ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಜೈನ ದರ್ಶನ ಮತ್ತು ಜೈನ ಕಥಾ ಸಾರ ಸಂಗ್ರಹ.
ಡಾ.ಪದ್ಮಿನಿ ನಾಗರಾಜು.
ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.
ಆತ್ಮಿಯರೇ ನಮಸ್ಕಾರ, ಜೈನ ಸಾಹಿತ್ಯವನ್ನು ಕುರಿತಂತೆ ಜೈನ ಗ್ರಂಥಗಳನ್ನ ಕುರಿತಂತೆ ನಾವು ಹೀಗಾಗಲೇ ಸರಣಿಕಾರ್ಯಕ್ರಮವನ್ನು ಮಾಡುತ್ತಾ ಇದ್ದೀವಿ ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಜ್ಞಾನ ದೀಪಿಕೆಗಳು ಅನ್ನುವಂತಹ ಕಾರ್ಯಕ್ರಮ ನಿವ್ವೇಲ್ಲಾ ನೋಡಿದ್ದಿರಿ ಪ್ರೋತ್ಸಾಹ ಕೊಟ್ಟಿದ್ದೀರಿ. ಗ್ರಂಥಗಳನ್ನು ಓದುವುದಕ್ಕೆ ಹಚ್ಚುವಂತಹ ಕೆಲಸವನ್ನು ನಾವು ಇವತ್ತು ಮತ್ತೆ ಮುಂದುವರೆಸಿ ಸರಣಿ ಕಾರ್ಯಕ್ರಮದಲ್ಲಿ ನಾವು ಇವತ್ತು ಎರಡು ಕೃತಿಗಳನ್ನು ಪರಿಚಯ ಮಾಡಿಕೊಡುತ್ತಾ ಇದ್ದೀವಿ.
ಜೈನ ದರ್ಶನ ಎನ್ನುವಂತಹ ಕೃತಿ, ಈ ಕೃತಿ ಅನುವಾದದ ಕೃತಿ. ಈ ಕೃತಿಯನ್ನು ಜೋಡಟ್ಟಿ ಅನ್ನುವವರು ಮತ್ತು ಎಸ್ ಪಿ ಪಾಟೀಲ್ ರವರು ಅನುವಾದದ ಮಾಡಿರುವಂತಹದ್ದು.ಇನ್ನೊಂದು ಮಹತ್ವದ ಕೃತಿ ಜೈನ ಕಥಾ ಸಾರ ಸಂಗ್ರಹ, ಹೋ ಶ್ರೀ ಮಧನ ಕೇಸರಿಯವರು ಬರೆದಿರುವಂತಹ ಗ್ರಂಥ.
ಮೊಟ್ಟಮೊದಲಿಗೆ ಈ ಜೈನ ದರ್ಶನ ಅನ್ನುವ ಬಹಳ ಮಹತ್ವದ ಕೃತಿ. ನಮ್ಮ ಶ್ರವಣ ಬೆಳಗೊಳದ ಪಟ್ಟಾಚಾರ್ಯರಾದಂತಹ ಸ್ವಾಮೀಜಿಯವರು ಕಂಡಂತಹ ಕನಸನ್ನ ನನಸು ಮಾಡಿದಂತಹ ಕೃತಿ. 1993ರ ಮಸ್ತಕಾಭಿಷೇಕ ನಡೆದಂತಹ ಸಂದರ್ಭದಲ್ಲಿ ಸುಮಾರು ಎರಡು ವರ್ಷಗಳವರೆಗೆ ಜಗದ್ಗುರು ಸ್ವಸ್ತಿಶ್ರೀ ಕರ್ಮಯೋಗಿ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಕಾರ್ಯಬಾಹುಲ್ಯತೆಯನ್ನ ಪರಮ ಸೀಮೆಯನ್ನು ಮುಟ್ಟಿತು ಎನ್ನುವಂತಹ ಮಾತನ್ನು ಈ ಗ್ರಂಥದಲ್ಲಿ ಉಲ್ಲೇಖ ಮಾಡುತ್ತಾರೆ. ಈ ಎರಡು ಮಹಾಮಸ್ತಕಾಭಿಷೇಕಗಳ ನಡುವೆ ಇರುವಂತಹ ರಿತ್ಯತೆಯನ್ನ ತುಂಬಿಕೊಳುವುದಕ್ಕೆ ಸಹಾಯಕವಾಗುವುದಂತೆ ಶ್ರೀ ಕ್ಷೇತ್ರ ಸಾಂಸ್ಕೃತಿಕ ವೈಭವವನ್ನು ಉದ್ದಿಪನ ಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎನ್ನುವುದು ಪೂಜ್ಯ ಸ್ವಾಮೀಜಿಯವರ ಚಿಂತನೆಯಾಗಿತ್ತು ಎನ್ನುವುದನ್ನು ನಿರಜ್ ಜೈನ್ ಎಂಬವರು ಬರೆಯುತ್ತಾರೆ.
