ಜೈಜಿನೇಂದ್ರ ವೀಕ್ಷಕರೆ, ನಮ್ಮ ಸಾಧಕರ ಹೆಜ್ಜೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಮ್ಮ ಸಮುದಾಯದ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸುವುದರ ಮೂಲಕ ಇತರರಿಗೆ ಪ್ರೇರಣೆ ನೀಡಲು ಈ ಪ್ರಸ್ತುತಿ.
ನೀವು ನೋಡುತ್ತಿದ್ದೀರಿ ಬಿಜಾಪುರ ಜಿಲ್ಲೆಯ ಚಡ್ಚನ್(ಚಡಚಣ)ನಲ್ಲಿ ಏಷ್ಯ ಖಂಡದಲ್ಲಿನ ಬೃಹತ್ ಮಳಿಗೆಗಳ ಸಾಲಿಗೆ ಸೇರುವ ಕನ್ಯಾ ಕುಮಾರಿ ಇಂದ ಕಾಶ್ಮೀರದವರೆಗೆ ಇಂದು ಟೆಕ್ಸ್ಟೈಲ್ ಇಂಡಸ್ಟ್ರಿಯ ರಾಜನಾಗಿ ಹೊರಹೊಮ್ಮಿದ ಬಾಹುಬಲಿ ಎನ್ ಮುತ್ತಿನ್ ಚಡ್ಚನ್(ಚಡಚಣ) ಬೃಹತ್ ಟೆಕ್ಸ್ಟೈಲ್ ಮಾರಾಟ ಮಳಿಗೆ.
ನಮ್ಮ ತಂಡ ಇಲ್ಲಿಗೆ ಭೇಟಿ ನೀಡಿದ್ದಾಗ ಸಾಲು ಸಾಲುಗಟ್ಟಿ ನಿಂತ ವಾಹನಗಳು, ಅತಿ ದೊಡ್ಡ ಮಳಿಗೆಯಲ್ಲಿ ತುಂಬಿದ ಜನ ದಟ್ಟಣೆ ಇಲ್ಲಿನ ಕೀರ್ತಿಯನ್ನು ಎತ್ತಿಹಿಡಿದಿತ್ತು. ರೈಮಂಡ್, ಸಿಯರಂ ನಂತಹ ಅಂತರಾಷ್ಟ್ರೀಯ ಬ್ರಾಂಡ್ ಗಳ ಏಕೈಕ ಪ್ರಸಿದ್ದ ಮಾರಾಟಗಾರರೆಂದರೆ ಚಡಚಣದ ಬಾಹುಬಲಿ ಎನ್ ಮುತ್ತಿನ್ ಆಗಿದೆ.
ಇಲ್ಲಿನಿಂದ ಲಕ್ಷಾಂತರ ವ್ಯಾಪಾರಿಗಳು ತಮ್ಮ ಜೀವನವನ್ನು ಕಟಿಕೊಂಡಿದ್ದಾರೆ. ಇಲ್ಲಿಂದ ಲಕ್ಷಾಂತರ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಜವಳಿ ಕೊಂಡೊಯ್ಯಲಾಗಿದೆ. (ಮನ್ಜಿಲೆ ಉನ್ಕೋ ಮಿಲ್ತೆಹೆ ಜಿನ್ಕೆ ಸಪ್ನೋಂ ಮೆ ಜಾನ್ ಹೋತಿ ಹೆ ಪಂಕ್ಸೆ ಕುಚ್ ನಹಿ ಹೋತ ಹೋಸ್ಲೋ ಸೆ ಉಡಾನ್ ಹೋತಿ ಹೆ) ಇದು ಒಂದು ಹಿಂದಿ ಶಾಯರಿ. ಅದರ ಅರ್ಥ ಯಾರು ಕನಸಿನಲ್ಲಿ ಜೀವವನ್ನು ತುಂಬುತ್ತಾರೆ ಅವರೆ ಗುರಿ ಮುಟ್ಟಲು ಸಾಧ್ಯ ಯಶಸ್ಸನ್ನು ಕಾಣಲು ಸಾದ್ಯ ರೆಕ್ಕೆ ಇದ್ದರಷ್ಟೇ ಸಾಲದು ಧೈರ್ಯ ಪ್ರಾಮಾಣಿಕತೆ ಇಂದ ಮಾತ್ರ ಉನ್ನತಿ ಎಂಬ ಉತ್ತುಂಗಕ್ಕೆ ಏರಲು ಸಾಧ್ಯ.
