ಜ್ಞಾನದೀಪಿಕೆಗಳು- 17 / 15-10-2021 / jwalamalanews / 2021

ಆತ್ಮೀಯರೆಲ್ಲರಿಗೂ ನಮಸ್ಕಾರ ಈ ದಿನ ಜ್ವಾಲಾಮಾಲ ಡಾಟ್ ನ್ಯೂಸ್ ವತಿಯಿಂದ ಪ್ರಸಾರಗೊಳ್ಳುತ್ತಿರುವಂತಹ ಸರಣಿಕಾರ್ಯಕ್ರಮ ಜ್ಙಾನ ದೀಪಿಕೆಗಳು ಈ ಸರಣಿಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ ಈ ದಿನ ನಿಮಗೆ ಎರಡು ಕೃತಿಗಳ ಬಗ್ಗೆ ಪರಿಚಯ ಮಾಡಿಕೊಡುತ್ತೇನೆ.ಒಂದು ಬಹಳಮುಖ್ಯವಾಗಿ ಮೋಕ್ಷಶಾಸ್ತ್ರ ಇದೊಂದು ಬೃಹತ್ ಕೃತಿಯಾಗಿದ್ದು ತತ್ವಾತ್ವ ಸೂತ್ರವನ್ನೆ ಹೇಳುವ ಮಹತ್ವದಕೃತಿ ಇದಾಗಿದೆ.ಅನ್ನುವಂತದ್ದು ಬಹಳಮುಖ್ಯ ಎರಡನೆಯದು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜೈನ ಸಂವೇಧನೆ ಎನ್ನುಂತಹ ಕೃತಿಯನ್ನು ನಾನು ಪರಿಚಯ ಮಾಡಿಕೊಡುತ್ತೇನೆ.ಮೊದಲ ಈ ಒಂದು ಗ್ರಂಥವನ್ನು ನಾವು ನೋಡಿದಾಗ   ಮೋಕ್ಷಶಾಸ್ತ್ರ ಈ ಗ್ರಂಥ ಬಹಳ ಪ್ರಮುಖವಾದಂತಹ ಗ್ರಂಥ ಇದನ್ನು ಜೈನ ದಿಗಂಬರ ಟ್ರಸ್ಟ  ಆಧ್ಯಾತ್ಮಕ ಪ್ರಕಾಶನ ಸಂಸ್ಥೆ ಬೆಂಗಳೂರು ಇವರು ಪ್ರಕಟಮಾಡಿದ್ದಾರೆ.ಎನ್ನುವಂತದ್ದು ಇದನ್ನು ಉಮಾಸ್ವಾಮಿ ಆಚಾರ್ಯರು ಬರೆದಂತಹ ಮೊಕ್ಷಶಾಸ್ತ್ರ ಇದನ್ನು ಗುಜರಾತಿ ಟಿಕೆಟ್ ಎಂದು ಶ್ರೀ ರಾಮಾಜಿಪಾಳಿ ಮಾಣಿಚಂದ್ ಶ್ರೀರಾಜ್ಕೂಟ್ ಇವರು ಮಾಡಿರುವಂತದ್ದು ಇದಕ್ಕೆ ಕನ್ನಡ ಅನುವಾದವನ್ನುಶ್ರೀ ಎಂ .ಡಿ ಪಾಟೀಲ್ ಸೇತ್ವಾಲ್ ಮಾಡಿದವರು ಇದನ್ನುಪ್ರಕಾಶನ ಮಾಡಿದವರು ಶ್ರೀ ದಿಗಂಬರ ಜೈನ ಆಧ್ಯಾತ್ಮಕ ಪ್ರಕಾಶನ ಸಂಸ್ಥೆ ಬೆಂಗಳೂರು ಈ ಬೃಹತ್ ಕೃತಿಗೆ ಕೇವಲ 50 ರೂಪಾಯಿಯನ್ನು ಇಡಲಾಗಿದೆ.