ಅಕ್ಷರ ಕಲಶ ಎನ್ನುವಂತಹ ಅಭಿಷೇಕ ಯೋಜನೆ ಅಡಿಯಲ್ಲಿ ಆ ಪ್ರಕಟಿತ ಅನುಪ ಲಬ್ದ ಮತ್ತು ಮೌಲಿಕವಾದಂತಹ ಅನುವಾದಿತ ಸಾಹಿತ್ಯ ಪ್ರಕಾಶನಕ್ಕಾಗಿ ಅರ್ಥ ಸಹಯೋಗವನ್ನ ಸುನಿಷ್ಚಿತಗೊಳಿಸಿ ಕನ್ನಡ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ 108 ಗ್ರಂಥಗಳನ್ನು ಪ್ರಕಟಿಸುವ ಯೋಜನೆ ಇದೆ. ಹಾಗಾಗಿ ಸಾಂಸ್ಕೃತಿಕ ಸದುದ್ಧೇಶದ ಪೂರ್ತಿಗಾಗಿ ಅನೇಕ ಸಂಕಲ್ಪಗಳನ್ನ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಅಂತಹ ಸಂದರ್ಭದಲ್ಲಿ ಬಂದಿರುವಂತಹ ಕೃತಿ ಜೈನ ದರ್ಶನ.
ಡಾ|| ಎಸ್ ಪಿ ಪಾಟೀಲರು ಲೇಖಕರಾಗಿ ಬಹಳ ದೊಡ್ಡ ಹೆಸರು ಮಾಡಿರುವಂತವರು ಮರಾಠಿ ಹಿಂದಿ ಕನ್ನಡ ಭಾಷೆಯನ್ನು ಅರಿತಿರುವಂತವರು ಗಡಿನಾಡು ಭಾಗದ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದೇ ರೀತಿ ಶ್ರೀ ಜೋಡಟ್ಟಿ ಅವರು ಉಪನ್ಯಾಸಕರಾಗಿ ನಿವೃತ್ತಿ ಜೀವನವನ್ನು ಮಾಡುತ್ತಿದ್ದಾರೆ. ಅದ್ಬುತವಾಗಿ ಅನೇಕ ಹಿಂದಿ ಕೃತಿಗಳಿಂದ ಕನ್ನಡಕ್ಕೆ ಅನುವಾದವನ್ನ ಕನ್ನಡದಿಂದ ಹಿಂದಿಗೆ ಅನುವಾದವನ್ನು ಮಾಡಿರುವಂತವರು. ಪಂಡಿತ ಸುಮೇರ್ ಚಂದ್ರ ದಿವಾಕರ್ ರವರ ಹಿಂದಿ ಕೃತಿ ಜೈನ ದರ್ಶನ ಅನ್ನುವಂತಹದ್ದು ಮಹತ್ವದ ಪ್ರಸಿದ್ದವಾದಂತಹ ಕೃತಿ. ಪರಮ ಪೂಜ್ಯ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿ ಸಾಗರ ಮಹಾರಾಜರ ಪರಮ ಶಿಶ್ಯರಾದ ಇವರು ರಚಿಸಿದ ಚಾರಿತ್ರ್ಯ ಚಕ್ರವರ್ತಿ ಆದ್ಯಾತ್ಮ ಜೋತಿ ಮೊದಲಾದ ಕೃತಿಗಳು. ಪ್ರಸ್ತುತ ಕೃತಿಯನ್ನು ಮನಗಂಡು ಡಾ|| ಆನೆ ಉಪಾದ್ಯಾಯವರು ಅನುವಾದ ಕೈಗೊಳ್ಳಲು ಸೂಚಿಸಿದರು ಎಂದು ಡಾ|| ಎಸ್ ಪಿ ಪಾಟೀಲರು ಹೇಳಿದ್ದಾರೆ.
ಶ್ರೀ ಜೋಡಟ್ಟಿ ಯವರ ನೆರವಿನಿಂದ ಅನುವಾದ ಪೂರ್ಣಗೊಂಡು ಇದು ಅಕ್ಷರ ಕಲಶ ಯೋಜನೆಯಲ್ಲಿ ಕರ್ಮಯೋಗಿ ಸ್ವಸ್ತಿಶ್ರೀ ಚಾರು ಕೀರ್ತಿ ಮಹಾಸ್ವಾಮೀಜಿಯವರು ಸಾಹಿತ್ಯ ಸಂಸ್ಕೃತಿ ಪರಂಪರೆಗಳ ವಿಷಯದಲ್ಲಿ ತೋರುತ್ತಿರುವ ಪ್ರೇರಣೆ ಪ್ರೋತ್ಸಾಹದಿಂದ ಧಾರವಾಡದ ಮನೋಹರ ಮುದ್ರಣಾಲಯದಿಂದ ರವಿ ಚಂದ್ರ ಸಹೋದರರು ಇದನ್ನು ಪ್ರಕಟಮಾಡಿದ್ದಾರೆ. ಈ ಕೃತಿಯನ್ನು ಪ್ರಕಾಶನ ಮಾಡಿರುವಂತವರು ಚಂದ್ರಗಿರಿ ಚಿಕ್ಕ ಬೆಟ್ಟ ಮಹೋತ್ಸವ ಎಸ್ ಡಿ ಜೆ ಎಂ ಐ ಕಮಿಟಿ ಶ್ರವಣ ಬೆಳಗೊಳ ಇದು 1996ರ ಕೊಡುಗೆ ಈ ಕೃತಿ ಹಾಗ 150 ರೂಪಾಯಿಗಳು. ಸುಮಾರು 28 ಬಿಡಿ ಬಿಡಿ ಲೇಖನಗಳನ್ನು ಒಳಗೊಂಡಿರುವ ಕೃತಿ.
