ಜ್ಞಾನದೀಪಿಕೆಗಳು- 16 / 01-10-2021 / ಜ್ವಾಲಾಮಾಲನ್ಯೂಸ್ / 2021

ಇಂದು ಪರಿಚಯಿಸುತ್ತಿರುವ ಪುಸ್ತಕಗಳು ಸತ್ಸಂಗ ಮತ್ತು ಇತರ ಲೇಖನಗಳು ಮತ್ತು ರನ್ನ ಸಂಪುಟ.

ಡಾ.ಪದ್ಮಿನಿ ನಾಗರಾಜು.

ಲೇಖಕಿ, ಪ್ರಾದ್ಯಾಪಕಿ, ಸದಸ್ಯರು, ಕನ್ನಡ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಆಕಾಡೆಮಿ, ನವದೆಹಲಿ.

ಆತ್ಮಿಯರೇ ನಮಸ್ಕಾರ, ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ ಸರಣಿಕಾರ್ಯಕ್ರಮ ಹೀಗಾಗಲೇ ಪ್ರಾರಂಭವಾಗಿದೆ. ಜ್ಞಾನ ದೀಪಿಕೆಗಳು ಈ ಕಾರ್ಯಕ್ರಮದಲ್ಲಿ ಪುರಾತನ ವಾದಂತಹ ಒಂದು ಕೃತಿ ಮತ್ತು ಇತ್ತೀಚಿನ ಕೃತಿಗಳನ್ನ ಪರಿಚಯ ಮಾಡುವಂತಹ ಒಂದು ಮಹತ್ವದ ಕಾರ್ಯವನ್ನು ಮಾಡುತ್ತಿದ್ದೇವೆ. 

ಈ ದಿನ ನಾನು ತಮಗೆ ಪರಿಚಯ ಮಾಡಿಕೊಡುತ್ತಿರುವಂತಹ ಎರಡು ಕೃತಿಗಳಲ್ಲಿ ಒಂದು ರನ್ನ ಸಂಪುಟ ಎನ್ನುವ ಮಹತ್ವದ ಕೃತಿ ಮತ್ತೊಂದು ಸತ್ಸಂಗ ಮತ್ತು ಇತರ ಲೇಖನಗಳು ಎನ್ನುವಂತಹ ಕೃತಿಯನ್ನು ನಾನು ಇವತ್ತು ಪರಿಚಯ ಮಾಡಿಕೊಡುತ್ತೇನೆ.

ಬಹಳ ಮುಖ್ಯವಾಗಿ ರನ್ನ ಸಂಪುಟ, ಈ ಕೃತಿ ರನ್ನನ ಎರಡು ಕೃತಿಗಳನ್ನು ಸಂಪುಟವಾಗಿ ತಂದಿರುವಂತಹದ್ದು. ಅಜಿತನಾಥ ತಿಲಕಂ ಮತ್ತು ಸಾಹಸ ಭೀಮ ವಿಜಯಂ. ಇದರ ಸಂಪಾದನೆ ಮಾಡಿರುವಂತವರುಪ್ರೊಫೆಸರ್ಹಂಪ ನಾಗರಾಜಯ್ಯ ನವರು.

