ಸರ್ವರಿಗೂ ಜೈ ಜಿನೇಂದ್ರ, ನಾನು ನಿಮ್ಮ ಪ್ರೀತಿಯ ಸಂಸ್ಕೃತಿ ಎಂ ಜೈನ್ ಏಳನೀರು, ಧರ್ಮದ ಕುಡಿ ಕಾರ್ಯಕ್ರಮದ ಮತ್ತೊಂದು ಸಂಚಿಕೆಗೆ ಪ್ರೀತಿಯ ಸ್ವಾಗತ. ವೀಕ್ಷಕರೆ ನಾವು ಇವತ್ತು ಭಕ್ತಾಂಬರದ ಹದಿಮೂರನೇ ಶ್ಲೋಕದ ಭಾವಾರ್ಥವನ್ನು ತಿಳಿದುಕೊಳ್ಳೋಣ.
(ಸಂಸ್ಕೃತಿ ಎಂ ಜೈನ್ ಏಳನೀರು ರವರು ಭಕ್ತಾಂಬರ ಶ್ಲೋಕವನ್ನು ಬಹಳ ಸುಂದರವಾಗಿ ಹೇಳಿದರು).
(ಸಂಸ್ಕೃತಿ ಎಂ ಜೈನ್ ಏಳನೀರು ರವರು ಹೇಳಿದ ಭಕ್ತಾಂಬರ ಶ್ಲೋಕದ ಭಾವಾರ್ಥವನ್ನು ವಿವರಿಸಿದರು).
ವೀಕ್ಷಕರೆ ಇವತ್ತು ನಮ್ಮ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಬೆಂಗಳೂರಿನ ಇಕ್ಷು ರವರು ಇದ್ದಾರೆ, ಬನ್ನಿ ಇವರ ಒಂದು ಕಿರುಪರಿಚಯವನ್ನು ವಿ ಟಿ ಮುಖಾಂತರ ನೊಂಡಿಕೊಂಡು ಬರೋಣ.
ಬೆಂಗಳೂರಿನಲ್ಲಿ ವಾಸವಾಗಿರುವ ಪದ್ಮಾರಾಜು ಹಾಗೂ ಲಾವಣ್ಯ ರವರ ಪುತ್ರಿ ಕುಮಾರಿ ಇಕ್ಷು ಟಿ ವಿ ಪುಟ್ಟ ವಯಸ್ಸಿನಲ್ಲೇ ನೂರಾರು ಕನಸುಗಳನ್ನು ಹೊತ್ತಿರುವ ೀ ಮುದ್ದು ಪುಟಾಣಿ ಓದುವುದರ ಜೊತೆಗೆ ಧಾರ್ಮಿಕ ಆಸಕ್ತಿಯನ್ನು ಕೂಡ ಹೊಂದಿದ್ದಾರೆ. ದಿನನಿತ್ಯ ಪೂಜೆ ಭಜನೆಯಲ್ಲಾ ಮಾಡುವುದರ ಜೊತೆಗೆ ಇಷ್ಟು ಕಿರಿಯ ವಯಸ್ಸಿನಿಂದಲ್ಲೆ ನೃತ್ಯ, ಸಂಗೀತ ಸೇರಿದಂತೆ ನಿರೂಪಣೆ ಕೂಡ ಮಾಡಿಡುತ್ತಾರೆ. ಬನ್ನಿ ಈ ಪ್ರತಿಭಾವಂತ ಬಾಲಕಿಯನ್ನು ನೋಡಿ ಮಾತನಾಡಿಸೋಣ.
ನಿರೂಪಕರು :- ಜೈ ಜಿನೇಂದ್ರ ಇಕ್ಷು ಕಾರ್ಯಕ್ರಮಕ್ಕೆ ಸ್ವಾಗತ.
ಇಕ್ಷು ಟಿ ವಿ :- ಜೈ ಜಿನೇಂದ್ರ.
ನಿರೂಪಕರು :- ಇಕ್ಷು ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರ ಮೂದಲನೆಯದಾಗಿ ನಮ್ಮ ಕಾರ್ಯ ಕ್ರಮದಲ್ಲಿ ನೀವು ಭಕ್ತಾಂಬರದ ಮೊದಲನೇ ಶ್ಲೋಕವನ್ನು ಹೇಳುತ್ತಿರ.
