ನಮ್ಮ ಸುತ್ತ ಮುತ್ತಲು ನಡೆಯುವ ಮೌಲ್ಯಯುತ ಸುದ್ದಿಗಳು ಅದರಲ್ಲೂ ರಾಜ್ಯದೆಲ್ಲೆಡೆಯ ಸುದ್ದಿಗಳನ್ನು ಒಂದೆಡೆ ನಿಮಗಾಗಿ ತಂದಿಡುವ ಪರಿಕಲ್ಪನೆಯೊಂದಿಗೆ ವಾರದ ಜೈನ ಸುದ್ದಿಗಳು ನಿಮ್ಮ ಮುಂದೆ.
ಮುಖ್ಯಾಂಶಗಳು:
ದಶಲಕ್ಷಣ ಪರ್ವಾಚರಣೆಯ ಸಂಭ್ರಮ
ಚಾಮರಾಜನಗರದಲ್ಲಿ ಯಾಗಮಂಡಲ ಆರಾಧನೆ
ಹಡಗಲಿ ತಾಲ್ಲೂಕು ಬಸದಿಗಳಿಗೆ ಅನುದಾನದ ಮನವಿ
ದಾವಣಗೆರೆಯಲ್ಲಿ ಹೊಂಬುಜ ಶ್ರೀಗಳ ಸಾನಿಧ್ಯದಲ್ಲಿ ವಿಧಾನ ಪೂಜೆ
ಗರಗದಲ್ಲಿ ವೃಷಭ ಶ್ರೀ ಹಾಗೂ ಬ್ರಾಹ್ಮಿಶ್ರೀ ಪ್ರಶಸ್ತಿ ಪ್ರಧಾನ
ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶಕರ ನೇಮಕ
ಭಾರತೀಯ ಜೈನ್ ಮಿಲನ್ ಆಸ್ಟ್ರೇಲಿಯಾ ಉದ್ಘಾಟನೆ
ಎಲ್ಲೆಡೆ ದಶಲಕ್ಷಣ ಪರ್ವದ ಸಂಭ್ರಮದಿಂದ ಭಕ್ತಿಯ ರಂಗಿನಲ್ಲಿ ಮೀಯುತ್ತಿರುವ ಜಿನದೇವನ ಪೂಜಾರಾಧನೆಯಲ್ಲಿ ಮಗ್ನರಾದ ವೃತಿಕರನ್ನು ನೋಡಲು ನಮಗೂ ಸಂಭ್ರಮವೇ. ಬನ್ನಿ ಆ ಸಂಭ್ರಮದ ಕ್ಷಣಗಳನ್ನು ಒಮ್ಮೆ ಆನಂದಿಸೋಣ. ಪ್ರಾಚೀನ ಜೈನ ಧರ್ಮದ ತಪಸ್ಸು ತಾಣದ ಶಾಂತಿ ಅಹಿಂಸೆ ವಿಶ್ವ ಭ್ರಾತೃತ್ವದ ಶ್ರೇಷ್ಠತೆಯನ್ನು ಪರಿಗಣಿಸಿ ದಶಲಕ್ಷಣ ಮಹಾಪರ್ವ ಶುಭ ಸಂದರ್ಭದಲ್ಲಿ 12 ಪೋಸ್ಟರ್ ಕಾರ್ಡ್ ಗಳನ್ನು ಮತ್ತು ವಿಶೇಷ ಮುದ್ರೆಯನ್ನು ಒಳಗೊಂಡ ಲಕೋಟೆಯನ್ನು ಉತ್ತರ ಕರ್ನಾಟಕ ಅಂಚೆ ವಲಯ ಕಛೇರಿಯಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಡಾ|| ವಿನೋದ್ ಕುಮಾರ್ ಲೋಕಾರ್ಪಣೆ ಮಾಡಿದರು. ವಿಶೇಷ ಅತಿಥಿಗಳಾಗಿ ಖ್ಯಾತ ಮನೋರೋಗ ತಜ್ಞ ಡಾ|| ಆನಂದ್ ಪಾಂಡುರಂಗಿ ಹಾಗೂ ಸಂಸ್ಕಾರ ಶಾಲೆಯ ಅಧ್ಯಕ್ಷ ಮಹಾವೀರ್ ಕುಂದೂರು ಭಾಗವಹಿಸಿದ್ದರು. ಧಾರವಾಡ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ವಿ.ಎಸ್ .ಎಲ್ ನರಸಿಂಹರಾವ್, ಉತ್ತರ ಕರ್ನಾಟಕದ ಅಂಚೆ ವಲಯದ ಸಹಾಯಕ ನಿರ್ದೇಶಕರುಗಳು ಧಾರವಾಡ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು ಉಪಸ್ಥಿತರಿದ್ದರು.
