ಹೆಮ್ಮೆಯ ಶ್ರಾವಕ~ಶ್ರಾವಕಿ- 02 / ಶ್ರೀಮತಿ ವೀಣಾ ಚಂದನ್ / 2021

ಜ್ವಾಲಾ ಮಾಲಾ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ/ಶ್ರಾವಕಿಯರ ಜೀವನಗಾಥೆ ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೇ ನೋಡಿ ಅವರನ್ನು ಇನ್ನು ಹೆಚ್ಚಿನ ಸೇವೆಗಾಗಿ ಹುರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ.

ಅಪೂರ್ವ ಪ್ರತಿಭೆ ಶ್ರೀಮತಿ ವೀಣಾ ಚಂದನ್, ಕಲೆಯ ಬಹುತೇಕ ಪ್ರಕಾರಗಳಲ್ಲಿ ನಿಸ್ಸಿಮರಾದ ಇವರ ಕಲಾ ಸೇವೆ ಅಪಾರವಾದುದು. ತಮಗೆ ತಿಳಿದ ಕಲೆಯಲ್ಲಿ ಧರ್ಮಾರಧನೆಯನ್ನು ಮಾಡುತ್ತಿರುವ ಇವರ ಪರಿಚಯಮಾಡಲು ಜ್ವಾಲಮಾಲ ಹೆಮ್ಮೆಪಡುತ್ತದೆ.

1950ರ ದಶಕದಲ್ಲಿ ಮೈಸೂರಿನ ಹೆಸರಾಂತ ವ್ಯಾಪಾರಿಯಾಗಿದ್ದ ಶ್ರೀ ವಸುಪಾಲ್ ಮತ್ತು ಶ್ರೀಮತಿ ವಿಮಲತಾಯಿ ಯವರ 7ನೇ ಸುಪುತ್ರಿ ವೀಣಾ. ಇವರ ಜನನವು ದಿನಾಂಕ 1955ರ ಜೂನ್ 7ರಂದು ಹಾಯಿತು. ಇವರ ಪ್ರಾರ್ಥಮಿಕ ಶಿಕ್ಷಣವು ನಿರ್ಮಲಾ ಕಾರ್ಮೆಂಟ್ ನಲ್ಲಿಯು ಮತ್ತು ಕಾಲೇಜು ಶಿಕ್ಷಣವು ಮಹಾರಾಣಿ ಕಾಲೇಜ್ ನಲ್ಲಿ ನಡೆಯಿತು. ನಂತರ ಮದುವೆಯಾಗಿದ್ದು ಮೈಸುರಿನ ಹೆಸರಾಂತ ದಾನಿಗಳು ಫಿಲಂ ಬಿಸ್ನೆಸ್ ಹಾಗೂ ರಾಜ್ ಕಮಲ್ ಟಾಕೀಸ್ ಮಾಲೀಕರು ಹಾಗಿದ್ದ ಶ್ರೀ ಜಿ ಬಿ ನಾಗವರ್ಮ ಮತ್ತು ಶ್ರೀಮತಿ ಸುಶೀಲಮ್ಮನವರ ಎರಡನೇಯ ಸುಪುತ್ರ ಜಿ ಎನ್ ಚಂದನ್ ಕುಮಾರ್ ರವರ ಜೊತೆ. ಇವರು ಸಹ ವೃತಿಯಲ್ಲಿ ಫಿಲಂ ಡಿಸ್ಟಿಬ್ಯೂಟರ್. ಇವರು ಗೊಮ್ಮಟಗಿರಿ ಕಮಿಟಿಯ ಸದಸ್ಯರು ಹಾಗಿದ್ದಾರೆ. ಇವರಿಗೆ ನಾಲ್ವರು ಪುತ್ರಿಯರು, ಇವರೆಲ್ಲರು ಮದುವೆಯಾಗಿ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಇವರ ಪರಿಚಯಕ್ಕಾಗಿ ಮನೆಗೆ ಭೇಟಿ ಮಾಡಿದಾಗ ಚಿತ್ರಕಲಾ ಪ್ರಧರ್ಶನವೆ ಏರ್ಪಾಟಾಗಿತ್ತು, ಅಷ್ಟೆ ಅಲ್ಲಾ ಅವರ ಹಲವಾರು ಕರ ಕುಶಲ ಅಲಂಕಾರಿಕ ಸಂಯೋಜನೆಯನ್ನು ಕಂಡು ಬೆರಗಾಗಿದಂತ್ತು ನಿಜ, ಅಂತಹ ಅದ್ಬುತ ಪ್ರತಿಭೆ ವೀಣಾ ರವರು. ಅವರಿಗಿರುವ ಹವ್ಯಾಸಗಳನ್ನು ಬಿತ್ತರಿಸುತ್ತಾ ಹೋಗುತ್ತೇವೆ ನೋಡಿ.