(ಇಕ್ಷು ಟಿ ವಿ ರವರು ಮೊದಲ ನೇ ಭಕ್ತಾಂಬರ ಶ್ಕೋಕವನ್ನು ಹೇಳಿದರು).
ನಿರೂಪಕರು :- ಅದ್ಬುತವಾಗಿ ಭಕ್ತಾಂಬರ ಸ್ತೋತ್ರವನ್ನ ಹೇಳಿದ್ದಿರಾ, ವೀಕ್ಷಕರೆ ಇಕ್ಷು ಅವರು ಮನೆಯಲ್ಲಿ ಪೂಜೆ ಮಾಡುವುದನ್ನು ನೋಡಿದೇವೆ, ಹಾಗೂ ಅವರು ಭಜನೆ ಕೂಡ ಮಾಡುತ್ತಾರೆ. ಇವತ್ತು ನಮ್ಮ ಕಾರ್ಯಕ್ರಮದಲ್ಲಿ ಇಕ್ಷು ಒಂದು ಜಿನ ವಾಣಿಯನ್ನು ಹೇಳುತ್ತೀರ.
(ಇಕ್ಷು ಟಿ ವಿ ರವರು ಜಿನ ವಾಣಿಯನ್ನು ಹೇಳಿದರು).
ನಿರೂಪಕರು :- ತುಂಬಾನೆ ಚೆನ್ನಾಗಿ ಹಾಡು ಹೇಳುತ್ತೀರ ಇದೆ ರೀತಿ ದಿನ ನಿತ್ಯ ಭಜನೆ ಮಾಡುತ್ತಿರಿ. ನಾವು ಹೀಗ ಧರ್ಮಕ್ಕೆ ಸಂಬಂಧ ಪಟ್ಟಂತಹ ಪ್ರಶ್ನೆಯನ್ನು ಕೇಳುತ್ತೇನೆ ಮೊದಲನೇಯದಾಗಿ ನೀವು ಕರ್ಮದ ಭೇದವನ್ನು ಹೇಳುತ್ತೀರ.
ಇಕ್ಷು ಟಿ ವಿ :- ದ್ರವ್ಯ ಕರ್ಮ, ಭಾವ ಕರ್ಮ, ಕರ್ಮ.
ನಿರೂಪಕರು :- ಸರಿಯಾದ ಉತ್ತರವನ್ನು ಕೊಟ್ಟಿದ್ದೀರ, ಇಕ್ಷು ಭಾವ ಕರ್ಮಗಳ ಹೆಸರನ್ನು ಹೇಳಿ.
ಇಕ್ಷು ಟಿ ವಿ :- ಆತ್ಮನ ರಾಗದಿ ಭಾವಗಳು ಭಾವಕರ್ಮ ಇದೆ.
ನಿರೂಪಕರು :- ಸರಿಯಾದ ಉತ್ತರವನ್ನು ಕೊಟ್ಟಿದ್ದೀರ, ಕೊನೆಯದಾಗಿ ಗಾಥೆಯ ಕರ್ಮಗಳ ಹೆಸರನ್ನು ಹೇಳುತ್ತಿರ.
ಇಕ್ಷು ಟಿ ವಿ :- ಜ್ಞಾನ ವರ್ಣ, ದರ್ಶನ ವರ್ಣ, ಮೋಹನಿಯ, ಅಂತರಾಯ ನಾಲ್ಕು
ಕರ್ಮಗಳು ಇವೆ.
ನಿರೂಪಕರು :- ವೆರಿ ನೈಸ್ ವೀಕ್ಷಕರೆ ನೋಡಿದಿರಲ್ವಾ ಹೇಗೆ ಉತ್ತರಗಳನ್ನು ಕೊಟ್ಟರು ಅಂತ, ನೀವು ಇದೆ ರೀತಿ ಧಾರ್ಮಿಕ ಆಸಕ್ತಿಯನ್ನು ಮುಂದುವರೆಸಿ ಎಂದು ಹೇಳುತ್ತ, ವೀಕ್ಷಕರೆ ಇಕ್ಷು ರವರು ಒಂದು ಕನ್ನಡ ಕವಿತೆಯನ್ನು ಹೇಳುತ್ತಾರೆ ಬನ್ನಿಕೇಳೋಣ.