ಎಲ್ಲ ಉನ್ನತಿಗಳು ಗೌರವಗಳು ಬಹಳಷ್ಟು ಪರಿಶ್ರಮದಿಂದ ಸಾಧ್ಯವಾಗುವುದು, ಪರಿಶ್ರಮವೇ ಇಲ್ಲಿನ ಕೀರ್ತಿಯನ್ನು ಹಿಮಾಲಯದಷ್ಟು ಏತ್ತರದ ಸ್ಥಾನವನ್ನು ಸಮಾಜದಲ್ಲಿ ನಿರ್ಮಾಣ ಮಾಡಿದೆ. ಇಂತಹ ಶ್ರೇಷ್ಟಮಟ್ಟದ ವ್ಯಾಪಾರಸ್ಥರು ಆಗಿರುವವರು ನಮ್ಮ ಸಮುದಾಯದವರಾಗಿರುತ್ತಾರೆ. ಹಾಗೂ ದೊಡ್ಡ ವ್ಯಾಪಾರಸ್ಥರು ಅಷ್ಟೆ ಅಲ್ಲದೆ ಸಮಾಜಿಕ ಕಳಕಳಿ ಉಳ್ಳವರು ಹಾಗಿದ್ದಾರೆ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿದೆ ಇದರ ಹಿಂದಿನ ಯಶೋಗಾಥೆ.
ಧಾರ್ಮಿಕ ಆಸಕ್ತರಾದ ಶ್ರೀ ನೇಮಿನಾಥ ಮುತ್ತಿನ್ ಮತ್ತು ರಾಜಮತಿ ದಂಪತಿಗಳಿಗೆ ಮೂರು ಗಂಡು ಮಕ್ಕಳು, ಶ್ರೀ ಶಾಂತಿನಾಥ, ಶ್ರೀ ಬಾಹುಬಲಿ ಮತ್ತು ಶ್ರೀ ಅಜಿತ್ ಮುತ್ತಿನ್ ರವರು. ಮೂಲತಃ ಕೃಷಿ ಕುಟುಂಬದವರು 1980ರಲ್ಲಿ ಇವರು ಚಡ್ಚನ್(ಚಡಚಣ) ಎಂಬ ಸ್ಥಳದಲ್ಲಿ ಒಂದು ಸಣ್ಣ ಮನೆಯಲ್ಲಿ ಕೇವಲ 5 ಸೀರೆಗಳೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿ ದಿನ ಕಳೆದಂತೆ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಮಾಡುತ್ತ ತಮ್ಮ ಹೆಸರನ್ನು ಊರಿನಿಂದ ತಾಲ್ಲೂಕಿಗೆ ಜಿಲ್ಲೆಗೆ ನಂತರ ರಾಜ್ಯಮಟ್ಟದಿಂದ ಸುತ್ತಮುತ್ತಲಿನ ರಾಜ್ಯಗಳಿಗೆ ವಿಸ್ತರಿಸಿದರು. ಇಂದು ಬಾಹುಬಲಿ ಎನ್ ಮುತ್ತಿನ್ ಚಡಚಣ ಎಂಬ ಹೆಸರು ದೇಶವ್ಯಾಪ್ತಿ ಹರಡಿದೆ.
ಇಷ್ಟೇಲ್ಲಾ ಇದ್ದರು ಸಹೋದರರು ಮಾತ್ರ ತುಂಬ ಸರಳ ಜೀವಿಗಳಾಗಿದ್ದು ಶ್ರೀ ಶಾಂತಿನಾಥ್ ಸೇಟ್ ಅವರು ತಮ್ಮ ಹೆಸರಿನಂತೆಯೇ ಶಾಂತ ಸ್ವಭಾವ ಉಳ್ಳವರಾಗಿದ್ದು ಅವರು ಸಹ ವ್ಯಾಪಾರದೊಟ್ಟಿಗೆ ರೈತನಂತೆ ಹೊಲದಲ್ಲಿ ಕೆಲಸವನ್ನು ನೋಡಿಕೊಳ್ಳುತ್ತಾರೆ. ಶ್ರೀ ಬಾಹುಬಲಿ ಸೇಟ್ ರವರು ತಮ್ಮ ಮಹಾಬಲ ಬುದ್ದಿಯಿಂದ ವ್ಯಾಪಾರ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಬೆಂಗಳೂರು, ಮುಂಬೈ, ಬನಾರಸ್ ಮಹಾನಗರಗಳಲ್ಲಿ ಮಾದರಿಗಳ ಬ್ರ್ಯಾಂಡ್ ಗಳ ಸೀರೆಗಳನ್ನು ತರುವಲ್ಲಿ ಮಾರಾಟಮಾಡುವಲ್ಲಿ
ಅವರ ಕುಶಲತೆ ಅದ್ಬುತವಾಗಿದೆ.