ವೀಣಾರವರು ಬಾಲ್ಯದಿಂದಲ್ಲು ಅನೇಕ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿದ್ದು ಇವರನ್ನು ನಿಜದ ಅರ್ಥದಲ್ಲಿ ಕಲಾವಿದೆ ಎಂಬ ಪದಕ್ಕೆ ಇವರೆ ನಿಜವಾದ ಅರ್ಥ ಎನ್ನಬಹುದು. ಚಿಕ್ಕಂದಿನಿಂದಲ್ಲೂ ನೃತ್ಯ, ಚಿತ್ರ ಕಲೆ, ಕ್ರೀಡೆಗಳಲ್ಲಿಯು ಆಸಕ್ತಿ, ಪೆಯಿಂಟಿಂಗ್, ಹ್ಯಾಂಡ್ ಎಂರೈಡ್ರಿ, ನೆಟಿಂಗ್, ಬಟ್ಟೆ ಹೊಲಿಯುವುದು ಇತ್ಯಾದಿ ಅನೇಕ ಕರ ಕುಶಲ ಕಲೆಗಳಲ್ಲಿ ನಿಪುಣತೆ. ಅಲ್ಲದೆ ಸಂಗೀತದಲ್ಲಿಯೂ ಇವರ ಆಸಕ್ತಿ ಇದ್ದಿತ್ತು, ಇವರು ಎನ್ ಸಿ ಸಿ ಯಲ್ಲಿಯು ಇದ್ದರು. ಕೋ ಕೋ ಆಟಗಾರರಾಗಿಯು ಶಾಲಾ ದಿನಗಳಲ್ಲಿ ಇವರ ಶಾಲೆಯ ಮುಖ್ಯೊಪಾಧ್ಯಾಯಿನಿಯರು  ಬಹಳ ಪ್ರೋತ್ಸಾಹಿಸುತ್ತಿದ್ದರು.

ಕಾಲೇಜಿನಲ್ಲಿ ಇದ್ದಾಗ ಇವರು ಟೆಬಲ್ ಟೆನಿಸ್ ಆಟದಲ್ಲಿ ಯೂನಿವರ್ಸಿಟಿ ಪ್ಲೇಯರ್ ಹಾಗೂ ಕ್ಯಾಪ್ಟನ್ ಹಾಗಿದ್ದು ಅನೇಕ ಶಿಲ್ಡ್ ಪಡೆದಿದ್ದರು. ಓದುವಾಗಲೆ ಚಿತ್ರಕಲೆ, ರಂಗೋಲಿ ಇತ್ಯಾದಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದರು. ಇಷ್ಟು ಮಾತ್ರವಲ್ಲದೆ ಇವರದ್ದು ಬಹಳ ಮೃದ್ದು ಸ್ವಭಾವವಾಗಿದ್ದು ಅಂದಿನ ದಿನಗಳಲ್ಲಿ ಶಾಲೆಗೆ ಹೊಗುತ್ತಿದರೆಂದರೆ ಅವರನ್ನು ಕರೆದು ತಮ್ಮಲಿದ್ದ ಪುಸ್ತಕ ಪೆನ್ಸಿಲ್ ಗಳನ್ನು ಕೊಟ್ಟು ಪಾಠವನ್ನು ಹೇಳಿಕೊಟ್ಟು ಸಂತೋಷ ಪಡುತ್ತಿದ್ದರು. 