಿನಲ್ಲಿ ಏಕೈಕ ಬಸದಿ ಎಂದು ಪ್ರಸಿದ್ದಿ ಪಡೆದಿರುವುದಲ್ಲದೆ ಅತಿಶಯ ಕ್ಷೇತ್ರ ಎಂದು ಪ್ರಸಿದ್ದಿ ಪಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರ ಇತಿಹಾಸ ಪ್ರಸಿದ್ದವಾದ ಸ್ಥಳವಾಗಿದ್ದು, ಇಲ್ಲಿ ಪ್ರಾಚೀನವಾದ ಶ್ರೀ ಶಾಂತಿನಾಥ ತೀರ್ಥಂಕರರ ಬಸದಿ ಇದೆ. ಈ ಜಿನ ಮಂದಿರವು ಸುಮಾರು 1800 ವರ್ಷಗಳಷ್ಟು ಹಿಂದಿನದು ಎಂಬುದಾಗಿ ಸಂಶೋಧಕರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಕಾಲದಲ್ಲಿ ಇಡೀ ಜಿಲ್ಲೆಗೆ ಏಕೈಕ ಜಿನ ಮಂದಿರವೆಂದು ಹೆಗ್ಗಳಿಕೆ ಪಡೆದ ಈ ಸ್ಥಳವು ಅತಿಶಯ ಕ್ಷೇತ್ರವೆಂದು ಪ್ರಸಿದ್ದಿ ಪಡೆದಿದೆ. ಇಲ್ಲಿಯ ಮೂಲ ಸ್ವಾಮಿಯಾದ ಶ್ರೀ ಶಾಂತಿನಾಥ ತೀರ್ಥಂಕರರ ಜಿನ ಬಿಂಬವು ಬಹು ಸುಂದರವು ಮನೋಜ್ಞವು ಆಕರ್ಶಣಿಯ, ರಮಣೀಯ ಕಲಾ ಪೂರ್ಣವೂ ಆಗಿದೆ.

ಇಲ್ಲಿನ ಶ್ರೀ ಬ್ರಹ್ಮದೇವ ಯಕ್ಷ ಮತ್ತು ಮಹಾಮಾತೆ ಪದ್ಮಾವತಿ ಯಕ್ಷಿ ಬಿಂಬಗಳು ಪುರಾತನವಾಗಿದ್ದು ಮಹಿಮಾತಿಶಯಗಳಿಂದ ಕೂಡಿದವಾಗಿದ್ದರಿಂದ ಈ ಸ್ಥಳವು ಅತಿಶಯ ಕ್ಷೇತ್ರವೆನಿಸಿಕೊಳ್ಳಲು ಕಾರಣವಾಗಿದೆ. ಇಲ್ಲಿಗೆ ಜೈನರು ಜೈನೇತರರು ಮೊದಲಿನಿಂದಲು ಅಪಾರ ಸಂಖ್ಯೆಯಲ್ಲಿ ಬಂದು ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ಪ್ರತಿಷ್ಟಾಪನೆ ಆಗಿರುವ ಶ್ರೀ ಬ್ರಹ್ಮ ದೇವ ಯಕ್ಷರನ್ನು ಕುರಿತು ಅನೇಕ ಕಥೆಗಳು ಜನಜನಿತವಾಗಿದೆ. ಗುಂಡು ಬ್ರಹ್ಮ ದೇವರನ್ನು ಕುರಿತು ಕರೆಯಲ್ಪಡುವ ಈ ಬ್ರಹ್ಮ ಯಕ್ಷರನ್ನು ಸಂತೆಗೆ ಹೊಗುವವರು ದರ್ಶನ ಮಾಡಿಕೊಂಡು ಹೋದರೆ  ವ್ಯಾಪಾರದಲ್ಲಿ ಲಾಭವು ಇತರ ಕಾರ್ಯಗಳಲ್ಲಿ ಶ್ರೇಯಸ್ಸು ಉಂಟಾಗುತ್ತದೆ ಎಂಬುದು ಇಲ್ಲಿನ ದೃಡ ನಂಬಿಕೆಯಾಗಿದೆ. ಮಹಾಮಾತೆ ಪದ್ಮಾವತಿ ಅಮ್ಮನವರು ಈ ಕ್ಷೇತ್ರದಲ್ಲಿ ಪ್ರಾಚೀನ ಕಾಲದಿಂದಲು ನೆಲೆಸಿದ್ದಾರೆ. ಮಾತೆಯು ಬೈರವ ಪದ್ಮಾವತಿ ರೂಪದಲ್ಲಿ ಇದ್ದು ಕುದುರೆಯ ಮೇಲೆ ವೀರಾಜಮಾನರಾದಂತೆ ಇರುವ ಇಲ್ಲಿನ ವಿಗ್ರಹ ಅಪರೂಪದ್ದಾಗಿದೆ. ಬಹಳ ಹಿಂದಿನ ಕಾಲದಿಂದಲು ಬೆಳೆದು ಬಂದ ಲಕ್ಕಿಮರ ಇಲ್ಲಿದೆ. ಧರ್ಮದಲ್ಲಿ ಅತೀರ್ವ ಶ್ರದ್ದಾ ಭಕ್ತಿಗಳನ್ನು ಹೊಂದಿ ಶಾಸ್ತ್ರೊಕ್ತವಾಗಿ ದೇವಿಯನ್ನು ಪೂಜಿಸಿ ಇಷ್ಟಾರ್ಥ ಸಿದ್ದಿಗಾಗಿ ವರ ಕೇಳುವವರಿಗೆ ಇಲ್ಲಿ ಪ್ರಸಾದ ಪ್ರಾಪ್ತಿಯಾಗುತ್ತದೆ. ಭಕ್ತಾಧಿಗಳು ಇಲ್ಲಿನ ದೇವಿಯನ್ನು ಹೊಂಬುಜದ ಪದ್ಮಾವತಿ ದೇವಿಯೆಂದೆ ಭಾವಿಸಿದ್ದಾರೆ.

