ಜೈ ಜಿನೇಂದ್ರ ವೀಕ್ಷಕರೆ, ವಿಶ್ವದ ಅನೇಕ ರಾಷ್ಟ್ರಗಳಲಷ್ಟೇ ಅಲ್ಲದೇ ಯೂನೈಟ್ ಸ್ಟೆಟ್ಸ್ ಆಫ್ ಅಮೆರಿಕದಂತಹ ಬೃಹತ್ ರಾಷ್ಟ್ರದಲ್ಲೂ ಕೂಡ ನಮ್ಮ ಭಾರತೀಯ ಜೈನ್ ಮಿಲನ್ ವಿಸ್ತರಿಸಲ್ಪಟಿರುವುದು ಅತ್ಯುನ್ನತವಾದ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಒಂದು ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯು ಎಸ್ ಎ ಜೈನ್ ಮಿಲನ್ ಹಾಗೂ ಶ್ರೀ ಡಿ ಸುರೇಂದ್ರ ಕುಮಾರ್ ರವರ ಆಶಯದಂತೆ ಯು ಎಸ್ ಎ ಜೈನ್ ಮಿಲನ್ ಉದ್ಗಾಟನ ಸಮಾರಂಭದ ಸುದ್ದಿ ವಿವರ ಇಲ್ಲಿದೆ.
ಭಾರತೀಯ ಜೈನ್ ಮಿಲನ್ ವಲಯ 8ರಿಂದ ಯೂನೈಟ್ ಸ್ಟೆಟ್ಸ್ ಆಫ್ ಅಮೆರಿಕ ಜೈನ್ ಮಿಲನ್ ಉದ್ಗಾಟನ ಕಾರ್ಯಕ್ರಮ 31-10-2021ರಲ್ಲಿ ಜಾಲತಾಣದ ಮೂಲಕ ನಡೆಯಿತು. ಕಾರ್ಯಕ್ರಮ ಅಲ್ಲಿನ ಶಿಲ್ಪಾ ಮತ್ತು ಅನನ್ಯರವರ ನಿರೂಪಣೆಯಲ್ಲಿ ನಡೆದು ನವೀನ್ ರವರ ಮನೆಯಿಂದ ಬಾಸ್ಟೆಂಟ್ ಟೀಮ್ ವಿಜೈತ ಜೈನ್ ಸಂಗಡಿಗರಿಂದ ಪ್ರಾರ್ಥನೆಯ ಮೂಲಕ ಆರಂಭವಾಯಿತು.
ಮೂಡುಬಿದ್ರೆ ಜೈನ ಮಠದ ಭಾರತ ಭೂಷಣ ಪರಮಪೂಜ್ಯ ಸ್ವಸ್ತಿಶ್ರೀ ಚಾರು ಕೀರ್ತಿ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ಸಾನಿದ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊಂಡ ಕಾರ್ಯಕ್ರಮ, ಪೂಜ್ಯ ಶ್ರೀಗಳವರ ಆಶೀರ್ವಚನದೊಂದಿಗೆ ಮುಂದುವರೆಯುತ್ತದೆ.
ಯು ಎಸ್ ಎ ಜೈನ್ ಮಿಲನ್ ಅಧ್ಯಕ್ಷರಾಗಿ ಚಿಕಾಗೊ ನ ಆಕಾಶ್ ದೇವೇಂದ್ರ ಸ್ವಾಮಿ ಇವರು ನಮ್ಮ ಕೆ ಜೆ ಎ ದೇವೇಂದ್ರ ಸ್ವಾಮಿ ಯವರ ಮಗರಾಗಿದ್ದಾರೆ. ಉಪಾಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಬಾಸ್ಟೆಂಟ್ ನ ನವೀನ್ ಕುಮಾರ್, ಇವರು ಬೆಂಗಳೂರಿನ ಪ್ರೇಮ ಸುಕಾನಂದ್ ರವರ ಮಗ. ಇನ್ನೂ ನ್ಯೂ ಜರ್ಸಿಯ ಶಿಲ್ಪಾ ಹಾಗೂ ಸಿದ್ದಾರ್ಥ ಎ ಮಿರ್ಜಿ ಯವರು ಕಾರ್ಯದರ್ಶಿಗಳಾಗಿ, ಚಿಕಾಗೊ ದಲ್ಲಿನ ಅರ್ಚನ ಮತ್ತು ಭರತೇಶ್ ನಗರೇಶ್ವರ ಅವರು ಸಹ ಕಾರ್ಯದರ್ಶಿಗಳಾಗಿ, ಕ್ಯಾಲಿಫೊನಿಯಾದ ಅನೀಲ್ ವಿಜಯ್ ಪಾಲ್ ರವರು ಮೆಂಟರ್ ಹಾಗಿ ಪ್ರಮಾಣವಚನ ಸ್ವೀಕರಿಸಲಾಯಿತು. ವೀರ್ ಕೆ ಪ್ರಸನ್ನ ಕುಮಾರ್ ಹಾಗೂ ಎನ್ ಪ್ರಸನ್ನ ಕುಮಾರ್ ರವರು ಪ್ರಮಾಣವಚನವನ್ನ ಬೋಧಿಸಿದರು.
ಯು ಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ಕಾಂಗ್ರೇಸ್ ಮೆಂಟ್ ಆದ ಶ್ರೀ ರಾಜ ಕೃಷ್ಣ ಮೂರ್ತಿಯವರು ಯು ಎಸ್ ಎ ಜೈನ್ ಮಿಲನ್ ಉದ್ಘಾಟನೆಗೆ ಸುಭಾಷಯಗಳನ್ನು ತಿಳಿಸಿ ಮಾತನಾಡಿರುವುದು ಒಂದು ವಿಶೇಷವಾದ ಹಾಗೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.