ಹಂಪಿ ವಿಶ್ವವಿದ್ಯಾನಿಲಯ ಈ ಕೃತಿಯನ್ನು ಹಂಪ ನಾಗರಾಜಯ್ಯ ನವರ ಸಂಪದಕತ್ವದಲ್ಲಿ  ತರುವಂತಹ ಕೆಲಸವನ್ನುಮಾಡಿದ್ದಾರೆ. 2006ರಲ್ಲಿ ಬಂದಂತಹ ಕೃತಿ 100ರೂಪಾಯಿ ಬೆಲೆ ಬಾಳುವಂತಹ ಕೃತಿ. ಈ ಕೃತಿಗೆ ಕರ್ನಾಟಕ ಸರ್ಕಾರ ಸಹಕಾರವನ್ನು ಕೊಟ್ಟಿದರು.  ಈ ಕೃತಿಯನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 10ನೇ ಶಕ್ತಿ ಕವಿ ಎಂದು ರನ್ನ ಕವಿಯನ್ನು ಕರೆಯುತ್ತಾರೆ. ಪಂಪನ ಕಿರಿಯ ಸಮಕಾಲಿನ ಕವಿ  ಎಂದು ಕಾಣಿಸಿಕೊಂಡವರು ರನ್ನ. ಚಕ್ರವರ್ತಿ ಇರವಬೆಡಂಗ ಸತ್ಯಾಶ್ರಯನ ರಾಜಾಶ್ರಯ ಮತ್ತು ದಾನ ಚಿಂತಾಮಣಿ ಅತಿಮಬ್ಬೆಯ ಕೃಪಾಶ್ರಯದ ಸಮಾನ ಪ್ರೀತಿಗೆ ಪಾತ್ರರಾದಂತವರು, ಶಾಸನ ಕವಿಯಾಗಿ, ನಿಘಂಟು ಕಾರರಾಗಿ ಕೂಡ ಪರಿಣಿತಿ ಪಡೆದಂತವರು. ತನ್ನ ತಂದೆ ತಾಯಿ ಬಗ್ಗೆ ಮತ್ತು ಅವರಿಗೆ ಆಶ್ರಯ ಕೊಟ್ಟವರ ಬಗ್ಗೆ ಅತ್ಯಂತ ಅದ್ಬುತವಾಗಿ ಎರಡು ಕೃತಿಗಳನ್ನು ಕೊಡುತ್ತಾರೆ. ಇಂತಹ ಕೃತಿ ಎಲ್ಲರ ಮನೆಯಲ್ಲಿ ಇರ ಬೇಕಾದಂತಹ ಕೃತಿ, ಎಲ್ಲರೂ ಓದಬೇಕಾದಂತಹ ಕೃತಿ. ರನ್ನನ ಸಾಹಸ ಭೀಮ ವಿಜಯ ನಮಗೆ ಶೌರ್ಯವನ್ನು ಹುಟ್ಟುಹಾಕುವಂತಹ ಕೃತಿ. ಬಳೆಮಲ್ಲಾರವನ್ನು ಮಾರುತ್ತಿದಂತಹ ಕುಟುಂಬದ ಮಗನಾಗಿ ಶ್ರವಣ ಬೆಳಗೊಳಕ್ಕೆ ಬಂದು ಅತ್ತಿಮಬ್ಬೆಯನ್ನು ಪರಿಚಯಮಾಡಿಕೊಳ್ಳುವಂತಹ ಕ್ರಿಯೆ ಅವರ ಜೀವಿತ ಕಾಲದಲ್ಲಿ ನಡೆದು ಈ ಎರಡು ಕೃತಿಗಳು ಬಂದಿದೆ. ನಮ್ಮ ಹಿರಿಯ ಪ್ರೊಫೆಸರ್ ನಾಡೋಜ ಹಂಪರವರು ಈ ಕೃತಿಯ ಸಂಪಾದಕರು.

ಮತ್ತೊಂದು ಕೃತಿ ಪರಿಚಯ ಮಾಡಿಕೊಡುತ್ತಿರುವಂತಹದ್ದು ಡಾ|| ಎಂ ಎಸ್ ಪದ್ಮರವರ ಈ ಕೃತಿ  ಸತ್ಸಂಗ ಮತ್ತು ಇತರ ಲೇಖನಗಳು. ಎಂ ಎಸ್ ಶಾಂತರಾಜ ಶರ್ಮ ಮತ್ತು ಶ್ರೀಮತಿ ವಿಲಾಸ್ ಕುಮಾರಿ ಶರ್ಮ ರವರ ಮಗಳು ಡಾ|| ಎಂ ಎಸ್ ಪದ್ಮ. ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲಮೊ ಮತ್ತು ಎಂ ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದು 1991ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದಲ್ಲಿ ಅದ್ಯಾಪಕಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತಾರೆ. ನಂತರ ಪಿ ಹೆಚ್ ಡಿ ಮಾಡುತ್ತಾರೆ, ಆನೆ ಉಪಾದ್ಯಾಯರ ಚಿನ್ನದ ಪದಕ ದೊರೆಯುತ್ತದೆ, ರಾಜ್ಯಮಟ್ಟದ ರಾಷ್ಟ್ರಮಟ್ಟದ ಸಂಮೇಳನಗಳಲ್ಲಿ ಭಾಗವಹಹಿಸಿ

ಪ್ರಬಂಧಗಳನ್ನು ಮಂಡಿಸುತ್ತಾರೆ.

