ಸಾಪ್ತಾಹಿಕ ಜೈನ್ ನ್ಯೂಸ್- 54 / 06-11-2021 / jwalamalanews / 2021

ಮುಖ್ಯಾಂಶಗಳು:

ಅರೆತಿಪ್ಪೂರು ಗ್ರಾಮದಲ್ಲಿ  ಬಾಹುಬಲಿ ಬಸದಿ ನಿರ್ಮಾಣಕ್ಕೆ ಸಿದ್ದತೆ

ಎಸ್ ಡಿ ಎಂ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಶೀಘ್ರ ಆರಂಭ “ ವಿವಿ ಕುಲಾಧಿಪತಿ ಡಾ|| ಡಿ ವೀರೇಂದ್ರ ಹೆಗ್ಗಡೆ.

ಬೆಂಗಳೂರು ಲಿಟ್ರೇಚರ್ ಫೆಸ್ಟಿವಲ್ ಗೆ ಸಂಜಯ್ ಗುಬ್ಬಿ ಅವರ ಲಿಯೋಪಾರ್ಡ್ ಡೀರೀಸ್ ಆಯ್ಕೆ

ತಬ್ಬಲಿಯಾದ ಮಗುವಿಗೆ ಆಸರೆಯಾದ ಭ.ಶ್ರೀ ನೇಮಿನಾಥ ಸ್ವಾಮಿ ಅಭಿವೃದ್ದಿ ಟ್ರಸ್ಟ್ (ರಿ) ನೆಲೆನೆಲೆ

ಮುನಿಶ್ರೀ 108 ಪುಣ್ಯ ಸಾಗರ ಅವರ 25 ನೇ ವರ್ಷದ ರಜತಮಹೋತ್ಸದ ಆಚರಣೆ

ಧರ್ಮಸ್ಥಳ ಸುರೇಂದ್ರಕುಮಾರ ರವರು ಪ್ರವಾಸೋದ್ಯಮ ಸಚಿವರಾದ ಶ್ರೀ ಕಿಶನ್ ರೆಡ್ಡಿ ರವ ಭೇಟಿ.

ಜೈನ್ ಸಹಕಾರ್ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾಭ್ಯಾಸಕ್ಕಾಗಿ ನೆರವು.

ವೀರಾಂಗನ ವೀಣಾ ಚಂದನ ಅವರ ಮನೆಯಲ್ಲಿ ಮೈಸೂರಿನಲ್ಲಿ ಮಿಲನ್ ಮಾಸಿಕ ಸಭೆ.

ಮೈಸೂರಿನಲ್ಲಿ ನಡೆದ ಜಿನಭಜನಾ ಸ್ಪರ್ಧೆಯ ಪೂರ್ವ ಭಾವಿ ಸಭೆ.

ಸುದ್ದಿಗಳ ವಿವರ:

