ಸರ್ವೋದಯ ಧರ್ಮ ಚಿಂತನ ಮಂಥನ- 43 / 26-09-2021 / ಶ್ರೀಮತಿ. ಚಂದ್ರಿಕಾ ವಿ. / ಮೈಸೂರು

ಈ ದಿನದ ಸರ್ವೋದಯ ಧರ್ಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆ ಮಾಡುತ್ತಿರುವವರು ಕುಮಾರಿ ಪೂರ್ವಿಕ ಜೈನ್ ರವರು .

ಕುಮಾರಿ ಪೂರ್ವಿಕ ಜೈನ್ ರವರು ಮಹಾವೀರ ಸ್ತುತಿಯನ್ನು ಹೇಳಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಈ ದಿನದ ಕಾರ್ಯಕ್ರಮದ  ನಮ್ಮ ಪ್ರಶ್ನೆಗೆ ಉತ್ತರ ಕೊಡಲಿದ್ದಾರೆ ಶ್ರೀಮತಿ ಚಂದ್ರಿಕಾ ವಿಜಯ್ ಕುಮಾರ್ ರವರು ನೀಡಲಿದ್ದಾರೆ. ಇವರು ಶ್ರವಣಬೆಳಗೊಳದ ಶ್ರೀ ಜಿ.ಬಿ ಶಾಂತರಾಜು ಮತ್ತು ಶ್ರೀಮತಿ ಕಮಲಮ್ಮ ನವರ 2ನೆಯ ಸುಪುತ್ರಿಯಾಗಿ ಹಾಗೂ ಅದೇ ಶ್ರವಣಬೆಳಗೊಳದ ದಿವಂಗತ ಧರಣೇಂದ್ರಯ್ಯ ಹಾಗೂ ಶ್ರೀಮತಿ ಲಲಿತಮ್ಮ ನವರ 2ನೆಯ ಸೊಸೆಯಾಗಿ 2 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಬಾಹುಬಲಿ ಪ್ರಾಕೃತ  ವಿದ್ಯಾಪೀಠದಿಂದ  ಭಾರತರತ್ನ ಪದವಿ ಹಾಗೂ ಮಹಾವೀರ ಜೈನ್ ಮಿಲನ್ ಮೈಸೂರು ಇಲ್ಲಿ 7 ವರ್ಷದಿಂದ ಸಕ್ರಿಯ ಕಾರ್ಯಕರ್ತೆಯಾಗಿ ಓದಿನಲ್ಲಿ ಅಭಿರುಚಿಯನ್ನು ಮಾಡುತ್ತಾ ಸ್ಮರಣಾ ಸಂಚಿಕೆಗಳ ಲೇಖನಗಳನ್ನು ಬರೆದಿದ್ದು ಅಧ್ಯಯನದೊಂದಿಗೆ ಬರೆಯುವುದನ್ನು ಮುಂದುವರೆಸುತ್ತಾ ಅವರು ತಮ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಹಾಗೂ ಇವರೊಂದಿಗೆ ತಮ್ಮಲ್ಲಿರುವ ಪ್ರಶ್ನೆಗಳನ್ನು ಕೇಳಲು ಹಲವಾರು ಶ್ರಾವಕಿಯರು ಕಾಯುತ್ತಿದ್ದಾರೆ. ಹಾಗೆಯೇ  ಶ್ರೀಮತಿ ವಿಜಯ್ ಕುಮಾರ್ ರವರು ಪ್ರತಿಯೊಂದು ಪ್ರಶ್ನೆಗಳಿಗೆ ಕೂಲಂಕುಷವಾಗಿ ಸವಿವರವಾಗಿ ಉತ್ತರಿಸಿದರು.