ಇದು ಸಿಗುವಂತಹ ಸ್ಥಳ ದಿಗಂಬರ ಜೈನ ಆಧ್ಯಾತ್ಮಕ ಟ್ರಸ್ಟ  ರಂಗಸ್ವಾಮಿ ಗುಡಿ ಬೀದಿ ಬೆಂಗಳೂರು ಅಲ್ಲಿ ಸಿಗುತ್ತೆ ಮತ್ತೆ ಬೆಳಗಾವಿಯಲ್ಲಿ ಡಾಕ್ಟರ್ ಎಸ್ ಬಿ ಎಮ್ ಇಲ್ಲಿ ಸಿಗುತ್ತೆ ಇದು 2003ರಲ್ಲಿ ಮೊದಲನೆ ಆವೃತ್ತಿ ಪ್ರಕಟವಾಯಿತು ಅನ್ನುವಂತದ್ದು ಈ ಒಂದು ಕೃತಿಯ ಮಹತ್ವವನ್ನ ಇಲ್ಲಿ ಗಮನಿಸಿದಾಗ ಇಡೀ ವಿಶ್ವದಲ್ಲಿ ಸಮಸ್ತ ಪುಣ್ಯ ಕೋಟಿಗೆ ಸಲುವಾಗಿ ಎರಡೆರಡುಮಾರ್ಗ ನಮಗೆ ಗೊತ್ತಿರುವಂತದ್ದು ಒಂದು ಸಂಸಾರಿ ಮಾರ್ಗ ಮತ್ತು ಮೊಕ್ಷಮಾರ್ಗ ಎನ್ನುವಂತದ್ದು ಅಂದರೆ ಇವೆರಡನ್ನು ಹೊರೆತು ಪಡಿಸಿ ಯಾವುದು ಯಾವುದೇ ಕಾಲದಲ್ಲಿಯೂ ಮೂರನೇ ಭಾಗ ಸ್ವಾಭಾವ ಸಿದ್ಧವಾಗಿಯೂ ಉಪಲಬ್ದ ಇರುವ ಸಾದ್ಯತೆ ಇಲ್ಲ ಮಾತನ್ನು ಪ್ರಸ್ತಾವನೆಯಲ್ಲಿ ಹೇಳುತ್ತಾರೆ. ಎನ್ನುವುದು ಬಹಳ ಮುಖ್ಯ ಮತ್ತೆ ಈ ಒಂದು ಕೃತಿಯ ಮಹತ್ವವನ್ನು ಹೇಳುವಂತಹ ಸಂಧರ್ಭದಲ್ಲಿಯೂ ಕೂಡ ಇದು ಜೈನ ದರ್ಶನದ ಪ್ರಮುಖ ಗ್ರಂಥವಾಗಿದೆ ಇದರಲ್ಲಿ ಜೈನಚಾರರು ಮತ್ತು ಜೈನ ತತ್ವಜ್ಷಾನ  ಕುರಿತು ಸೂತ್ರಶೈಲಿಯಲ್ಲಿ ವಿಚಾರ ಮಾಡಲಾಗಿದೆ. ಸಂಪೂರ್ಣ ಗ್ರಂಥ 10 ಅಧ್ಯಾಯದಲ್ಲಿ ವಿಭಕ್ತಗೊಂಡು ಪ್ರತಿಯೊಂದು ಅಧ್ಯಾಯದಲ್ಲಿ ಅನೇಕ ಸೂತ್ರಗಳನ್ನ ಮೊದಲನೇ ಅಧ್ಯಾಯನದಲ್ಲಿ ಸಮ್ಯ ದರ್ಶನ ಜ್ಷಾನ ಚಾರಿತ್ರ್ಯ ಚರ್ಚೆಮಾಡತ್ತಾರೆ.