ಮಂಡ್ಯ ಜಿಲ್ಲೆಯ ಜೈನ ಧಾರ್ಮಿಕ ಕ್ಷೇತ್ರ ಅರೆತಿಪ್ಪೂರಿನಲ್ಲಿ  2 ಕೋಟಿ ರೂ ವೆಚ್ಚದಲ್ಲಿ ಬಾಹುಬಲಿ ಬಸದಿಯ ನಿರ್ಮಾಣ ಆಗುತ್ತಿದೆ. ಭಾರತೀನಗರ ಇಲ್ಲಿಗೆ ಸಮೀಪ ಅರೆತಿಪ್ಪೂರು ಗ್ರಾಮದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಬಾಹುಬಲಿ ಬಸದಿಯ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಅತಿ ಪ್ರಾಚೀನ ಅರೆ ತಿಪ್ಪೂರು ಕ್ಷೇತ್ರ 1200 ವರ್ಷಗಳ ಇತಿಹಾಸ ಹೊಂದಿದೆ. ಈ ಹಿಂದೆ ಈ ಬೆಟ್ಟದಲ್ಲಿ 14 ಶಿಲಾಮಯ ಮಂದಿರಗಳು ಇದ್ದವು. ಅವುಗಳು ಕಾಲಕ್ರಮೇಣ ನಶಿಸಿ ಹೋಗಿದೆ ಇದರ ಪ್ರತ್ಯೇಕ ಸ್ವರೂಪದಲ್ಲಿ ಈ ಬಸದಿ  ನಿರ್ಮಾಣಗೊಳ್ಳುತ್ತಿದೆ. 24 ತೀರ್ಥಂಕರರ ವಿನೂತನ ಶಿಲೆಗಳ ಬಸದಿಯನ್ನು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದಿಗಂಬರ ಜೈನ ಮಠದಲ್ಲಿ ನಿರ್ಮಾಣ ಮಾಡಲಾಗುತ್ತಿದೆಯೆಂದು ಶ್ರೀ ಕ್ಷೇತ್ರ ಆರತೀಪುರ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ  ಸಿದ್ದಾರ್ಥ ಕೀರ್ತಿ ಭಟ್ಟರಕ ಸ್ವಾಮೀಜಿಯವರು ತಿಳಿಸಿದ್ದಾರೆ. ಈ ಬಾಹುಬಲಿ ಕ್ಷೇತ್ರವನ್ನು ಅಈವೃದ್ದಿ ಪಡಿಸಲು ಶಾಸಕ ಡಿ.ಸಿ ತಮ್ಮಣ್ಣನವರು ಕ್ಷೇತ್ರಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಿದ್ದಾರೆ. ಬೆಟ್ಟದ ಕೆಳಗೆ  ಸುಂದರವಾದ ಬಸದಿ ನಿರ್ಮಾಣ ಮಾಡಿ ಮಠದಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. 2017 ರ ಡಿಸೆಂಬರ್  3 ರಂದು ಅರೆತಿಪ್ಪೂರಿನ ಬಾಹುಬಲಿ ಕ್ಷೇತ್ರದಲ್ಲಿ  ಬಾಹುಬಲಿಗೆ 1008 ಕಳಸಗಳಲ್ಲಿ ಮಹಾಮಸ್ತಕಾಭಿಷೇಕ  ಮಾಡುವುದರ ಜೊತೆಗೆ  ನವರತ್ನ ಅಭಿಷೇಕ ಆಕರ್ಷಣೀಯವಾಗಿತ್ತು. ಜೊತೆಗೆ ಚಿಕ್ಕದಾಗಿ ಒಂದು ಮಠವನ್ನು ನಿರ್ಮಾಣ ಮಾಡಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಮತ್ತೆ ಈಗ ಕಲ್ಲು ಕಟ್ಟಡದಲ್ಲಿ ದೊಡ್ಡ ಮಟ್ಟದಲ್ಲಿ ಬಾಹುಬಲಿಯನ್ನು ಬಸದಿಯನ್ನು ಕ್ರಮ ಕೈಗೊಳ್ಳಲಾಗಿದೆಯೆಂದು ಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು  ತಿಳಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದಂತಹ ಡಾ|| ವೀರೇಂದ್ರ ಹೆಗ್ಗಡೆ ಯವರ 54 ನೇ ವರ್ದಂತ್ಯುತ್ಸವ ಸರಳವಾಗಿ ಭಾನುವಾರ ನಡೆಯಿತು. ಮತ್ತೊಂದೆಡೆ ಪೂಜ್ಯರು  ಎಸ್. ಡಿ. ಎಂ ಕಾಲೇಜಿನಲ್ಲಿ ಕ್ಯಾನ್ಸರ್ ಘಟಕ  ಉದ್ಘಾಟನೆಯಾಗಲಿದೆಯೆಂದು ತಿಳಿಸಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಎಸ್. ಡಿ. ಎಂ ಆಸ್ಪತ್ರೆಯಲ್ಲಿ ನೂತನವಾಗಿ  ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಶೀಘ್ರವಾಗಿ ಆರಂಭಗೊಳಿಸಲಾಗುವುದೆಂದು ಎಸ್. ಡಿ. ಎಂ ಕಾಲೇಜಿನ ಉಪ ಕುಲಪತಿಗಳಾದ ಡಾ|| ವೀರೇಂದ್ರ ಹೆಗ್ಗಡೆ ಯವರು ಹೇಳಿದ್ದಾರೆ. ನಗರದ ಸತ್ತೂರಿನ  ಎಸ್.