(ಇಕ್ಷು ಟಿ ವಿ ರವರು ಕನ್ನಡ ಕವಿತೆಯನ್ನು ಹೇಳಿದರು).
ನಿರೂಪಕರು :- ತುಂಬಾ ಚೆನ್ನಾಗಿ ಅದ್ಬುತವಾಗಿ ಕವಿತೆಯನ್ನು ಹೇಳಿದ್ದೀರ. ಕೊನೆಯದಾಗಿ ನಮ್ಮ ಕಾರ್ಯಕ್ರಮದಲ್ಲಿ ಒಂದು ಕಥೆಯನ್ನು ಹೇಳಬೇಕು, ಏಕೆಂದರೆ ಇಕ್ಷು ರವರ ಕಥೆಯನ್ನು ಕೇಳ ಬೇಕು ಎಂದು ಅನಿಸುತ್ತಿದೆ.
(ಇಕ್ಷು ಟಿ ವಿ ರವರು ಮಹಾವೀರ ಮತ್ತು ಆನೆಯ ಕಥೆಯನ್ನು ಹೇಳಿದರು).
ನಿರೂಪಕರು :- ಅದ್ಬುತವಾದ ಕಥೆ , ನೀವು ಹೇಳಿದ ರೀತಿ ತುಂಬಾ ಚೆನ್ನಾಗಿತ್ತು.
ವೀಕ್ಷಕರೆ ನೋಡಿದ್ದೀರಿ ಅಲ್ವಾ ಇಕ್ಷು ಮುದ್ದು ಪುಟಾಣಿ ಎಷ್ಟು ಚೆನ್ನಾಗಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು, ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಲಿ ಎಂದು ಆಶಿಸೋಣ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಧನ್ಯವಾದಗಳು.
ಜೈ ಜಿನೇಂದ್ರ.
ಈಗ ನಿಮ್ಮ ಮುಂದೆ ಧರ್ಮದ ಪಾಠ ಕಾರ್ಯಕ್ರಮ ಪ್ರಸಾರವಾಗಲ್ಲಿದೆ.
‘ಧರ್ಮದ ಕುಡಿ’
ಧರ್ಮದ ಬೆಳೆ ಬಿತ್ತೋಣ
‘ಧರ್ಮ ಪಾಠ’
ಧೀರಜ್ ಜೈನ್, ಹೊಳೆನರಸಿಪುರ.
ಜೈ ಜಿನೇಂದ್ರ ಮಕ್ಕಳೇ ಜ್ವಾಲಮಾಲ ಡಾಟ್ ನ್ಯೂಸ್ ಸಮರ್ಪಿಸುವ ಜೈನ ಧರ್ಮ ಪಾಠ ಮಾಲಿಕೆ ಕಾರ್ಯಕ್ರಮಕ್ಕೆ ನಿಮ್ಮಗೆಲ್ಲರಿಗೂ ಆತ್ಮಿಯವಾದಂತಹ ಸ್ವಾಗತ.
ಈ ಹಿಂದೆ ನಾವು ಪಂಚಾಣು ವೃತದ ಬಗ್ಗೆ ತಿಳಿದುಕೊಂಡೆವು ಪ್ರತಿವಾರವು ಒಂದೊಂದು ವ್ರತದ ಬಗ್ಗೆ ವಿಷಯವನ್ನು ತಿಳಿದುಕೊಳುತ್ತಾ ಇದೇವೆ. ಇಂದಿನ ಸಂಚಿಕೆಯಲ್ಲಿ ನಾವು ಪಂಚಾಣು ವ್ರತದಲ್ಲಿ ಒಂದಾಗಿರುವ ಅಪರಿಗ್ರಹ ವ್ರತದ ಬಗ್ಗೆ ತಿಳಿದು ಕೊಳ್ಳೊಣ.