ಎರಡನೆ ಅಧ್ಯಾಯದಲ್ಲಿ  ಜೀವತತ್ವದ ವರ್ಣನೆಯನ್ನು ನಾವು ನೋಡಬಹುದು ಮತ್ತೆ ಈ ಒಂದು 3 ಮತ್ತು 4 ಅಧ್ಯಾಯದಲ್ಲಿ  ಸಂಸಾರಿಜೀವಗಳು ವಾಸಮಾಡುವಂತಹ ಸ್ಥಾರ ರೂಪವಾದ ಭೂಲೋಕ ಮರ್ತ್ಯಲೋಕ ಊರ್ದ್ವಲೋಕಗಳ ಬಗ್ಗೆಯೂ ಕೂಡ ಇಲ್ಲಿ ಚರ್ಚೆ ನೆಡೆಯುವಂತದ್ದು.ಮತ್ತು 5ನೇ ಅಧ್ಯಾಯದಲ್ಲಿ ಅಜೀವ ತತ್ವದ ವರ್ಣನೆ ಇರುವಂತದ್ದು. ಮತ್ತು ಪುದ್ಗಲ ಜೀವಗಳ ಬಗ್ಗೆ ಮಾತನಾಡುತ್ತಾನೆ.ಮತ್ತು 6 ಮತ್ತು 7ನೇ ಅಧ್ಯಾಯದಲ್ಲಿ ಆಸ್ರವ ತತ್ವದ ವರ್ಣನೆ ಇದೆ. ಮತ್ತು 7ನೇ ಅಧ್ಯಾಯದಲ್ಲಿ ಶುಭಾಶ್ರವದ ವರ್ಣನೆ ಇದೆ.8ನೇ ಅಧ್ಯಾಯದಲ್ಲಿ ಬಂಧತತ್ವದ ವರ್ಣನೆ ಇದೆ ಮತ್ತು 9ನೇ ಅಧ್ಯಾಯದಲ್ಲಿ ಸಂವರ ನಿರ್ಜರಿಯ ಬಗ್ಗೆ ಮಾತನಾಡುತ್ತಾರೆ.10ನೇಅಧ್ಯಾಯದಲ್ಲಿ ಸಮ್ಯಚಾರಿತ್ರ್ಯ ಬಗ್ಗೆ ವರ್ಣನೆ ಇದೆ ಸಂಧೇಶರೂಪವಾಗಿ ಸಮಾವೇಶವಾಗಿ ಕೊಟ್ಟಿರುವುದನ್ನು ಈ ಕೃತಿಯಲ್ಲಿ ನೊಡಬಹುದು  ಇಂತಹ ಮಹತ್ವದ ಬೃಹತ್ ಕೃತಿ ನಾವು ಎಷ್ಟು ಜನ ಓದಿದಿವಿ ಎನ್ನುವುದು ಬಹಳಮುಖ್ಯ ಯಾಕೆಂದರೆ ಕೃತಿಗಳನ್ನು ತಗೋಬರುತ್ತಿವಿ ಅಥವ ಯಾರೊಕೊಟ್ಟಾಗ ಮನೆಯಲ್ಲಿ ಇಡುತ್ತೀವಿ ಮತಿಜ್ಞಾನ ಎಂದರೇನು ಶುಧ್ಧಜ್ಙಾನ  ಎಂದರೇನು ಮತ್ತೆ ರಸಜೀವಗಳು ಯಾವುವು ಅವುಗಳ ಭೇಧಗಳು ಯಾವುವು  ಪಂಚೇಂದ್ರೀಯಗಳು ಯಾವುವು ಅವುಗಳ ಕ್ರಿಯೆ ಏನು ಎಲ್ಲದರಬಗ್ಗೆ ಆತ್ಮದ ರೂಪವನ್ನು ಏಕೆ ಮರುಕಳಿಸುತ್ತದೆ ಹೀಗೆ ಬಹಳಷ್ಟು ವಿಚಾರಗಳನ್ನು ಕನ್ನಡದ್ದೇ ಎನ್ನುವ ಹಾಗೆ ಎಮ್ .