ಇಲ್ಲಿನ ಶಾಸನಗಳ ಪ್ರಕಾರ ಸುಮಾರು 800 ವರ್ಷಗಳ ಹಿಂದೆ ಶ್ರೀ ಮೂಲ ಸಂಘದ ಶ್ರೀ ಪಾರ್ಶ್ವನಾಥ ಭಟ್ಟಾರಕ ಮಹಾಸ್ವಾಮೀಜಿಗಳು ಈ ಜಿನ ಮಂದಿರವನ್ನು ಜೀರ್ಣೋದ್ಧಾರ ಮಾಡಿದರೆಂದು ಒಂದು ಮೂಲದಿಂದ ತಿಳಿದು ಬರುತ್ತದೆ. ಹಾಗೆ ಇಲ್ಲಿನ ಸ್ಥಳಿಯರು ಈ ಬಸದಿಯ ಜೀರ್ಣೋದ್ಧಾರ ಮುನಿಶ್ರೀ 108 ಪಾಯಸಾಗರ ಮುನಿಮಹಾರಾಜರಿಂದ ಆಗಿತೆಂದು ತಿಳಿಸಿದ್ದಾರೆ.

ಹೊಳಲ್ಕೆರೆ ಶಾಂತಿನಾಥ ಜಿನ ಮಂದಿರವು 1000 ವರ್ಷಗಳ ಇತಿಹಾಸವನ್ನು ಹೊಂದಿದ್ದು ಶಾಂತಿಸಾಗರರ ಶಿಷ್ಯರಾದ ಪಾಯಸಾಗರ ಮಹಾಮುನಿಗಳ ನೇತೃತ್ವದಲ್ಲಿ 100 ವರ್ಷಗಳ ಹಿಂದೆ ಅಲ್ಪ ಪ್ರಮಾಣ ಜೀರ್ಣೋದ್ಧಾರವನ್ನು ಕಂಡಿತ್ತು. ತದನಂತರ ಸಮಾಜದ ಬಂಧುಗಳು ಕರ್ನಾಟಕ ರಾಜ್ಯದ ಅನೇಕ ಜೈನ ಮಠಗಳು ಪೂಜ್ಯಶ್ರೀ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಯವರು ಮತ್ತು ಜೈನ ಸಮುದಾಯದವರ ಎಲ್ಲರ ಸಹಕಾರದಿಂದ ಮತ್ತೆ ಪುನರ್ ಜೀರ್ಣೋದ್ಧಾರಗೊಂಡು 2012ರಲ್ಲಿ ಮತ್ತೊಂಮ್ಮೆ ಪಂಚಕಲ್ಯಾಣವನ್ನು ನೆರವೇರಿಸಲಾಯಿತು. ಇಲ್ಲಿಯ ವಿಶೇಷತೆ ಗುಂಡು ಬ್ರಹ್ಮ ದೇವರು. ಯಾರಾದರು ವ್ಯತಿರಕ್ತವಾಗಿ ನಡೆದುಕೊಂಡ ಸಂದರ್ಭದಲ್ಲಿ ಅವರಿಗೆ ಭಾರವನ್ನು ಉಂಟುಮಾಡುವಂತಹ ಸ್ಥಿತಿ ದೈವ ಸಂಕಲ್ಪದಿಂದ ನಡೆಯುತ್ತಾ ಇತ್ತು. ಪಾಯ ಸಾಗರ ಮುನಿಗಳ ಕಾಲದಲ್ಲಿ ಗುಂಡು ಬ್ರಹ್ಮ ದೇವರನ್ನ ಸ್ಥಾಪನೆ ಮಾಡಲಾಯಿತು. ಪದ್ಮಾವತಿ ದೈವವು ಕಾಲಕಾಲಕ್ಕೂ ಜನರ ಕ್ಷೇಮಗಳನ್ನ ಅವರ ಸಮಸ್ಯೆಗಳನ್ನ ಹೀಡೈರಿಸುತ್ತ ಲಕ್ಕಿ ಮರದ ಹಿಂಭಾಗದಲ್ಲಿ ಶಕ್ತಿ ಹಡಗಿದ್ದು ಭಕ್ತರು ಕೌಟುಂಬಿಕ ಸಮಸ್ಯೆಗಳನ್ನ ಪ್ರಸಾದ ರೂಪದಲ್ಲಿ ನಿವಾರಿಸಿಕೊಳ್ಳುತ್ತಾರೆ.

ಒಮ್ಮೆ ಭಕ್ತಾಧಿಗಳು ಈ ಕ್ಷೇತ್ರದ ದರ್ಶನ ಪಡೆದು ಸ್ವಾಮಿಯ ದರ್ಶನ ಮಾಡಿ ಪುಣ್ಯ ಭಾಗಿಗಳಾಗಿ ಎಂದು ಕ್ಷೇತ್ರದ ಕಮಿಟಿಯವರು ಆಗ್ರಹಿಸಿದ್ದಾರೆ.

ವಂದನೆಗಳೊಂದಿಗೆ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್