ಧರ್ಮದ ಕುಡಿ- 53 / 07-11-2021 / jwalamalanews / 2021

ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಧರ್ಮದ ಕುಡಿ ಕಾರ್ಯಕ್ರಮದ ಮತ್ತೊಂದು ಸಂಚಿಕೆಗೆ ಪ್ರೀತಿಯ ಸ್ವಾಗತ. ವೀಕ್ಷಕರೆ ಇಂದಿನ ನಮ್ಮ ಸಂಚಿಕೆಯಲ್ಲಿ ಮಾರುರಿನ ಪ್ರಥಮ್ ಮಾರುರು ಅವರು ಇದ್ದಾರೆ ಅವರ ಪ್ರತಿಭೆಯನ್ನು ನೋಡೋಣ ಅದಕ್ಕೂ ಮುನ್ನ ನಾವು ಈಗಾಗಲೆ ಭಕ್ತಾಂಬರ 15 ಶ್ಲೋಕಗಳ ಭಾವಾರ್ಥವನ್ನು ತಿಳಿದು ಕೊಂಡಿದ್ದೀವಿ, ಇವತ್ತು ನಾವು ಹದಿನಾರನೇ ಶ್ಲೋಕ ಭಾವಾರ್ಥವನ್ನು ತಿಳಿದುಕೊಳ್ಳೊಣ.

(ಸಂಸ್ಕೃತಿ ಎಂ ಜೈನ್ ಏಳನೀರು ರವರು ಭಕ್ತಾಂಬರ ಹದಿನಾರನೇ ಶ್ಲೋಕವನ್ನು ಹೇಳಿದರು).

(ಸಂಸ್ಕೃತಿ ಎಂ ಜೈನ್ ಏಳನೀರು ರವರು ಹೇಳಿದ ಭಕ್ತಾಂಬರ ಹದಿನಾರನೇ ಶ್ಲೋಕದ ಭಾವಾರ್ಥವನ್ನು ವಿವರಿಸಿದರು).

ವೀಕ್ಷಕರೆ ಇವತ್ತು ನಮ್ಮ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪ್ರಥಮ್ ಮಾರುರು ರವರು ಇದ್ದಾರೆ, ಇವರು ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಾ ಇದ್ದಾರೆ, ಹಾಗೂ ಬೇರೆ ಬೇರೆ ನೃತ್ಯಗಳನ್ನೂ ಕೂಡ ಕಲಿಯುತ್ತಾ ಇದ್ದಾರೆ, ಮತ್ತು ಅವರಲ್ಲಿರುವ ವಿಶೇಷ ಪ್ರತಿಭೆ ಎಂದರೆ ತುಳುನಾಡಿನ ಕಲೆ ಯಕ್ಷಗಾನವನ್ನ ಮಾಡುತ್ತಾರೆ ಹಾಗೂ ಕಲಿಯುತ್ತಾ ಇದ್ದಾರೆ. ಇವತ್ತು ನಮ್ಮ ಮುಂದೆ ಯಕ್ಷನಾಟ್ಯವನ್ನು ಪ್ರಸ್ತುತ ಪಡಿಸುತ್ತಾರೆ ಬನ್ನಿ ನೋಡಿ ಅನಂದ ಪಡೋಣ.

(ಪ್ರಥಮ್ ಮಾರುರು ಅವರು ಯಕ್ಷನಾಟ್ಯವನ್ನು ಪ್ರಸ್ತುತ ಪಡಿಸಿದ್ದರು).

ವೀಕ್ಷಕರೆ ಇವತ್ತು ಪ್ರಥಮ್ ಅವರು ಮಾಡಿದಂತಹ ಒಂದು ಯಕ್ಷನಾಟ್ಯ ವಿಶಿಷ್ಟವಾದ ಕಲೆಯಾಗಿತ್ತು ಹಾಗೂ ಅವರಲ್ಲಿದಂತಹ ಒಂದು ವೈವಿಧ್ಯಮಯ ಪ್ರತಿಭೆಯನ್ನು ನಮ್ಮೊಂದಿಗೆ ಪ್ರಸ್ತುತ ಪಡಿಸಿದರು. ಅದೆ ರೀತಿ ನಿಮ್ಮ ಮನೆಯಲ್ಲೂ ಕೂಡ ಇಂತಹದ್ದೇ ವಿಶಿಷ್ಟವಾದಂತಹ ಮಕ್ಕಳಿದ್ದರೆ ಸ್ಕ್ರೀನ್ ಕೆಳಗೆ ಇರುವಂತಹ ದೂರವಾಣಿ ಸಂಖ್ಯೆಗೆ ಬಯೋಡೇಟಾ ಕಳಿಸಿ. ನಿಮ್ಮ ಮಕ್ಕಳನ್ನು ಕೂಡ ಜ್ವಾಲಮಾಲ ನ್ಯೂಸ್ ನ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ನೋಡುವಂತಹ ಅವಕಾಶವನ್ನು ಪಡೆಯಿರಿ.

 

ರತ್ನತ್ರಯ ಜೈನ ಬಾಲಬೋಧೆ

ಪ್ರೇರಣೆ

ಪೂಜ್ಯ ಮಾತೃಶ್ರೀ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಮಾರ್ಗ ದರ್ಶನ

ಶ್ರೀ ಡಿ ಸುರೇಂದ್ರ ಕುಮಾರ್

ರಾಷ್ಟ್ರೀಯ ಕಾರ್ಯಧ್ಯಕ್ಷರು  ಭಾರತೀಯ ಜೈನ್ ಮಿಲನ್

ಪ್ರಾಯೋಜಕರು

ಬಾರತೀಯ ಜೈನ್ ಮಿಲನ್, ವಲಯ – 8

ಸಹಕಾರ : ಜೈನ್ ಮಿಲನ್ ಬೆಳ್ತಂಗಡಿ

 ಶ್ರೀ ಅಜಿತ್ ಕೊಕ್ರಾಡಿ :- ಜೈ ಜಿನೇಂದ್ರ, ಹಿಗಾಗಲೇ ತಿಳಿದಿರುವಂತೆ ಹಿಂಸೆ ಸುಳ್ಳು ಕಳ್ಳತನ ಕುಶೀಲ ಪರಿಗ್ರಹ, ಇವೇಲ್ಲವು ಪಾಪಕ್ಕೆ ಮೂಲವಾದ ಕ್ರಿಯೆಗಳು. ಈ ಪಾಪಕ್ಕೆ ಮೂಲವಾದಂತಹ ಕ್ರಿಯೆಗಳನ್ನು ನನ್ನ ಜೀವನದಲ್ಲಿ ನಾನು ಯಾವತ್ತು ಮಾಡುವುದಿಲ್ಲಾ ಎನ್ನುವಂತಹ ದೃಢ ನಿರ್ಧಾರ ಸಂಕಲ್ಪವನ್ನು ಮಾಡಿ ಒಂದು ನಿಯಮಗಳನ್ನು ರೂಪಿಸಿಕೊಳ್ಳುವುದು ವ್ರತ. ವ್ರತಗಳಲ್ಲಿ ಎರಡು ವಿಧ ಒಂದು ಗೃಹಸ್ಥರು ಮಾಡುವಂತಹ ವ್ರತ ಇನ್ನೊಂದು ತ್ಯಾಗಿಗಳು ಮಾಡುವಂತಹ ವ್ರತ.

ಗೃಹಸ್ಥರು ಮಾಡುವಂತಹ ವ್ರತ ಎಂದರೆ ಸಂಸಾರ ಜೀವನವನ್ನು ನಡೆಸುತ್ತ ಧರ್ಮವನ್ನು ಪಾಲಿಸುವಂತವರು ಗೃಹಸ್ಥರು.

ತ್ಯಾಗಿಗಳು ಮಾಡುವಂತಹ ವ್ರತ ಎಂದರೆ ಎಲ್ಲಾವನ್ನು ತ್ಯಜಿಸಿ ಧರ್ಮ ರಕ್ಷಣೆಗಾಗಿ ಆಧ್ಯಾತ್ಮದ ಕಡೆಗೆ ಹೆಚ್ಚು ಗಮನವನ್ನು ನೀಡಿ ಬದುಕನ್ನು ಸಾಗಿಸುವವರು ತ್ಯಾಗಿಗಳು.

ಗೃಹಸ್ಥರು ಮಾಡುವಂತಹ ವ್ರತ ಪಂಚಾಣುವ್ರತ, ಅಣು ಎಂದರೆ ಸಣ್ಣ ವ್ರತ. ತ್ಯಾಗಿಗಳು ಮಾಡುವಂತಹ ವ್ರತ ಮಹಾವ್ರತ, ಪಂಚಾಣುವ್ರತಕ್ಕಿಂತ ದೊಡ್ಡದು ಮಹಾವ್ರತ.

ಗೃಹಸ್ಥರು ಪಾಲಿಸುವಂತಹ ಪಂಚಾಣುವ್ರತದ ಬಗ್ಗೆ ತಿಳಿದುಕೊಳ್ಳೊಣ. ಒಂದನೆಯದು ಅಹಿಂಸಾಣುವ್ರತ, ಯಾವುದೇ ಕಾರಣಕ್ಕೂ ಬೇರೆಯವರಿಗೆ ಹಿಂಸೆ ಮಾಡುವುದಿಲ್ಲಾ ಎನ್ನುವಂತಹ ದೃಢ ನಿರ್ಧಾರವನ್ನು ತೆಗೆದುಕೊಳ್ಳುವಂತಹದ್ದು. ಪ್ರತಿಯೊಬ್ಬರಿಗೂ ಸಹಕಾರಿಯಾಗುತ್ತೇನೆ ಮತ್ತು ಅಹಿಂಸಾ ಪಾಲನೆಯನ್ನು ಮಾಡುತ್ತೇನೆ ಎನ್ನುವುದು ಅಹಿಂಸಾಣುವ್ರತ.

