ಕ್ಷೇತ್ರ ಪರಿಚಯ- 28 / ಶ್ರೀ 1008 ಪಾರ್ಶ್ವನಾಥ ಸ್ವಾಮಿ ಬಸದಿ / ರಂಗಸಮುದ್ರ / ತುಮಕೂರು ಜಿಲ್ಲೆ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರಂಗ ಸಮುದ್ರ ಗ್ರಾಮ ಬಹಳ ಚಿಕ್ಕ ಗ್ರಾಮವಾದರು ಗ್ರಾಮದಲ್ಲಿ ಐದು ಕುಟುಂಬಗಳಿದ್ದರು ಜಿನ ಮಂದಿರವನ್ನು ಕಟ್ಟಿ ಧಾರ್ಮಿಕ ಕಾರ್ಯಕ್ರಮಗಳನ್ನು ದೊಡ್ಡದಲ್ಲಿ ನಡೆಸುತ್ತಿರುವ ಧರ್ಮಾನುರಾಗಿ ಗಳಿರುವ ಗ್ರಾಮ. ಈ ಗ್ರಾಮದಲ್ಲಿ ಒಂದು ಪುಟ್ಟ ಜಿನ ಮಂದಿರವಿದೆ, ಆದರೆ ಅಲ್ಲಿ ಪ್ರತಿಷ್ಟಾಪಿತವಾದ ಶ್ರೀ 1008 ಪಾರ್ಶ್ವನಾಥ ಮೂರ್ತಿಮಾತ್ರ ಬೃಹತ್ ಬಸದಿಗಳಲ್ಲಿ ಕಾಣಸಿಗುವಂತಹ ಸುಂದರ ಮುದ್ದಾದ ಬೃಹತ್ ಪ್ರತಿಮೆಯೇ ಹಾಗಿದೆ. ನಮ್ಮ ತಂಡ ಇಲ್ಲಿ ಬೇಟಿನೀಡಿ ಬಸದಿ ವೀಕ್ಷಿಸಿದಾಗ ಬಹಳ ಅನಂದವಾಗಿದ್ದು ನಿಡಗಲ್ಲು ಅಮರಾಪುರ ಬಸದಿಗಳ ವೀಕ್ಷಿಸಲು ಬರುವ ಭಕ್ತಾದಿಗಳು ಇಲ್ಲಿ ದರ್ಶನ ಮಾಡಲೆಂದು ಇಲ್ಲಿನ ಬಸದಿಯ ಪ್ರಭಾವನೆಯಾಗಲೆಂದು ಈ ಕ್ಷೇತ್ರ ಪರಿಚಯವನ್ನು ಮಾಡಿಕೊಂಡುತ್ತಿದೇವೆ.

ಶ್ರೀ 108 ಧರ್ಮ ಭೂಷಣ ಮುನಿ ಮಹಾರಾಜರು ಚಾರುತುರ್ಮಾಸಕ್ಕಾಗಿ ಆಗಮಿಸದಾಗ ಇಲ್ಲಿನ ಶ್ರಾವಕರಲ್ಲಿ ಬಸದಿ ನಿರ್ಮಾಣದ ಸಂಕಲ್ಪ ಮಾಡಿಸಿ ಊರಿನ ಶ್ರಾವಕರಾದ ಶಾಂತರಾಜು ಅವರಿಂದ ಭೂಮಿಯನ್ನು ಧಾನವಾಗಿ ಕೊಡಿಸಿದರು. ನಂತರ ನಿಡಗಲ್ಲು ಬಸದಿ ನಿರ್ಲಕ್ಷವಾಗಬಾರದು ಎನ್ನುವ ಕಾರಣಕ್ಕೆ ಬಸದಿಯ ನಿರ್ಮಾಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಅನಂತರದ ದಿನಗಳಲ್ಲಿ ಈ ಕ್ಷೇತ್ರಕ್ಕೆ ಆಗಮಿಸಿದ 105 ಕ್ಷುಲ್ಲಕ ಶ್ರೀ ಸುರತ್ನ ಸಾಗರ ಮಹಾರಾಜರ ಶುಭಾಶೀರ್ವಾದದಿಂದ ಊರಿನ ಶ್ರಾವಕರೆಲ್ಲರು ಸೇರಿ 2002ರಲ್ಲಿ ಬಸದಿ ನಿರ್ಮಾಣ ಆರಂಭಿಸಿ 2005ರಲ್ಲಿ ಪೂರ್ಣಗೊಂಡು ಪಂಚಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಿದರು. ಹೀಗಾ ಪ್ರತಿ ದಿನ ನಿತ್ಯ ಪೂಜರಾಧನೆಗಳು ಸಾಂಗವಾಗಿ ನಡೆಯುತ್ತವೆ.

ಮೇಲಿನ ಶಿಖರದ ಶಾಂತಿನಾಥ ಸ್ವಾಮಿ ವಿಗ್ರಹವು ಧರ್ಮಸ್ಥಳದ ರತ್ನಮ್ಮ ಹೆಗ್ಗಡೆ ಯವರ ಕೊಡುಗೆಯಾಗಿದೆ ಎಂದು ಊರಿನ ಶ್ರಾವಕರು ಸ್ಮರಿಸಿಕೊಳ್ಳುತ್ತಾರೆ. ಇಲ್ಲಿನ ಮಹಿಳಾ ಸಮಾಜವು ಕೂಡ ಸಮಾಜಪರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಮುಂದಿದ್ದಾರೆ. ನಾವು ಮೊದಲೆ ತಿಳಿಸಿದಂತೆ ಈ ಕ್ಷೇತ್ರಕೊಮ್ಮೆ ಭೇಟಿ ನೀಡಿ ಪುಣ್ಯ ಭಾಗಿಗಳಾಗಿ ಎಂದು ಬಸದಿಯ ಸಮಿತಿಯವರ ಆಗ್ರಹ ಒಮ್ಮೆ ಭೇಟಿ ನೀಡಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್