ಸಾಹಿತಿಗಳೊಂಡಿಗೆ ಸಂವಾದ-3 / ಪ್ರೊ. ಜೀವಂದರ್ ಕುಮಾರ್ ಹೋತಪೇಟೆ / 24-09-2021 / jwalamalanews / 2021

ಸಾಹಿತಿಗಳೊಂದಿಗೆ ಸಂವಾದ

ಪ್ರೋಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ.

ಸರಳ ಸಜ್ಜನಿಕೆಯ ಇತಿಹಾಸ ತಜ್ಞ ಪ್ರೋಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ ಯವರು ಕುಬೇರಪ್ಪ ಚಂದಪ್ಪ ಹೋತಪೇಟೆ ಮತ್ತು ಸುಮಿತ್ರಮ್ಮನ ಪುತ್ರರಾಗಿ 1947ರಲ್ಲಿ ಜನಿಸಿದರು. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ವಿದ್ಯಾಭ್ಯಾಸ ಪಡೆದ ಇವರು ಇತಿಹಾಸ ವಿಷಯದಲ್ಲಿ ಎಂ ಎ ಪದವಿ ಪಡೆದರು. ತದನಂತರ 1972ರಲ್ಲಿ ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಮಹಾ ವಿದ್ಯಾಲಯದಲ್ಲಿ ಅದ್ಯಾಪಕ ವೃತ್ತಿಯನ್ನು ಆರಂಭಿಸಿದರು. 1976ರಿಂದ ಭದ್ರಾವತಿಯ ಸರ್ ಎಂ ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 28 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತಿ ಹೊಂದಿದರು .

ಶ್ರವಣ ಬೆಳಗೊಳದಲ್ಲಿ ತಮ್ಮ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಹೋತಪೇಟೆ ಯವರು 2011ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಷಯದಲ್ಲಿ ಎಂ ಎ ಪದವಿಯನ್ನು ಎಂಟು ಚಿನ್ನದ ಪದಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಮುಗಿಸುತ್ತಾರೆ. ನಂತರ ಶ್ರವಣ ಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅದ್ಯಾಯನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪರೀಕ್ಷಾ ವಿಭಾಗದ ಮುಖ್ಯಸ್ಥರಾಗಿ ಪರೀಕ್ಷಾ ಕ್ರಮಗಳಲ್ಲಿ ಹೊಸ ಬದಲಾವಣೆಗಳನ್ನ ತಂದ ಕೀರ್ತಿ ಇವರದ್ದು ಪ್ರಮುಖ ಜೈನಾಚಾರ್ಯರ ಮುನಿಗಳ ವಿದ್ವಾಂಸರ ಹಿಂದಿ ಕೃತಿಗಳ ಕನ್ನಡ ಅನುವಾದ ಮತ್ತು ಅನೇಕ ಸ್ವತಂತ್ರ ಕೃತಿಗಳನ್ನ ರಚಿಸಿದ್ದಾರೆ.

ಜೈನ ಧರ್ಮ ಸಂಸ್ಕೃತಿ, ಇತಿಹಾಸ, ಸಾಹಿತ್ಯಗಳಿಗೆ  ಸಂಬಂಧಿಸಿದ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು, ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡನೆ, ಆಕಾಶವಾಣಿಯಲ್ಲಿ ಚಿಂತನ ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ. ಶ್ರೀ ಹೋತಪೇಟೆ ಯವರು ಧವಲ ತ್ರಯ ಗ್ರಂಥಗಳ ಅನುವಾದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ, 31 ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಚಾವುಂಡರಾಯ ವೈಭವ ಎಂಬ ಐತಿಹಾಸಿಕ ಕಾದಂಬರಿ ಹಿಂದಿ ಮರಾಠಿ

