ಉಗಾರ ಬುದ್ರುಕ/ ಕ್ಷೇತ್ರ ಪರಿಚಯ- 23 / ಬೆಳಗಾವಿ ಜಿಲ್ಲೆ. ಅಥಣಿ ತಾಲ್ಲೂಕ್ / ಜ್ವಾಲಾಮಾಲಾ ನ್ಯೂಸ್ / 2021

ಜೈ ಜಿನೇಂದ್ರ ವೀಕ್ಷಕರೆ, ನಿಮ್ಮಗೇಲ್ಲಾ ತಿಳಿದಿದೆ ನಾಡಹಬ್ಬ ದಸರ ಆಚರಣೆಯಲ್ಲಿ ಪ್ರಥಮ ಸ್ಥಾನ ಮೈಸೂರಿಗೆ ಸಲ್ಲುತ್ತದೆ. ಈ ದಸರದ ಆಯುದ್ದ ಪೂಜೆ ಆಚರಣೆಗೆ ಮತ್ತೊಂದು ಹೆಸರು ಉಗಾರ ಬುದ್ರುಕ ಗ್ರಾಮ. ಇಲ್ಲಿ ವಿಜೃಂಭಣೆಯಿಂದ ಈ ಹಬ್ಬದ ಸಂಭ್ರಮ ನಡೆಯುವುದು, ಅದರಲ್ಲೂ ಇಲ್ಲಿ ನಡೆಯುವುದು ಮಾತೆ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ. ಇದರ ಹಿನ್ನೆಲೆಯಲ್ಲಿ ಒಂದು ಬೃಹತ್ ಇತಿಹಾಸದ ಕಥೆ ಇದೆ. ಮುಂದೆ ಪ್ರಸ್ತಾಪಿಸುತ್ತೇನೆ.

ಉಗಾರ ಬುದ್ರುಕ, ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅತ್ತಣಿ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ಅದರೆ ಧಾರ್ಮಿಕ ಸಂಸ್ಕೃತಿಯಲ್ಲಿ ದೊಡ್ಡಮಟ್ಟದಲ್ಲಿ ಮೇರೆದಿರುವ ಮೇರೆಯುತ್ತಿರುವ ಹಳ್ಳಿ, ಇಲ್ಲಿ ಪೂರಾತನ ಶ್ರೀ ನೇಮಿನಾಥ ಬಸದಿ ಇದ್ದು ಕಪ್ಪು ಶಿಲೆಯ ಪದ್ಮಾಸನ ಭಂಗಿಯಲ್ಲಿರುವ ಸುಂದರ ಶ್ರೀ ನೇಮಿನಾಥ ಸ್ವಾಮಿ ಇಲ್ಲಿನ ಮೂಲ ಮೂರ್ತಿ ಐನಾಪುರದಲ್ಲಿ ಭೂಗರ್ಭದಿಂದ ದೊರೆತಂತಹ ವಿಗ್ರಹವಾಗಿದೆ. ಈ ಬಸದಿಯು 2011ರಲ್ಲಿ ಜೀರ್ಣೋದ್ಧಾರಗೊಂಡಿದ್ದು ವಿಶಾಲವಾದ ಬಸದಿಯಾಗಿದೆ. ಭಗವಾನ್ ಶ್ರೀ ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, 24 ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇಲ್ಲಿನ ಇತಿಹಾಸದ ಬಗ್ಗೆ ಸ್ಥಳಿಯ ಟ್ರಸ್ಟ್ ನವರು ಹೀಗೆ ಹೇಳಿದ್ದಾರೆ.

ಶ್ರೀ ನೇಮಿನಾಥ ಸ್ವಾಮಿ ವಿಗ್ರಹವು ಭೂಗರ್ಭದಿಂದ ದೊರೆತಂತಹ ಪ್ರಸಂಗವನ್ನು ವಿವರಿಸಿದರು.