ಶ್ರೀ ಅಜಿತ್
ಸೇಟ್ ಇವರು ಅತ್ಯಂತ ಕಿರಿಯವರಾಗಿದ್ದು ಹುರುಪಿನಿಂದ ಬೃಹತ್ ವ್ಯಾಪಾರದ ಉಸ್ತುವಾರಿ ಅಷ್ಟೇ ಅಲ್ಲಾ
ಗ್ರಾಹಕರೊಂದಿಗೆ ಸಮಾನ್ಯರಂತೆ ಬೆರತು ವ್ಯವಹರಿಸುತ್ತಾರೆ. ಇವರುಗಳ ಈ ಗುಣವೇ ಇವರುಗಳ ಅಭಿವೃದ್ಧಿಗೆ
ಕಾರಣವಾಯಿತು ಎನ್ನಬಹುದು. ದೇಶದೇಲ್ಲೆಡೆಯ ಟೆಕ್ಸ್ಟೈಲ್ ಮಾರಾಟಗಾರರು ತಮ್ಮ ಪ್ರಾಡಕ್ಟ್ ಗಳಿಗಾಗಿ
ಇವರೊಂದಿಗೆ ವ್ಯಾಪಾರ ಮಾಡಲು ಬಯಸುತ್ತಾರೆ.
ಸರ್ವಸಮಾನ್ಯವಾಗಿ
ಬಡಜನರಿಗೆ ಕಡಿಮೆ ದರದಲ್ಲಿ ಬಗೆಬಗೆಯ ಆಯ್ಕೆಯಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳು ದೊರೆಯುವುದರಿಂದ
400 ರಿಂದ 500 ಕಿ.ಮೀ ದೂರದಿಂದ ಜನರು ಬಂದು ವ್ಯಾಪಾರ ವಹಿವಾಟು ಮಾಡಿ ಸಂತುಷ್ಟರಾಗುತ್ತಾರೆ. ದಿನವಿಡಿ
ಗ್ರಾಹಕರು ಅಲ್ಲೆ ಕಳೆಯುವುದರಿಂದ ಸಾವಿರಾರು ಮಂದಿಗೆ ಊಟದ ವ್ಯವಸ್ಥೆಯನ್ನು ಕೂಡ ಅಲ್ಲೆ ಮಾಡಲಾಗುತ್ತದೆ. ಏಕೆಂದರೆ ಗ್ರಾಹಕರನ್ನು ದೇವರೆಂದು ಭಾವಿಸುತ್ತಾರೆ, ಗ್ರಾಹಕರ
ತೃಪ್ತಿಯೆ ನಮ್ಮ ಗುರಿ ಎನ್ನುವುದು ಇವರ ಸಿದ್ಧಾಂತ.
ಅನ್ನ
ಛತ್ರಕ್ಕಾಗಿಯೇ ಬೃಹತ್ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ, ಸಣ್ಣ ವ್ಯಾಪಾರಸ್ಥರೆಲ್ಲಾ ದೊಡ್ಡ
ಗ್ರಾಹಕರ ಮನಸ್ಸಿನಲ್ಲಿಯೂ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. 800 ರಿಂದ 1000 ಕೆಲಸಗಾರರು ಕೆಲಸ ಮಾಡುತ್ತಿರುವುದಲ್ಲದೆ ಅವರನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿರುವುದಷ್ಟೇ ಅಲ್ಲಾ ಅವರ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಬಹುಪಾಲು ಜವಬ್ದಾರಿಯನ್ನು ಇವರು ಹೊತ್ತಿದ್ದಾರೆ. ಟೆಕ್ಸ್ಟೈಲ್ ಇಂಡಸ್ಟ್ರಿಯ ಬಹುದೊಡ್ಡ ಕಂಪನಿಗಳಿಂದ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ದೊರೆತಿವೆ.