ಪರಿಗ್ರಹ ಎಂದರೆನ್ನು ಪ್ರತಿದಿನ ನಾವು ಉಪಯೋಗಿಸದಿರುವಂತಹ ವಸ್ತು ಅಥವಾ ಅಡಂಬರಕಾಗಿ ಉಪಯೋಗಿಸುವ ವಸ್ತುವಿಗೆ ಪರಿಗ್ರಹ ಎಂದು ಹೇಳುತ್ತೇವೆ. ಸಮಾಜದಲ್ಲಿ ನಮಗೆ ಗೌರವ ಸಿಗಬೇಕು ಎಂದು ನಮಗೆ ಅವಶ್ಯಕತೆ ಇಲ್ಲದಿದ್ದರೂ ಸಹ ನಾವು ಅನೇಕ ಪರಿಗ್ರಹಗಳನ್ನು ಖರೀದಿಸುವ ಮಾಯ ಜಾಲಕ್ಕೆ ಬಿದ್ದಿದ್ದೇವೆ. ಇದರಿಂದ ನಾವು ಅನೇಕ ಭಾದೆಗಳಿಗೆ ಒಳಗಾಗುತ್ತೇವೆ. ಈ ರೀತಿ ನಾವು ಮಾಡುವುದರಿಂದ ನಾವು ನಮ್ಮ ಜೀವನದ ಮುಖ್ಯ ಉದ್ದೇಶವನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ನಮ್ಮ ಜೀನವಾಣಿಯಲ್ಲಿ ನಮ್ಮ ಆಚಾರ್ಯ ಭಗವಂತರು ಹೇಳಿರುವುದು ಪಂಚಾಣು ವ್ರತಗಳಲ್ಲಿ ಇರುವಂತಹದು ಒಂದು ಅಪರಿಗ್ರಹ. ಅತಿ ಕಡಿಮೆಯಲ್ಲಿ ಕಡಿಮೆ ವಸ್ತುಗಳನ್ನು ಬಳಸಿಕೊಂಡು ನಮ್ಮ ಜೀವನವನ್ನು ಮಾಡ ಬೇಕು. ಉತ್ತಮ ವಾಗಿರುವಂತಹ ಜಿವನ ಮಾಡ ಬೇಕು ಎಂದರೆ ಉತ್ತಮವಾಗಿರುವಂತಹ ಆಹಾರ, ಒಳ್ಳೆಯ ಬಟ್ಟೆ ಅದುವೇ ಸೀಮಿತ ಲೆಕ್ಕದಲ್ಲಿ, ಓಡಾಡಲು ಒಂದು ಪರಿಕರವಾಗಿ ಒಂದು ವಾಹನ, ನೇಮ್ಮದಿಯಾಗಿ ಇರಲು ಒಂದು ಮನೆ, ಇಷ್ಟು ಇದ್ದರೇ ಸಾಕು. ಹಾಗಾಗಿ ಇವುಗಳನ್ನೆಲ್ಲಾ ಮಾಡಬಾರದು ಎಂದು ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೆ ಅಪರಿಗ್ರಹ. ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ನಮ್ಮಲ್ಲಿ ಇರುವಂತಹ ವಸ್ಥುಗಳನ್ನು ಬಳಸಿಕೊಂಡು ಅಪರಿಗ್ರಹ ವ್ರತವನ್ನು ಪರಿಪಾಲನೆ ಮಾಡಿ ಎಂದು ಹೇಳುತ್ತ ಮುಂದಿನ ಸಂಚಿಕೆಯಲ್ಲಿ ಬೇಟಿಯಾಗೋಣ ಜೈ ಜಿನೇಂದ್ರ.
ಇಲ್ಲಿಗೆ ನಮ್ಮ ಇಂದಿನ ಧರ್ಮದ ಕುಡಿ ಕಾರ್ಯಕ್ರಮದ ಸಂಚಿಕೆ ಮುಕ್ತಾಯವಾಗುತ್ತಿದೆ, ಎಲ್ಲರೂ ಕೂಡ ಸುರಕ್ಷಿತವಾಗಿರಿ ಎಂದು ಹೇಳುತ್ತಾ ಮುಂದಿನ ಭಾನುವಾರ ಸರಿಯಾಗಿ 10:30ಕ್ಕೆ ಮತ್ತೊಂದು ಪುಟ್ಟ ಪ್ರತಿಭೆಯೊಂದಿಗೆ
ನಾನು ನಿಮ್ಮ ಮುಂದೆ ಬರುತ್ತೇನೆ, ಅಲ್ಲಿಯವರೆಗೂ ನೋಡುತ್ತಿರಿ ಜ್ವಾಲಮಾಲ ನ್ಯೂಸ್.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