ಭಾಷೆಗಳಿಗೆ ಅನುವಾದವಾಗಿದೆ, ಅಲ್ಲದೇ ಆಕಾಶವಾಣಿ ಭದ್ರಾವತಿಯಿಂದ 16 ಕಂತುಗಳಲ್ಲಿ ಪ್ರಸಾರವಾಗಿದೆ. ಮಹಾಪುರಾಣದ ವೈರಾಗ್ಯೊದಯದ ಪ್ರಸಂಗಗಳು ಈ ಕೃತಿಗೆ ಎ ಶಾಂತಿ ರಾಜ ಶಾಸ್ತ್ರಿ ಟ್ರಸ್ಟ್ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಪ್ರೋಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ ಯವರು ತಮ್ಮ ಅಮೂಲ್ಯ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದಾರೆ. ಶ್ರೀ ಗೊಮ್ಮಟೇಶ್ವರ ವಿದ್ಯಾ ಪೀಠ ಪುರಸ್ಕಾರ, ಪಂಡಿತ ರತ್ನ  ಎ ಶಾಂತಿ ರಾಜ ಶಾಸ್ತ್ರಿ ಟ್ರಸ್ಟ್ ಪ್ರಶಸ್ತಿ, ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಜಿನವಾಣಿ ಪುರಸ್ಕಾರ ಜೈನ ಮಠ ಮೂಡುಬಿದ್ರೆ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳು, ಶಾಂತಿ ಲಾಲ್ ದತ್ತಿ ಪ್ರಶಸ್ತಿ, ಹೊಳಲ್ಕೆರೆ  ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಜೈನ ದತ್ತಿ ಪ್ರಶಸ್ತಿ, ಹೊಳಲ್ಕೆರೆ  ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ|| ಮಧನ ಕೆರೆ ಜೈನ ದತ್ತಿ ಪ್ರಶಸ್ತಿ, ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ದತ್ತಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಜೈನ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಗಾಗಿ ಶ್ರೀ ಶ್ರವಣ ಬೆಳಗೊಳ ಕ್ಷೇತ್ರ ಸ್ಥಾಪಿಸಿರುವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಂದ ಭಾಜನರಾಗಿದ್ದಾರೆ.

ಇತಿಹಾಸ ಪ್ರದ್ಯಾಪಕರಾಗಿ ಜೈನ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿರುವ ಜಿನ ಸೇವೆಗೆ ಸದಾ ದುಡಿಯುವ ಪ್ರೊಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ ಯವರಿಗೆ ಜ್ಞಾನ ದೀಪಿಕೆಯು ಗೌರವ ಪೂರ್ವಕ ನಮನಗಳನ್ನ ಸಲ್ಲಿಸುತ್ತದೆ.

ಜ್ವಾಲಮಾಲ ಡಾಟ್ ನ್ಯೂಸ್ ವತಿಯಿಂದ  ನಡೆಯುತ್ತಿರುವ ಸರಣಿ ಕಾರ್ಯಕ್ರಮ ಸಾಹಿತಿಗಳೊಂದಿಗೆ ಸಂವಾದ.

ಇಂದು ನಮ್ಮೊಡನೆ ಇರುವ ಸಾಹಿತಿ ಪ್ರೋಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ ಯವರು.

ಜೈ ಜಿನೇಂದ್ರ

ಹುಟ್ಟಿದು ಹಾಸನದಲ್ಲಿ ಆದರೆ ಜೀವನವನ್ನು ಬೇರೆ ಬೇರೆ ಉರಿನಲ್ಲಿ ಕಳೆದಿದ್ದೀರಿ ಆದರೆ ನಿವೃತ್ತಿ ಜೀವನಕ್ಕೆ ಬೆಳಗೊಳವನ್ನು ಹಾರಿಸಿದ್ದು ಏಕೆ.

ನಮ್ಮ ಶಿಕ್ಷಣ ಹುಬ್ಬಳ್ಳಿಯಲ್ಲಿ ಆಯಿತು ಪ್ರಥಮ ಪ್ರಯತ್ನದಲ್ಲಿ ಕೆಲಸ ಸಿಕ್ಕಿದು ಶ್ರವಣ ಬೆಳಗೊಳದಲ್ಲಿ ಹಾಗಾಗಿ ನಿವೃತ್ತಿ ಬಳಿಕ ಬೆಳಗೊಳವನ್ನು ಹಾರಿಸಿದ್ದು. ಶ್ರವಣ ಬೆಳಗೊಳದ ಶಾಲೆಯು ಮುಚ್ಚಿನ ನಂತರ ಭದ್ರಾವತಿಯಲ್ಲಿ ಕೆಲಸಕ್ಕೆ ಹೊಗಿ ನಿರಂತರವಾಗಿ ಕಾರ್ಯ ನಿರ್ವಹಿಸಿದೆ.