1974ರಲ್ಲಿ ದೇಶಾದ್ಯಂತ ಸಂಚರಿಸಿದ ಧರ್ಮ ಚಕ್ರವು ಮೈಸೂರಿಗೆ ಬಂದ ಸಂದರ್ಭದಲ್ಲಿ ನಡೆದ ಜೈನ ವಸ್ತುಪ್ರದರ್ಶನದಲ್ಲಿ ಇವರು ರಂಗೋಲಿಯಲ್ಲಿ ಸಿದ್ದರನ್ನು ಆರು ಅಡಿ ಎತ್ತರದ ಪದ್ಮಾವತಿ ದೇವಿಯನ್ನು ಬಿಡಿಸಿದ್ದರು. ಅಲ್ಲದೆ ಶ್ರವಣ ಬೆಳಗೊಳದ ಬೆಟ್ಟದ ಮಾಡಲ್, ತೆಂಗಿನ ಕಾಯಿಯ ಮೇಲೆ ಪಾರ್ಶ್ವನಾಥ ತೀರ್ಥಂಕರರ ಹಾಗೂ ಮಹಾವೀರ ತೀರ್ಥಂಕರರನ್ನು ಚಿತ್ರಿಸಿ ಪ್ರದರ್ಶಿಸಿದ್ದರು. ಅದಕ್ಕಾಗಿ ಶ್ರವಣ ಬೆಳಗೊಳದ ಶ್ರೀಯವರಿಂದ ಎರಡು ಬಹುಮಾನವನ್ನು ಪಡೆದಿದ್ದನ್ನು ಹೀಗಾ ನೆನಪಿಸಿಕೊಳುತ್ತಾರೆಇವರಿಗೆ ಗೌರವ
ಬಹುಮಾನ ಇಂದಿನ ತನಕವು ನಡೆದು ಬಂದಿದ್ದೆ. ಮೈಸೂರಿನಲ್ಲಿ ನಡೆವ ದಸರ ವಸ್ತು ಪ್ರದರ್ಶನದ ಮಹಿಳಾ ವಿಭಾಗ
ಮತ್ತು ಲಲಿತ ಕಲಾ ವಿಭಾಗಗಳಲ್ಲಿ ಪ್ರತಿ ವರ್ಷವು ಇವರ ಪೆಯಿಂಟಿಂಗ್ ಗಳನ್ನು ಪ್ರದರ್ಶಿಸುವವರು ಮತ್ತು
ಒಂದೇರಡು ಬಹುಮಾನವಂತು ನಿಶ್ಚಿತ ಇವರ ಆಸಕ್ತಿಯ ಅರಿವು ಇನ್ನು ಹೆಚ್ಚಾಗಿದೆ. ಹೊಲಿಗೆಯಲ್ಲಿ ಆಸಕ್ತಿ
ಇದ್ದು ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ನವೀನ ಶೈಲಿಯಲ್ಲಿ ಬಟ್ಟೆಗಳನ್ನು ಹೊಲಿದು ಎಂರೈಡರಿ, ಪೆಯಿಂಟಿಗ್
ಗಳನ್ನು ಮಾಡುತ್ತಿದ್ದರು, ಆಸಕ್ತಿ ಇದ್ದವರಿಗೆ ಹೇಳಿ ಕೊಡುತ್ತಿದ್ದರು. ತಮ್ಮ ಮಕ್ಕಳ ಶಾಲೆಗಳಲ್ಲಿ
ಡ್ಯಾನ್ಸ್ ಕೊರಿಯೊಗ್ರಾಫ್ ಮಾಡಲು ಕೂಡ ಹೋಗುತ್ತಿದ್ದರು. ಮದುವೆ ಹೆಣ್ಣಿಗೆ ಅಲಂಕಾರ ಮಾಡುವುದು ಸುಂದರವಾಗಿ
ಮೆಹಂದಿ ಹಾಕುವುದು ಅದು ಕೂಡ ಆಗಿನ ದಿನಗಳಲ್ಲಿ ಮೆಹಂದಿಯನ್ನು ಸಣ್ಣ ಕಡಿ ಬಳಸಿ ಹಾಕುತ್ತಿದರು, ಇಂದಿನ
ಹಾಗೆ ಕೊನ್ ಬಳಕೆ ಹಾಗಿರಲ್ಲಿಲ್ಲಾ. ಇವರ ಆಸಕ್ತಿ ಸೂಜಿ ದಾರ ಪೆಯಿಂಟಿಂಗ್ ಬ್ರೆಷ್ ಗಳಲ್ಲಿ ಮಾತ್ರವಲ್ಲದೆ
ಊಟ ತಿಂಡಿ ಆರೋಗ್ಯ ಕಡೆಗೂ ಇದ್ದಿತ್ತು.