ಮತ್ತೊಂದು ಕೃತಿ ಜೈನ ಕಥಾ ಸಾರ ಸಂಗ್ರಹ, ಡಾ|| ಹೋ ಶ್ರೀ ಮಧನ ಕೇಸರಿಯವರು ಬರೆದಿರುವಂತಹ ಕೃತಿ. ಧಾರ್ಮಿಕವಾಗಿ, ಧರ್ಮ ಚಿಂತಕರಾಗಿ, ಸಮಾಜ ಪ್ರೇಮಿಗಳಾಗಿ, ಬರಹಗಾರರಾಗಿ, ಕವಿಗಳಾಗಿ, ಜೈನ ವಿದ್ವಾಂಸರಾಗಿ, ಧಾರ್ಮಿಕ ಪ್ರಭಾವನೆಯನ್ನು ಬೀರಿದಂತವರು ಡಾ|| ಹೋಳಲ್ಕೆರೆ ಶ್ರೀಪಾಲ ಶೆಟ್ಟಿ ಮಧನ ಕೇಸರಿಯವರು.
ಜೈನ ಸಂಸ್ಕೃತಿಯ ಬಗ್ಗೆ, ಜೈನ ಸಾಹಿತ್ಯದ ಬಗ್ಗೆ ಬಹಳಷ್ಟು ಕೃತಿಗಳನ್ನು ಬರೆದಿದ್ದಾರೆ. ಅದಕ್ಕೆ ಬಹಳಷ್ಟು ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಡಿಸೆಂಬರ್ 2011ರಲ್ಲಿ ಈ ಪುಸ್ತಕ ಬಿಡುಗಡೆಯಾಯಿತು. ಪ್ರಶಾಂತ್ ಎಂಟರ್ ಪ್ರೈಜಸ್ ಇವರು ಪ್ರಕಶಾನ ಮಾಡಿದ್ದಾರೆ. ಈ ಕೃತಿ ಹಾಗ 250 ರೂಪಾಯಿಗಳು. ಈ ಕೃತಿಯಲ್ಲಿ ಇರುವಂತಹ ಜೈನ ಧರ್ಮದ ಅನೇಕ ಕಥೆಗಳನ್ನು ಮಕ್ಕಳಿಗೆ ಹೇಳಬಹುದು. ಈ ಕಥೆಗಳು ಮನವನ್ನು ಮುಟ್ಟಿ ಹೃದಯವನ್ನು ತಟ್ಟುತವೆ. ಡಾ|| ಮಧನ ಕೇಸರಿಯವರು ಬೇರೆ ಬೇರೆ ಕಥೆಗಳನ್ನ ಒಂದೇ ದಂಡೆಯಲ್ಲಿ ಸೇರಿಸಿ ಓದುಗರ ಕೈಗೆಟಕುವಂತೆ ಅತ್ಯಂತ ಶ್ರಮವಹಿಸಿ ಮಾಡಿದ್ದಾರೆ.
ಜೈನ ಪುರಾಣಗಳಿಂದ ಸಂಗ್ರಹಿಸಿರುವ ನೂರಾರು ಕಥೆಗಳು ಇವೆ, ಧಾರ್ಮಿಕ, ನೈತಿಕ, ಸಾಮಾಜಿಕ, ರಾಜಕೀಯ ಇತ್ಯಾದಿ ವಿಷಯಗಳನ್ನೊಳಗೊಂಡಿದೆ.
ಇಂತಹ ಮಹತ್ವದ ಈ ಎರಡು ಕೃತಿಗಳನ್ನು ಪರಿಚಯಮಾಡಿಸುತ್ತಿದ್ದೀವಿ. ಇಂತಹ ಕಥೆಗಳನ್ನು ಓದುವುದು ಮತ್ತು ಮಕ್ಕಳಿಗೆ ಇಂತಹ ಕಥೆಗಳನ್ನು ಹೇಳಿ. ಸಮಾಜಿಕ ಜಾಲತಾಣದಲ್ಲಿ ಕಳೆದು ಹೋಗುತ್ತಿರುವಂತಹ ಮಕ್ಕಳಿಗೆ ಇಂತಹ ಕಥೆಗಳನ್ನು ಹೇಳಿ.
ಮತ್ತೆ ಮುಂದಿನವಾರದಲ್ಲಿ ಭೇಟಿಯಾಗುತ್ತೇನೆ ನಮಸ್ಕಾರ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