ಹಡಗಲಿ ತಾಲ್ಲೂಕಿನ ಜೈನಬಸದಿಗಳ ಆಬಿವೃದ್ದಿಗಾಗಿ ಸಚಿವ ಆನಂದ್ ಸಿಂಗ್ ಜೈನ್ ರವರನ್ನು ಮನವಿ ಮಾಡಿಕೊಳ್ಳಲಾಯಿತು. ಬಳ್ಳಾರಿ ಜಿಲ್ಲಾ
ಹಡಗಲಿ ತಾಲ್ಲೂಕಿನ ಜೈನಬಸದಿಗಳ ಆಬಿವೃದ್ದಿಗಾಗಿ ಸಚಿವ ಆನಂದ್ ಸಿಂಗ್ ಜೈನ್ ರವರನ್ನು ಮನವಿ ಮಾಡಿಕೊಳ್ಳಲಾಯಿತು. ಬಳ್ಳಾರಿ ಜಿಲ್ಲಾ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಜೈನ್ ರವರನ್ನು ಹೊಸಪೇಟೆಯಲ್ಲಿ ಹೂವಿನಹಡಗಲಿಯ ಶ್ರೀ ಸಂತೋಷ್ ಜೈನ್ ರವರು ಭೇಟಿಯಾಗಿ ಹೂವಿನ ಹಡಗಲಿ ಮಾಗಳ, ಮಾಡ್ಲಿಗೇರಿ ಮರಿಗೇರಿ ದೇವಸ್ಥಾನಗಳ ಅಭಿವೃದ್ದಿಗೆ ಅನುದಾನ ನೀಡಲು ಕೋರಿ ಮನವಿ ಪತ್ರ ನೀಡಿದರು. ಸಚಿವರು ಸಹಾನುಭೂತಿಯಿಂದ ಪತ್ರವನ್ನು ಪರಿಶೀಲಿಸದರು ಭರವಸೆ ನೀಡಿದ್ದಾರೆಂದು ಶ್ರೀ ಸಂತೋಷ್ ಜೈನ್ ರವರು ಹಡಗಲಿ ತಾಲ್ಲೂಕಿನ ಮಾಧ್ಯಮಕ್ಕೆ ತಿಳಿಸಿರುತ್ತಾರೆ. ಹಾಗೆಯೇ ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಎಂ. ಪಿ ಪ್ರಕಾಶ್ ರವರ ಸುಪುತ್ರಿ ಶ್ರೀಮತಿ ಸುಮಾ ವಿಜಯ್ ರವರು ಉಪಸ್ಥಿತರಿದ್ದರು.
ದಾವಣಗೆರೆ ಭಗವಾನ್ ಶ್ರೀ 1008 ಕಲ್ಕದ್ ಮಹಾ ಆದಿನಾಥ ಭಗವಂತನ ಜಿನಮಂದಿರದಲ್ಲಿ ಸರ್ವದೋಷ ಪ್ರಾಯಶ್ಚಿತ್ತ ಆರಾಧನಾ ವಿಧಾನವನ್ನು ಅಲ್ಲಿನ ಜೈನ ಸಮಾಜ ಹಾಗೂ ಶ್ರೀ ಮಹಾವೀರ ಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾಯಿತು. ಪೂಜಾ ಕಾರ್ಯಕ್ರಮವನ್ನು ಹೊಂಬುಜ ಶ್ರೀ ಮಠದ ಭಗವಾನ್ ಪರಮಪೂಜ್ಯ 1008 ಸ್ವಸ್ಥಿ ಶ್ರೀ ಯವರ ಸಾನಿಧ್ಯದಲ್ಲಿ ಜರುಗಿತು. ಪ್ರತಿಷ್ಠಾಚಾರ್ಯ ಶ್ರೀ ಮದನ್ ಪಾಂಡೆ ಹರಪ್ಪನ ಹಳ್ಳಿಯ ನಾಗರಾಜ್ ಪಾಂಡೆ ಮತ್ತು ಸ್ಥಾನಿಕ ಪರ್ವಿತರಾದ ಶ್ರೀ ಮಂಜುನಾಥ್ ಪಂಡಿತ್ ರವರು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ರವರು ಕಾರ್ಯದರ್ಶಿ ಮತ್ತು ಕಾರ್ಯಕಾರಿ ಅಧ್ಯಕ್ಷರಾದ ಶ್ರೀ ಸುದರ್ಶನ್ ಕುಮಾರ್ ಮತ್ತು ಜೈನ ಸಮಾಜದ ಮುಖಂಡರು ಮತ್ತು ಶ್ರಾವಕ ಶ್ರಾವಕಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಹೊಂಬುಜದಲ್ಲಿ ಜೀರ್ಣೊದ್ದಾರ ಮತ್ತು ನವೀಕರಣಗೊಳ್ಳುತ್ತಿರುವ ಜಗನ್ಮಾತೆ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಸುಮಾರು 6,00,000 ರೂ.ಗಳ ವಾಗ್ದಾನ ನೀಡಿರುತ್ತಾರೆ. ಸ್ವಾನೀಜಿಯವರು ತಮ್ಮ ಆಶೀರ್ವಚನದಲ್ಲಿದಶಲಕ್ಷಣದ ಪರ್ವದ ಪದ್ದತಿಯನ್ನು ಎಲ್ಲಾ ಶ್ರಾವಕ ಶ್ರಾವಕಿಯರು ರೂಡಿಸಿಕೊಳ್ಳಬೇಕೆಂದು ತೀಳಿಸಿದರು.