ಇಂತಹ ಸಂಸ್ಕಾರಿ ಪುರುಷರಾದ ಬಾಹುಬಲಿ ಸೇಟ್ ಸುಪುತ್ರನಾದ ಚಿರಂಜೀವಿ ಆದಿನಾಥ್ ರವರು ಹೊಸ ತಂತ್ರಜ್ಞಾನ ಬಳಸಿ ತಮ್ಮ ವ್ಯವಹಾರದ ಕಾರ್ಯ ವ್ಯಾಪ್ತಿಯನ್ನು ನಿರ್ಮಾಣ ಮಾಡಿದ್ದಾರೆ ಎನ್ನಬಹುದು. ತಮ್ಮ ವ್ಯಾಪಾರ ಹಾಗೂ ವೈಯಕ್ತಿಕ ಜೀವನದಲ್ಲಿ ಜೈನಧರ್ಮದ ಮೂಲ ಮಂತ್ರವಾದ ಬದುಕು ಬದುಕಲು ಬಿಡು ಎಂಬುವುದನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಧಾರ್ಮಿಕ ಶ್ರದ್ಧೆಯುಳ್ಳ ಸುಸಂಸ್ಕೃತರಾಗಿದ್ದಾರೆ, ಪ್ರತಿನಿತ್ಯ ಜಿನಮಂದಿರ ದರ್ಶನವಾಗದೆ ನೀರನ್ನು ಕೂಡ ತೆಗೆದುಕೊಳ್ಳುವುದ್ದಿಲ್ಲಾ. ಸೂರ್ಯಾಸ್ತಕ್ಕೆ ಮುನ್ನ ಆಹಾರ ಸೇವನೆ ಬಸದಿ ದೇವಸ್ಥಾನಗಳ ಜೀರ್ಣೋದ್ಧಾರ ಅಲ್ಲದೆ ಸಮಾಜಿಕ ಕಳಕಳಿಯಿಂದ ಹಲವಾರು ಸೇವೆಗಳನ್ನು ಸಂಘ ಸಂಸ್ಥೆಗಳಿಗೆ ಸಲ್ಲಿಸಿದ್ದಾರೆ. ಹಲವು ಬಾರಿ ನೂರಾರು ಜನರಿಗೆ ಶೀಕರ್ಜಿ ಯಾತ್ರೆ ಹಾಗೂ ಅನ್ಯ ಧರ್ಮದವರಿಗೂ ತೀರ್ಥಯಾತ್ರೆ ಮಾಡಿಸಿದ್ದಾರೆ. ದೊಡ್ಡ ಮಟ್ಟದ ಉದ್ಯಮಿಗಳಾದರು ವಿನಮ್ರತೆ ಸರಳತೆಯ ಸ್ವಭಾವ ಹೊಂದಿದ ಇಂತಹ ಮಹಾನ್ ಸಹೋದರರ ಪೈಕಿ ಶ್ರೀ ಅಜಿತ್ ಮುತ್ತಿನ ಅವರನ್ನು ಸಂದರ್ಶಿಸಲು ಮುಂದಾದಾಗ ಯಾವ ಪ್ರಚಾರವನ್ನು ಇಷ್ಟ ಪಡದ ಅವರ ಸರಳ ಮಾತುಗಳನ್ನು ಒಮ್ಮೆ ನಿವೇ ಕೇಳಿ.
ಅಜಿತ್ ಮುತ್ತಿನ ರವರು ಜ್ವಾಲಮಾಲ ನ್ಯೂಸ್ ಗೆ ಮಾತನಾಡುತ್ತಾ :- ಅವರು ವ್ಯವಸಾಯವನ್ನು ನಡೆಸುವುದರ ಜೊತೆಗೆ ವಿದ್ಯಾಭ್ಯಾಸವನ್ನು ಕೂಡ ನಡೆಸಿ ನಂತರ ಅವರ ತಾಯಿಯಾದ ರಾಜಮತಿಯವರು ತಂದಿದಂತಹ 5 ಸೀರೆಗಳಿಂದ ವ್ಯಾಪಾರವನ್ನು ಆರಂಭಿಸಿದ್ದನ್ನು ಅವರ ಮಾತುಗಳ ಮೂಲಕ ಹೇಳುತ್ತಾ 1996ರಲ್ಲಿ ಅವರು ಈ ವ್ಯಾಪಾರವನ್ನು ಆರಂಭಿಸಿದ ಬಗ್ಗೆ ತಿಳಿಸಿದರು. ಹಾಗೂ ಅವರ ವ್ಯಾಪರ ರಾಜ್ಯಮಟ್ಟದಿಂದ ಸುತ್ತಮುತ್ತಲಿನ ರಾಜ್ಯಗಳಿಗೆ ವಿಸ್ತರಿಸಿದ ಪರಿ ಮತ್ತು ಅವರ ಸಿಬ್ಬಂದಿ ವರ್ಗದವರನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿಸಿದರು. ಅವರಿಗಿರುವ ಧಾರ್ಮಿಕ ಆಸಕ್ತಿ ಮತ್ತು ಚಟುವಟಿಕೆಗಳನ್ನು ವಿವರಿಸಿದರು.
ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳುತ್ತ ಜೈನ ಧರ್ಮದ ತತ್ವಗಳನ್ನು ಅಳವಡಿಸಿಕೊಳ್ಳ ಬೇಕು ಎಂದು ಸಂದೇಶವನ್ನು ತಿಳಿಸಿದರು.
ಮುಂದೆ ಗೋಶಾಲೆ ಮಾಡುವುದು ಮತ್ತು ಇದೆ ರೀತಿ ಇನ್ನು ಎರಡು ಬಟ್ಟೆ ಮಳಿಗೆ ಮಾಡಬೇಕೆಂಬ ಯೋಜನೆ ಇದೆ ಎಂದು ಹೇಳಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