ಮನೆಯ
ಹಿರಿಯರಿಂದ ಕಲಿತು ಚಿಕ್ಕದಾಗಿ ಆಯುರ್ವೇದ ಔಷಧಿ ಪುಡಿಗಳನ್ನು ನೋವಿನ ಎಣ್ಣೆಗಳನ್ನು, ಚರ್ಮದ ಅಂದಕ್ಕೆ
ಬೇಕಾಗುವ ಎಣ್ಣೆಗಳನ್ನು ಕಷಾಯದ ಪುಡಿಗಳನ್ನು ಮಾಡುತ್ತಿದ್ದರು ಈಗಲೂ  ಮಾಡುತ್ತಾರೆ. ಕಾಲ ಕಾಲದಲ್ಲಿ ದೊರಕುವ ವಿಧ ವಿಧ ಹಣ್ಣುಗಳ
ಜೂಸ್ ಸಿರಫ್ ಗಳನ್ನು ಕೂಡ  ಅಯಾ ಹಣ್ಣಿನ ಕಾಲದಲ್ಲಿ
ತಯಾರು ಮಾಡುವರು ಮತ್ತು ಆರ್ಡರ್ ತೆಗೆದು ಕೊಂಡು ಬೇಕಾದವರಿಗೆ ಮಾಡಿಯು ಕೂಡ ಕೊಡುತ್ತಾರೆ. ಕಲೆಯಲ್ಲಿ
ಮುಂದಿನ ಹೆಜ್ಜೆ ಇವರು 1988ರಲ್ಲಿ ಫಿಡಿಲೆಟ್ ಕಂಪನಿಗೆ ಕಂಪನಿಯ ರಿಜಿಸ್ಟರ್ ಟೀಚರ್ ಹಾಗಿದ್ದು ಅನೇಕ
ಶಾಲಾ ಕಾಲೇಜುಗಳಲ್ಲಿ ವರ್ಕ್ ಶಾಫ್ ನಡೆಸಿದ್ದಾರೆ. ಅಂದಿನಿಂದ ಹಿಂದಿನವರೆಗು ಸಾವಿರಾರು ಮಂದಿ ಹೆಂಗಳೆಯರಿಗೂ
ಮಕ್ಕಳಿಗೂ ಹಲವಾರು ತರಹದ ಚಿತ್ರಕಲೆ ಹೇಳಿಕೊಟ್ಟಿದ್ದಾರೆ ನಿಬ್ ಪೆಯಿಂಟಿಂಗ್, ಗ್ಲಾಸ್ ಪೆಯಿಂಟಿಂಗ್,
ಚಾರ್ ಕೊಲ್ ಪೆಯಿಂಟಿಂಗ್, ಫ್ಲವರ್ ಮೆಕಿಂಗ್, ಅಲ್ಯೂಮಿನಿಯಂ ಎಂಬೊಜ್ಂಗ್ ತರಹ ತರಹದ  ನ್ಯೂರಲ್ ಗಳು ಅಲ್ಲದೆ ವರ್ಲಿ ಹಾರ್ಟ್ ಬಹಳ ಸೂಕ್ಷ್ಮವಾಗಿ