ಅಖಿಲ ಕರ್ನಾಟಕ ಜೈನ ಅಲ್ಪ ಸಂಖ್ಯಾತ ಜೈನ ನೌಕರರ ಸಂಘ ಹಾಗೂ ಬೆಳಗಾವಿ ವಿಭಾಗದ ಜೈನ ಶಿಕ್ಷಕರ ವತಿಯಿಂದ ಸಮಾಜಸೇವೆ ವಿಭಾಗದಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ವೃಷಭ ಶ್ರೀ ಹಾಗೂ ಬ್ರಾಹ್ಮಿಶ್ರೀ ಪ್ರಶಸ್ತಿಗಳನ್ನು ಪರಮಪೂಜ್ಯ ಸಂಯುಕ್ತ ಶಿರೋಮಣಿ ಆಚಾರ್ಯ ಶ್ರೀ 108 ಜ್ಞಾನಿ ಶರೋಮಣಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಹಿರಿಯ ಪತ್ರಕರ್ತರಾದ ಶ್ರೀ ಕುಂತಿನಾಥ ಕಲಾಮಣಿಯವರಿಗೆ ಶ್ರಿ ವೃಷಭಶ್ರೀ ಪ್ರಶಸ್ತಿ ಮತ್ತು ಬ್ರಾಹ್ಮಿಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಬೆಂಗಳೂರಿನ ರತ್ನತ್ರಯ ಕ್ರಿಯೇಷನ್ಸ್ ನ ಡಾ|| ನೀರಜಾ ನಾಗೇಂದ್ರ ಕುಮಾರ್ ರವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೃಷಭ ಶ್ರೀ ಪ್ರಶಸ್ತಿ ಬ್ರಾಹ್ಮಿಶ್ರೀ ಪ್ರಶಸ್ತಿ ಸೇರಿದಂತೆ ಆದರ್ಶ ಶಿಕ್ಷಕ ದಂಪತಿ ಪ್ರಶಸ್ತಿ ಮತ್ತು 24 ಜನ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಸಂಘಟಕರು ಹಾಗೂ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಡಾ|| ನಾಗರಾಜ್ ಮೇಲಣ್ಣ ನವರ್ , ಇನ್ನೂ ಹಲವಾರು ಗಣ್ಯರು ಹಾಗೂ ಹಲವಾರು ಶ್ರಾವಕ ಶ್ರಾವಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೆಯೇ ದಾನಿಶೂರ ಶಿಕ್ಷಕ ಪ್ರಶಸ್ತಿ ಆಯ್ಕೆ ಕಮಿಟಿ ಜಯಕೀರ್ತಿ ವಿದ್ಯಾಲಯ ಮತ್ತು ಚಾತುರ್ಮಾಸ ಕಮಿಟಿಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀ ಎ.ಬಿ ದೇಸಾಯ್ ಮಾಜಿ ಶಾಸಕರು ಧಾರವಾಡ ಗ್ರಾಮೀಣ , ಎ.ಜೆ ಕೆಂಪಣ್ಣ ನವರು ಹಿರಿಯ ಸಾಹಿತಿಗಳು ರಾಯಭಾಗ , ಶ್ರೀ ಹೆಚ್. ಪಿ ಮೋಹನ್ ಕುಮಾರ್ ಶಾಸ್ತ್ರಿ ಶ್ರವಣಬೆಳಗೊಳ, ಶ್ರೀ ಟಿ.ಪಿ ಅಷ್ಟಗಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ಮಹದೇವ್ ಪಟಮುಂಡಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಹುಕ್ಕೇರಿ , ಶ್ರೀ ಅಂಬುಜ್ ಶ್ರೀ ಕುಡಚಿ ಉದ್ಯಮಿ ಉಪಸ್ಥಿತರಿದ್ದರು.
ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಮತ್ತು ಸಂಶೋಧನಾ ವಿಶ್ವ ವಿದ್ಯಾನಿಲಯಕ್ಕೆ ನಿರ್ದೇಶಕರ ನೇಮಕ ಹಾಗೂ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮ . ಶ್ರವಣಬೆಳಗೊಳದಲ್ಲಿರುವ ರಾಷ್ಟ್ರೀಯ ಪ್ರಾಕೃತ ಮತ್ತು ಸಂಶೋಧನಾ ವಿಶ್ವ ವಿದ್ಯಾನಿಲಯಕ್ಕೆ ನಿರ್ದೇಶಕರಾಗಿ ನೇಮಕಗೊಂಡಿರುವ ವಿದ್ವಾಂಸರು ಸಂಸ್ಕೃತ ಪಾಲಿಭಾಷಾ ಪಂಡಿತರು ಮತ್ತು ಜ್ಯೋತಿಷ್ಯ ಶಾಸ್ತ್ರದ ವಿದ್ವಾಂಸರಾದ ಶ್ರೀ ಜಯಕುಮಾರ್ ಉಪಾಧ್ಯಾಯ್ ಸಹಿತ ಬೆಳಗಾವಿ ಮಠ ಬೀದಿಯಲ್ಲಿರುವ ಶ್ರೀ ಶಾಂತಿನಾಥ ಉಪಾಧ್ಯಾಯ್ ಅವರ ಮನೆಯಲ್ಲಿನ ಸಂಸ್ಕೃತ ಅಧ್ಯಯನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಇಲ್ಲಿನ ಪ್ರಾಕೃತ ವಿದ್ಯಾರ್ಥಿಗಳ ಸಮಸ್ಯೆ ಗಮನಿಸಿ ಅದಕ್ಕೆ ಸಂಬಂಧ ಪಟ್ಟ ಪರಿಹಾರ ಮತ್ತು ಸಲಹೆಗಳನ್ನು ಸೂಚಿಸಿದರು. ಇದೇ ಸಂದರ್ಭದಲ್ಲಿಶ್ರೀ ಜೈ ಕುಮಾರ್ ಉಪಾಧ್ಯ ದಂಪತಿಗಳನ್ನು ಜೈನ ಯುವ ಸಂಘಟನೆಯ ಪರವಾಗಿ ಹೃದಯಪೂರ್ವಕವಾಗಿ ಸ್ವಾಗತಿಸಿ ಗೌರವಿಸಲಾಯಿತು.
ದಿನಾಂಕ 09/01/2021 ರಂದು ಭಾನುವಾರದಂದು ಭಾರತಭೂಷಣ ಸ್ವಸ್ತಿಶ್ರೀ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಸ್ವಾಮೀಜಿಯವರ ಮಾರ್ಗದರ್ಶನದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರು ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಆಸ್ಟ್ರೇಲಿಯಾ ವಿಭಾಗದ ಜೈನ್ ಮಿಲನ್ ನ್ನು ಉದ್ಘಾಟಿಸಿದರು. ಶ್ರೀ ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗುವುದರ ಮೂಲಕ ಜೈನ ಧರ್ಮದ ಬಗ್ಗೆ ಹಾಗೂ ಜೈನ ಧರ್ಮದ 5 ವ್ರತಗಳ ಬಗ್ಗೆ ಶ್ಲಾಘಿಸಿ ಜೈನ ಧರ್ಮವನ್ನು ಪರಿಪಾಲಿಸಬೇಕೆಂದು ಹಾಗೂ ಯಾವುದೇ ಉನ್ನತ ಸ್ಥಾನವಾದ ಶೈಕ್ಷಣಿಕವಾಗಿಯೂ ಜಾಗತಿಕ ಮಟ್ಟದಲ್ಲಿ ತುಂಬಾ ಮುಂದುವರೆದ ಧರ್ಮವಾಗಿದ್ದು ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಸೂಚನೆಗಳನ್ನು ತಿಳಿಸಿದರು.
ಈವರೆಗೆ ವಾರದ ಸುದ್ದಿಗಳನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು, ಮತ್ತೆ ವಾರದ ಸುದ್ದಿಗಳೊಂದಿಗೆ ಭೇಟಿಯಾಗೋಣ ಜೈ ಜಿನೇಂದ್ರ.