ಮೋಹಿನಿ ಜೈನ್ ಇವರು ಯೂಸ್ ಲಿ ಬರ್ಕ್ ಲಿ ಎಂಬ ಅಲ್ಲಿನ ಯೂನಿವರ್ಸಿಟಿಗೆ 1.5 ಮಿಲಿಯನ್ ಡಾಲರ್ ದಾನವಾಗಿ ನೀಡಿ ಜೈನ್ ಡಿಪಾರ್ಟ್ ಮೆಂಟ್ ಚೆರ್ ಅನ್ನು ಜೈನ ಶಾಸ್ತ್ರದ ಅಧ್ಯಾಯನಕಾಗಿ ಸ್ಥಾಪಿಸಿದ್ದಾರೆ. ಇವರು ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅಭಿನಂದನೆಯನ್ನು ತಿಳಿಸಿದರು.
ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಡಿ ಸುರೇಂದ್ರ ಕುಮಾರ್ ರವರು ಕೂಡ ಯು ಎಸ್ ಎ ಜೈನ್ ಮಿಲನ್ ಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದರು.
ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗ್ಲೊಬಲ್ ಜೈನ್ ಮಿಲನ್ ಹೊರ ರಾಷ್ಟ್ರಗಳ ಜೈನ್ ಮಿಲನ್ ಅಧ್ಯಕ್ಷರುಗಳ ಶುಭಾಷಯಗಳು ಹೀಗೆ ಕಾರ್ಯಕ್ರಮ ಅಮೋಘವಾಗಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸುರೇಶ್ ಋತುರಾಜ್ ರವರು, ರಾಷ್ಟ್ರೀಯ ಕಾರ್ಯದರ್ಶಿಗಳಾದ ನರೇಂದ್ರ ಜೈನ್ ರಾಜ್ ಕಮಲ್ ರವರು, ಶ್ರೀ ಮೃತ್ಯುಂಜಯ, ಶ್ರೀ ಕೆ ಪ್ರಸನ್ನ ಕುಮಾರ್, ಶ್ರೀ ಎನ್ ಪ್ರಸನ್ನ ಕುಮಾರ್, ಶ್ರೀ ಪುಷ್ಪರಾಜ್ ಜೈನ್, ಶ್ರೀ ರಾಜೇಶ್ ಎಂ, ಶ್ರೀ ದೇವ್ ಕುಮಾರ್ ಕಂಬಳಿ, ಶ್ರೀ ಡಾ|| ನರೇಂದ್ರ ಹಳದಂಗಡಿ, ಶ್ರೀ ಪಿ ಎ ಪಾಟೀಲ್, ಶ್ರೀ ಸಂಮೇದ್ ಜೈನ್ ಹಾಗೂ ಶ್ರೀ ಪಿ ಅಜಿತ್ ಕುಮಾರ್ ರವರು ಯು ಎಸ್ ಎ ಜೈನ್ ಮಿಲನ್ ಹಾಗೂ ಬಿ ಜೆ ಎಂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗ್ಲೊಬಲ್ ಜೈನ್ ಮಿಲನ್ ಹೊರ ರಾಷ್ಟ್ರಗಳ ಜೈನ್ ಮಿಲನ್ ಅಧ್ಯಕ್ಷರುಗಳ ಶುಭಾಷಯಗಳು ಹೀಗೆ ಕಾರ್ಯಕ್ರಮ ಅಮೋಘವಾಗಿ ಜರುಗಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸುರೇಶ್ ಋತುರಾಜ್ ರವರು, ರಾಷ್ಟ್ರೀಯ ಕಾರ್ಯದರ್ಶಿಗಳಾದ ನರೇಂದ್ರ ಜೈನ್ ರಾಜ್ ಕಮಲ್ ರವರು, ಶ್ರೀ ಮೃತ್ಯುಂಜಯ, ಶ್ರೀ ಕೆ ಪ್ರಸನ್ನ ಕುಮಾರ್, ಶ್ರೀ ಎನ್ ಪ್ರಸನ್ನ ಕುಮಾರ್, ಶ್ರೀ ಪುಷ್ಪರಾಜ್ ಜೈನ್, ಶ್ರೀ ರಾಜೇಶ್ ಎಂ, ಶ್ರೀ ದೇವ್ ಕುಮಾರ್ ಕಂಬಳಿ, ಶ್ರೀ ಡಾ|| ನರೇಂದ್ರ ಹಳದಂಗಡಿ, ಶ್ರೀ ಪಿ ಎ ಪಾಟೇಲ್, ಶ್ರೀ ಸಂಮೇದ್ ಜೈನ್ ಹಾಗೂ ಶ್ರೀ ಪಿ ಅಜಿತ್ ಕುಮಾರ್ ರವರು ಯು ಎಸ್ ಎ ಜೈನ್ ಮಿಲನ್ ಹಾಗೂ ಬಿ ಜೆ ಎಂ ಝೋನ್ 8 ರ ಸದಸ್ಯರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. 8 ನ ಸದಸ್ಯರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.
ಈ ಸಂತೋಷಕರವಾದ ಸುದ್ದಿಯನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು.
ಮತ್ತೊಂದು ವಿಶೇಷ ಸುದ್ದಿಯೊಂದಿಗೆ ಹೀಗೆ ನಿಮ್ಮ ಮುಂದೆ ಮತ್ತೊಮ್ಮೆ ನಾನು ಬರಲ್ಲಿದ್ದೇನೆ. ಹೀಗೆ ವೀಕ್ಷಿಸುತ್ತಿರಿ ಜ್ವಾಲಮಾಲ ಡಾಟ್ ನ್ಯೂಸ್.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