ಚಿತ್ರಿಸುವ ಗಂಜಿಫಾ ಪೆಯಿಂಟಿಂಗ್, ಮಧುಬನಿ ಪೆಯಿಂಟಿಂಗ್, ರಾಜಸಾನಿ ಪೆಯಿಂಟಿಂಗ್, ಚಿನ್ನದ ಹಾಳೆಗಳನ್ನು
ಬಳಸುವ ಮೈಸೂರು ಪಾರಂಪರಿಕ ಪೆಯಿಂಟಿಂಗ್, ಚಿನ್ನದ ಹಾಳೆಗಳನ್ನು ಬಳಸುವುದು ಹಾಗೂ ಒಡವೆಗಳಿಗೆ  ಪ್ರಾಮುಖ್ಯತೆಗಳಿರುವ ತಂಜಾವೂರು ಪೆಯಿಂಟಿಂಗ್, ಅಂಧ್ರ ಪ್ರದೇಶದ
ಚಿತ್ರಕಲೆ, ಕಾಂಗ್ರ ಚಿತ್ರಕಲೆ ಹೀಗೆ ಇವರು ದೇಶದ ಬಹುತೇಕ ಎಲ್ಲಾ ರಾಜ್ಯಗಳ ಪಾರಂಪರಿಕ ಶೈಲಿಯ ಚಿತ್ರಗಳಲ್ಲಿ
ಪರಿಣಿತಿ ಪಡೆದಿದ್ದಾರೆ. ತಮ್ಮ ವಿಧ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ, ಇವರು ಮಾಡುವ ಫ್ಯಾಭ್ರಿಕ್
ಪೆಯಿಂಟಿಂಗ್ ಅದ್ಬುತವಾಗಿರುತ್ತದೆ. ಬಣ್ಣಗಳ ಮಿಕ್ಸಿಂಗ್ ಇವರಿಗೆ ಕರಗತ, ಇವರು ಕಲಾಸೃಷ್ಟಿ ಹಾರ್ಟ್
ಅಂಡ್ ಕ್ರಾಫ್ಟ್ ಎಂಬ ಹೆಸರಿನಲ್ಲಿ ಚಿತ್ರ ಕಲಾ ಶಾಲೆಯನ್ನು ಮನೆಯಲ್ಲಿರುವ ಮಹಿಳೆಯರನ್ನು ಪ್ರೋತ್ಸಾಹಿಸುವ
ಸಲುವಾಗಿ ತೆರೆದಿದ್ದು ಕೆಲವು ವರ್ಷ ನಡೆದು ಅವರ ಆರೋಗ್ಯದಲ್ಲಿ ವ್ಯತ್ಯಾಸವಾದ 
ಕಾರಣ ಅದನ್ನು
ಮುಚ್ಚ ಬೇಕಾಗಿ ಬಂದಿದ್ದು ಇವರಿಗೆ ಬಹಳ  ಬೇಜಾರಿನ
ಸಂಗತಿ.