ನಮ್ಮ ಮನೆ ಜೈನಮಯ ವಾತಾವರಣ, ಹಾಗಾಗಿ ನಾನು ಅದ್ಯಾಯನ ಮಾಡುವಾಗ ಜೈನ ಧರ್ಮದ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಅನೇಕ ವಿಪರ್ಯಾಸಗಳು ಎನಿಸುತ್ತಿತ್ತು. ಅವುಗಳನ್ನು ಸರಿಪಡಿಸುವುದನ್ನು ಜೈನರೆ ಮಾಡ ಬೇಕು ಎಂದು ಹಾಗೂ ಪತ್ರಿಕೆಗಳಲ್ಲಿ ಜೈನ ಧರ್ಮದ ಬಗ್ಗೆ ತಪ್ಪುಗಳು ಕಂಡಾಗ ಕೂಡಲೆ ಪ್ರತಿಕ್ರಿಯೇ ನೀಡುತ್ತಿದೆ. ಅ ಪ್ರತಿಕ್ರಿಯೇ ಮಾಡುವುದೇ ಒಂದು ಹವ್ಯಾಸವಾಗಿ ಬೆಳೆಯಿತು. ಹಾಗೇ ಬೆಳಗೊಳಕ್ಕೆ ಬಂದಾಗ ಹೆಚ್ಚಿನ ಸಮಯ ಸಿಗುತ್ತಿದರಿಂದ  ಹವ್ಯಾಸವಾಗಿ ಬೆಳೆಯಿತು.

ಚಾರು ಕೀರ್ತಿ ಸ್ವಾಮಿಗಳು ನೀವು ಒಂದು ಕಾದಂಬರಿ ಬರೆಯ ಬೇಕು ಎಂದು ಹೇಳಿದರು. ಅದಕ್ಕೆ ಯಾವ ಕಾದಂಬರಿ ಬರೆಯ ಬೇಕು ಎಂದಿದ್ದಕ್ಕೆ ಚಾವುಂಡರಾಯ ವೈಭವ ಎಂದು ಬರೆಯ ಬೇಕು ಎಂದು ಹೇಳಿದರು. ಹಾಗ ಶಾಸನಗಳ ಅದ್ಯಾಯನ ಪ್ರಾರಂಭಿಸಿದೆ. ಬೇಸಿಗೆ ರಜೆಯಲ್ಲಿ ಕಾದಂಬರಿ ಬರೆಯ ಬೇಕು ಎಂದು ಒತ್ತಡ ಬಂದಾಗ ಈ ಚಾವುಂಡರಾಯ ವೈಭವ ಕದಂಬರಿ ಬರೆದೆ. ಮುಂದೆ ಗೊಮ್ಮಟವಾಣಿಯಲ್ಲಿ ಧಾರವಾಹಿಯಾಗಿ ಬಂತು , ಅದೇ ಪ್ರಥಮ ಬರವಣಿಗೆ.

ಅದ್ಯಾಪಕ ವೃತ್ತಿಯಲ್ಲಿ ಇದ್ದಾಗ ಲೇಖನಗಳನ್ನು ಬರೆದಿದ್ದೇನೆ. 28 ವರ್ಷಗಳ ಕಾಲ ಭದ್ರಾವತಿಯಲ್ಲಿ ಪ್ರೋಫೆಸರ್ ಹಾಗಿ ಅದೇ ಸಂದರ್ಭದಲ್ಲಿ ಜೈನ ಧರ್ಮಕ್ಕೆ ಸಂಬಂಧ ಪಟ್ಟಂತೆ ಲೇಖನಗಳನ್ನು ಬರೆದಿದ್ದೇನೆ. ನಂತರ 64ನೇ ವರ್ಷದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೈನ ಶಾಸ್ತ್ರ ಮತ್ತು ಪ್ರಾಕೃತ ಶಾಸ್ತ್ರ ಕಲಿಯಲ್ಲು ವಿದ್ಯಾರ್ಥಿಯಾಗಿ ಸೇರಿಕೊಂಡೆ. ಪುಸ್ತಕಗಳನ್ನು ಅದ್ಯಾಯನ ಮಾಡಿದೆ. ನಂತ ತೇರ್ಗಡೆಯಾಗಿ ಎಂಟು ಚಿನ್ನದ ಪದಕಬಂದಿತ್ತು.