ಡಿ ಎಂ. ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎಸ.ಡಿ.ಎಂ  ರೋಗಿಗಳ ಸೇವೆಗೆ ಸ್ವಬದ್ಧವಾಗಿದೆ. ಇಲ್ಲಿ ಆಧುನಿಕ ಉಪಕರಣಗಳ ಸೌಲಭ್ಯದಿಂದ  ರೋಗಿಗಳ ಚಿಕತ್ಸೆಗೆ ಸಹಕಾರಿಯಾಗಲಿದೆ ಎಂದರು. ಆಧುನಿಕ  ಎಂ.ಆರ್.ಐ ಉಪಕರಣವನ್ನು ಉದ್ಘಾಟಿಸಿದ ಶ್ರೀಯುತರು ರೋಗಗಳಿಗೆ ಅತಿ  ಶೀಘ್ರದಲ್ಲೇ ಸಮಸ್ಯೆಯನ್ನು ಕಂಡುಕೊಳ್ಳಲು  ಈ ಉಪಕರಣ ಸಹಕಾರಿಯಾಗಲಿದೆ ಎಂದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವಿಗಾಗಿ ಶೌರ್ಯ ಆಪತ್ತು ತಂಡ ರಚನೆ ಧರ್ಮಸ್ಥಳದಲ್ಲಿ ಭೋಜನಾಲಯ ವಿಸ್ತರಣೆ  ಊಟ ಮಾಡಲು ಮೇಜು ಕುರ್ಚಿಯ ಅನುಕೂಲತೆ ಸಕಲ ಸೌಲಭ್ಯ ಹೊಂದಿದ ಸದರಿ ಸಾಲಿನ ಸುಗಮ ವ್ಯವಸ್ಥೆ , ಭಕ್ತರಿಗೆ  ಕುಳಿತುಕೊಳ್ಳುವ ವ್ಯವಸ್ಥೆ  ಶೌಚಾಲಯ ನಿರ್ಮಾಣ ಡಾ|| ವೀರೇಂದ್ರ ಹೆಗ್ಗಡೆಯವರ ನೂತನ ಯೋಜನೆಗಳಾಗಿವೆ. ಫೆಬ್ರವರಿಯಿಂದ ಧಾರವಾಡದಲ್ಲಿ ಎಸ್. ಡಿ. ಎಂ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭ. 6 ಕೋಟಿ ರೂ. ವೆಚ್ಚದಲ್ಲಿ  ನಾಲ್ಕು ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್ ಉಪಕರಣದ ಕೊಡುಗೆ. ಮಂಗಳೂರಿನಲ್ಲಿ  ವಿನ್ಲ್ಯಾಕ್ ಆಸ್ಪತ್ರೆಯಲ್ಲಿ 2, ಉಜಿರೆಯಲ್ಲಿರುವ ಎಸ್. ಡಿ. ಎಂ ಆಸ್ಪತ್ರೆಯಲ್ಲಿ 11 , ಡಯಾಲಿಸಿಸ್ ಘಟಕ ಶೀಘ್ರ ಆರಂಭ . ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ  200 ಹಾಸಿಗೆ ಸಾಮರ್ಥ್ಯದ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭ. ವಾತ್ಸಲ್ಯ ಯೋಜನೆಯಡಿ ಅನಾಥ ವೃದ್ಧರಿಗೆ ನೆರವು ನೀಡುವುದಾಗಿ  ಈ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ಬೆಂಗಳೂರಿನ ಸಂಜಯ್ ಗುಬ್ಬಿಯವರ ಪುಸ್ತಕ ಬರಂಗಳೂರು  ಲಿಟ್ರೇಚರ್ ಫೆಸ್ಟಿವಲ್ ಗೆ  ಭಾಗಿಯಾಗಿದೆ. ಡಿಸೆಂಬರ್ ನಲ್ಲಿ ನಡೆಯಲಿರುವ  2021 ನೇ ಸಾಲಿನ ಬೆಂಗಳೂರು ಲಿಟ್ರೇಚರ್ ಫೆಸ್ಟಿವಲ್ ಗೆ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಸಾಹಿತಿ ದಿವಂಗತ  ಗಿರೀಶ್ ಕಾರ್ನಾಡ್ ರವರ ದಿಸ್ ಲೈಫ್ ಆಫ್ ಪ್ಲೇ . ವನ್ಯಜೀವಿ ಸಂರಕ್ಷಕಾ ಹಾಗೂ  ಹವ್ಯಾಸಿ ಬರಹಗಾರರ ಡಿಸೆಂಬರ್ ನಡೆಯಲಿರುವ  2021 ನೇ ಸಾಲಿನ ಬೆಂಗಳೂರು  ಲಿಟ್ರೇಚರ್ ಫೆಸ್ಟಿವಲ್ ಗೆ    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಸಾಹಿತಿ ದಿಸ್ ಲೈಫ್ ಆಫ್ ಪ್ಲೇ. ಹಾಗೂ ವನ್ಯಜೀವಿ ಸಂರಕ್ಷಕಾ ಹವ್ಯಾಸಿ ಬರಹಗಾರ ಸಂಜಯ್ ಗುಬ್ಬಿಯವರ  ಲಿಯಾಪಾಲ್ ಡೈರೀಸ್  ಸೇರಿದಂತೆ ರಾಜ್ಯದ , ದೇಶದ , ವಿದೇಶದ ವಿವಿಧ ಸಾಹಿತಿಗಳು ಬರಹಗಾರರ ಹಲವು ಪುಸ್ತಕಗಳು ಭಾಗಿಯಾಗಿವೆ.