ಇವರು
2002ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಜೈನ ಮಹಿಳಾ ಒಕ್ಕೂಟ ನಡೆದ ಸಂದರ್ಭದಲ್ಲಿ ವೇದಿಕೆ ಅಲಂಕಾರ ಅಧ್ಯಕ್ಷೆಯಾಗಿದ್ದು
ಇಂದ್ರದ್ವಜ ಆರಾಧನೆಯ ಸಮಯದಲ್ಲಿ ಬಸದಿಯ ವಿಶೇಷ ಅಲಂಕಾರದ ಜವಬ್ದಾರಿಯು ಇವರದ್ದಾಗಿತ್ತು. ಇವರು ಇಲ್ಲಿನ
ಪದ್ಮಶ್ರೀ ಮಹಿಳಾ ಸಮಾಜದ ಸದಸ್ಯೆಯೂ ಕೂಡ ಹಾಗಿದ್ದಾರೆ. ಮೈಸೂರಿನ ಮಹಾವೀರ್ ಜೈನ್ ಮಿಲನ್ ಸದಸ್ಯೆಯೂ
ಕೂಡ ಹಾಗಿದ್ದಾರೆ, ಮತ್ತು ಅಲ್ಲಿ ಎರಡು ವರ್ಷ ಅಧ್ಯಕ್ಷ ಸ್ಥಾನವನ್ನು ಕೂಡ ನಿರ್ವಹಿಸಿ ಅನೇಕ ಚಟುವಟಿಕೆಗಳನ್ನು
ನಡೆಸಿದ್ದರು. ಪ್ರತಿ ವರ್ಷ ನಡೆಯುತ್ತಿರುವ ಜಿನ ಭಜನಾ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಧಾರ್ಮಿಕ ಚಟುವಟಿಕೆ
ಪೂಜಾರಾಧನೆಗಳಲ್ಲಿ ಸ್ವಾದ್ಯಾಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಇವರು ತಮ್ಮ ಸಾಧನೆ ಎಂದು ಹೆಮ್ಮೆಯಿಂದ
ನೆನೆಯುವುದು ಈ ಚಿತ್ರಕಲೆಗಳನ್ನು. 2013ರಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಇರುವ 14 ಅಡಿ ಎತ್ತರದ ಗರುಡ ದೇವ
ಮತ್ತು ವಿಷ್ಣುವಿನ ಮೈಸೂರು ಶೈಲಿಯ ಸಾಂಪ್ರದಾಯಕ ಚಿತ್ರ ಕಲೆಯ ಪೆಯಿಂಟಿಂಗ್ ನಲ್ಲಿ ಆಭರಣದ ಕುಸರೆ
ಕೆಲಸ ಇವರದ್ದಾಗಿದೆ. 2005ರಲ್ಲಿ ಚಳ್ಳಕೆರೆಯ ಸ್ವಾದ್ಯಾಯ ಭವನಕ್ಕೆ ಆಚಾರ್ಯ ಕುಂದ ಕುಂದರ ಲೈವ್ ಸೈಜ್
ಎತ್ತರದ ಚಿತ್ರವನ್ನು ಮಾಡಿಕೊಟ್ಟಿದ್ದಾರೆ. ಇದನ್ನು ನೋಡಿ ಸಂತೋಷಗೊಂಡು ಅಲ್ಲಿನ ಶ್ರೀಮತಿ ಪದ್ಮ ಮತ್ತು
ಶ್ರೀ ಹೊಂಬಣ್ಣ ದಂಪತಿಗಳು ಇವರಿಂದ ಮೂರುವರೆ ನಾಲ್ಕು ಅಡಿ ಎತ್ತರದ ಜಿನ ಮಾತೆಯ ಮತ್ತು ಹದಿನಾರು ಸ್ವಪ್ನಗಳ
ಸುಂದರ ಚಿತ್ರಗಳನ್ನು ಮಾಡಿಸಿದ್ದಾರೆ. ಅದು ಐದುವರೆ ತಿಂಗಳಲ್ಲಿ ಮುಗಿದಿದ್ದು ಅವರಿಗೆ ಸಂತೃಪ್ತಿ