ಮೈಸೂರು ಆಕಾಶವಾಣಿಯಲ್ಲಿ ಸುಮಾರು 20 ವರ್ಷಗಳ ಕಾಲ ಸುಗಮ ಸಂಗೀತದ ಕಲಾವಿದೆಯಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಾಹುಬಲಿ ಭಕ್ತಿಗೀತೆಗಳನ್ನು ಅವರ ಚಿಕ್ಕಮ್ಮನ ಜೊತೆಯಲ್ಲಿ ಅಡಿಯೋ ಕ್ಯಾಸೆಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಅನೇಖ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇವರು ಬಹಳಷ್ಟು ಗ್ರಂಥಗಳನ್ನು ಬರೆದಿದ್ದಾರೆ, ಸರಳ ಸೊಬಗ ಶೈಲಿಯಲ್ಲಿ ಅವರು ಈ ಕೃತಿಯನ್ನು ಬರೆದಿದ್ದಾರೆ. 

ವಿಜಯ ಕರ್ನಾಟಕ ದಿನ ಪತ್ರಿಕೆ ಉಪ ಸಂಪಾದಕರು ಬಂದು ಜೈನ ಧರ್ಮಕ್ಕೆ ಸಂಬಂಧಿಸಿದ ಲೇಖನಗಳನ್ನು ಸಂತ್ಸಂಗ ಎನ್ನುವ ಅಂಕಣಕ್ಕೆ ಬರೆದುಕೊಡಿ ಎಂದು ಕೇಳಿದರು,  ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಅವರ 25 ಅಂಕಣಗಳು ಸಂತ್ಸಂಗ ಎನ್ನುವ ಅಂಕಣದಲ್ಲಿ ಪ್ರಕಟಗೊಂಡವು. ಇವರಿಗೆ ಅ.ನಾ ಚಂದ್ರಕೀರ್ತಿಯವರು, ಪ್ರೊಫೆಸರ್ ಶಿವಚಂದ್ರ ರವರು ಗ್ರಂಥರೂಪದಲ್ಲಿ ಬರಲೇ ಬೇಕು ಎಂದು ಹೇಳಿದಾಗ ಇವರು ಪ್ರಕಟ ಮಾಡುವ ಮನಸ್ಸು ಮಾಡಿ ಈ ಕೃತಿಗಳನ್ನು ತಂದಿದ್ದಾರೆ. ಇದರಲ್ಲಿ ಸುಮಾರು 26 ಕೃತಿಗಳು ಒಂದು ಕಡೆ ಇದ್ದರೆ, ಬೇರೆ ಬೇರೆ ಲೇಖನ ಗಳು ಈ ಕೃತಿಯಲ್ಲಿ ಇದೆ. ಈ ಕೃತಿಗಳು ಪುಟ್ಟ ಪಟ್ಟ ಕೃತಿ ಪುಟ್ಟ ಪಟ್ಟ ಲೇಖನಗಳಾಗಿರುವುದರಿಂದ ಓದುವುದು ಸುಲಭ, ಹಾಗಾಗಿ ಈ ಕೃತಿಯನ್ನು ಮಹತ್ವದ ಕೃತಿ ಎಂದರೆ ತಪ್ಪು ಹಾಗುವುದಿಲ್ಲಾ. ಈ ಕೃತಿಯನ್ನು ಜೈನ ಅಧ್ಯಾಯನ ಸಂಸ್ಥೆ ಶ್ರವಣ ಬೆಳಗೊಳ ಪ್ರಕಟ ಮಾಡಿರುವುದು 2018ರಲ್ಲಿ ಬಂದಂತಹ ಕೃತಿ 100ರೂಪಾಯಿ ಬೆಲೆ ಬಾಳುವಂತಹ ಕೃತಿ.

ಹಾಗಾಗಿ ಈ ಎರಡು ಕೃತಿಗಳು ರನ್ನ ಸಂಪುಟ ಮತ್ತು ಸತ್ಸಂಗ ಮತ್ತು ಇತರ ಲೇಖನಗಳು ಎರಡು ಕೃತಿಗಳು ಮಹತ್ವದ ಕೃತಿಗಳು ಎಂದು ಹೇಳುತ್ತಾ ಮತ್ತೊಂದು ಸರಣಿ ಮೂಲಕ ಮುಂದಿನ ವಾರ ಮತ್ತೆ ಭೇಟಿಯಾಗೋಣ ನಮಸ್ಕಾರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್