ಹೇಮಲತಾ ಜೈನ್ ಮಗುವಿನ ವಯಸ್ಸು ಸುಮಾರು 7 ವರ್ಷ ತಂದೆ ತಾಯಿ ಇದ್ದರೂ  ಯಾರೂ ಇಲ್ಲದೆ ತನ್ನ 65 ವರ್ಷದ ಅಜ್ಜಿಯ ಜೊತೆಯಲ್ಲಿ ಇದ್ದಾಳೆ. ಶಿಕ್ಷಣದಿಂದ ವಂಚಿತವಾದ ಈ ಮಗುವನ್ನು ಈ ದಿನ ಶಾವಂತಪುರ ಜೈನ ಸಮಾಜ ಹಾಗೂ ಭಗವಾನ್ ನ್ಯೇಮಿನಾಥ ಸ್ವಾಮಿ  ಅಭಿವೃದ್ದಿ ಟ್ರಸ್ಟ್ ವತಿಯಿಂದ ಈ ಮಗುವನ್ನು  ಶಾಲೆಗೆ  ದಾಖಲಿಸಲಾಗಿದೆ.  ಈ ಮಗುವಿನ ಶಿಕ್ಷಣಕ್ಕೆ  ಮತ್ತು ಮುಂದಿನ ಭವಿಷ್ಯಕ್ಕೆ ಸಹೃದಯಿ ಧರ್ಮ ಬಂಧುಗಳು  ಸಹಾಯ ಮತ್ತು ಸಹಕಾರ  ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು  ಮಂಜಯ್ಯ ಜೈನ್ ಮತ್ತು ಸದಸ್ಯರು ಭಗವಾನ್ ಶ್ರೀ ನ್ಯೇಮಿನಾಥ  ಅಭಿವೃದ್ದಿ ಟ್ರಸ್ಟ್ ಹಾಗೂ ಸಮಸ್ತ ಜೈನ ಸಮಾಜ ಹಾಗೂ ಸಮಸ್ತ ಜೈನ ಸಮಾಜ ನೆಲೆನೆಲೆ  ಇವರುಗಳು  ಕೋರಿಕೊಂಡಿದ್ದಾರೆ.