ತಂದಿದೆ. ಈ ಮದ್ಯೆ ಕುಶ್ಮಾಂಡಿನಿ ದೇವಿಯ ಚಿತ್ರವನ್ನು ಚಿತ್ರಿಸಿದ್ದು. 2019ರ ಮುಖುಟ ಸಪ್ತಮಿಯ ದಿನ
ಶ್ರವಣ ಬೆಳಗೊಳದ ಶ್ರೀಮಠಕ್ಕೆ ನೀಡಿರುತ್ತಾರೆ. ಹಾಗೆಯೇ ಇತ್ತೀಚೆಗೆ ಹೊಂಬುಜ ಶ್ರೀ ಮಠಕ್ಕೆ ಪದ್ಮಾವತಿ
ದೇವಿಯ ಚಿತ್ರವನ್ನು ಮೈಸೂರು ಹಾರ್ಟ್ ಶೈಲಿಯಲ್ಲಿ ಚಿತ್ರಿಸಿ ಕೊಟ್ಟಿದ್ದಾರೆ. ಮೂಡುಬಿದ್ರೆಯ ಶ್ರೀ
ಮಠಕ್ಕಾಗಿ ಒಂದು ಬೋರ್ಡ್ ನಲ್ಲಿ ಜಿನ ಮಾತೆ ಮತ್ತು ಹದಿನಾರು ಸ್ವಪ್ನಗಳನ್ನು ಚಿತ್ರಿಸಿದ್ದಾರೆ. ಜ್ವಾಲಮಾಲಿನಿ
ದೇವಿಯ ಚಿತ್ರವನ್ನು ಚಿತ್ರಿಸ ಬೇಕೆಂಬ ಯೋಜನೆ ಇದೆ, ಜೊತೆಯಲ್ಲಿ ಪಂಚಕಲ್ಯಾಣ ಸಂವತ್ಸರಣದ ಚಿತ್ರಗಳನ್ನು
ಮಾಡಬೇಕೆಂಬ ಆಸಕ್ತಿ ಇಟ್ಟುಕೊಂಡಿದ್ದಾರೆ. ತನಗೆ ಶಕ್ತಿ ಇರುವವರೆಗೆ ಧರ್ಮಕ್ಕೆ ಬೇಕಾದ ಕಾಲ ಕೃತಿಗಳನ್ನು
ಮಾಡಲು ಬಯಸುವೆ ಎಂಬುದು ಇವರ ಅಭಿಮಾನದ ವಿನಯದ ನುಡಿಗಳು. ಜೊತೆಗೆ ತಮ್ಮೆಲ್ಲಾ ಬಯಕೆ ಕಲಾಸಕ್ತಿಗೆ
ಪತಿ ಶ್ರೀ ಚಂದನ್ ರವರ ಪ್ರೀತಿ ಪೂರ್ವಕ ಸಹಕಾರ ಮಕ್ಕಳ ಪ್ರೋತ್ಸಾಹ ಅವರಲ್ಲಿ ಸದ ಉತ್ಸಾಹ ತುಂಬಿರುತ್ತದೆ
ಎಂಬುದು ಇವರ ಅಂಬೋಣ. ಬಣ್ಣಗಳ ಕಲೆಸುವಿಕೆ ಅವರ ರಕ್ತದಲ್ಲಿ ಹರಿದಿದ್ದು ಅದೆ ಅವರ ಶಕ್ತಿ ಮತ್ತು ಉಸಿರಾಗಿದೆ.
ಆರೋಗ್ಯವಿರಲ್ಲಿ ಇರದಿರಲ್ಲಿ ಸದಾ ಚಟುವಟಿಕೆ ಇಂದಿರುವುದು ಇವರ  ಪ್ರಕೃತಿ ಅವರು ಸದಾ ಹೀಗೆಯೆ ಚಟುವಟಿಕೆ ಇಂದಿದ್ದು ಅವರ
ಅನೇಕ ಧಾರ್ಮಿಕ ಚಿತ್ರಗಳು ಹೊರ ಬಂದು ಅವರ ಆಸೆ ನೆರವೇರಲೆಂದು ಹಾರೈಸೋಣ, ಅಷ್ಟೇ 
ಅಲ್ಲಾ ಈ ಕೆಳಗಿನ ಸಂಖ್ಯೆಯಲ್ಲಿ ಅವರನ್ನು ಭೇಟಿಮಾಡಿ ತಮಗೆ ಇಷ್ಟವಾದ ಚಿತ್ರ ಕಲೆಗಳನ್ನು ಅಥವಾ ಇತರೆ ಆಲಂಕಾರಿಕ ವಸ್ತುಗಳನ್ನು ಮಾಡಿಸಿ ಕೊಳ್ಳುವುದರ ಮೂಲಕ ಅವರನ್ನು ಪ್ರೋತ್ಸಾಹಿಸಬಹುದು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್