ಪರಮಪೂಜ್ಯ ಶ್ರೀ 108 ವರ್ಧಮಾನ ಸಾಗರ ಮುನಿ ಮಹಾರಾಜರು ಹಾಗೂ ಇತರೆ ಆಚಾರ್ಯರುಗಳು ಮತ್ತು ಸಂಘಸ್ಥ ತ್ಯಾಗಿಗಳ ಪಾವನ ಸಾನಿದ್ಯ ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳ ಪಾವನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು, ಸನ್ಮಾನ್ಯ ರಾಷ್ಟ್ರಪತಿಗಳಾದ ರಾಮನಾತ್ ಕೊವಿಂದ್, ಶ್ರೀಮತಿ ಕೊವಿಂದ್, ರಾಜ್ಯಪಾಲರಾದ ಶ್ರೀ ವಾಜುಬಾಯಿ ವಾಲ, ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೆ ಗೌಡರು, ಶ್ರೀ ಎ ಮಂಜು, ಕೆ ಅಭಯ್ ಚಂದ್ರ ಜೈನ್, ಶ್ರೀ ಸಿ ಎಂ ಬಾಲಕೃಷ್ಣರವರು ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದು ರಾಷ್ಟಪತಿಗಳು ನಡೆಸಿದ ಉದ್ಗಾಟನೆಯಲ್ಲಿ ಪಾಲ್ಗೊಂಡರು.
ಪೂಜ್ಯ ಶ್ರೀಗಳು ಗಣ್ಯರುಗಳು ಸಭೆಯನ್ನು ಉದ್ದೇಶಿಸಿ ಹಾಡಿದ ಮಾತುಗಳು ನಿಮ್ಮ ಮುಂದೆ.
ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮಾತನಾಡಿ, ನಮ್ಮ ದೇಶದ ಇತಿಹಾಸದಲ್ಲಿ ಅನೇಕ ಮಹಾಪುರುಷರು, ಸಂತರು, ಮುನಿಗಳು, ಸಮಾಜ ಸುಧಾರಕರು, ದಾರ್ಶನಿಕರು, ಸೋಫಿಗಳು ಹೀಗೆ ಅನೇಕ ಜನರನ್ನು ನೋಡಿದಾಗ ನಮ್ಮ ದೇಶದ ಇತಿಹಾಸವನ್ನು ನೋಡಿದಾಗ ನಮ್ಮ ಸಮಾಜದಲ್ಲಿ ಇರುವಂತಹ ಅಂಕುಡೊಂಕುಗಳನ್ನು ತಿದುವಂತಹ ಪ್ರಯತ್ನವನ್ನು ಅನಾದಿಕಾಲದಿಂದಲು ಮಾಡಿಕೊಂಡು ಬಂದಿದ್ದಾರೆ. ಜೈನ ಧರ್ಮವು ಕೂಡ ಸಮಾಜದಲ್ಲಿ ಶಾಂತಿಯನ್ನು ನೆಮ್ಮದಿಯನ್ನು ಅಹಿಂಸಾ ತತ್ವದ ಮೂಲಕ ಮನುಕುಲದಲ್ಲಿ ಇರಬೇಕು ಎಂದು ಹೇಳಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಭಗವಾನ್ ಬಾಹುಬಲಿ ಎಂದರೆ ಅವರು ಅಹಿಂಸೆಯ ಪ್ರತೀಕ, ಶಾಂತಿಯ ಪ್ರತಿಬಿಂಬ ಇವತ್ತು ಇದನ್ನು ಸ್ಮರಿಸಿಕೊಳ್ಳ ಬೇಕಾದ ಅಗತ್ಯವಿದೆ. ಅವರು ಹೇಳಿರುವಂತಹ ವಿಚಾರಗಳು ಇವತ್ತಿಗೂ ಕೂಡ ನಮ್ಮ ಸಮಾಜದಲ್ಲಿ ದಾರಿ ದೀಪ ನಮಗೆ ಮಾರ್ಗ ದರ್ಶನ ಅನ್ನುವಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ಅವರು ಹೇಳಿರುವಂತಹ ಮಾತುಗಳು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ ಹಾಗೂ ಧ್ಯಾನದಿಂದ ಸಿದ್ದಿ ದೊರೆಯುತ್ತದೆ ಎಮದು ಹೇಳಿದರು.
ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಮ್ಮ ವಿಶ್ವದಲ್ಲಿ ಅಶಾಂತಿ ತುಳುಕುತ್ತಾ ಇದೆ. ಅಶಾಂತಿ ಇಂದ ಶಾಂತಿಗೆ ಬರಬೇಕು, ಹಿಂಸೆ ಇಂದ ಅಹಿಂಸೆಗೆ ಬರಬೇಕು, ಅನಾಚಾರದಿಂದ ಸದಾಚಾರಕ್ಕೆ ಬರಬೇಕು ಎನ್ನುವ ಮಾತುಗಳನ್ನು ಹೇಳುತ್ತಿದ್ದೇವೆ. ಅಂತರಂಗದಲ್ಲಿ ಇರುವಂತಹ ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಇಂತಹ ಆಚರಣೆಯನ್ನು ಮಾಡುತ್ತಿದೇವೆ ಎಂದು ಹೇಳಿದರು.
ಇನ್ನೂ ಅನೇಕ ಗಣ್ಯರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