ಎರಡನೇಯದಾಗಿ ಸತ್ಯಾಣುವ್ರತ, ಸುಳ್ಳು ಹೇಳುವುದಿಲ್ಲ, ಸುಳ್ಳು ಹೇಳಿ ಪಾಪಕ್ಕೆ ಕಾರಣವಾಗುವುದ್ದಿಲ್ಲಾ, ನಾನು ಯಾವಗಲು ಸತ್ಯವನ್ನು ಹೇಳುತ್ತೇನೆ, ಧರ್ಮದ ಹಾದಿಯಲ್ಲಿ ನಡೆಯುತ್ತೇನೆ ಎಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳುವಂತಹದು ಸತ್ಯಾಣುವ್ರತ.

ಮೂರನೇಯದಾಗಿ ಅಚೌರ್ಯಣುವ್ರತ, ಕಳ್ಳತನ ಮಾಡುವುದಿಲ್ಲಾ, ಕದ್ದಿಯುವುದಿಲ್ಲಾ, ಇನ್ನೊಬ್ಬರ ವಸ್ತುವನ್ನು ನಾನು ಬಯಸುವುದಿಲ್ಲಾ ಎನ್ನುವಂತಹ ನಿರ್ಧಾರವನ್ನು ಮಾಡುವಂತಹದ್ದು ಅಚೌರ್ಯಣುವ್ರತ.

ನಾಲ್ಕನೇಯದಾಗಿ ಬ್ರಹ್ಮಚರ್ಯಣುವ್ರತ, ವಿಧ್ಯಾರ್ಥಿ ಇರಬಹುದು, ಯುವಕ ಯುವತಿಯರ ಬಹುದು ಅಥವಾ ಗೃಹಸ್ಥರಿರಬಹುದು ಪರಸ್ಪರ ಸಹೋದರತೆಯ ಭಾವ ಮೂಡಿ ಬರಬೇಕು. ಇವರ ಮಧ್ಯೆ ಮೋಹ ಕಾಮದಂತಹ ದುರ್ಗುಣಗಳು ಬಂದಾಗ ಪಾಪಕ್ಕೆ ಕಾರಣವಾಗುತ್ತದೆ ಅವರ ವ್ಯಕ್ತಿತ್ವಕ್ಕೆ ಪರಿಣಾಮ ಬೀರುತ್ತದೆ. ಸಹೋದರತೆಯ ಭಾವ ಬೆಳೆಸಿಕೊಳ್ಳ ಬೇಕೆಂಬ ನಿರ್ಧಾರವನ್ನು ಮಾಡುವಂತಹದ್ದು ಬ್ರಹ್ಮಚರ್ಯಣುವ್ರತ.

ಕೊನೆಯದಾಗಿ ಪರಿಗ್ರಹ ಪರಿಮಾಣ ಅಣುವ್ರತ, ನಮಗೆ ಎಷ್ಟು ಅವಶ್ಯಕತೆ ಇದೆಯೊ ಅಷ್ಟನ್ನು ನಾವು ಪಡೆದುಕೊಳ್ಳ ಬೇಕು, ಆದರೆ ಅತಿ ಆಸೆ ದುಖಃಕ್ಕೆ ಕಾರಣವಾಗುತ್ತದೆ. ತ್ಯಾಗ ಇರುವ ಕಡೆ ಅಹಿಂಸೆಯನ್ನು ಪಾಲಿಸಲು ಸಾಧ್ಯವಾಗುತ್ತದೆ. ಪುಣ್ಯವನ್ನು ಸಂಪಾದನೆ ಮಾಡಬೇಕು ಎಂದರೆ ಪರಿಗ್ರಹವನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ನಿರ್ಧಾರವನ್ನು ಮಾಡುವಂತಹದ್ದು ಪರಿಗ್ರಹ ಪರಿಮಾಣ ಅಣುವ್ರತ.

ಹೀಗೆ ಯಾರು ಪಂಚಾಣುವ್ರತವನ್ನು ಪಾಲಿಸುತ್ತಾರೊ ಅವರಲ್ಲಿ ಪುಣ್ಯದ ಸಂಗ್ರಹವಾಗುತ್ತದೆ, ಪಾಪಗಳು ಕಡಿಮೆಯಾಗುತ್ತದೆ, ನಮ್ಮ ಬದುಕಿನಲ್ಲಿ ನೆಮ್ಮದಿ ದೊರೆಯುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ, ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾರ್ಥಕ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗಾಗಿ ಮಕ್ಕಳೆ ನೀವೆಲ್ಲರು  ಕೂಡ ಪಂಚ ಪಾಪಗಳನ್ನು ಮಾಡುವುದಿಲ್ಲಾ ಎನ್ನುವಂತಹ ದೃಢ ಸಂಕಲ್ಪ ಮಾಡಿ ನಿರ್ಧಾರಮಾಡಿ ನಿಮಗೆ ಜಿನೇಶ್ವರನ್ನು ಹೊಳಿತನ್ನು ಮಾಡಲಿ ಎಂದು ಶುಭವನ್ನು ಹಾರೈಸುತ್ತೇನೆ, ಜೈ ಜೀನೆಂದ್ರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್