ವಾರದ ಜೈನ ಸುದ್ದಿಗಳಿಗೆ ನಮಗೆಲ್ಲರಿಗೂ ಸ್ವಾಗತ ಹಾಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ನವರಾತ್ರಿಯ ವಿಶೇಷ ಸಂಚಿಕೆಯೊಂದಿಗೆ ನಿಮಗೆ ತಿಳಿಸುತ್ತಿದ್ದೇವೆ. ರಾಜ್ಯದೆಲ್ಲೆಡೆ ಬಸದಿಗಳಲ್ಲಿ ನಡೆದ ನವರಾತ್ರಿ ಉತ್ಸವದ ವೈಭವಗಳನ್ನು ನೋಡಲು ಬಹಳಷ್ಟು ವೀಡೀಯೋಗಳು ನಮಗೆ ಬಂದಿದ್ದು ಅವುಗಳನ್ನೆಲ್ಲಾ ಒಟ್ಟಾಗಿ ಪ್ರಸಾರ ಮಾಡುತ್ತಿದ್ದೇವೆ ವೀಕ್ಷಿಸಿ.
ಆರತಿಪುರ, ಹರಿಹಂತಗಿರಿ, ಚಿಕ್ಕಪೇಟೆ ಬೆಂಗಳೂರು, ಹೂವಿನ ಹಡಗಲಿ, ಶ್ರೀ ಕ್ಷೇತ್ರ ಹೊಂಬುಜ, ಮಾಗಡಿ ರೋಡು ಬೆಂಗಳೂರು, ಮೂಡುಬಿದಿರೆ, ನರಸಿಂಹರಾಜಪುರ, ಶ್ರವಣಬೆಳಗೊಳ, ಶ್ರೀ ರಂಗಪಟ್ಟಣ, ಸೋಂಧಾ, ತೋವಿನಕೆರೆ, ವಡನಬೈಲು, ಶಿರ್ಲಾಲು ಕ್ಷೇತ್ರಗಳಲ್ಲಿ ನವರಾತ್ರಿಯ ಪೂಜೆಗಳನ್ನು ನೋಡಿ ವೀಕ್ಷಿಸಿದ್ದಿರಲ್ಲಾ ನಮ್ಮ ಧನ್ಯವಾದಗಳು.
ತಮ್ಮ ಮನೆಗಳಲ್ಲಿ ಕೂರಿಸಿದ ಅಂದದ ಬೊಂಬೆಗಳ ವೀಡಿಯೋಗಳು ತುಣುಕುಗಳ ಮಹಾಪೂರವೇ ನಮ್ಮಲ್ಲಿಗೆ ಹರಿದುಬಂದಿದೆ. ಅವುಗಳಲ್ಲಿ ಉತ್ತಮ ಗುಣಮಟ್ಟದ ವೀಡಿಯೋಗಳನ್ನು ಆರಿಸಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ವೀಕ್ಷಿಸಿ.
ಸುಹೀತ್ ಮತ್ತು ಸಿದ್ದಾಂಶ್ ಜೈನ್ ಬೆಂಗಳೂರು, ಡಾ|| ಅಶ್ವಿನಿ ಅಶೋಕ್ ಕುಮಾರ, ಸಮವಸರಣ, ಕಮ್ಮನಹಳ್ಳಿ, ಬೆಂಗಳೂರು, ಮೇಘನಾ ದೀಪಕ್ ಹಾಸನ. ಜೆ.ಪಿ. ನಗರ ಬೆಂಗಳೂರು, ಅರುಣ್ ಕುಮಾರ್ ಜೈನ್, ರಮೇಶ್ ನಗರ, ಬೆಂಗಳೂರು, ವಿಜಯ್ ಕುಮಾರ್., ಇಸ್ರೋ , ಮಂಗಳಾ ಸುರೇಶ ಆರ್. ಆರ್ ಬೆಂಗಳೂರು, ನವಲಗುಂದ ಜೈನ ಬಸದಿ, ಡಾ|| ಅಶ್ವಿನಿ ಅಶೋಕ್ ಬೆಂಗಳೂರು, ಸ್ನೇಹಶ್ರೀ ನಿರ್ಮಲ ಕುಮಾರ್ ಮೈಸೂರು, ಪದ್ಮಮ್ಮ ಬೆಂಗಳೂರು, ಪುಷ್ಪ ನಾಗೇಂದ್ರ ಬೆಂಗಳೂರು, ಬೆಳ್ಳೂರು ನೀವುಗಳೆಲ್ಲ ಕಳುಹಿಸಿದ್ದ ನಿಮ್ಮ ಮನೆಯ ಗೊಂಬೆಗಳ ಅಲಂಕಾರಗಳು ತುಂಬಾ ಚೆನ್ನಾಗಿ ಮೂಡಿಬಂದಿತು. ನಮ್ಮ ವೀಕ್ಷಕರಿಗೂ ಇಷ್ಟವಾಗಿದೆಯೆಂದು ನಾವು ಆಶಿಸುತ್ತಾ ಮತ್ತೆ ಮುಂದಿನ ವಾರದ ಸುದ್ದಿಗಳು ಕಾರ್ಯಕ್ರಮದಲ್ಲಿ ಸಿಗೋಣ . ಜೈ ಜಿನೇಂದ್ರ.