ನಾನು ಮೊದಲೇ ಹೇಳಿದಂತೆ ಇಲ್ಲಿನ ಪ್ರಸಿದ್ದ ಇತಿಹಾಸ ಹೀಗಿದೆ. ಮಾತೆ ಪದ್ಮಾವತಿ ಅಮ್ಮನವರು ಕುಂಬೋಜದಿಂದ ಇಲ್ಲಿ ಬಂದು ನೆಲೆಸಿದ ಬೃಹತ್ ಕಥೆ. ಹಿಂದೆ ಇಲ್ಲಿ ಗೌಡರ ಮನೆಯ ಸೊಸೆಯಾಗಿ ದೇವಿಯ ಆಶೀರ್ವಾದದಂತೆ ಕುಂಭೋಜದಿಂದ ಹೆಣ್ಣನ್ನು ತರಲಾಗಿ ಆಕೆಯ ಅನನ್ಯ ಭಕ್ತಿಯ ಪ್ರಭಾವದಿಂದ ಕುಂಭೋಜದಿಂದ ಆಕೆಯ ಸಲುವಾಗಿ ಮಾತೆ ಪದ್ಮಾವತಿ ದೇವಿ ಉಗಾರಕ್ಕೆ ಬಂದು ನೇಲೆಸಿದ ಬೃಹತ್ ಕಥೆ. ದೇವಿಯು ತನ್ನ ಮಹಿಮೆಯನ್ನು ಸಾಕ್ಷಾತ್ಕರಿಸುವ ಸಲುವಾಗಿ ಆಯುಧ ಪೂಜೆಯ ದಿನದಂದು ಪಲ್ಲಕ್ಕಿ ಉತ್ಸವ ಹಾಗೂ ಅಂದು ಕೃಷ್ಣ ನದಿಯಲ್ಲಿ ಅಮ್ಮನವರ ಅಭಿಷೇಕ ಮಾಡಲಾಗಿ ದೇವಿಯು ಮುತ್ತಿನ ಮಳೆಗರೆಯುತ್ತಾರೆ. ನದಿಯಲ್ಲಿ ಮುತ್ತುಗಳೆ ತೆಲುತ್ತದೆ, ಇದು ಇಲ್ಲಿನ ಇತಿಹಾಸ ಪ್ರಸಿದ್ದ ಕಥೆ. ಇದೆ ರೀತಿ ಪ್ರತಿ ವರ್ಷ ಆಯುದ್ಧ ಪೂಜೆಯ ದಿನ ಕೃಷ್ಣ ನದಿಯಲ್ಲಿ ಪೂಜಾಭಿಷೇಕ ನಡೆದಾಗ ಸ್ವಲ್ಪವಾದರು ಮಳೆ ಬರಲೇ ಬೇಕು ಇದು ನೇಮ. ಆದ್ದರಿಂದ ಇಲ್ಲಿನ ಗುರು-ಹಿರಿಯರ ಪ್ರಕಾರ ಕುಂಭೋಜ ಪಂಡಿತರ ವಂಶಸ್ಥರ ಹೊರತಾಗಿ ಇಲ್ಲಿ ಬೇರೆಯಾರು ಅಮ್ಮನವರ ಪೂಜೆ ಮಾಡುವಂತಿಲ್ಲಾ. ಗೌಡರು ತಮ್ಮ ವಾಡಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಶಸ್ತವಾದ ಮಂದಿರವನ್ನು ನಿರ್ಮಿಸಿ ಭಕ್ತರ ದರ್ಶನದ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೂ ಇಲ್ಲಿನ ಗೌಡರ ಹಾಗೂ ಸ್ಥಳಿಯರ ಸುತ್ತಮುತ್ತಲಿನ ಭಕ್ತರ ಸಹಾಯದಿಂದ ಇತ್ತೀಚೆಗಷ್ಟೆ ಸುವರ್ಣ ಪಲ್ಲಕ್ಕಿ ಮೂರ್ತಿಯನ್ನು ನೀಡಲಾಗಿ ಸೋಂದಾ ಸ್ವಾಮೀಜಿಯವರ ಅಣತೆಯಂತೆ ಹೊಂಬುಜ ಶ್ರೀಗಳವರ ಹಾಗೂ ಸೋಂದಾ ಶ್ರೀಗಳವರ ಪಾವನ ಸಾನಿಧ್ಯದಲ್ಲಿ ಪೂಜೆ ಹಾಗೂ ಮೂರ್ತಿಗಳ ವೇಧಿ ಪ್ರತಿಷ್ಟಾಪನೆ ಕಾರ್ಯಕ್ರಮ ವೈಭವದಿಂದ ನಡೆಯಿತು.

ವೀಕ್ಷಕರೆ ಒಮ್ಮೆಯಾದರು ಭೇಟಿಮಾಡಿ ದರ್ಶನ ಭಾಗ್ಯ ಪಡೆಯಿರಿ.

ಈ ಕ್ಷೇತ್ರ ಪರಿಚಯದ ಪ್ರಾಯೋಜಕರು ಹಜಾರೆ ಟೆಕ್ಸ್ ಟೈಲ್ಸ್ ಹೋಲ್ ಸೇಲ್ ಬಜಾರ್ ರಬಕವಿ ಮತ್ತು  ಹಜಾರೆ ಫೌಂಡೇಶನ್ಸ್ ನ ಪದ್ಮಾವತಿ ಇಂಟರ್ ನ್ಯಾಷಿನಲ್ ಸ್ಕೂಲ್ ಪಿ ಯೂ ಸೈನ್ಸ್ ಅಂಡ್ ಕಮಾರ್ಸ್ ಕಾಲೇಜ್ ರಬಕವಿ ಬಾಗಲಕೋಟೆ.

ಈ ಸಂಸ್ಥೆಯ ಮಾಲೀಕರಾದ ಸತೀಶ್ ವಿ ಹಜಾರೆ ಅವರಿಗೆ ಹೃತ್ಪೂರ್ವಕ

ಅಭಿನಂದನೆಗಳು ಜ್ವಾಲಮಾಲ ಸಲ್ಲಿಸುತ್ತಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್