ಮುನಿಶ್ರೀ 108 ಮಹಾರಾಜರ ದೀಕ್ಷಾ ದಿವಸದ 25 ನೇ ರಜತ ಮಹೋತ್ಸವದ ಆಚರಣೆ ಬಿದರೂರಿನಲ್ಲಿ ವಿಜೃಂಭಣೆಯಿಂದ  ನಡೆಯಿತು. ಮುನಿಶ್ರೀ 108 ಪುಣ್ಯ ಸಾಗರ  ಮಹಾರಾಜರ 25ನೇ ವರ್ಷದ ರಜತ ಮಹೋತ್ಸವ ಕ್ಕೆ 25 ವಿವಿಧ ಬಗೆಯ ಫಲಾಖಾದ್ಯ  ನೈವೇದ್ಯ ಗಳನ್ನು ತಯಾರಿಸುವುದರೊಂದಿಗೆ  ಸಕಲ ಶ್ರಾವಕ ಶ್ರಾವಕಿಯರಿಂದ  ಜನ್ಮ ಜಯಂತಿಯ ಪ್ರಯುಕ್ತ ಧರ್ಮದ ಬಾವುಟಗಳನ್ನು ಹಿಡಿದು ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶ್ರೀ ಡಿ ಸುರೇಂದ್ರ ಕುಮಾರ್ ರವರು ಬೆಂಗಳೂರಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಕಿಶನ್ ರೆಡ್ಡಿರವರನ್ನು ಭೇಟಿ ಮಾಡಿ ಜೈನ ಧರ್ಮದ ಬಗ್ಗೆ ಹಾಗೂ  ಹಳೆಯ ಬಸದಿಗಳ ಜೀರ್ಣೋದ್ದಾರದ ಬಗ್ಗೆ ಮಾತನಾಡಿದರು.

ಈಗ ಅಭಿನಂದನಾ ಸುದ್ದಿಗಳು:

ಚೆನ್ನೈ ಮೂಲದ  ರೆಡ್. ಎಫ್ .ಎಂ ಖಾಸಗಿ ರೇಡಿಯೋ ಚಾನೆಲ್ ನವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಲ್ಪಟ್ಟ ವಿಶಿಷ್ಟ ಸಾಧಕರ ಪ್ರಶಸ್ತಿಯಲ್ಲಿ  ಎಸ್. ಡಿ ಎಂ ವಿಶ್ವವಿದ್ಯಾನಿಲಯದ  ಆಡಳಿತ ನಿರ್ದೇಶಕ ಸಾತೇಶ್ ಶೆಟ್ಟಿಯವರಿಗೆ ವಿಶಿಷ್ಟ ಮುಂದಾಳತ್ವ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತರಾದ  ಎನ್ ಸಂತೋಷ್ ಹೆಗ್ಡೆಯವರು ವಿತರಿಸಿದರು.

ಜೈನ್ ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ನೆರವು ನೀಡಲಾಯಿತು. ಸುಮಾರು 10 ವರ್ಷಗಳಿಂದಲೂ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬೆಂಗಳೂರಿನ ಜೈನ್ ಸಹಕಾರ್ ಹಾಗೂ ಬಿ.ಎಸ್. ಎಂ ಜೈನ್ ಅಸೋಸಿಯೇಷನ್ಸ್ ಇವರ ವತಿಯಿಂದ ಕರೋನಾ ಮಹಾಮಾರಿಯ ಈ ಕಷ್ಟಕರವಾದ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯ‍ಕ್ತಿಗೂ ಹಾಗೂ ಆರೋಗ್ಯ ವಿದ್ಯಾಭ್ಯಾಸ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ಸದರಿ ಕುಟುಂಬಗಳನ್ನು ಗುರುತಿಸಿ ಪ್ರೀತಿಯಿಂದ ಸಹಾಯಹಸ್ತ ಚಾಚುವುದರ ಮುಖಾಂತರ ಸಂಘವು ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯವಾಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ  ಬೆಂಗಳೂರಿನ ಮಾಗಡಿ ರಸ್ತೆಯ ಇಂದ್ರ ಭವನ ಹೋಟೆಲ್ ನ ಆಗಿನ ಮಾಲಿಕರಾದ ಚಂದ್ರರಾಜ್ ಜೈನ್ ರವರ ಮಗನಾದ  ಶ್ರೀ ಜಗದೀಶ್ ಜೈನ್ ರವರು  ಕುಟುಂಬ ನಿರ್ವಹಣೆಗೋಸ್ಕರ ಪ್ರಸ್ತುತ ಹೋಟೆಲ್ ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ತನ್ನ ಮಗನ ವಿದ್ಯಾಭ್ಯಾಸದ ವಾರ್ಷಿಕ ಶುಲ್ಕವನ್ನು ಭರಿಸಲು ಬಹಳ ತೊಂದರೆ ಯಲ್ಲಿರುವುದು ಕಂಡು ಬಂದು ಅವರ ಮಗನ ವಿದ್ಯಾಭ್ಯಾಸಕ್ಕೋಸ್ಕರ ಸಂಘದ ವತಿಯಿಂದ ಸಧ್ಯಕ್ಕೆ ತುರ್ತು ಸುಮಾರು 20000 ರೂ.ಗಳನ್ನು ನೀಡಲಾಯಿತು.

ಮೈಸೂರು ಮಹಾ ಮಿಲನ್ ನ ಮಾಸಿಕ ಸಭೆ ಇಲ್ಲಿನ ವೀರಾಂಗನ ವೀಣಾಚಂದನ್ ರವರ ಮನೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿತ್ತು .  ಈ  ಸಭೆಯಲ್ಲಿ ಅವರು ರಚಿಸಿರುವ ಚಿತ್ರಕಲೆಗಳನ್ನು ಪ್ರದರ್ಶನ ಮಾಡಲಾಯಿತು. ಈ  ಸಭೆಯಲ್ಲಿ ಇನ್ನೂ ಹಲವಾರು ಸದಸ್ಯರುಗಳು ಸೇರಿ ಸಭೆಯನ್ನು ನಡೆಸಲಾಯಿತು.

ಜೈನ್ ಮಿಲನ್ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜಿನಭಜನಾ ಸ್ಪರ್ಧೆಯ ಪೂರ್ವಭಾವಿ ಸಭೆ ಮೈಸೂರಿನಲ್ಲಿ ಮಂಜುನಾಥ ಕಲ್ಯಾಣ ಮಂಟಪದಲ್ಲಿ  ಆಯೋಜಿಸಿ ವಿಭಾಗದ ಉಪಾಧ್ಯಕ್ಷರಾದ  ಶ್ರೀಮತಿ ಶೀಲಾ ಅನಂತರಾಜ್ ರವರು , ವಿಭಾಗದ ಕಾರ್ಯದರ್ಶಿಗಳಾದ ಶ್ರೀ ಯುವರಾಜ್ ಭಂಡಾರಿ ಹಾಗೂ ಪದಾದಿಕಾರಿ ಗಳು ಸೇರಿ ಸ್ಪರ್ಧೆಯ ಆಯೋಜನೆಯ ಬಗ್ಗೆ ಚರ್ಚಿಸಲಾಯಿತು.