ಹತ್ತಾರು ಪುಸ್ತಕಗಳನ್ನು ಅನುವಾದ ಮಾಡಿರುವ ಇವರು ಅನುವಾದಕರಿಗೆ ಅನುವಾದ ಮಾಡಲು ಬೇಕಾಗಿರುವ ವಿಷಯಗಳನ್ನು ತಿಳಿಸಿದರು. ಭದ್ರಾವತಿಯಲ್ಲಿ ಇದಂತಹ ಸಂದರ್ಭದಲ್ಲಿ ಅಲ್ಲಿದಂತಹ ಜೈನ ಸಮಾಜ ಅವರನ್ನು ಅಲ್ಲಿಯ ಜೈನ ಸಮಾಜಕ್ಕೆ ಅದ್ಯಕ್ಷರನ್ನಾಗಿ ಮಾಡಿದರು. ಮತ್ತು ಅಲ್ಲಿ 15 ದಿನ ಅಥವಾ ತಿಂಗಳಿಗೊಮ್ಮೆ ಸಭೆ ಸೇರುತ್ತಿದರು.

ಕೆಲವರ ಒತ್ತಡದ ಮೇಲೆ ಆಕಾಶವಾಣಿಯಲ್ಲಿ ಚಿಂತನ ಎನ್ನುವ ಕಾರ್ಯಕ್ರಮವನ್ನು ಮಾಡುತ್ತಿದರು.

ಯುವ ಜನತೆಗೆ ಧರ್ಮದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹಿರಿಯರುಗಳು ಮಾಡಬೇಕಾದ ಕಾರ್ಯಗಳನ್ನು ತಿಳಿಸಿದರು. ಜೀವಂಧರ ಕುಮಾರ್ ಕೆ. ಹೋತಪೇಟೆಯವರು  ಅವರಿಗೆ ಪ್ರಶಸ್ತಿಯ ಬಗ್ಗೆ ಇರುವ ನಿಲುವು ಮತ್ತು ನಾವು ತೆಗೆದು ಕೊಳ್ಳುವ ಪ್ರಶಸ್ತಿಯುಬೇರೆಯವರ ಮೇಲೆ ಬೀರವ ಪರಿಣಾಮದ ಬಗ್ಗೆ ಅವರ ಮಾತಿನ ಮೂಲಕ ವಿವರಿಸಿದರು. ಅವರು ಬರೆದಿರುವ ವಿದೇಶದಲ್ಲಿ ಜೈನ ಧರ್ಮ ಎನ್ನುವ ಅವರು ಬರೆದಿರುವ ಜೈನ ಕೃತಿಯನ್ನು ಬರೆಯಲು ಅವರಿಗೆ ಸಿಕ್ಕ ಪ್ರೇರಣೆಯ ಬಗ್ಗೆ ತಿಳಿಸುತ್ತಾ 1993ರಲ್ಲಿ ಇಂಗ್ಲೀಷ್ ನಲ್ಲಿ ಬಂದಿದಂತಹ ಪುಸ್ತಕದ ಸಹಾಯ ಮತ್ತು ಅದರ ಪ್ರೇರಣೆಯಿಂದ ವಿದೇಶದಲ್ಲಿ ಜೈನ ಧರ್ಮ ಎನ್ನುವ  ಜೈನ ಕೃತಿ ಬರೆದಿರುವ ಬಗ್ಗೆ ವಿವರಿಸುತ್ತ ಜೈನದ ಧರ್ಮದ ಬಗ್ಗೆ ಬಹಳಷ್ಟು ಸಂಶೋಧನೆ ನಡೆಯಬೇಕು ಎಂದು ತಿಳಿಸಿದರು. ಅವರ ಪುಸ್ತಕದ ಮೇಲಿನ ನಿಲ್ಲುವನ್ನು ವಿವರಿಸಿದರು.

ಜೈನ ಸಾಹಿತಿಗಳ ಬಗ್ಗೆ ಅಭಿಮಾನ ಮೂಡಿಸುವಲ್ಲಿ ನಾವು ಯಶಸ್ವಿ ಯಾಗಿದ್ದೇವೆ ಅಂತ ಸಾಹಿತಿಗಳಾದ ಪ್ರೋಫೆಸರ್ ಜೀವಂಧರ ಕುಮಾರ್ ಕೆ. ಹೋತಪೇಟೆ ಯವರ ಅಭಿಪ್ರಾಯ.

ಜೈ ಜಿನೇಂದ್ರ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್