ಬಿ ಪಾಟೀಲರು ಅನುವಾದ ಮಾಡಿದ್ದಾರೆ. ಈ ಕೃತಿಯನ್ನು  ಓದಲೇ ಬೇಕು ನಾನು ನಿಮ್ಮಲ್ಲಿ ಕೇಳಿಕೋಳ್ಳುತ್ತೇನೆ. ಮತ್ತೋಂದು ಕೃತಿ ನಾನು ಹೇಳಿದಹಾಗೆ ಆಧುನಿಕ ಕನ್ನಡ ಪ್ರಗತಿಪರ ಸಾಹಿತ್ಯದಲ್ಲಿ ಜೈನ ಸಂವೇಧನೆ ಈ ಕೃತಿಯನ್ನು ಬರೆದವರು ನಾಡಿನ ಪ್ರಸಿಧ್ಧ ಕಾದಂಬರಿಕಾರರಾದ ಲೇಖಕರಾದ ಪ್ರಸ್ತುತ ಈಗ ಕೇಂದ್ರಸಾಹಿತ್ಯ ಅಕಾಡೆಮಿ ಸದಸ್ಯರಾದ ಕನ್ನಡ ಸಲಹಾಸಮಿತಿಯಸದಸ್ಯರಾದ  ಢಾಕ್ಟರ್ ಬಾಲಾ ಸಾಯಿ ಲೋಕಂ ಪುರರು ಇದು ಅವರು ಪಿ ಎಚ್ ಡಿ ಪಧವಿಗ  ಕನ್ನಡವಿಶ್ವವಿದ್ಯಾಲಯಕ್ಕಾಗಿ ಸಾದರಪಡಿಸಿದಂತಹ ಮಹಾನ್ ಗ್ರಂಥ ಅನ್ನುವಂತಹದ್ದು ಈ ಕೃತಿಯು ಕೂಡ ಸುಮಾರು 160 ರೂಪಾಯಿ ಬೆಲೆ 2005 ಪ್ರಕಟ ಆಗಿರುವಂತದ್ದು ಮತ್ತೇ ಶಕ್ತಿ ಪಬ್ಲೀಷರ್ಸ ಇದನ್ನು ಪ್ರಕಟಮಾಡಿರುವಂತದ್ದು. ಜೈನ ಸಂವೇಧನೆ ಕೃತಿಯನ್ನು ತನ್ನ ತಾಯಿಗೆ ಅರ್ಪಣೆ ಮಾಡಿದ್ದಾರೆ  ಅನ್ನುವುದು ಬಹಳ ಮುಖ್ಯ ಎಂದು ಹೇಳಬಹುದು ಇದನ್ನು  ಅವರು ಯಾರ ಕೈ ಕೆಳಗೆ ಪಿ.ಎಚ್.ಡಿ ಮಾಡಿದ್ರು ಅಂದರೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೆ ಡಾಕ್ಟರ್ ರಹಮತ್ ತರೀಕೆರೆ ಅವರು ರಿಟೈಡ್ ಆದರು ಅವರ ಕೈ ಕೆಳಗೆ ಅವರು ಈ ಪಿ. ಎಚ್.ಡಿ  ಮಹಾನ್ ಕೃತಿಯನ್ನು ಸಿದ್ಧ ಪಡಿಸಿದರು ಅವರು ತಮ್ಮ ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ಒಂದು ಸಾಸ್ಕೃತಿಕ ಕಾರಣಕ್ಕಾಗಿ ಈ ಕೃತಿ ಬಹಳ಼ಷ್ಟು ಮುಖ್ಯವಾಗಿದೆ ಆಧುನಿಕತೆಯ ಸಂಧರ್ಭದಲ್ಲಿ ತನ್ನ ಸಾಂಸ್ಕೃತಿಕ ಗುರುತುಗಳನ್ನು ಉಳಿಸಿ ಕೊಳ್ಳುತ್ತಾ ಆದರೆ ಅದರ ಸಂಪ್ರದಾಯದ ಭಾಗದ ಜೊತೆ ನಿರಾಕರಣೆ ಮಾಡುತ್ತಾ ಒಂದು ಹಿಬ್ಬಗೆಯ ಸೆಣೆಸಾಟಮಾಡುತ್ತಿರುವ ಸಮುದಾಯಳಲ್ಲಿ ಕರ್ನಾಟಕ ಜೈನ ದಿಗಂಬರ ಸಮುದಾಯವು ಒಂದು ಈ ಸಂಕೀರ್ಣ ಅನುಭವದಿಂದ ಜೈನ ಸಮುದಾಯದಿಂದ

ಬಂದ ಕಥನಕಾರರಾದ ಮಿರ್ಜಿ ಅಣ್ಣಾರಾಯರಿರ ಬಹುದು ಶಾಂತಿನಾಥದೇಸಾಯಿ ಮುಂತಾದ ಲೇಖಕರು ತಮ್ಮ ಕೃತಿಗಳಲ್ಲಿ ಈಗಾಗಲೆ ಅಭಿವ್ಯಕ್ತಪಡಿಸಿದ್ದಾರೆ.ಈ ಸಾಹಿತ್ಯವನ್ನು ಇಟ್ಟುಕೊಂಡು ಬಾಲಾಸಾಯಿ ಲೋಕಂ ಪುರರು ಅರ್ಥಪೂರ್ಣವಾದ ಸಾಂಸ್ಕೃತಿಕ ವಿಶ್ಲೇಷಣೆ ಮಾಡಿದ್ದಾರೆ.ಅಂತ ಬರೆಯುತ್ತಾರೆ ಮತ್ತೆ ಲೋಕಂ ಪುರರು ಸ್ವತಹ ಜೈನ ದಿಗಂಬರ ಸಮುದಾಯಕ್ಕೆ ಸೇರಿದವರು ಹಾಗು ಕಾದಂಬರಿಕಾರರಾಗಿ ಲೋಕದ  ತಲ್ಲಣಗಳನ್ನು ಅಭಿವ್ಯಕ್ತ ಕೊಟ್ಟವರು ಆದ್ದರಿಂದ ಇಲ್ಲಿನ ಧಾರ್ಮಿಕ ಲೋಕದ ಅನೇಕ  ಹೊಸ ಹೊಸ ಸಂಗತಿಗಳನ್ನು ತಮ್ಮ ಚರ್ಚೆಯಲ್ಲಿ ತಂದು ವಿಶ್ಲೇಶಿಸಲು ಮತ್ತು ಅನುಭವ ಲೋಕದ ಸೃಜನಶೀಲ ಕೃತಿಯನ್ನು ಕಟ್ಟುವಿಕೆ ಸಮಸ್ಯೆಯ ಸಮೇತ ಚರ್ಚಿಸಲು ಸಾಧ್ಯವಾಗಿದೆ ಅವರು ಬರೆಯುತ್ತಾರೆ.ಹಾಗಾಗಿ ಈ ಒಂದು ಕೃತಿ ಬಹಳ ಮುಖ್ಯವಾಗಿ ಒಂದು ತಲೆಮಾರಿನ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಮತ್ತು ಭಗಾವನ್ ಮಹಾವೀರರ ಹುಟ್ಟಾದ ನಂತರ ಕವಲುಗಳಬಗ್ಗೆ ಧರ್ಮಸೂಕ್ಷ್ಮತೆಯ ಬಗ್ಗೆ ಜೈನ ಆರಾಧನ ಕಥೆಗಳ ಬಗ್ಗೆ ಜೈನಧರ್ಮ ಅಸ್ತಿತ್ವದ ಚಿಂತನೆ ಜೈನ ಕಥಾಪರಂಪರೆ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಮತ್ತೆ ಜೈನ ಧರ್ಮದಲ್ಲಿ ಇರುವಂತಹ  ಬೇರೆ ಬೇರೆ ಶ್ವೇತಾಂಬರರು ದಿಗಂಬರರು ಮತ್ತೆ ಜೈನ ಧರ್ಮದ ಮೇಲೆ ಇರುವ ರಾಜಕೀಯ ಒತ್ತಡ ಮತ್ತು ಮತಾಂತರಗಳ ಬಗ್ಗೆ ಸಾಮಾಜಿಕ ನೆಲೆ ಆರ್ಥಿಕ ನೆಲೆ ಧಾರ್ಮಿಕ ನೆಲೆಗಳ ಬಗ್ಗೆ ಅತ್ಯಂತ ಇದಾಗಿ ಅವರು ವಿಶ್ಲೇಷಣೆ ಮಾಡಿದ್ದಾರೆ.ಆಧುನಿಕ ಜೈನ ಕನ್ನಡ ಸಾಹಿತ್ಯದಲ್ಲಿ ಅವರು ಧಾರ್ಮಿಕಕಾದಂಬರಿ ಆರ್ಥಿಕ ಕಾದಂಬರಿ ಸಾಮಾಜಿಕ ಕಾದಂಬರಿಗಳನ್ನು ವಿಶ್ಲೇಷಣೆ ಮಾಡಿದ್ದಾರೆ.ಮತ್ತೆ ಜೈನ ಮಹಿಳೆಯ ಕೌಟುಂಬಿಕ ಸ್ಥಾನ ಜೈನ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಜೈನ ಮಹಿಳೆ ಜೈನರ ಕಾದಂಬರಿಗಳಲ್ಲಿ ಮಹಿಳೆಯ ಪ್ರಾಧಾನ್ಯತೆ ಹೀಗೆ ಬಹಳಷ್ಟು ವಿಷಯಗಳನ್ನು ಈ ಕೃತಿ ಚರ್ಚೆ ಮಾಡುತ್ತದೆ.ಆದ್ದಂರಿಂದ ಇದು ಒಂದು ಮಹತ್ವದ ಕೃತಿ ಎಂದರೆ ತಪ್ಪಾಗಲಿಕಿಲ್ಲ.ಈ ಕೃತಿ ಓದುವುದರ ಮೂಲಕ ನಮ್ಮ ಜ್ಞಾನವನ್ನು ವಿಸ್ತಾರಮಾಡಿಕೊಳ್ಳುವ ಮತ್ತು ನಮ್ಮ ಚಿಂತನೆಗಳನ್ನು ಮರುಚಿಂತನೆ ಮಾಡಿಕೊಳ್ಳುವಂತಹ ಮತ್ತೇ ಮತ್ತೇ ಯೋಚನೆಮಾಡಲಿಕೆ ಅವಕಾಶ ಆಗುತ್ತದೆ.ಮತ್ತಷ್ಟು ಪುಸ್ತಕಗಳನ್ನು ಕೊಂಡು ಓದಿ ಕೆಲವರು ಓದುಗರು ಜಾಸ್ತಿಆಗಿದ್ದಾರೆ ಅಂತಾರೆ ಇನ್ನು ಕೆಲವರು ಓದುಗರು ಇಲ್ಲ  ಅಂತಾರೆ ಸೊಷಿಯಲ್ ಮೀಡಿಯಾ ಬಂದ ಮೇಲೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಕೇಳುಗರ ಸಂಖ್ಯೆ ಜಾಸ್ತಿ ಆಗಿದೆ.ಪುಸ್ತಕಗಳನ್ನು ಕೇಳುವುದಕಿಂತ ನೋಡುವುದಕಿಂತ ಓದುವುದು ಬಹಳ ಮುಖ್ಯ.